ಪ್ರಿಯ ರೈತರೇ, ಇನ್ನೂ ನಿಮ್ಮ ಬೆಳೆ ಪರಿಹಾರ ಹಣ ನಿಮ್ಮ ಖಾತೆಗೆ ಬರೆದಿದ್ದರೆ ಏನು ಮಾಡಬೇಕು? ಯಾವ ಕೆಲಸ ಮಾಡಿದರೆ ನೀವು ಬೆಳೆ ಹಾನಿ ಪರಿಹಾರ ಹಣವನ್ನು ಪಡೆಯಬಹುದು ಎಂಬುದನ್ನು ತಿಳಿದುಕೊಳ್ಳೋಣ.
ಬಹಳಷ್ಟು ಜನರಿಗೆ ಬೆಳೆ ಹಾನಿ ಪರಿಹಾರ ಹಣ ಸಂದಾಯ ಆಗಿರುವುದಿಲ್ಲ. ನೀವು ಯಾವುದೇ ತರಹದ ಬೆಳೆ ಬೆಳೆದಿದ್ದರೂ ಕೂಡ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಬೆಳೆ ಹಾನಿಯಾಗಿದ್ದರೆ ಅದರ ಒಂದು ಪರಿಹಾರ ಹಣ ನಿಮ್ಮ ಖಾತೆಗೆ ಬರೆದಿದ್ದರೆ ತಕ್ಷಣ ನೀವು ಒಂದು ಮಾಹಿತಿಯನ್ನು ಅಪ್ಡೇಟ್ ಮಾಡಬೇಕಾಗುತ್ತದೆ.
ಭೂಮಿ ಆನ್ ಲೈನ್ ಅಪ್ಲಿಕೇಶನ್ ನಲ್ಲಿ ಪರಿಹಾರಕ್ಕೆ ಸಲ್ಲಿಸಿದಂತ ಅರ್ಜಿಯನ್ನು ತಹಸಿಲ್ದಾರ್ ಆಫೀಸ್ ನಿಂದ ನಿಮ್ಮ ಗ್ರಾಮ ಪಂಚಾಯಿತಿ ಕಚೇರಿಗೆ ಕಳಿಸಲಾಗುತ್ತದೆ.
ಅಲ್ಲಿ ನೀವು ಸಂಬಂಧಪಟ್ಟ ಅಧಿಕಾರಿಗಳಿಗೆ ಪರಿಹಾರಕ್ಕೆ ಸಂಬಂಧಿಸಿದ ಅರ್ಜಿ ದಾಖಲೆಗಳನ್ನು ಸಲ್ಲಿಸಿದ ಮೇಲೆ ಅವರು ಬೆಳೆ ಸಮೀಕ್ಷೆ ಮಾಡುತ್ತಾರೆ.
ಗ್ರಾಮ ಪಂಚಾಯತಿಯವರು ನಿಮ್ಮ ಹೊಲದ ಬೆಳೆ ಸಮೀಕ್ಷೆ ಮಾಡಿದ ನಂತರ ಅದರ ದಾಖಲೆಗಳನ್ನು ಅಪ್ಲೋಡ್ ಮಾಡಿ ಅವುಗಳನ್ನು ಪುನಃ ತಹಸಿಲ್ದಾರ್ ಆಫೀಸಿಗೆ ಕಳುಹಿಸಿಕೊಡಲಾಗುತ್ತದೆ. ಇದಾದ ನಂತರ ಕೊನೆಯಲ್ಲಿ ನಿಮಗೆ ಪರಿಹಾರ ಹಣ ಜಮಾ ಆಗುತ್ತದೆ.
ಇತ್ತೀಚಿನ ದಿನ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿರುವ ಕುರಿತು ಸಮೀಕ್ಷೆ ಪೂರ್ಣಗೊಂಡ ನಂತರ, ಪರಿಹಾರ ಪೋರ್ಟಲ್ ನಲ್ಲಿ ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರವೇ ಸಂಬಂಧಪಟ್ಟ ರೈತರಿಗೆ ಅವರ ಹೊಲದ ಬೆಳೆ ಹಾನಿ ಪರಿಹಾರ ಹಣವನ್ನು ಅವರ ಖಾತೆಗೆ ಜಮಾ ಮಾಡಲಾಗುತ್ತದೆ.
ಇಲಾಖೆ ಅಭಿವೃದ್ಧಿಪಡಿಸಿರುವ ಬೆಳೆ ಸಮೀಕ್ಷೆ ಆಪ್ ಮೂಲಕ ಸಮೀಕ್ಷೆಯನ್ನು ನಡೆಸಿ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.
# ಇದಕ್ಕಾಗಿ ರೈತರು,
• ಆಧಾರ್ ಕಾರ್ಡ್
• ಜಮೀನಿನ ಪಹಣಿ ಅಥವಾ ಉತ್ತಾರಿ
• ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ
ಇವುಗಳನ್ನು ತೆಗೆದುಕೊಂಡು ಕೂಡಲೇ ನಿಮಗೆ ಸಂಬಂಧಪಟ್ಟ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ನೀಡಬೇಕು.
ಅವರು ನಿಮ್ಮ E-KYC ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಂಡು, ದಾಖಲೆಗಳನ್ನು ಪರಿಶೀಲಿಸಿದ ನಂತರವೇ ರೈತರ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗುತ್ತದೆ.
ರೈತರು ಇನ್ನೂ ಕೂಡ ಬೆಳೆ ಪರಿಹಾರ ಪಡೆಯದಿದ್ದರೆ ಕೂಡಲೇ ಪರಿಹಾರಕ್ಕೆ ಸಂಬಂಧ ಪಟ್ಟ ಎಲ್ಲ ದಾಖಲೆಗಳನ್ನು ಸರಿಪಡಿಸಿಕೊಂಡು ನಿಮ್ಮ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ನಿಮ್ಮ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.
ಅಧಿಕೃತ ಮಾಹಿತಿಗಾಗಿ ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ 👇
https://chat.whatsapp.com/EaIIjMOhBMy7qiof4xCMTo
ಹಾಗೇನಾದರೂ ರೈತರ ಖಾತೆಗೆ ಬೆಳೆ ಹಾನಿ ಪರಿಹಾರ
ಹಣ ಜಮಾ ಆಗಿದ್ದರೆ ಅದನ್ನು ನೀವು parihara.kar.gov.in ಪೋರ್ಟಲ್ ನಲ್ಲಿ ಪರಿಶೀಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ
ಕೃಷಿ ವಾಹಿನಿ🌱
ವೆಬ್ಸೈಟ್ನ ಸಂಪರ್ಕದಲ್ಲಿರಿ