ನಮಸ್ಕಾರ ಪ್ರಿಯ ರೈತರೇ, ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ಅಡಿಕೆ ಬೆಳಗಾರರಿಗೆ ಬಂಪರ್ ನೀಡಿದೆ. ಅಡಿಕೆ ಬೆಳೆಗೆ ಎಲೆಚುಕ್ಕೆ ರೋಗ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಡಿಕೆ ಬೆಳೆಗಾರರಿಗೆ ಔಷದಿ ಸಿಂಪರಾಣೆಗಾಗಿ ರಾಜ್ಯ ಸರ್ಕಾರದಿಂದ ಪ್ರತಿ 1 ಹೆಕ್ಟೇರ್ ಗೆ ಸುಮಾರು 4 ಸಾವಿರ ರೂಪಾಯಿಗಳ ಸಹಾಯಧನದ ನೆರವು ನೀಡಲು ಆದೇಶ ಹೊರಡಿಸಿದೆ.
ಕರ್ನಾಟಕದ ದಕ್ಷಿಣ ಭಾಗವು ಅತಿ ಹೆಚ್ಚು ಅಡಿಕೆ ಬೆಳೆಗಾರರನ್ನು ಹೊಂದಿದ್ದು, ಹೆಚ್ಚಿನ ರೈತರು ಅಡಿಕೆಯನ್ನು ನಂಬಿದ್ದಾರೆ. ಆದರೆ ಈಗಿನ ಈ ಹವಾಮಾನ ವೈಪರಿತ್ಯದಿಂದಾಗಿ ಅಡಿಕೆ ಬೆಳೆಗಳಿಗೆ ಈ ಎಲೆ ಚುಕ್ಕೆ ರೋಗವು ಹೆಚ್ಚಾಗುತ್ತಿದೆ. ಇದರಿಂದ ರೈತರು ಇಳುವರಿಯಲ್ಲಿ ನಷ್ಟ ಅನುಭವಿಸುತ್ತಿದ್ದಾರೆ. ಅಡಿಕೆ ಬೆಳೆಗಾರರಿಗೆ ಈ ಎಲೆ ಚುಕ್ಕೆ ರೋಗವು ದೊಡ್ಡ ಸವಾಲಾಗಿ ಪರಿಣಮಿಸಿದೆ. ರೈತರು ಅನೇಕ ನಿಯಂತ್ರಣ ಕ್ರಮಗಳನ್ನು ಕೈಗೊಂಡರೂ ಕೂಡ ಕೆಲಸ ಕೊಡುತ್ತಿಲ್ಲ
ರಾಜ್ಯದ ರೈತರಿಗೆ ಅಡಿಕೆ ಬೆಳೆಯ ಎಲೆಚುಕ್ಕೆ ರೋಗದ ಔಷಧಿ ಸಿಂಪಡಣೆಗಾಗಿ ಪ್ರತಿ ಹೆಕ್ಟೇರ್ ಗೆ ಸುಮಾರು 4 ಸಾವಿರ ರೂಪಾಯಿಗಳ ಸಹಾಯದನದವನ್ನು ರಾಜ್ಯ ಸರ್ಕಾರ ನೀಡಲಿದೆ. ಹಾಗೂ ಅದೇ ರೀತಿಯಾಗಿ ಮೊದಲ ಔಷಧಿ ಸಿಂಪಡಣೆಗೆ 1.5 ಹೆಕ್ಟೇರ್ ಅಡಿಕೆ ತೋಟ ಹೊಂದಿರುವ ರೈತರಿಗೆ ಈ ಸಹಾಯದನದ ಆರ್ಥಿಕ ನೆರವನ್ನು ರಾಜ್ಯ ಸರ್ಕಾರ ನೀಡಲಿದೆ.
ಈ ಅಡಿಕೆ ಬೆಳೆಯ ಎಲೆ ಚುಕ್ಕೆ ರೋಗದ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಗಳು ಕರ್ನಾಟಕ ರಾಜ್ಯದ ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಅಥವಾ ಪಸರಿಸುತ್ತಿರುವ ಈ ಅಡಿಕೆ ಎಲೆಚುಕ್ಕೆ ರೋಗದ ನಿಯಂತ್ರಣಕ್ಕೆ ರಾಜ್ಯ ಸರ್ಕಾರ 8 ಕೋಟಿ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಅಡಿಕೆ ಬೆಳೆಯ ಪ್ರಮುಖ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಉತ್ತರಕನ್ನಡ, ದಕ್ಷಿಣ ಕನ್ನಡ, ಕೊಡಗು ಹಾಗೂ ಹಾಸನ ಜಿಲ್ಲೆಗಳಲ್ಲಿ ಸರಿ ಸುಮಾರು 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಎಲೆ ಚುಕ್ಕಿ ರೋಗ ಹೆಚ್ಚಾಗಿ ಹರಡಿದ್ದು, ರಾಜ್ಯ ಸರ್ಕಾರ ಈ ಅಡಿಕೆ ಬೆಳೆಯ ಎಲೆ ಚುಕ್ಕೆ ರೋಗದ ನಿಯಂತ್ರಣಕ್ಕೆ ಮೊದಲ ಹಂತವಾಗಿ 8 ಕೋಟಿ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡಿದೆ.
ಸರ್ಕಾರ ರೈತರನ್ನು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಶಕ್ತಿಯುತಗೊಳಿಸುವ ಗುರಿ ಹೊಂದಿದೆ.
ಅಧಿಕೃತ ಕೃಷಿ ಮಾಹಿತಿಗಾಗಿ ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕ್ ಒತ್ತಿ 👇
https://chat.whatsapp.com/EaIIjMOhBMy7qiof4xCMTo
ಇದರ ಸದುಪಯೋಗ ಪಡಿಸಿಕೊಂಡು ರೈತರು ಅಭಿವೃದ್ಧಿ ಹೊಂದಬೇಕು ಎನ್ನುವ ದೃಷ್ಟಿಯಿಂದ ಸರ್ಕಾರವು ಮಹತ್ವದ ಕಾರ್ಯ ಮಾಡುತ್ತಿದೆ. ಹಾಗೂ ರೈತರು ಸ್ವಾವಲಂಬಿ ಜೀವನ ನಡೆಸಲು ಇದು ಪ್ರಮುಖ ಪಾತ್ರ ವಹಿಸುತ್ತದೆ.
ಹೆಚ್ಚಿನ ಮಾಹಿತಿಗಾಗಿ
ಕೃಷಿ ವಾಹಿನಿ 🌱
ವೆಬ್ಸೈಟ್ ನ ಸಂಪರ್ಕದಲ್ಲಿರಿ..