ಪ್ರಿಯ ರೈತರೇ, ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದೆ. ಸರ್ಕಾರವು ರೈತರು ಅರ್ಜಿಯನ್ನು ಸಲ್ಲಿಸಿದ ಕೇವಲ ಏಳೇ ದಿನದಲ್ಲಿ ತಮ್ಮ ಹೊಲದ ಹಿಸ್ಸಾ, ನಕಾಶೆ ಮತ್ತು ಪೋಡಿ ದಾಖಲೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ಯೋಜನೆ ಜಾರಿಗೆ ತಂದಿದೆ. ರೈತ ಸಮುದಾಯಕ್ಕೆ ರಾಜ್ಯ ಸರ್ಕಾರವು ಮತ್ತೊಂದು ಸಿಹಿಸುದ್ದಿ ನೀಡಿದ್ದು, ಭೂಮಿಯ ಮಾಲೀಕರು ತಮ್ಮ ಜಮೀನಿನ 11 ಇ ಹಿಸ್ಸಾ, ನಕಾಶೆ, ತತ್ಕಾಲ್ ಪೋಡಿ, ಭೂಪರಿವರ್ತನಾ ನಕ್ಷೆ ಮತ್ತು ಇತ್ಯಾದಿ ದಾಖಲೆಗಳನ್ನು ಪಡೆಯಲು ಅರ್ಜಿ ಸಲ್ಲಿಸಿದ ರೈತರಿಗೆ ಕೇವಲ ಏಳೇ ದಿನದಲ್ಲಿ ದಾಖಲೆಗಳು ಅರ್ಜಿದಾರರ ಕೈ ಸೇರಲಿವೆ.
ರಾಜ್ಯ ಸರ್ಕಾರದ ಭೂ ಮಾಪನ ಕಂದಾಯ ಇಲಾಖೆ ಮತ್ತು ಭೂ ದಾಖಲೆಗಳ ಇಲಾಖೆಗಳಿಂದ ಸಾರ್ವಜನಿಕರಿಗೆ ಅಂದರೆ ರೈತರನ್ನು ಕಾಯಿಸದೆ ರೈತರ ಸಮಯವನ್ನು ಉಳಿತಾಯ ಮಾಡುವ ನಿಟ್ಟಿನಲ್ಲಿ ಈ ಸೇವೆ ಕಲ್ಪಿಸಲು “ಸ್ವಾವಲಂಬಿ” ಎಂಬ ಹೆಸರಿನ ಸರ್ಕಾರಿ ವೆಬ್ ಸೈಟ್ ಅನ್ನು ಜಾರಿಗೆ ತರಲಾಗಿದೆ. ಇದರ ಮುಕಾಂತರ ಹಿಸ್ಸಾ, ನಕಾಶೆ, ತತ್ಕಾಲ್ ಪೋಡಿ, ಭೂ ಪರಿವರ್ತನಾ ನಕ್ಷೆ ಮತ್ತು ಇನ್ನಿತರೇ ಜಮೀನಿಗೆ ಸಂಭಂದಿಸಿದ ದಾಖಲೆಗಳನ್ನು ಪಡೆಯಲು ಅರ್ಜಿ ಸಲ್ಲಿಸಿದ ಕೇವಲ ಏಳೇ ದಿನಗಳಲ್ಲಿ ದಾಖಲೆಗಳು ಜನರ ಕೈಗೆ ತಲುಪಲಿವೆ.
ಹಿಂದಿನ ದಿನಗಳಲ್ಲಿ ರೈತರು ಜಮೀನಿನ ದಾಖಲೆಗಳನ್ನು ಪಡೆಯಲು ನಾಡ ಕಚೇರಿಗೆ ಹೋಗಿ, ಜಮೀನಿನ 11 ಇ, ಪೋಡಿ ಮತ್ತು ಇನ್ನಿತರೇ ದಾಖಲೆಗಳನ್ನು ಪಡೆಯಲು ಅರ್ಜಿ ಸಲ್ಲಿಸಬೇಕಾಗಿತ್ತು. ರೈತರ ಅರ್ಜಿಗಳನ್ನು ಮೊದಲು ನಾಡಕಚೇರಿಯಲ್ಲಿ ಪರಿಶೀಲಿಸಿದ ನಂತರ ಸರತಿಯಲ್ಲಿ ಬೀಳುತಿತ್ತು. ಸರತಿಯಿಂದ ಮತ್ತೊಮ್ಮೆ ಪರಿಶೀಲನೆಗೆ ಭೂ ಮಾಪಕರ ಬಳಿ ಕಳುಹಿಸಲಾಗುತ್ತಿತ್ತು. ಸಂಬಂಧಪಟ್ಟ ಭೂ ಮಾಪಕರು ರೈತರ ಜಮೀನನ್ನು ಪರಿಶೀಲಿಸಿ, ಹೊಲದ ನಕ್ಷೆಯನ್ನು ಗುರುತಿಸಿದ ನಂತರ ದಾಖಲೆಗಳನ್ನು ಅಪ್‌ಲೋಡ್ ಮಾಡುತ್ತಿದ್ದರು. ಅಪ್‌ಲೋಡ್ ಮಾಡಿದಂತಹ ದಾಖಲೆಯನ್ನು ಪರಿಶೀಲಿಸಿದ ನಂತರ ಅಂತಿಮ ಅನುಮೋದನೆಗೆ ದಾಖಲೆಗಳನ್ನು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ಕಳುಹಿಸಲಾಗುತ್ತಿತ್ತು. ಈ ಎಲ್ಲ ಕಾರ್ಯಗಳನ್ನು ಮುಗಿಸಲು ಸುಮಾರು ಎರಡು-ಮೂರು ತಿಂಗಳ ಕಾಲಾವಕಾಶ ಬೇಕಾಗುತ್ತಿತ್ತು. ಆದರೆ ಈಗ ರಾಜ್ಯ ಸರ್ಕಾರದ ಭೂ ಮಾಪನ ಕಂದಾಯ ಇಲಾಖೆಯು “ಸ್ವಾವಲಂಬಿ” ವೆಬ್‌ಸೈಟ್ ಮುಕಾಂತರ ಸಲ್ಲಿಸುವ ಅರ್ಜಿಗಳನ್ನು ಕೇವಲ ಎಳೇ ದಿನಗಳಲ್ಲಿ ವರ್ಗಾವಣೆ ಮಾಡಲಾಗುತ್ತದೆ.
ಕೃಷಿಯ ಬಗ್ಗೆ ಅಧಿಕೃತ ಮಾಹಿತಿಯನ್ನು ಪಡೆಯಲು ಈ ಕೆಳಕಂಡ ಗ್ರೂಪ್ ಲಿಂಕ್ ಅನ್ನು ಒತ್ತಿ 👇
https://chat.whatsapp.com/KgkiwIwv2THC2yeeT1DqYC
ಜಮೀನಿನ ಹಿಸ್ಸಾ, ನಕಾಶೆ, ಹೊಲದ ಆರ್‌ಟಿಸಿ ಹಾಗೂ ಮೊಬೈಲ್ ನಂಬರ್ ಗೆ ಲಿಂಕ್ ಇರುವ ಆಧಾರ್ ಕಾರ್ಡ್ ಸರಿಹೊಂದಿದರೆ ಮಾತ್ರ ಈ ವೆಬ್‌ಸೈಟ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿಯಲ್ಲಿ ಕಡ್ಡಾಯವಾಗಿ ಜಮೀನಿನ ಆರ್‌ಟಿಸಿ ನಂಬರ್ ಹೊಂದಿದ್ದರೆ ಮಾತ್ರ ಸಲ್ಲಿಸಿದ ಅರ್ಜಿಗಳು ಮಾನ್ಯವಾಗುತ್ತದೆ. ಇಲ್ಲವಾದಲ್ಲಿ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.
ರೈತರು ತಮ್ಮ ಅರ್ಜಿಗಳನ್ನು rdservices.karnataka.gov.in ಎಂಬ ವೆಬ್‌ಸೈಟ್ ಮುಕಾಂತರ ಅರ್ಜಿ ಸಲ್ಲಿಸಬಹುದು. ಈ ವೆಬ್ ಸೈಟ್ ಮುಖಾಂತರ ರೈತರೇ ಸ್ವತಃ ತಮ್ಮ ಆಧಾರ್ ಕಾರ್ಡ್ ನಂಬರ್ ಹಾಗೂ ಮೊಬೈಲ್ ನಂಬರ್ ನಮೂದಿಸಿ ತಮಗೆ ಸಂಭಂದಿಸಿದ ದಾಖಲೆಗಳನ್ನು ಪಡೆಯಬಹುದು. ಈ ಮೊದಲು ಸರ್ವೆಯರ್ ಬಂದು ಅಪ್ರೂವ್ ಮಾಡಲು ತುಂಬಾ ಸಮಯ ತೆಗೆದುಕೊಳ್ಳುತ್ತಿದ್ದರು. ಆದರೆ, ಈಗ ಸ್ವತಃ ರೈತರೇ ಭೂ ಪರಿವರ್ತನೆ ಮಾಡಿಕೊಳ್ಳಬಹುದು.
ಸರ್ಕಾರದ ಈ “ಸ್ವಾವಲಂಬಿ” ಎಂಬ ವೆಬ್ಸೈಟ್ ನ ಸಹಾಯದಿಂದ ಮಧ್ಯವರ್ತಿಗಳ ಹಾವಳಿಯಿಂದ ತಪ್ಪಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗೆ
ಕೃಷಿ ವಾಹಿನಿ🌱
ವೆಬ್ಸೈಟ್ ನ ಸಂಪರ್ಕದಲ್ಲಿರಿ..