ಪ್ರಿಯ ರೈತರೇ, ಡಿ ದೇವರಾಜ ಅರಸ್ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಕಡೆಯಿಂದ 2022 ಮತ್ತು 23ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಸೌಲಭ್ಯ ಒದಗಿಸಲು ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸಣ್ಣ ಮತ್ತು ಅತಿ ಸಣ್ಣ ಹಿಂದುಳಿದ ವರ್ಗಗಳ ರೈತರಿಗೆ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಬೋರ್ವೆಲ್ ಪಡೆದುಕೊಳ್ಳುವುದಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

» ಈ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 20/10/2022 ಆಗಿರುತ್ತದೆ.

# ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಅರ್ಜಿದಾರರಿಗೆ ಇರಬೇಕಾದ ಅರ್ಹತೆಗಳೇನು ಎಂಬುದನ್ನು ನೋಡುವುದಾದರೆ,

• ಡಿ ದೇವರಾಜ ಅರಸ್ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ವ್ಯಾಪ್ತಿಯಲ್ಲಿ ಒಳಪಡುವಂತಹ ಜಾತಿ ಸಮುದಾಯಗಳಿಗೆ ಸೇರಿದ ಸಣ್ಣ ಮತ್ತು ಅತಿ ಸಣ್ಣ ರೈತರು ಈ ಯೋಜನೆಯ ಲಾಭವನ್ನು ಪಡೆಯಬಹುದು.

• ಕರ್ನಾಟಕ ರಾಜ್ಯದ ಕಾಯಂ ನಿವಾಸಿಯಾಗಿರಬೇಕು.

• ಅರ್ಜಿದಾರರ ವಯಸ್ಸು 18 ರಿಂದ 60 ವರ್ಷಗಳ ಒಳಗೆ ಇರಬೇಕು.

ಗ್ರಾಮೀಣ ಪ್ರದೇಶದಲ್ಲಿರುವ ರೈತರ ವಾರ್ಷಿಕ ಆದಾಯ 98,000 ರೂಪಾಯಿಗಳನ್ನು ಮೀರಿರಬಾರದು. ಅದೇ ರೀತಿ ನಗರ ಪ್ರದೇಶದಲ್ಲಿರುವ ರೈತರ ವಾರ್ಷಿಕ ಆದಾಯ 1,20,000 ರೂಪಾಯಿಗಳನ್ನು ಮೀರಿರಬಾರದು.

• ರೈತರು ಒಂದೇ ಸ್ಥಳದಲ್ಲಿ ಕನಿಷ್ಠಪಕ್ಷ ಎರಡು ಎಕರೆ ಜಮೀನನ್ನು ಹೊಂದಿರಬೇಕು. ಒಂದು ವೇಳೆ ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು, ಹಾಸನ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಗೆ ಸೇರಿದ ರೈತರು ಕನಿಷ್ಠ ಒಂದು ಎಕರೆಯನ್ನಾದರೂ ಹೊಂದಿರಬೇಕು.

• ಈ ಯೋಜನೆಯಲ್ಲಿ ಘಟಕದ ವೆಚ್ಚ 2,50,000 ರೂಪಾಯಿಗಳಾದರೆ ಅದರಲ್ಲಿ 2 ಲಕ್ಷ ರೂಪಾಯಿಗಳವರೆಗೆ ಸಹಾಯಧನ ಮತ್ತು ಉಳಿದ 50,000 ರೂಪಾಯಿಗಳನ್ನು ನಿಗಮದ ಕಡೆಯಿಂದ ಶೇಕಡ 4ರ ಬಡ್ಡಿ ದರದಲ್ಲಿ ಸಾಲವನ್ನು ನೀಡಲಾಗುತ್ತದೆ.

• ಉಳಿದ ಜಿಲ್ಲೆಗಳಿಗೆ ಸೇರುವ ರೈತರಿಗೆ ಕೊಳವೆ ಬಾವಿಯ ಘಟಕದ ವೆಚ್ಚ 4 ಲಕ್ಷ ರೂಪಾಯಿಯಾದರೆ ಅದರಲ್ಲಿ 3,50,000 ರೂಪಾಯಿಗಳನ್ನು ಸಹಾಯಧನವನ್ನಾಗಿ ಮತ್ತು ಉಳಿದ 50,000 ರೂಪಾಯಿಗಳನ್ನು ಶೇಖಡ 4ರ ಬಡ್ಡಿ ದರದಂತೆ ನಿಗಮದ ಕಡೆಯಿಂದ ಸಾಲವಾಗಿ ನೀಡುವುದು.

• ರೈತರು ಆಧಾರ್ ಕಾರ್ಡ್ ಲಿಂಕ್ ಇರುವ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಮತ್ತು ಆಧಾರ್ ಕಾರ್ಡ್ ನಲ್ಲಿ ಹೆಸರಿರುವಂತೆ ಬ್ಯಾಂಕ್ ಪಾಸ್ ಪುಸ್ತಕದಲ್ಲಿ ತಮ್ಮ ಹೆಸರನ್ನು ಹೊಂದಿರಬೇಕು.

• ಈ ಹಿಂದೆ ನಿಗಮದ ಕಡೆಯಿಂದ ಯಾವುದಾದರೂ ಯೋಜನೆಯ ಲಾಭವನ್ನು ಪಡೆದುಕೊಂಡಿದ್ದರೆ ಅಂಥವರು ಈ ಯೋಜನೆ ಲಾಭ ಪಡೆದುಕೊಳ್ಳಲು ಬರುವುದಿಲ್ಲ.

• ಅರ್ಜಿದಾರರು ಸೇವಾಸಿಂದು ಅಥವಾ ಗ್ರಾಮ ಒನ್ ಪೋರ್ಟಲ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

# ಈ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸುವುದು ಹೇಗೆ ಎಂಬುದನ್ನು ನೋಡುವುದಾದರೆ,

* ಮೊದಲಿಗೆ ಸೇವಾ ಸಿಂಧು ಪೋರ್ಟಲ್ ಎಂದು ಸರ್ಚ್ ಮಾಡಿದಾಗ ಕರ್ನಾಟಕ ಸೇವಾ ಸಿಂದು ಪೋರ್ಟಲ್ ತೆರೆಯುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.

* ನೀವು ಅಲ್ಲಿ ಆಧಾರ್ ಕಾರ್ಡ್ ಮಾಹಿತಿಯ ಮೂಲಕ ಸೇವಾ ಸಿಂಧುವಿನಲ್ಲಿ ಅಕೌಂಟ್ ಅನ್ನು ಕ್ರಿಯೇಟ್ ಮಾಡಬೇಕು.

* ನೀವು ಪಡೆದುಕೊಂಡಂತಹ ಯೂಸರ್ ಐಡಿ ಮತ್ತು ಪಾಸ್ವರ್ಡ್ ಅನ್ನು ಹಾಕಿ ಲಾಗಿನ್ ಆಗಬೇಕು.

* ಅಲ್ಲಿ apply for services ಎಂಬುದಾಗಿ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದಾಗ ಎಲ್ಲಾ ಸೇವೆಗಳನ್ನು ವೀಕ್ಷಿಸಿ (view all services) ಎಂಬುದರ ಮೇಲೆ ಕ್ಲಿಕ್ ಮಾಡಿಕೊಳ್ಳಿ.

* ಅಲ್ಲಿ ಕಾಣುವ ಸರ್ಚ್ ಬಾಕ್ಸ್ ನಲ್ಲಿ “ಗಂಗಾ” ಎಂದು ನಮೂದಿಸಿ ಸರ್ಚ್ ಮಾಡಿ. ಅಲ್ಲಿ ಕಾಣುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.

* ನಂತರ ನಿಮಗೆ ಹಿಂದುಳಿದ ವರ್ಗಗಳ ಗಂಗಾ ಕಲ್ಯಾಣ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಅರ್ಜಿಯ ನಮೂನೆ ತೆರೆದುಕೊಳ್ಳುತ್ತದೆ.

* ಅಲ್ಲಿ ನಿಮಗೆ ಕೇಳಲಾದ ಮಾಹಿತಿ ವಿವರಗಳನ್ನು ಸರಿಯಾದ ಜಾಗದಲ್ಲಿ ತುಂಬಬೇಕು.

* ರೈತರು ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಕಡ್ಡಾಯವಾಗಿ ಫಾರ್ಮರ್ ಐಡೆಂಟಿಫಿಕೇಶನ್ ನಂಬರ್ (FID) ಎನ್ನು ಹೊಂದಿರಬೇಕಾಗುತ್ತದೆ.

* ಎಲ್ಲಾ ಮಾಹಿತಿಗಳನ್ನು ಸರಿಯಾಗಿ ತುಂಬಿದ ನಂತರ ಕೊನೆಯಲ್ಲಿ ಸಬ್ಮಿಟ್ ಮಾಡಬೇಕು.

* ಕೊನೆಯದಾಗಿ ನಿಮಗೆ ಒಂದು ದೃಢೀಕರಣ ಪತ್ರ ಸಿಗುತ್ತದೆ. ಅವರ ಪ್ರಿಂಟ್ ತೆಗೆದು ಕೊಂಡು ಮತ್ತು ಇದರ ಜೊತೆಗೆ ಇತರೆ ದಾಖಲೆಗಳನ್ನು ಲಗತ್ತಿಸಿ ನಿಮಗೆ ಹತ್ತಿರದ ಡಿ ದೇವರಾಜ ಅರಸ್ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಭೇಟಿ ನೀಡಿ. ನೀವು ಅರ್ಜಿ ಸಲ್ಲಿಸಿದ ಬಗ್ಗೆ ಅವರಿಗೆ ತಿಳಿಸಿ ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

ಕೃಷಿಗೆ ಸಂಬಂಧಿಸಿದ ಅಧಿಕೃತ ಮಾಹಿತಿಗಾಗಿ ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ 👇

https://chat.whatsapp.com/EaIIjMOhBMy7qiof4xCMTo

ಸಣ್ಣ ಮತ್ತು ಅತಿ ಸಣ್ಣ ಹಿಂದುಳಿದ ವರ್ಗದ ರೈತರು ಈ ಬಹು ಮುಖ್ಯ ಮಾಹಿತಿಯ ಸದುಪಯೋಗವನ್ನು ಪಡೆದುಕೊಂಡು ಕೊನೆಯ ದಿನಾಂಕ ಮೀರುವ ಒಳಗೆ ಈ ಗಂಗಾ ಕಲ್ಯಾಣ ಯೋಜನೆಯಲ್ಲಿ ಅರ್ಜಿಯನ್ನು ಸಲ್ಲಿಸಿ ಈ ಯೋಜನೆ ಲಾಭವನ್ನು ಪಡೆದುಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ

ಕೃಷಿ ವಾಹಿನಿ🌱

ವೆಬ್ಸೈಟ್ನ ಸಂಪರ್ಕದಲ್ಲಿರಿ

Leave a Reply

Your email address will not be published. Required fields are marked *