ಪ್ರಿಯ ರೈತ ಭಾಂದವರೇ, ಇತ್ತೀಚಿನ ದಿನಗಳಲ್ಲಿ ಕೃಷಿಯಲ್ಲಿ ಬೆಳೆಗಳಿಗೆ ಔಷದಿ ಸಿಂಪರಣೆಗಾಗಿ ಡ್ರೋನ್ ಗಳನ್ನು ಬಳಸುವುದು ಹೆಚ್ಚುತ್ತಿದೆ.
ರೈತರು ಈಗ ಡ್ರೋನ್ ತಂತ್ರಜ್ಞಾನ (Drone Technology) ಅನ್ನು ಬಳಸಿಕೊಂಡು ಕೇವಲ 5 ನಿಮಿಷದಲ್ಲಿ 1 ಎಕರೆ ಬೆಳೆಗೆ ಕೀಟನಾಶಕ ಸಿಂಪಡಣೆಯನ್ನು ಮಾಡಬಹುದಾಗಿದೆ. ಕೃಷಿಯಲ್ಲಿ ಅಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ರೈತರು ಈಗ ಕೃಷಿ ಮಾಡಬಹುದಾಗಿದೆ. ಕಾರ್ಮಿಕರ ಕೊರತೆ, ಸಮಯ ಉಳಿತಾಯ ಮತ್ತು ರೈತರು ಆರೋಗ್ಯವನ್ನು ಕಾಪಾಡಿಕೊಳ್ಳಲು ಡ್ರೋನ್ ತಂತ್ರಜ್ಞಾನ ಮೂಲಕ ಔಷಧಿ ಸಿಂಪಡಣೆ ಮಾಡಬಹುದಾಗಿದೆ .
ತಂತ್ರಜ್ಞಾನ ಬಳಕೆ ಬಗ್ಗೆ ರೈತರಿಗೆ ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ತೊರಿಸಿಕೊಡುವ ಕೆಲಸ ನಡೆಯುತ್ತಿದೆ.
ರೈತರು ಭತ್ತದ ಬೆಳೆಗೆ ಕ್ರಿಮಿನಾಶಕ ಸಿಂಪಡಣೆ ಮಾಡಲು ಬೆನ್ನ ಹಿಂದೆ ಕೀಟನಾಶಕ ಯಂತ್ರ ಬಳಕೆ ಮಾಡುತ್ತಾರೆ. 1 ಎಕರೆ ಸಿಂಪಡಣೆ ಮಾಡಲು ಎರಡು ಗಂಟೆ ಸಮಯ ತೆಗೆದುಕೊಳ್ಳುವ ಜೊತೆಗೆ ಕೀಟನಾಶಕ ಸಿಂಪಡಣೆ ಮಾಡುವ ವ್ಯಕ್ತಿಯ ಆರೋಗ್ಯದ ಮೇಲೆ ಪರಿಣಾಮ ಬಿರಲಿದೆ. ಅದೇ ರೀತಿ ಕೀಟನಾಶಕ ಹಾಗೂ ಹೆಚ್ಚು ನೀರು ಖರ್ಚಾಗುತ್ತದೆ. ಆದರೆ ಡ್ರೋನ್ ಸಿಂಪಡಣೆ ಯಂತ್ರ ಬಳಕೆ ಮಾಡಿದರೆ 16 ಲೀಟರ್ ನೀರಿನಲ್ಲಿ ಕೀಟನಾಶಕವನ್ನು ಎರಡುವರೆ ಎಕರೆ ಸಿಂಪಡಣೆ ಮಾಡಲಾಗುತ್ತದೆ. ಇದರಿಂದ ಕೀಟನಾಶಕ, ನೀರು ಉಳಿತಾಯ, ಸಮಯ ಉಳಿತಾಯ , ಕಾರ್ಮಿಕರ ಕೊರತೆ ನೀಗಲಿದೆ.
ಅದೆ ರೀತಿ ಸಿಂಪಡಣೆ ಮಾಡುವ ವ್ಯಕ್ತಿಯ ಆರೋಗ್ಯದ ಮೇಲೆ ಪರಿಣಾಮ ಬಿರುತ್ತದೆ. ಡ್ರೋನ್ ತಂತ್ರಜ್ಞಾನ ಬಳಕೆ ಮಾಡಿದರೆ 5 ನಿಮಿಷದಲ್ಲಿ ಒಂದು ಎಕರೆ ಬೆಳೆಯಲ್ಲಿ ಕೀಟನಾಶಕ ಸಿಂಪಡಣೆ ಮಾಡಬಹುದಾಗಿದೆ. ಸಮಯ ಉಳಿತಾಯ, ಕೀಟನಾಶಕ ಉಳಿತಾಯ, ಕಾರ್ಮಿಕರ ಕೊರತೆ ಸಮಸ್ಯೆ ಜೊತೆ ಆರೋಗ್ಯದ ಮೇಲೆ ಪರಿಣಾಮ ಬಿರುವದಿಲ್ಲ. ಹೀಗಾಗಿ, ಕೇಂದ್ರ ಸರಕಾರ ಈಗ ಡ್ರೋನ್ ತಂತ್ರಜ್ಞಾನ ಕೃಷಿಗೆ ಅನುಮತಿ ನೀಡಿದ ಹಿನ್ನಲೆ, ರೈತರಿಗೆ ಈ ಬಗ್ಗೆ ಜಮೀನು ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಲಾಗುತ್ತಿದೆ.
ಕೇಂದ್ರ ಸರಕಾರ ಈಗಾಗಲೇ ಡ್ರೋನ್ ಯಂತ್ರದ ಮೂಲಕ ಸಿಂಪಡಣೆ ಗೆ ಅನುಮತಿ ನೀಡಿದ್ದು, ಈಗ ಡ್ರೋನ್ ಕಂಪನಿಗಳಿಂದ ರೈತರಿಗೆ ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ಅರಿವು ಮೂಡಿಸಲಾಗಿದೆ.
ಇನ್ನೂ ಕೆಲವೇ ದಿನಗಳಲ್ಲಿ ಕೃಷಿಯಲ್ಲಿ ಬೆಳೆಗಳಿಗೆ ಔಷದಿ ಸಿಂಪರಣೆಗಾಗಿ ಡ್ರೋನ್ ಗಳನ್ನು ಬಳಸುವುದು ಸರ್ವೇ ಸಾಮಾನ್ಯವಾಗುತ್ತದೆ.
ಕೃಷಿ ಬಗ್ಗೆ ಅಧಿಕೃತ ಮಾಹಿತಿಗಾಗಿ ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ 👇
https://chat.whatsapp.com/KgkiwIwv2THC2yeeT1DqYC
ಅತಿ ಹೆಚ್ಚಾಗಿ ಕೃಷಿ ಭೂಮಿ ಹೊಂದಿದಂತ ರೈತರು ಅಥವಾ ಅತಿ ಹೆಚ್ಚಾಗಿ ಭತ್ತ ಬೆಳೆಯುವಂತ ರೈತರು ಇದರ ಸದುಪಯೋಗವನ್ನು ಪಡೆದುಕೊಂಡು ಉತ್ಪಾದನೆ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ
ಕೃಷಿ ವಾಹಿನಿ🌱
ವೆಬ್ಸೈಟ್ನ ಸಂಪರ್ಕದಲ್ಲಿರಿ..