ಪ್ರೀಯ ರೈತರೇ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಮೊಬೈಲ್ ನಿಂದ ಬೆನಿಫಿಸಿಯರಿ(beneficiary) ಸ್ಟೇಟಸ್ ಚೆಕ್ ಮಾಡುವ ಆಯ್ಕೆಯನ್ನು ಮತ್ತೊಮ್ಮೆ ನೀಡಲಾಗಿದೆ. ಕೇವಲ ಮೊಬೈಲ್ ನಂಬರ್ ನಿಂದ ನಿಮ್ಮ ಖಾತೆಗೆ ಪಿಎಂ ಕಿಸಾನ್ ಹಣ ಜಮಾ ಆಗಿದ್ಯೋ ಇಲ್ಲವೋ ಎಂಬುದನ್ನು ನೋಡುವ ಆಯ್ಕೆಯನ್ನು ಈ ಮೊದಲು ತೆಗೆದು ಹಾಕಲಾಗಿತ್ತು. ಆದರೆ ಈಗ ಮತ್ತೊಮ್ಮೆ ಈ ಆಯ್ಕೆಯನ್ನು ಸೇರಿಸಲಾಗಿದೆ.

ಫಲಾನುಭವಿಗಳು ಅಥವಾ ರೈತರು ಕೇವಲ ತಮ್ಮ ಮೊಬೈಲ್ ನಂಬರ್ ಅನ್ನು ಉಪಯೋಗಿಸಿಕೊಂಡು ಪಿಎಂ ಕಿಸಾನ್ ಹಣ ಅವರ ಖಾತೆಗೆ ಜಮಾ ಆಗಿದ್ಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು.

ಈಗ ನಾವು ಕೇವಲ ಮೊಬೈಲ್ ನಂಬರನ್ನು ಬಳಸಿಕೊಂಡು ರೈತರ ಖಾತೆಗೆ ಪಿಎಂ ಕಿಸಾನ್ ಹಣ ಜಮಾ ಆಗಿದೆಯೋ ಇಲ್ಲವ ಎಂಬುದನ್ನು ಚೆಕ್ ಮಾಡುವುದು ಹೇಗೆ ಎಂಬುದರ ಸಂಪೂರ್ಣ ವಿವರವವನ್ನು ತಿಳಿದುಕೊಳ್ಳೋಣ.

* ಮೊದಲಿಗೆ ಫಲಾನುಭವಿಗಳು ಪಿಎಂ ಕಿಸಾನ್ https://www.pmkisan.gov.in/ ಸಮ್ಮಾನ್ ನಿಧಿ ಎಂಬ ವೆಬ್ಸೈಟ್ ತೆರೆಯಬೇಕಾಗುತ್ತದೆ.

* ಆ ಮುಖಪುಟದಲ್ಲಿ ನೀವು ಕೆಳಗಡೆ ಬಂದಾಗ ನಿಮಗೆ ಅಲ್ಲಿ ಬೆನಿಫಿಶಿಯರಿ ಸ್ಟೇಟಸ್ (beneficiary status) ಎಂಬ ಆಯ್ಕೆ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.

* ನಿಮಗಿಲ್ಲಿ ಚೆಕ್ ಮಾಡಲು ಎರಡು ಆಯ್ಕೆಗಳನ್ನು ನೀಡಲಾಗುತ್ತದೆ.

• ಮೊಬೈಲ್ ನಂಬರ್

• ರಿಜಿಸ್ಟ್ರೇಷನ್ ನಂಬರ

ಇವೆರಡವುಗಳಿಂದ ನೀವು ನಿಮ್ಮ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು.

* ಅದರಲ್ಲಿ ನೀವು “ಮೊಬೈಲ್ ನಂಬರ್” ಇಂದ ಎಂಬ ಆಯ್ಕೆಯನ್ನು ಆಯ್ಕೆ ಮಾಡಿಕೊಂಡು ನಂತರ ಅಲ್ಲಿ ಕೇಳಲಾಗುವ ಕ್ಯಾಪ್ಚ ನಮೂದಿಸಿ “ವಿವರವನ್ನು ಪಡೆಯಿರಿ” (get details) ಎಂಬ ಆಯ್ಕೆಯನ್ನು ಆಯ್ಕೆ ಮಾಡಿ.

* ಇದಾದ ನಂತರ ನಿಮಗೆ ಅಲ್ಲಿ,

• ನಿಮಗೆ ಎಷ್ಟು ಕಂತುಗಳ ಹಣ ಬಂದಿದೆ.

• ಇನ್ನು ಎಷ್ಟು ಕಂತುಗಳ ಹಣ ಬರುವುದು ಬಾಕಿ ಇದೆ.

• ಪಿಎಂ ಕಿಸಾನ್ ಫಲಾನುಭವಿಯ ಹೆಸರು.

• ಅವರ ಬ್ಯಾಂಕ್ ಖಾತೆ ಮತ್ತು ಅಕೌಂಟ್ ನಂಬರ್.

ಮುಂತಾದವುಗಳ ಸಂಪೂರ್ಣ ವಿವರವನ್ನು ಅಲ್ಲಿ ನೀಡಲಾಗುತ್ತದೆ.

ಫಲಾನುಭವಿಗಳು ಅಥವಾ ರೈತರು ತಮ್ಮ ಖಾತೆಗೆ ಹಣ ಬಂದಿದೆಯೋ ಇಲ್ಲವೋ ಎಂಬುದನ್ನು ಕೇವಲ ಮೊಬೈಲ್ ನಂಬರ್ ಬಳಸಿಕೊಂಡು ಈ ರೀತಿ ಚೆಕ್ ಮಾಡಿಕೊಳ್ಳಬಹುದು.

ಕೇವಲ ಮೊಬೈಲ್ ನಂಬರ್ ಅನ್ನು ಬಳಸಿಕೊಂಡು ನೀವು ಈ ಮೊದಲು ನಿಮಗೆ ಎಷ್ಟು ಕಂತು ಬಂದಿದೆ ಮತ್ತು ಎಷ್ಟು ಕಂತು ಬರುವುದು ಬಾಕಿ ಇದೆ. ಇವೆಲ್ಲವುಗಳ ಮಾಹಿತಿಯನ್ನು ನೀವು ಪಡೆದುಕೊಳ್ಳಬಹುದು.

ಕೃಷಿ ಬಗ್ಗೆ ಅಧಿಕೃತ ಮಾಹಿತಿಗಾಗಿ ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ 👇

https://chat.whatsapp.com/EaIIjMOhBMy7qiof4xCMTo

ಈ ಮೊದಲು ನೀವು ಕೇವಲ ಆಧಾರ್ ಕಾರ್ಡ್ ನಂಬರ್ ಅಥವಾ ಓಟಿಪಿಯನ್ನು ನಮೂದಿಸಿ ಸ್ಟೇಟಸ್ ಚೆಕ್ ಮಾಡಬಹುದಾಗಿತ್ತು. ಆದರೆ ಈಗ ಬರೀ ಕೇವಲ ನಿಮ್ಮ ಮೊಬೈಲ್ ನಂಬರ್ ಅನ್ನು ಬಳಸಿ ನಿಮ್ಮ ಖಾತೆಗೆ ಹಣ ಬಂದಿದ್ಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು.

ಹೆಚ್ಚಿನ ಮಾಹಿತಿಗಾಗಿ

ಕೃಷಿ ವಾಹಿನಿ🌱

ವೆಬ್ಸೈಟ್ ಸಂಪರ್ಕದಲ್ಲಿರಿ..

Leave a Reply

Your email address will not be published. Required fields are marked *