ಪ್ರಿಯ ರೈತರೇ, ಕರ್ನಾಟಕ ರಾಜ್ಯದ ರೈತರು ಗಮನಿಸಬೇಕಾದ ಅಂಶವೇನೆಂದರೆ ಜಮೀನು ತಮ್ಮ ಸ್ವಂತದ್ದು ಎಂಬುದಕ್ಕೆ ಸಾಕ್ಷಿಗಳನ್ನು ಹೊಂದಿರಬೇಕಾಗುತ್ತದೆ. ಅದನ್ನೇ ಪಹಣಿ ಅಥವಾ ಫಾರಂ 16 ಎಂಬುದಾಗಿ ಕರೆಯುತ್ತಾರೆ. ಪಹಣಿಯಲ್ಲಿ ಸಾಮಾನ್ಯವಾಗಿ 1 ರಿಂದ 16 ಕಾಲಂ ಇರುತ್ತವೆ. ಪ್ರತಿಯೊಂದು ಕಾಲಮ್ನಲ್ಲಿ ನಿಮ್ಮ ಜಮೀನಿಗೆ ಸಂಬಂಧಿಸಿದ ಮಾಹಿತಿ ಅಡಗಿರುತ್ತದೆ.
ಆಗಿನ ಕಾಲದಲ್ಲಿ ಎಲ್ಲವೂ ಕೈ ಬರಹದ ಮೇಲೆ ಅವಲಂಬಿತವಾಗಿರುವಾಗ ಸಹಜವಾಗಿ ತಪ್ಪುಗಳು ಆಗುತ್ತಿದ್ದವು. ಆದ್ದರಿಂದ ಜಮೀನು ನಮ್ಮ ಸ್ವಂತದ್ದು ಎಂಬ ಗುರುತಿಗೆ ಪಹಣಿಯಲ್ಲಿರುವ ಮಾಹಿತಿಯು ಮತ್ತು ಸರ್ವೆ ಆಫೀಸ್ ನಲ್ಲಿರುವ ದಾಖಲೆಗಳು ಒಂದಕ್ಕೊಂದು ಸರಿ ಹೊಂದದಿದ್ದರೆ ರೈತರು ತೊಂದರೆ ಅನುಭವಿಸುತ್ತಿದ್ದರು.
ಪಹಣಿ ಅಥವಾ ಉತಾರಿಯಲ್ಲಿ ಸರ್ವೆ ನಂಬರ್ ಮತ್ತು ಹಿಸ್ಸಾ ನಂಬರ್ ಅಥವಾ ದುಬಾರಿ ಹಿಸ್ಸಾ ನಂಬರ್ ಗಳು ಪಹಣಿಯಲ್ಲಿ ತಪ್ಪಾಗಿದ್ದರೆ ಪಹಣಿ ತಿದ್ದುಪಡಿ ಮಾಡುವ ಪ್ರಕ್ರಿಯೆ ಹೇಗಿರುತ್ತದೆ? ಮತ್ತು ತಿದ್ದುಪಡಿ ಮಾಡಲು ಏನೇನು ದಾಖಲೆಗಳು ಬೇಕು ಎಂಬುದರ ಬಗ್ಗೆ ಇರುವ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.
» ಮೊದಲನೆಯದಾಗಿ ಪಹಣಿಯಲ್ಲಿ ತಿದ್ದುಪಡಿ ಮಾಡಲು ಬೇಕಾಗುವ ದಾಖಲೆಗಳನ್ನು ನೋಡುವುದಾದರೆ,
• ಚಾಲ್ತಿ ವರ್ಷದ ಪಹಣಿ
• ಹಳೆ ಕಾಲದ ಕೈಬರಹದ ಪಹಣಿಗಳು ಕಡ್ಡಾಯವಾಗಿ ಬೇಕಾಗುತ್ತದೆ.
ಇಂತಹ ದಾಖಲೆಗಳನ್ನು ನೀವು ತಹಸಿಲ್ದಾರ್ ಆಫೀಸ್ ನ ಪಹಣಿ ಕೇಂದ್ರದ ಮೂಲಕ ಪಡೆದುಕೊಳ್ಳಬಹುದು.
• ಆಧಾರ್ ಕಾರ್ಡ್
• ಆಕಾರ್ ಬಂದ
• ನಿಮ್ಮ ಜಮೀನಿನ ನಕ್ಷೆ
• ಎಲ್ಲಾ ಮುಟೇಶನ್ ಪ್ರತಿಗಳು
ಆಕಾರ್ ಬಂದ, ಮುಟೇಶನ್ ಪ್ರತಿ ಮತ್ತು ಜಮೀನಿನ ನಕ್ಷೆಯನ್ನು ತಹಸಿಲ್ದಾರ್ ಆಫೀಸ್ ನಿಂದ ಪಡೆದುಕೊಳ್ಳಬಹುದು.
ಈ ಮೇಲೆ ಹೇಳಿರುವ ಎಲ್ಲಾ ದಾಖಲೆಗಳನ್ನು ಸರಿಪಡಿಸಿಕೊಂಡು ತಿದ್ದುಪಡಿ ಸಲುವಾಗಿ ಸರಳವಾಗಿ ಒಂದು ಅರ್ಜಿ ಬರೆಯಬೇಕು. ನಂತರ ಅರ್ಜಿ ಜೊತೆಗೆ ಎಲ್ಲ ದಾಖಲೆಗಳನ್ನು ಲಗತ್ತಿಸಿ ನಿಮಗೆ ಸಂಬಂಧಪಟ್ಟ ತಹಸಿಲ್ದಾರ್ ಕಚೇರಿಯಲ್ಲಿರುವ ಅವಕಾಶಕೆ ಅಥವಾ inward centre ಗೆ ಭೇಟಿ ನೀಡಿ ಅರ್ಜಿಗಳನ್ನು ಸಲ್ಲಿಸಬೇಕು. ಅರ್ಜಿಗಳನ್ನು ಸಲ್ಲಿಸಿದ ಬಳಿಕ ಕಡ್ಡಾಯವಾಗಿ ರಸೀದಿಯನ್ನು ಪಡೆಯಬೇಕು.
# ಪಹಣಿ ತಿದ್ದುಪಡಿ ಆಗುವ ಪ್ರಕ್ರಿಯೆಯನ್ನು ನೋಡುವುದಾದರೆ,
* ಸದರಿ ಅರ್ಜಿಗಳನ್ನು ಪರಿಶೀಲನೆಗಾಗಿ ಮತ್ತು ಮುಂದಿನ ಕ್ರಮಕ್ಕಾಗಿ inward centre ನವರು ಸರ್ವೆ ಆಫೀಸಿಗೆ ಕಳುಹಿಸುತ್ತಾರೆ.
* ಅಲ್ಲಿನ ಅಧಿಕಾರಿಗಳು ಕಡತಗಳನ್ನು ಸ್ವೀಕರಿಸಿ ಮತ್ತು ಪರಿಶೀಲನೆಯನ್ನು ಮಾಡಿ ಅದನ್ನು ಸದರಿ ಕಡತ ನಿರ್ವಹಿಸಲು ಕೆಳಹಂತದ ಅಧಿಕಾರಿಗಳಿಗೆ ಆದೇಶಿಸುತ್ತಾರೆ.
* ಸದರಿ ಅಧಿಕಾರಿಯು ಕಡತಗಳನ್ನು ಪರಿಶೀಲಿಸಿದ ನಂತರ ಆ ಆಸ್ತಿಗೆ ಸಂಬಂಧಿಸಿದಂತೆ ತಮ್ಮ ಕಚೇರಿಯಲ್ಲಿರುವ ಎಲ್ಲಾ ಹಳೆಯ ದಾಖಲೆಗಳನ್ನು ಪರಿಶೀಲಿಸುತ್ತಾರೆ.
* ಕೆಲವು ಸಂದರ್ಭಗಳಲ್ಲಿ ಭೂ ಮಾಲೀಕರ ಜೊತೆ ಸ್ಥಳ ಪರಿಶೀಲನೆಗೆ ಬರಬಹುದು ಅಥವಾ ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಕೂಡ ವರದಿಯನ್ನು ಕೇಳಬಹುದು.
* ಹೀಗೆ ಎಲ್ಲವನ್ನೂ ಪರಿಶೀಲಿಸಿದ ನಂತರ ಹಳೆಯ ದಾಖಲೆಗಳನ್ನು ಆಧರಿಸಿ ಹೊಸ ವರದಿಯನ್ನು ಸಲ್ಲಿಸಿ, ಮುಂದಿನ ಕ್ರಮಕ್ಕಾಗಿ ಕಳುಹಿಸಿಕೊಡಲಾಗುತ್ತದೆ.
* ಹೀಗೆ ತಿದ್ದುಪಡಿ ಆದೇಶದೊಂದಿಗೆ ಕಡತವು ನೇರವಾಗಿ ಭೂಮಿ ಕೇಂದ್ರಕ್ಕೆ ಹೋಗಿ ಅದು ಅಲ್ಲಿ ಕಾರ್ಯಗತವಾಗುತ್ತದೆ.
ಕೃಷಿ ಆಧಾರಿತ ವಿಷಯಗಳನ್ನು ತಿಳಿಯಲು ಕೃಷಿವಾಹಿನಿ ಗ್ರೂಪ್ ಸೇರಿ 👇
https://chat.whatsapp.com/KgkiwIwv2THC2yeeT1DqYC
* ಇಲ್ಲಿಗೆ ಪಹಣಿಯಲ್ಲಿರುವ ಸರ್ವೆ ನಂಬರ್ ಅಥವಾ ಹಿಸ್ಸಾ ನಂಬರ್ ತಿದ್ದುಪಡಿ ಕಾರ್ಯ ಮುಗಿಯುತ್ತದೆ.
ಒಂದು ವೇಳೆ ಅಧಿಕಾರಿಗಳು ಅರ್ಜಿಗಳನ್ನು ತಿರಸ್ಕರಿಸಿದರೆ, ಸಂಬಂಧಪಟ್ಟ ರೈತರಿಗೆ ಸೂಕ್ತಕಾರಣಗಳೊಂದಿಗೆ ಹಿಂಬರಹ ಕೊಡಲಾಗುತ್ತದೆ.
ಈ ಮಾಹಿತಿಯನ್ನು ಎಲ್ಲಾ ರೈತರು ಮುಖ್ಯವಾಗಿ ತಿಳಿದುಕೊಳ್ಳಲೇಬೇಕು. ರೈತರು ಈ ಮಾಹಿತಿಯ ಸದುಪಯೋಗವನ್ನು ಪಡೆ