ನಮಸ್ಕಾರ ಪ್ರೀಯ ರೈತರೇ, ಚರ್ಮಗಂಟು ರೋಗದಿಂದ ಜಾನುವಾರುಗಳು ಸತ್ತರೆ ಅಥವಾ ಮೃತಪಟ್ಟರೆ ಮಾಲೀಕರಿಗೆ ಪರಿಹಾರ ಹಣ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ..
ಈ ಯೋಜನೆಯಲ್ಲಿ ಚರ್ಮಗಂಟು ರೋಗದಿಂದ ದನಕರುಗಳು ಮೃತಪಟ್ಟರೆ ಅವುಗಳ ಮಾಲೀಕರಿಗೆ ಪರಿಹಾರ ಧನ ನೀಡುವ ಸಂಬಂಧ 2 ಕೋಟಿ ರೂಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.
* ಸಣ್ಣ ಕರುಗಳು ಚರ್ಮಗಂಟು ರೋಗದಿಂದ ಮೃತಪಟ್ಟರೆ 5 ಸಾವಿರ ರೂಗಳ ಪರಿಹಾರ ನೀಡಲಾಗುತ್ತದೆ.
* ಹಸುಗಳು ತೀರಿಕೊಂಡರೆ ಸುಮಾರು 20 ಸಾವಿರ ರೂಗಳನ್ನು,
* ಅದೇ ರೀತಿಯಾಗಿ ಎತ್ತು ತೀರಿಕೊಂಡರೆ 30 ಸಾವಿರ ರೂಗಳ ಪರಿಹಾರ ಹಣ ನೀಡಲು ಸರ್ಕಾರ ಅದೇಶಿಸಿದೆ.
ಸಾಮಾನ್ಯವಾಗಿ ಹಸು, ಎಮ್ಮೆ ಅದರಲ್ಲೂ ಮಿಶ್ರತಳಿ ದನಗಳ ಕರುಗಳಲ್ಲಿ ಅತಿ ಹೆಚ್ಚಾಗಿ ಈ ರೋಗ ಕಂಡುಬರುತ್ತದೆ. ಈ ಚರ್ಮ ಗಂಟು ರೋಗವು ಮುಖ್ಯವಾಗಿ ಸೊಳ್ಳೆ, ನೊಣ, ಉಣ್ಣೆ ಮುಂತಾದವುಗಳಿಂದ ಬಹುಬೇಗವಾಗಿ ಹರಡುತ್ತದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಮತ್ತು ಮಳೆಗಾಲದ ನಂತರದ ದಿನಗಳಲ್ಲಿ ಅತಿಯಾಗಿ ಈ ರೋಗವು ಪಸರಿಸುತ್ತದೆ.
# ಈ ಚರ್ಮಗಂಟು ರೋಗದ ಲಕ್ಷಣಗಳು:
• ದನಕರುಗಳಿಗೆ ಜ್ವರ ಬರುವುದು. ರಾಸುಗಳ ಕಣ್ಣುಗಳಿಂದ ನೀರು ಸೋರುವುದು.
• ರಾಸುಗಳ ಕಾಲುಗಳಲ್ಲಿ ಬಾವು ಕಾಣಿಸಿಕೊಳ್ಳುತ್ತದೆ.
• ದನಗಳ ಚರ್ಮದ ಮೇಲೆ ಸಾಮಾನ್ಯ ಗಾತ್ರದ ಗುಳ್ಳೆ ಕಾಣಿಸಿಕೊಂಡು ನಂತರ ಒಡೆದು ಗಾಯವಾಗುತ್ತವೆ.
• ಹಸುಗಳ ಹಾಲಿನ ಇಳುವರಿ ಕಡಿಮೆಯಾಗುವುದು. ಕರುಗಳು ಕೊನೆಯಲ್ಲಿ ಸಾವಿಗೀಡಾಗಬಹುದು.
ಮಿಶ್ರತಳಿ ದನಗಳು ಹಾಗೂ ಕರುಗಳು ಹೆಚ್ಚಾಗಿ ಈ ರೋಗಕ್ಕೆ ತುತ್ತಾಗುತ್ತವೆ.
# ಈ ಚರ್ಮಗಂಟು ರೋಗದ ಚಿಕಿತ್ಸೆ ಹಾಗೂ ತಡೆಗಟ್ಟುವಿಕೆ:
• ಈ ದನಗಳಲ್ಲಿ ಕಾಣಿಸಿಕೊಳ್ಳುವ ಚರ್ಮ ಗಂಟು ರೋಗವು ವೈರಾಣು ರೋಗವಾಗಿರುವುದರಿಂದ ಇದಕ್ಕೆ ನಿರ್ದಿಷ್ಟ ಚಿಕಿತ್ಸೆ ಇರುವುದಿಲ್ಲ.
• ದನಕರುಗಳ ದೇಹವನ್ನು ತಂಪಾಗಿರಿಸಲು ಅವುಗಳ ಮೈಮೇಲೆ ಹಸಿ ಬಟ್ಟೆ ಹಾಕುವುದು ಹಾಗೂ ನೆರಳಿನಲ್ಲಿ ಕಟ್ಟುವುದು.
• ಜಾನುವಾರುಗಳ ಚರ್ಮದ ಮೇಲಿನ ಗಾಯಗಳಿಗೆ ಪೋಟ್ಯಾಶಿಯಂ ಪರಮಾಂಗನೇಟ್ ದ್ರಾವಣದಿಂದ ಸ್ವಚ್ಛವಾಗಿ ತೊಳೆದು ನಂತರ ಅದಕ್ಕೆ ಐಯೋಡಿನ್ ದ್ರಾವಣ, ಮುಲಾಮು ಹಾಗೂ ಬೇವಿನ ಎಣ್ಣೆಯನ್ನು ಹಚ್ಚಬೇಕು
• ಈಗಾಗಲೇ ರೋಗಕ್ಕೆ ತುತ್ತಾಗಿರುವ ಜಾನುವಾರುಗಳಿಂದ ದೂರ ಇರಿಸಬೇಕು.
• ರೋಗಕ್ಕೆ ತುತ್ತಾಗಿರುವ ಜಾನುವಾರುಗಳಿಗೆ ಉಪಯೋಗಿಸಿದ ಎಲ್ಲಾ ವಸ್ತುಗಳನ್ನು ಮತ್ತು ಸಾಮಗ್ರಿಗಳನ್ನು ಬಳಸಬಾರದು.
• ಆಹಾರದಲ್ಲಿ ಹಸಿರು ಮೇವು ಹಾಗೂ ಲವಣ ಮಿಶ್ರಿತ ಆಹಾರ ನೀಡಬೇಕು.
• ರಾಸುಗಳು ಕುಡಿಯುವ ನೀರಿನಲ್ಲಿ ಬೆಲ್ಲ, ಉಪ್ಪು ಹಾಗೂ ಅಡುಗೆ ಸೋಡಾ ಹಾಕಿ ಕುಡಿಸಬೇಕು.
• ದನಗಳನ್ನು ಕಚ್ಚುವ ಹುಳುಗಳಿಂದ ತಪ್ಪಿಸಲು ಹೊಗೆ ಹಾಕಬೇಕು.
• ಈ ರೋಗವನ್ನು ತಡೆಗಟ್ಟಲು ದನಗಳನ್ನು ಕಟ್ಟುವ ಜಾಗದ ಕೊಟ್ಟಿಗೆಯ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಬೇಕು.
• ಕೊನೆಯಲ್ಲಿ ಫಾರ್ಮಾಲಿನ್(೧%), ಫಿನೈಲ್(೨%) ಅಥವಾ ಸೋಡಿಯಂ ಹಾಪೀಕ್ಲೋರೈಡ್ (೨%) ಅನ್ನು ಕೊಟ್ಟಿಗೆಯ ಸುತ್ತ ಮುತ್ತ ಹಾಗೂ ಕಟ್ಟುವ ಜಾಗದಲ್ಲಿ ದಿನಕ್ಕೆ 2 ಬಾರಿ ಸಿಂಪಡನೆ ಮಾಡಬೇಕು.
ಕೃಷಿ ಬಗ್ಗೆ ಅಧಿಕೃತ ಮಾಹಿತಿಗಾಗಿ ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕ್ ಅನ್ನು ಒತ್ತಿ 👇
https://chat.whatsapp.com/EaIIjMOhBMy7qiof4xCMTo
ಈ ರೀತಿ ಕ್ರಮಗಳನ್ನು ಕೈಗೊಂಡಲ್ಲಿ ಮಾತ್ರ ಈ ಚರ್ಮ ಗಂಟು ರೋಗದ ನಿರ್ವಹಣೆಯನ್ನು ಮಾಡಬಹುದು. ಹಾಗೇನಾದರೂ ಈ ರೋಗದಿಂದ ದನಕರುಗಳು ತೀರಿಕೊಂಡರೆ ಸರ್ಕಾರದಿಂದ ಸಿಗುವ ಪರಿಹಾರ ಹಣದ ಸೌಲಭ್ಯವನ್ನು ಪಡೆದುಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ
ಕೃಷಿ ವಾಹಿನಿ🌱
ವೆಬ್ಸೈಟ್ನ ಸಂಪರ್ಕದಲ್ಲಿರಿ..