ಪ್ರಿಯ ರೈತರೇ, ಕೃಷಿ ಕಾರ್ಮಿಕರಿಗೆ ಅಥವಾ ರೈತರಿಗೆ ಕೃಷಿ ಸಾಲ ಪಡೆಯುವುದಕ್ಕೆ ಕೇಂದ್ರ ಸರ್ಕಾರದಿಂದ ರೈತರಿಗೆ ಬಂಪರ್ ಆಫರ್ ನೀಡಿದೆ. ರೈತರಿಗೆ ಬೆಳೆ ಸಾಲಕ್ಕೆ ಸುಮಾರು 1.5% ನಷ್ಟು ಬಡ್ಡಿ ಸಬ್ಸಿಡಿಯನ್ನು ನೀಡಲಾಗುತ್ತಿದೆ. ಈ ಬೆಳೆ ಸಾಲದ ಸಬ್ಸಿಡಿ ಬಗ್ಗೆ ಇರುವ ಸಂಪೂರ್ಣ ಮಾಹಿತಿಯನ್ನು ಇವತ್ತಿನ ದಿನ ತಿಳಿದುಕೊಳ್ಳೋಣ.

ಕೃಷಿ ಕಾರ್ಮಿಕರು ಅಥವಾ ರೈತರು ಕೃಷಿ ಸಾಲವೆಂದು ಸುಮಾರು 3 ಲಕ್ಷ ರೂಪಾಯಿಗಳನ್ನು ಸಾಲವಾಗಿ ತೆಗೆದುಕೊಳ್ಳುತ್ತಿದ್ದರು. ಅಂತಹ ರೈತರಿಗೆ ಈಗ ಕೇಂದ್ರ ಸರ್ಕಾರದ ಕಡೆಯಿಂದ 1.5% ನಷ್ಟು ಬಡ್ಡಿಯ ಸಬ್ಸಿಡಿಯನ್ನು ನೀಡಲಾಗುತ್ತಿದೆ.

ಸುಮಾರು 3 ಲಕ್ಷ ರೂಪಾಯಿಗಳ ಅಲ್ಪಾವಧಿ ಸಾಲ ವಿತರಣೆ ಯೋಜನೆ ಅಡಿಯಲ್ಲಿ 1.5 ನಷ್ಟು ಬಡ್ಡಿಯನ್ನು ಸಬ್ಸಿಡಿ ಮುಖಾಂತರ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಈ ಯೋಜನೆಯ ಅನ್ವಯ ಮೊದಲು 3 ಲಕ್ಷ ರೂಪಾಯಿಗಳವರೆಗೆ ಅಲ್ಪಾವಧಿ ಕೃಷಿ ಸಾಲವನ್ನು ಪಡೆಯುವಂತಹ ರೈತರು 7% ನಷ್ಟು ಬಡ್ಡಿಯನ್ನು ಪಾವತಿಸಬೇಕಾಗುತಿತ್ತು. ಆದರೆ ನೀವು ಕಾಲಮಿತಿಯೊಳಗೆ ನೀವು ಹಣವನ್ನು ಪಾವತಿಸಿದರೆ ನಿಮಗೆ ಸುಮಾರು 3% ನಷ್ಟು ಬಡ್ಡಿ ಸಿಗುತ್ತಿತ್ತು. ಅದೇ ರೀತಿಯಾಗಿ ರೈತರು ಕೇವಲ 4% ನಷ್ಟು ಬಡ್ಡಿಯನ್ನು ಮಾತ್ರ ಆ ಸಾಲಕ್ಕೆ ಕಟ್ಟುತ್ತಿದ್ದರು.

ಆದರೆ ಈಗಿನ ಹೊಸ ಆದೇಶದ ಪ್ರಕಾರ ಬಡ್ಡಿದರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅದರಲ್ಲಿ 1.5% ನಷ್ಟು ಬಡ್ಡಿ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ನೀಡುತ್ತದೆ ಎಂದು ತಿಳಿಸಲಾಗಿದೆ.

ಈ ಸಬ್ಸಿಡಿಯನ್ನು ಖಾಸಗಿ ಆಗಿರಬಹುದು ಅಥವಾ ಸರ್ಕಾರಿ ಹಾಗೂ ಸಣ್ಣ ಹಣಕಾಸು ಸಂಸ್ಥೆಗಳು ಅಥವಾ ಪ್ರಾಥಮಿಕ ಗ್ರಾಮೀಣ ಬ್ಯಾಂಕುಗಳು, ಕೃಷಿಪತ್ತಿನ ಸಹಕಾರಿ ಬ್ಯಾಂಕ್ ಗಳು ಆಗಿರಬಹುದು, ಎಲ್ಲದಕ್ಕೂ ಇದು ಅನ್ವಯಿಸಲಾಗುತ್ತದೆ.

ಈ ಯೋಜನೆಗಾಗಿ ಮುಂದಿನ ವರ್ಷಗಳಲ್ಲಿ ಬಜೆಟ್ ನಲ್ಲಿ ಅನುದಾನವನ್ನು ಎತ್ತಿಡಲಾಗಿದೆ.

ಯಾವುದೇ ರೈತರು ಕೃಷಿ ಬೆಳೆ ಸಾಲಕ್ಕಾಗಿ ಬ್ಯಾಂಕ್ ಗಳಲ್ಲಿ ಸುಮಾರು 7%ನಷ್ಟು ಬಡ್ಡಿಯನ್ನು ತೆಗೆದುಕೊಂಡ ಸಾಲಕ್ಕೆ ಕಟ್ಟಬೇಕಾಗುತ್ತಿತ್ತು. ನೀವೇನಾದರೂ ಕಾಲ ಮಿತಿಯೊಳಗೆ ಹಣವನ್ನು ಪಾವತಿ ಮಾಡಿದರೆ 3% ನಷ್ಟು ಬಡ್ಡಿಯನ್ನು ಪಾವತಿಸಬೇಕಾಗುತ್ತಿತ್ತು. ಆದರೆ ಈಗ ರೈತರ ಈ ಒಂದು ಕೃಷಿ ಬೆಳೆ ಸಾಲಕ್ಕೆ ಸುಮಾರು 1.5% ನಷ್ಟು ಬಡ್ಡಿ ಸಬ್ಸಿಡಿಯನ್ನು ನೀಡಲು ಮುಂದಾಗಿದೆ.

ಕೃಷಿ ಬಗ್ಗೆ ಅಧಿಕೃತ ಮಾಹಿತಿಗಾಗಿ ಕೃಷಿ ವಾಹಿನಿ ವೆಬ್ಸೈಟ್ನ ಸಂಪರ್ಕದಲ್ಲಿರಿ ಹಾಗೂ ಗ್ರೂಪ್ ಜಾಯಿನ್ ಆಗಲು ಕೆಳಕಂಡ ಲಿಂಕ್ ಅನ್ನು ಒತ್ತಿ 👇

https://chat.whatsapp.com/EENpKuP0ZBXKf07Xizoato

ರೈತರು ಯಾರು ಕೃಷಿ ಬೆಳೆ ಸಾಲವನ್ನು ಪಡೆದಿದ್ದೀರೋ ಅಥವಾ ಪಡೆಯಬೇಕೆಂದಿದ್ದೀರೋ ಈ ಬಹುಮುಖ್ಯ ಮಾಹಿತಿಯ ಸದುಪಯೋಗವನ್ನು ಪಡೆದುಕೊಂಡು ಇದರ ಲಾಭ ಹೊಂದಬೇಕು.

ಹೆಚ್ಚಿನ ಮಾಹಿತಿಗಾಗಿ

ಕೃಷಿ ವಾಹಿನಿ🌱

ವೆಬ್ಸೈಟ್ನ ಸಂಪರ್ಕದಲ್ಲಿರಿ..

Leave a Reply

Your email address will not be published. Required fields are marked *