ಪ್ರಿಯ ರೈತರೇ, ಸರ್ಕಾರವು ಕೃಷಿ ಚಟುವಟಿಕೆಗಳಿಗೆ ಹಲವಾರು ತಂತ್ರಜ್ಞಾನಗಳನ್ನು ಬಳಸಿಕೊಳ್ಳಲು ಪ್ರೋತ್ಸಾಹಿಸುತ್ತಿದ್ದು ಈಗ ಹೈನುಗಾರಿಕೆಯಲ್ಲಿ ಸಹಾಯವಾಗುವ ನಿಟ್ಟಿನಲ್ಲಿ ಪಶು ಇಲಾಖೆಯಲ್ಲಿ ಈ ವರ್ಷವೂ ಕೂಡ ದನಗಳಿಗೆ ಮೇವು ಸುಲಭವಾಗಿ ತಿನ್ನಲು ನಿಮಗೆ ಮೇವು ಕತ್ತರಿಸುವ ಯಂತ್ರವನ್ನು ಖರೀದಿಸಲು ಸಬ್ಸಿಡಿ ದರದಲ್ಲಿ ಅಂದರೆ 50% ದರದಲ್ಲಿ ನೀಡಲಾಗುತ್ತದೆ.
ಇಲ್ಲಿ ರೈತರು ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ ರೈತರು ಈ ಮೇವು ಕತ್ತರಿಸುವ ಯಂತ್ರಕ್ಕೆ ಸಬ್ಸಿಡಿ ಪಡೆಯಲು ನೀವು ಕಡ್ಡಾಯವಾಗಿ ನಿಮಗೆ ಹತ್ತಿರದ ಅಥವಾ ನಿಮಗೆ ಸಂಭಂದಪಟ್ಟ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬೇಕು. ಹಾಗೂ ಅಲ್ಲಿನ ಅಧಿಕಾರಿಗಳು ಕೇಳುವ ದಾಖಲಾತಿಗಳನ್ನು ಸಲ್ಲಿಸಿ ಅರ್ಜಿಗಳನ್ನು ಸಲ್ಲಿಸಬೇಕು. ನಂತರ ಅಧಿಕಾರಿಗಳು ನಿಮ್ಮ ಅರ್ಹತೆಗಳನ್ನು ಪರಿಶೀಲಿಸಿದ ನಂತರ ಅಪ್ರೂವ್ ನೀಡಲಾಗುತ್ತದೆ.
ಹಸಿರು ಮೇವನ್ನು ಸಣ್ಣದಾಗಿ ಕತ್ತರಿಸಿದ ನಂತರ ಅದನ್ನು ರಸಮೇವು ತಯಾರಿಕೆ ಮಾಡುವುದಕ್ಕೆ ಸಹ ಬಳಸಬಹುದಾಗಿದೆ.
ಮೇವು ಕತ್ತರಿಸುವ ಯಂತ್ರಕ್ಕೆ ಸಬ್ಸಿಡಿ ಪಡೆಯಲು ಬೇಕಾಗುವ ದಾಖಲೆಗಳು:
• ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಡಗದ ಜಾತಿ ಪ್ರಮಾಣ ಪತ್ರ
• ಅಂಗವಿಕಲರಿದ್ದಲ್ಲಿ ಅಂಗವಿಕಲ ಪ್ರಮಾಣ ಪತ್ರ
• ಐಡಿ ಪ್ರತಿಗಳನ್ನು ಲಗತ್ತಿಸಿ.
• ಆಧಾರ್ ಕಾರ್ಡ್
• ಪಾಸ್ ಪೋರ್ಟ್ ಸೈಜ್ ಫೋಟೋ
ಮೇವು ಕತ್ತರಿಸುವ ಯಂತ್ರದ ವಿತರಣೆಗಾಗಿ ಅರ್ಜಿ ಆಹ್ವಾನ:
ಈಗಾಗಲೇ ವಿಜಯಪುರ ಜಿಲ್ಲೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅದೇ ರೀತಿ ಪಶುಪಾಲನ ಮತ್ತು ಪಶು ವೈದ್ಯ ಸೇವಾ ಇಲಾಖೆ ಸಹಾಯಕ ನಿರ್ದೇಶಕರು, ತಾಲೂಕಾಡಳಿತ ಕಚೇರಿ ವಿಜಯಪುರದಿಂದ ರಾಷ್ಟ್ರಿಯ ಕೃಷಿ ವಿಕಾಸ ಅಭಿವೃದ್ಧಿ ಯೋಜನೆ ಕಾರ್ಯಕ್ರಮದ ಅಡಿ ಪಲಾನುಭವಿಗಳಿಗೆ ಮೇವು ಕತ್ತರಿಸುವ ಯಂತ್ರದ ವಿತರಣೆಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ರೈತರು ಈ ಅರ್ಜಿಗಳನ್ನು ಸಲ್ಲಿಸಿ ಫಲಾನುಭವಿಗಳು ಆಗಬಹುದು. ಹೈನುಗಾರಿಕೆಯಲ್ಲಿ ಮೆವು ನಿರ್ವಹಣೆ ಮಾಡಲು ಇದು ಬಹಳ ಪ್ರಾಮುಖ್ಯತೆ ಪಡೆದಿದೆ.
ಮೇವು ಕತ್ತರಿಸುವ ಯಂತ್ರದ ಸಹಾಯಧನದ ಬಗ್ಗೆ ಮಾಹಿತಿ:
ಈ ಯಂತ್ರಕ್ಕೆ ಒಬ್ಬ ಫಲಾನುಭವಿಗಳಿಗೆ ಶೇಕಡಾ 50ರ ವಂತಿಗೆ 16,150 ರೂಪಾಯಿ ಮೊತ್ತದೊಂದಿಗೆ ಒಬ್ಬ ಫಲನುಭವಿಗಳಿಗೆ 2hp ಮೇವು ಕತ್ತರಿಸುವ ಯಂತ್ರ ವಿತರಿಸಲಾಗುವುದು. ರೈತರು ಬೇಗನೆ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿಗಳನ್ನು ಸಲ್ಲಿಸಲು ಕಡ್ಡಾಯವಾಗಿ ನಿಮಗೆ ಹತ್ತಿರದ ಅಥವಾ ನಿಮಗೆ ಸಂಭಂದಪಟ್ಟ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬೇಕು.
ಕೃಷಿ ಬಗ್ಗೆ ಅಧಿಕೃತ ಮಾಹಿತಿಗಾಗಿ ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕ್ ಅನ್ನು ಒತ್ತಿ 👇
https://chat.whatsapp.com/KgkiwIwv2THC2yeeT1DqYC
ಈ ರೀತಿ ಸರ್ಕಾರವು ರೈತರಿಗೆ ಒಳ್ಳೆಯ ಬೆಳವಣಿಗೆಗೆ ಅವಕಾಶ ನೀಡುತ್ತಿದೆ. ರೈತರು ಸಹ ಸದುಪಯೋಗ ಪಡೆದುಕೊಳ್ಳಬೇಕು. ದನಗಳು ಸುಲಭವಾಗಿ ಮೇವು ತಿನ್ನಲು ಮೇವು ಕತ್ತರಿಸುವ ಯಂತ್ರವನ್ನು ಹೈನುಗಾರಿಕೆ ಮಾಡುವವವರಿಗೆ ನೀಡಲಾಗುತ್ತದೆ. ಮುಖ್ಯವಾಗಿ ಹೈನುಗಾರಿಕೆ ಉತ್ಪಾದನೆ ಹೆಚ್ಚಿಸಲು ಸುಮಾರು 5-10 ರಾಸುಗಳು ಹೊಂದಿದ್ದರೆ ಅಂತಹ ಸಂದರ್ಭದಲ್ಲಿ ಮೇವು ನಿರ್ವಹಣೆ ಮಾಡಲು ಮೇವು ಕತ್ತರಿಸುವ ಯಂತ್ರದ ಅವಶ್ಯಕತೆ ಇರುತ್ತದೆ.
ಹೆಚ್ಚಿನ ಮಾಹಿತಿಗಾಗಿ
ಕೃಷಿ ವಾಹಿನಿ
ವೆಬ್ಸೈಟ್ನ ಸಂಪರ್ಕದಲ್ಲಿರಿ..