ಪ್ರಿಯ ರೈತರೇ, ಕುರಿ ಹಾಗೂ ಉಣ್ಣೆ ಸಾಕಾಣಿಕೆ ಮಾಡಲು ಬಯಸುವ ರೈತರಿಗೆ ಸರ್ಕಾರದಿಂದ 4 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತಿದೆ. ಇದರಲ್ಲಿ 2 ಲಕ್ಷ ರೂಪಾಯಿಗಳನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿದೆ. ಅಂದರೆ 4 ಲಕ್ಷ ಸಾಲಕ್ಕೆ ರೈತರಿಗೆ 2 ಲಕ್ಷ ರೂಪಾಯಿಗಳಷ್ಟು ಸಬ್ಸಿಡಿ ನೀಡಲಾಗುತ್ತದೆ.
ಕುರಿ ಮತ್ತು ಉಣ್ಣೆ ಅಭಿವೃದ್ಧಿ ಇಲಾಖೆಯಿಂದ ಕುರಿ ಸಾಕಾಣಿಕೆ ಮಾಡಲು ಬಯಸುವವರು ಸಾಲವನ್ನು ಹೇಗೆ ಪಡೆದುಕೊಳ್ಳಬೇಕು? ಮತ್ತು ಎಲ್ಲೆಲ್ಲಿ ಕುರಿ ಮತ್ತು ಉಣ್ಣೆ ಸಾಕಾಣಿಕೆ ಸಾಲ ಸೌಲಭ್ಯಗಳು ದೊರೆಯುತ್ತವೆ? ಇದಕ್ಕೆ ಬೇಕಾಗುವ ದಾಖಲೆಗಳು? ಮತ್ತು ಪಡೆದುಕೊಳ್ಳುವ ವಿಧಾನದ ಬಗ್ಗೆ ಇರುವ ಸಂಪೂರ್ಣ ಮಾಹಿತಿಯನ್ನು ಈಗ ತಿಳಿದುಕೊಳ್ಳೋಣ.
ಕುರಿ ಸಾಕಾಣಿಕೆ ಇಂದು ಕೇವಲ ಹೈನುಗಾರಿಕೆಯ ಭಾಗವಾಗಿ ಉಳಿದಿಲ್ಲ. ಆಡು ಸಾಕಾಣಿಕೆಯು ಉದ್ಯಮವಾಗಿ ಬದಲಾಗುತ್ತಿದೆ. ಇದರಲ್ಲಿ ಲಕ್ಷಾಂತರ ಆದಾಯ ಗಳಿಕೆ ಇರುವ ಕಾರಣಕ್ಕೆ ರೈತರು ಕೃಷಿಯ ಜೊತೆಗೆ ಮೇಕೆ ಸಾಕಾಣಿಕೆ ಮಾಡುತ್ತಿದ್ದಾರೆ.
ಮೇಕೆ ಸಾಕಾಣಿಕೆ ಉದ್ಯಮ ಆರಂಭಿಸಲು ಸರ್ಕಾರದಿಂದ ಸಾಲ ಮತ್ತು ವಿಮೆ ಸೌಲಭ್ಯವನ್ನು ಸಹ ನೀಡಲಾಗುತ್ತಿದೆ.
ಈ ಯೋಜನೆಯಲ್ಲಿ ಸಾಲ ಪಡೆಯಲು ಇರಬೇಕಾದ ದಾಖಲೆಗಳನ್ನು ನೋಡುವುದಾದರೆ,
• ಆಧಾರ್ ಕಾರ್ಡ್
• ಪ್ಯಾನ್ ಕಾರ್ಡ್
• ನಿಮ್ಮ ಯೋಜನಾ ವರದಿ
• ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ
ನಿಮ್ಮ ಬ್ಯಾಂಕ್ ಖಾತೆಯ ವ್ಯವಹಾರವನ್ನು ಪರಿಶೀಲಿಸಿದ ನಂತರವೇ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತದೆ.
ವಿವಿಧ ಬ್ಯಾಂಕುಗಳು ಕುರಿ ಸಾಕಾಣಿಕೆಗಾಗಿ ಸಾಲ ನೀಡುತ್ತವೆ. ಸರ್ಕಾರಿ ಸಂಸ್ಥೆಯ ನಬಾರ್ಡ್ ಅಡಿಯಲ್ಲಿ ಸಾಲ ಸೌಲಭ್ಯವಿದೆ. ಕುರಿ ಸಾಕಾಣಿಕೆಗೆ ಸಾಲ ನೀಡುವಲ್ಲಿ ನಬಾರ್ಡ್ ಮುಂಚೂಣಿಯಲ್ಲಿದೆ. ಇದಲ್ಲದೆ ಜಾನುವಾರು ಮಿಷನ್ ಯೋಜನೆ ಅಡಿಯಲ್ಲಿ ಕುರಿ ಸಾಕಾಣಿಕೆಗೆ ಸಹಾಯದನ ಸೌಲಭ್ಯ ಒದಗಿಸಲಾಗುತ್ತದೆ.
ರಾಜ್ಯ ಸರ್ಕಾರವು ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್, ಸಹಕಾರಿ ಬ್ಯಾಂಕ್ ಮತ್ತು ನಗರ ಬ್ಯಾಂಕಗಳ ಸಹಯೋಗದೊಂದಿಗೆ ಈ ಸಹಾಯಧನವನ್ನು ನೀಡುತ್ತದೆ.
ನಬಾರ್ಡ್ ಅಡಿಯಲ್ಲಿ ಮೇಕೆ ಸಾಕಾಣಿಕೆಗೆ ಸಾಲದ ಮೇಲೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ರೈತರ ಮೇಲೆ ಸುಮಾರು 33% ನಷ್ಟು ಸಹಾಯದನವನ್ನು ನೀಡಲಾಗುತ್ತದೆ. ಅದೇ ರೀತಿಯಾಗಿ ಉಳಿದ ವರ್ಗಕ್ಕೆ ಸೇರಿದ ರೈತರಿಗೆ ಶೇಕಡಾ 25 ರಷ್ಟು ಸಹಾಯದನವನ್ನು ನೀಡಲಾಗುತ್ತದೆ.
20 ಮೇಕೆಗಳ ಮೇಲೆ ಬ್ಯಾಂಕ ನಿಂದ ಸುಮಾರು 5 ಲಕ್ಷಗಳವರೆಗೆ ಸಾಲ ಸೌಲಭ್ಯವನ್ನು ಪಡೆಯಬಹುದು. ಈ ಯೋಜನೆ ಅಡಿ ಆಡು ಸಾಕಾಣಿಕೆ ವ್ಯವಹಾರಕ್ಕೆ ಸಂಬಂಧ ಹೊಂದಿರುವ ಗ್ರಾಮದಲ್ಲಿ ವಾಸಿಸುವ ರೈತರು ತಮ್ಮ ಎಲ್ಲಾ ಅಗತ್ಯ ದಾಖಲೆಗಳನ್ನು ನೀಡುವ ಮೂಲಕ ಸುಲಭವಾಗಿ ಕುರಿ ಸಾಕಾಣಿಕೆಯನ್ನು ಪ್ರಾರಂಭಿಸಬಹುದು. ರೈತರಿಗೆ ಬ್ಯಾಂಕ್ನಿಂದ ಸುಮಾರು ನಾಲ್ಕು ಲಕ್ಷಗಳವರೆಗೆ ರೂಪಾಯಿಗಳವರಿಗೆ ಸಾಲವನ್ನು ನೀಡುತ್ತಾರೆ. ರೈತರು 10 ಮೇಕೆಗಳ ಮೇಲೆ ಬ್ಯಾಂಕ್ನಿಂದ ಸುಮಾರು 4 ಲಕ್ಷಗಳವರೆಗೆ ಸಾಲವನ್ನು ಪಡೆಯಬಹುದು.
ಈ ಯೋಜನೆಯಲ್ಲಿ ಸಾಲ ಸೌಲಭ್ಯ ಪಡೆಯಲು ಬಯಸುವ ರೈತರು
ಮೊದಲು ನಿಮ್ಮ ಹತ್ತಿರದ ಬ್ಯಾಂಕ್ ಅಥವಾ ಪಶು ಸಂಗೋಪನ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ.
ಅಲ್ಲಿಂದ ನೀವು ಹೊಸದಾಗಿ ಕುರಿ ಸಾಕಾಣಿಕೆಯನ್ನು ಮಾಡಲು ಸಾಲ ಸೌಲಭ್ಯಕ್ಕೆ ಅರ್ಜಿಯನ್ನು ಸಲ್ಲಿಸಬಹುದು.
ಕೃಷಿ ಬಗ್ಗೆ ಅಧಿಕೃತ ಮಾಹಿತಿಗಾಗಿ ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕ್ ಒತ್ತಿ
https://chat.whatsapp.com/B4lr9IxUBS86SJd3GbTQEz
ರೈತರು ಈ ಬಹುಮುಖ್ಯ ಮಾಹಿತಿಯ ಸದುಪಯೋಗವನ್ನು ಪಡೆದುಕೊಂಡು ಕೃಷಿಯಲ್ಲಿ ಅಭಿವೃದ್ಧಿ ಹೊಂದಬೇಕು.
ಹೆಚ್ಚಿನ ಮಾಹಿತಿಗಾಗಿ
ಕೃಷಿ ವಾಹಿನಿ
ವೆಬ್ಸೈಟ್ ಸಂಪರ್ಕದಲ್ಲಿರಿ..