ಪ್ರಿಯ ರೈತರೇ, ಇನ್ನು ಮುಂದೆ ರೈತರು ತಮ್ಮ ಮೊಬೈಲ್‌ನಲ್ಲಿಯೇ ಅವರ ‘ಜಮೀನು ಬದಲಾವಣೆ’ಯ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದು.
ರೈತರಿಗೆ ಇದೊಂದು ಸಿಹಿ ಸುದ್ದಿಯಾಗಿದ್ದು, ರೈತರು ತಮ್ಮ ಜಮೀನಿಗೆ ಅಥವಾ ಹೊಲಕ್ಕೆ ಸಂಬಂಧಿಸಿದಂತೆ ಇಲ್ಲಿತನಕ ಯಾರಿಂದ ಯಾರ್ಯಾರಿಗೆ ಜಮೀನು ವರ್ಗಾವಣೆಯಾಗಿದೆ? ಎಂಬುದನ್ನು ಚೆಕ್ ಮಾಡುವ ಅವಕಾಶ ಕಲ್ಪಿಸಿದೆ. ರೈತರಿಗೆ ಕೇವಲ ಕೇವಲ ಸರ್ವೆ ನಂಬರ್ ತಿಳಿದಿದ್ದರೆ ಸಾಕು, ಆ ಜಮೀನಿನ ಸಂಪೂರ್ಣ ಇತಿಹಾಸ ತಿಳಿದುಕೊಳ್ಳಬಹುದು.
ರೈತರು ಕೇವಲ ತಮ್ಮ ಸರ್ವೆ ನಂಬರ್ ನಮೂದಿಸಿದರೆ ಸಾಕು, ಆ ಸರ್ವೆ ನಂಬರ್ ನಲ್ಲಿ ಬರುವ ಎಲ್ಲಾ ಹಿಸ್ಸಾಗಳ ಸಮೇತ ಜಮೀನು ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ ಎಂಬುದರ ಮಾಹಿತಿಯಯನ್ನು ಪಡೆಯಬಹುದು. ಇದಕ್ಕಾಗಿ ರೈತರು ಸ್ಮಾರ್ಟ್ ಫೋನ್ ಅನ್ನು ಹೊಂದಿರುವುದು ಅನಿವಾರ್ಯವಾಗಿರುತ್ತದೆ.
ಈಗ ನಾವು ಮೊಬೈಲ್ ನಲ್ಲೇ ಜಮೀನು ಬದಲಾವಣೆಯ ಮಾಹಿತಿಯನ್ನು ಪಡೆಯುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
• ರೈತರು ತಮ್ಮ ಮೊಬೈಲ್ ನಲ್ಲೇ ಮೊದಲು landrecords.Karnataka.gov.in ಎಂಬ ವೆಬ್ ಸೈಟ್ ತೆರೆಯಬೇಕಾಗುತ್ತದೆ. ಇದಾದ ನಂತರ ನಿಮಗೆ ಒಂದು ಮುಖ ಪುಟ ತೆರೆದುಕೊಳ್ಳುತ್ತದೆ.
• ಅದರಲ್ಲಿ “ಸರ್ವೇ ನಂಬರ್ ಅನುಗುಣವಾಗಿ” (Survey No Wise) ಎಂಬ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಬೇಕು.
• ಇದಾದ ನಂತರ ನಿಮಗೆ ಜಿಲ್ಲೆಯ, ತಾಲೂಕಿನ, ಹೋಬಳಿ ಮತ್ತು ಗ್ರಾಮಗಳ ಆಯ್ಕೆಯನ್ನು ಮಾಡಲು ಕೇಳಲಾಗುತ್ತದೆ. ಅದರಲ್ಲಿ ನೀವು ಸರಿಯಾದ ಆಯ್ಕೆಗಳನ್ನು ಮಾಡಬೇಕಾಗುತ್ತದೆ.
• ನೀವು ಯಾವ ಸರ್ವೆ ನಂಬರಿನ ಜಮೀನು ಬದಲಾವಣೆಯ ಮಾಹಿತಿ ಅಥವಾ ಮುಟೇಶನ್ ಇತಿಹಾಸ ನೋಡಬೇಕು ಎಂದುಕೊಂಡಿದ್ದೀರೂ ಆ ಸರ್ವೆ ನಂಬರ್ ಅನ್ನು ನಮೂದಿಸಿ ಮುಂದುವರೆಯಬೇಕು.
• ಇದಾದ ಮೇಲೆ ನಿಮಗೆ ಹಿಸ್ಸಾ ನಂಬರ್ ಆಯ್ಕೆ ಮಾಡಲು ಕೇಳಲಾಗುತ್ತದೆ. ನಿಮ್ಮ ಹಿಸ್ಸಾ ನಂಬರ್ ಅನ್ನು ಸರಿಯಾಗಿ ಆಯ್ಕೆ ಮಾಡಬೇಕು.
• ಕೊನೆಯಲ್ಲಿ ನಿಮಗೆ ಅಲ್ಲಿ ಕಾಣುವ “ಜಮೀನು ಬದಲಾವಣೆ ಮಾಹಿತಿ” (View Mutation Data) ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಒಂದು ರಿಪೋಟ್ ತೆರೆದುಕೊಳ್ಳುತ್ತದೆ.
# ಅದರಲ್ಲಿ
• ಮಾಲೀಕರ ಹೆಸರು
• ಮುಟೇಶನ ರಿಪೋರ್ಟ್ ನ ಒಂದನೇ ಕಾಲಂನಲ್ಲಿ ಜಮೀನಿನ ಸರ್ವೆ ನಂಬರ್, ನೀವು ಆಯ್ಕೆ ಮಾಡಿಕೊಂಡ ಹಿಸ್ಸಾ ನಂಬರ್ .
• ಮುಟೇಶನ್ ರಿಪೋರ್ಟ್ ನ ಎರಡನೇ ಕಾಲಂನಲ್ಲಿ ಜಮೀನಿನ ಸರ್ವೆ ನಂಬರ್ ಗಳು, ಆದಲ್ಲಿರುವ ಖರಾಬು ಜಮೀನು ಹಾಗೂ ಜಮೀನಿನ ಮಣ್ಣಿನ ನಮೂನೆಯ ಮಾಹಿತಿ ಇರುತ್ತದೆ.
• ಸರ್ವೆ ನಂಬರಿನಲ್ಲಿ ಇರುವ ಹಿಸ್ಸಾ ನಂಬರ್ ಗೆ ಅನುಗುಣವಾಗಿ ಯಾರಿಗೆ ಎಷ್ಟು ಎಕರೆ ಜಮೀನಿದೆ, ಸ್ವಾಧೀನದಾರರ ಹೆಸರು ಮತ್ತು ವಿಸ್ತೀರ್ಣದ ಮಾಹಿತಿಯನ್ನು ನೀಡಲಾಗಿರುತ್ತದೆ.
# ನೀವು ನಮೂದಿಸಿದ ಸರ್ವೆ ನಂಬರ್ ನಲ್ಲಿ ಹಕ್ಕು ಬದಲಾವಣೆಯ ಅಥವಾ ಜಮೀನು ಮಾಲೀಕರ ಬದಲಾವಣೆಯ ಮಾಹಿತಿಯನ್ನು ನೀಡಲಾಗಿರುತ್ತದೆ. ಅಂದರೆ ನಿಮ್ಮ ಹೊಲ ಯಾರ್ಯಾರಿಗೆ ವರ್ಗವಾಗಿದೆ. ಎಷ್ಟು ಎಕರೆ ಜಮೀನು ವರ್ಗಾವಣೆಯಾಗಿದೆ ಎಂಬ ಮಾಹಿತಿ ಕಾಣುತ್ತದೆ.
ಕೃಷಿಗೆ ಸಂಬಂಧಿಸಿದ ಅಧಿಕೃತ ಮಾಹಿತಿಯನ್ನು ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ 👇
https://chat.whatsapp.com/EaIIjMOhBMy7qiof4xCMTo
ಇಂತಹ ಮಾಹಿತಿಗಳು ರೈತರಿಗೆ ತುಂಬಾ ಅನುಕೂಲವಾಗುತ್ತವೆ. ರೈತರು ಬರೀ ಕೇವಲ ಸರ್ವೆ ನಂಬರ್ ನಮೂದಿಸಿದರೆ ಸಾಕು, ಜಮೀನು ಬದಲಾವಣೆಯ ಮಾಹಿತಿ ಪಡೆಯಬಹುದು.
ನೀವು ನಮೂದಿಸಿ ಸರ್ವೆ ನಂಬರ್ ಜಂಟಿ ಮಾಲೀಕರ ಹೆಸರಿನಲ್ಲಿದ್ದರೆ ಅದರ ಮಾಹಿತಿಯನ್ನು ಸಹ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ
ಕೃಷಿ ವಾಹಿನಿ🌱
ವೆಬ್ಸೈಟ್ನ ಸಂಪರ್ಕದಲ್ಲಿರಿ