ಪ್ರಿಯ ರೈತರೇ, ಎಲ್ಲಾ ರೈತ ಬಾಂಧವರಿಗೆ ಈ ಒಂದು ಮಾಹಿತಿಯು ಬಹು ಮುಖ್ಯವಾಗಿ ತಿಳಿದಿರಬೇಕಾಗುತ್ತದೆ. ಕೇಂದ್ರ ಸರ್ಕಾರವು ರೈತರಿಗಾಗಿ ಒಂದು ಹೊಸ ಸರ್ವಿಸ್ ಅನ್ನು ಅಥವಾ ವೆಬ್ ಸೈಟನ್ನು ಜಾರಿಗೆ ತಂದಿದೆ.

ಕೇಂದ್ರ ಸರ್ಕಾರವು ರೈತರಿಗೋಸ್ಕರ ಜಾರಿಗೆ ತಂದ ಪಿಎಂ ಕಿಸಾನ್ ಯೋಜನೆ ಬಗ್ಗೆ ನಿಮಗೆಲ್ಲ ತಿಳಿದಿದೆ. ಅದೇ ರೀತಿಯಾಗಿ ಈಗ“ಎಂ ಕಿಸಾನ್” (M-KISAN) ಎಂಬ ಹೊಸ ಸರ್ವಿಸ್ ಅನ್ನು ಪ್ರಾರಂಭಿಸಲಾಗಿದೆ.

ಈ ಸರ್ವಿಸ್ ನಲ್ಲಿ ರೈತರು ಅನೇಕ ರೀತಿಯ ಮಾಹಿತಿಗಳನ್ನು ಪಡೆಯಬಹುದು. ಮತ್ತು ಎಂ ಕಿಸಾನ್ ಸರ್ವಿಸ್ ನಲ್ಲಿ ರಿಜಿಸ್ಟ್ರೇಷನ್ ಅಥವಾ ನೋಂದಣಿಯನ್ನು ಮಾಡಿಕೊಳ್ಳಬಹುದು. ಹಾಗೂ ಕೃಷಿಗೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯನ್ನು ರೈತರು ಮನೆಯಲ್ಲಿ ಕುಳಿತು ತಿಳಿದುಕೊಳ್ಳಬಹುದು.

ಎಂ ಕಿಸಾನ್ ನ ಸೇವೆಗಳನ್ನು ನೋಡುವುದಾದರೆ,

# ನೀವು ಎಂ ಕಿಸಾನ್ ಎಂಬ ಪೋರ್ಟಲ್ ಅನ್ನು ಓಪನ್ ಮಾಡಿದಾಗ ನಿಮಗೆ ಅನೇಕ ರೀತಿಯ ಸೇವೆಗಳ ಆಯ್ಕೆಗಳನ್ನು ನೀಡಲಾಗುವುದು.

# ನೀವು ಈ ಪೋರ್ಟಲ್ ನಲ್ಲಿ ಭಾಷೆ ಆಯ್ಕೆ ಯನ್ನು ಮಾಡಿಕೊಳ್ಳಬಹುದು. ಅಂದರೆ ನಿಮಗೆ ಯಾವ ಭಾಷೆ ಬೇಕೊ ಅದರಲ್ಲಿ ವ್ಯವಹರಿಸಬಹುದು.

# ಆ ಪೋರ್ಟಲ್ ನಲ್ಲಿ ಕಾಣುವ “ಎಂ ಕಿಸಾನ್ ಕುರಿತು” ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿದಾಗ ನಿಮಗೆ ಈ ಎಂ ಕಿಸಾನ್ ಸೇವೆಗೆ ಸಂಬಂಧಿಸಿದ ಸಂಪೂರ್ಣ ವಿವರವನ್ನು ನೀಡಲಾಗುವುದು.

# ನೀವು ಅಲ್ಲಿ KCC ಆಯ್ಕೆ ಮೇಲೆ ಕ್ಲಿಕ್ ಮಾಡಿದಾಗ ನಿಮಗೆ ಕೆಸಿಸಿ ಸ್ಥಳಗಳು, ನೋಡಲ್ ಅಧಿಕಾರಿಗಳು, ಹಾಗೂ ಮುಂತಾದವುಗಳ ಮಾಹಿತಿಯನ್ನು ನೀಡಲಾಗುವುದು.

# ನೀವು ಬೇಕಾದರೆ ಎಸ್ಎಂಎಸ್ (SMS) ಮುಖಾಂತರ ನೋಂದಣಿ ಅಥವಾ ರಿಜಿಸ್ಟ್ರೇಷನ್ ಮಾಡಿಕೊಳ್ಳಬಹುದು.

» ಇ ಎಂ ಕಿಸಾನ್ ಸರ್ವಿಸ್ ನ ಮುಖ್ಯ ಕೆಲಸವೆಂದರೆ ಅಥವಾ ಕಾರ್ಯವೆಂದರೆ,

• ರೈತರಿಗೆ ಬೇಕಾಗುವಂತಹ ಕೆಲವು ಮಾಹಿತಿಗಳನ್ನು ಎಸ್ಎಂಎಸ್ ಮುಖಾಂತರ ತಿಳಿಸಿಕೊಡುವುದು.

• ರೈತರಿಗೆ ಸಂಬಂಧಪಟ್ಟಂತಹ ಕೆಲವು ಮಾಹಿತಿಯ ವಿವರಗಳನ್ನು ರೈತರಿಗೆ ತಿಳಿಸುವುದು.

• ರೈತರಿಗೆ ಉಪಯೋಗವಾಗುವಂತಹ ಕೆಲವು ಬೆಳೆಗಳ ಬಗ್ಗೆ ಮಾಹಿತಿ ನೀಡುವುದು.

• ರೈತರು ಬೆಳೆದಂತಹ ಬೆಳೆಗಳನ್ನು ಮಾರಾಟ ಮಾಡುವವರ ಮತ್ತು ಖರೀದಿ ಮಾಡುವವರ ಮಾಹಿತಿ ಹಾಗೂ ಮಾರಾಟ ಉತ್ಪನ್ನ ಪಟ್ಟಿ, ಖರೀದಿದಾರರು ಮತ್ತು ಮಾರಾಟಗಾರರು.

ಇವೆಲ್ಲವುಗಳ ಮಾಹಿತಿಯನ್ನು ರೈತರು ಈ ಎಂ ಕಿಸಾನ್ ಸರ್ವಿಸ್ ನ ಮೂಲಕ ಪಡೆದುಕೊಳ್ಳಬಹುದು.

• ನೀವು ಮೊಬೈಲ್ ಮೂಲಕ ಎಂ ಕಿಸಾನ್ ಸರ್ವಿಸ್ ನಲ್ಲಿ ನೋಂದಣಿಯನ್ನು ಮಾಡಿಸಿದ್ದರೆ ನಿಮಗೆ ಎಸ್ಎಂಎಸ್ ಮುಖಾಂತರ ಹೊಸ ಹೊಸ ಅಪ್ಡೇಟ್ಗಳನ್ನು ನೀಡಲಾಗುವುದು.

ರೈತರು ಈ ಎಂ ಕಿಸಾನ್ ಸರ್ವಿಸ್ ನ ಸದುಪಯೋಗವನ್ನು ಪಡೆದುಕೊಂಡು ರೈತರಿಗೆ ಯಾವುದೇ ಬೆಳೆ ಬಗ್ಗೆ ಮಾಹಿತಿ ಮತ್ತು ಆ ಬೆಳೆಯ ಮಾರುಕಟ್ಟೆ ಧಾರಣೆಗಳು ಮತ್ತು ಮಾರುಕಟ್ಟೆ ಸ್ಥಳಗಳನ್ನು ತಿಳಿದುಕೊಳ್ಳಬೇಕು.

ರೈತರು ಈ ಎಂ ಕಿಸಾನ್ ಪೋರ್ಟಲ್ ನಲ್ಲಿ ರಿಜಿಸ್ಟ್ರೇಷನ್ ಅಥವಾ ನೋಂದಣಿಯನ್ನು ಮಾಡಿಸಿಕೊಂಡು ಸರ್ಕಾರದಿಂದ ಯಾವುದೇ ಒಂದು ಹೊಸ ಯೋಜನೆ ಜಾರಿಗೆ ತಂದರೆ ಅಥವಾ ಯಾವುದೇ ಒಂದು ಮಾಹಿತಿಯನ್ನು ನೀಡಿದರೆ ಅದನ್ನು ನೀವು ಎಸ್ಎಂಎಸ್ ಮುಖಾಂತರ ಅದರ ಅಪ್ಡೇಟ್ ಅನ್ನು ಪಡೆದುಕೊಳ್ಳಬಹುದು.

ಕೃಷಿಗೆ ಸಂಬಂಧಿಸಿದ ಅಧಿಕೃತ ಮಾಹಿತಿಗಾಗಿ ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕ್ ಅನ್ನು ಒತ್ತಿ 👇👇

https://chat.whatsapp.com/KgkiwIwv2THC2yeeT1DqYC

ಹೆಚ್ಚಿನ ಮಾಹಿತಿಗಾಗಿ

ಕೃಷಿ ವಾಹಿನಿ🌱

ವೆಬ್ಸೈಟ್ನ ಸಂಪರ್ಕದಲ್ಲಿರಿ

Leave a Reply

Your email address will not be published. Required fields are marked *