ಪ್ರೀಯ ರೈತರೇ, ಇವತ್ತಿನ ದಿನ ರಸಮೇವಿನ ಸದ್ಭಳಕೆಯನ್ನು ಹೇಗೆ ಮಾಡಿಕೊಳ್ಳಬೇಕು? ಅದನ್ನು ತಯಾರಿಸುವ ಕ್ರಮಗಳೇನು? ಮತ್ತು ಅದರ ಉಪಯೋಗಗಳೇನು? ಎಂಬುದರ ಬಗ್ಗೆ ಇರುವ ವಿವರವಾದ ಮಾಹಿತಿಯನ್ನು ತಿಳಿದುಕೊಳ್ಳೋಣ.

#ರಸಮೇವಿನ ತಯಾರಿಕೆ ಮತ್ತು ಅದರ ಉಪಯೋಗಗಳು.

• ಮೇವುಗಳಿಗಾಗಿ ಬೆಳೆಯುವ ಆಹಾರ ಧಾನ್ಯಗಳು, ಬೆಳೆಗಳು, ಹುಲ್ಲುಗಳು ರಸಮೇವು ಮಾಡಲು ಬಳಸಬಹುದು.

• ತೇವಾಂಶವಿರುವ ಮತ್ತು ಹಾಲುಗಾಳು ಇರುವ ಹಂತದಲ್ಲಿ ಕೊಯ್ದು 1-2 ಅಂಗುಲ ತುಣುಕುಗಳಾಗಿ ಕತ್ತರಿಸಬೇಕು.

• ಹೀಗೆ ಕತ್ತರಿಸಲ್ಪಟ್ಟ ಮೇವನ್ನು ಗುಂಡಿಗಳಲ್ಲಿ (ಅನುಕೂಲಕ್ಕೆ ತಕ್ಕಂತೆ ಸಿಗುವ ಯಾವುದೇ ತರಹ ಕಲ್ಲು, ಕಟ್ಟಿಗೆ, ಸಿಮೆಂಟ ಅಥವಾ ಧಾತುವಿನಿಂದ) ತಯಾರಿಸಿದ ಗುಂಡಿಗಳಲ್ಲಿ ಒತ್ತಿ ಒತ್ತಿ ತುಂಬಬೇಕು.

• ನಂತರ ಗಾಳಿಯಾಡದಂತೆ ಸೀಲು ಮಾಡಬೇಕು.

• ಹೀಗೆ ಮಾಡಿದ 3 ವಾರಗಳ ನಂತರ ನಿಯಂತ್ರಿತ ರಸಾಯನಿಕ ಸೈಲೇಜ್ (Silage), ರಸಮೇವು ಅಥವಾ ಹಗೇವು ಮೇವು ತಯಾರಾಗುತ್ತದೆ.

#ರಸಮೇವಿಗೆ ಯೋಗ್ಯವಾದ ಬೆಳೆಗಳು

*ಗೋವಿನ ಜೋಳ

* ಜೋಳ

* ಸಜ್ಜೆ ಮತ್ತು

* ಬಹುವಾರ್ಷಿಕ ಹುಲ್ಲುಗಳನ್ನು

ರಸಮೇವಾಗಿ ಸಂಗ್ರಹಿಸಡಬಹುದು. ದ್ವಿದಳ ಮೇವಿನ ಬೆಳೆಗಳಾದ ಕುದುರೆಮೆಂತೆ, ಮೆಂತೆಸೊಪ್ಪು, ಅವರೆಗಳನ್ನು ಪ್ರತಿ ಶತ 20 ಕ್ಕಿಂತ ಮೀರದಂತೆ ಏಕದಳ ಮೇವಿನ ಬೆಳೆಗಳ ಜೊತೆಗೆ ಬೆರೆಸಿ ರಸಮೇವು ಮಾಡುವುದು ಉತ್ತಮ. ತೋಕೆ ಗೋಧಿಯನ್ನು ಸಹ ರಸ ಮೇವಿಗೂ ಮತ್ತು ಒಣ ಹಸಿರು ಮೇವಿಗೂ ಬಳಸಬಹುದು.

#ರಸಮೇವು ತಯಾರಿಕೆಗೆ ಬೆಳೆಗಳ ಕಟಾವಿನ ಹಂತ.

ರಸ ಮೇವುಗಳ ಬೆಳೆಗಳನ್ನು ಹಾಲುಗಾಳು ಇರುವ ಹಂತದಲ್ಲಿ ಕೊಯ್ಯಬಹುದು. ತೇವಾಂಶ ಶೇ. 65-75 ರಷ್ಟು ಇರಬೇಕು. ರಸಮೇವು ಮಾಡುವಾಗ ತೆನೆಗಳು ಇಲ್ಲದಿದ್ದರೆ ರಸಮೇವು ಕನಿಷ್ಠ ಗುಣಮಟ್ಟದ್ದಾಗುವುದು.

#ರಸಮೇವಿನ ಗುಂಡಿಗಳ ಪ್ರಕಾರಗಳು.

ಹವಾರಹಿತ ಧಾರಕಗಳು ಮುಖ್ಯವಾಗಿ ಮೂರು ಪ್ರಕಾರವಾಗಿರುತ್ತವೆ. ಅವುಗಳೆಂದರೆ,

»ಭೂಮಿಯೊಳಗೆ ಮಾಡಿದ ಗುಂಡಿಗಳು.

»ಭೂಮಿಯ ಮೇಲೆ ಇದ್ದ ಗುಂಡಿಗಳು.

»ಭೂಮಿಯ ಮಟ್ಟದಲ್ಲಿ ಇದ್ದ ಗುಂಡಿಗಳು.

* ಭೂಮಿಯೊಳಗೆ ಮಾಡಿದ ಗುಂಡಿಗಳು (Pit Silo).

ಯಾವ ಸ್ಥಳಗಳಲ್ಲಿ ನೀರಿನ ಮಟ್ಟವು ಬಹಳ ಕಡಿಮೆ ಇರುವುದೋ, ಬಸಿದು ಹೋಗುವುದೋ ಅಂಥ ಸ್ಥಳಗಳಲ್ಲಿ ಗುಂಡಿಗಳನ್ನು ಭೂಮಿಯೊಳಗೆ ಮಾಡಬೇಕು. ಯೋಗ್ಯವಾದ ಗುಂಡಿಗಳನ್ನು ವೃತ್ತಾಕಾರದಲ್ಲಿ ಅಥವಾ ಆಯತಾಕಾರದಲ್ಲಿಯಾಗಲೀ ಕಟ್ಟಿಗೆ, ಇಟ್ಟಿಗೆ ಮುಂತಾದವುಗಳಿಂದ ಬಳಗೊಳಿಸಬೇಕು.

* ಭೂಮಿಯ ಮೇಲೆ ಇರುವ ಗುಂಡಿಗಳು (Tower Silo).

ಅರವತ್ತರಿಂದ ಎಪ್ಪತ್ತು ಅಡಿ ಎತ್ತರವಿರುವ (ವೃತ್ತಾಕಾರದ) ರಸಮೇವಿನ ಗೋಪುರಗಳು ಹೊರ ದೇಶದ ಅಭಿವೃದ್ಧಿ ಹೊಂದಿದ ಎಲ್ಲಾ ಡೇರಿ ಫಾರ್ಮ್‌ಗಳಲ್ಲಿ ಕಂಡುಬರುತ್ತವೆ. ಇವುಗಳಿಗೆ ಪ್ರಾರಂಭದಲ್ಲಿ ಅಧಿಕ ಖರ್ಚನ್ನು ಮಾಡಬೇಕಾಗುವುದು. ಆದರೆ ಅತಿ ಹೆಚ್ಚಿನ ಗುಣಮಟ್ಟದ ರಸ ಮೇವನ್ನು ತಯಾರಿಸಬಹುದು. ಈಗ ಮಾರುಕಟ್ಟೆಯಲ್ಲಿ ಸೈಲೂ ಬ್ಯಾಗುಗಳು ದೊರೆಯುತ್ತವೆ. ಇವುಗಳು 1 ಟನ್ ಮೇವನ್ನು ಹಿಡಿಯಬಲ್ಲವು. ದೊಡ್ಡದಾದ ಪ್ಲಾಸ್ಟಿಕ್ ಡ್ರಂ. (200 ಲೀ.500 ಮತ್ತು 1000 ಲೀ) ಗಳನ್ನು ಸಹ ಸೈಲೆಜ್ ಮಾಡಲು ಉಪಯೋಗಿಸಬಹುದು.

*ಭೂಮಿಯ ಮಟ್ಟದಲ್ಲಿ ಇರುವ ಗುಂಡಿಗಳು (Trench Silo).

ಈ ರೀತಿಯ ಧಾರಕಗಳು ಸಣ್ಣ ಮತ್ತು ದೊಡ್ಡ ಆಕಾರದಲ್ಲಿ ಇರಬಹುದು. ನಮ್ಮ ಅನುಕೂಲಕ್ಕನುಗುಣಗವಾಗಿ ಮತ್ತು ರಸ ಮೇವು ಮಾಡುವ ಪ್ರಮಾಣಕ್ಕನುಗುಣವಾಗಿ ಧಾರಕಗಳ ಉದ್ದಗಲಗಳು ಅವಲಂಬಿಸಿರುವವು. ಎರಡು ಮೀಟರ್ ಗೋಡೆಗಳನ್ನು ಎರಡು ಅಥವಾ ಮೂರು ಕಡೆ ನಿರ್ಮಿಸಿ, ಉಳಿದ ಕಡೆಯ ಖಾಲಿ ಬಿಟ್ಟ ಜಾಗವನ್ನು ಇಳಿಜಾರಾಗಿ ನಿರ್ಮಿಸಬೇಕು. ಇದರಲ್ಲಿ ತುಣುಕುಗೊಳಿಸಿದ ಮೇವನ್ನು ತುಂಬಲು ಉಪಯೋಗಿಸಬೇಕು ಟ್ರ್ಯಾಕ್ಟರ್ ಟಾಲಿ ಸಹಾಯದಿಂದಲೂ ಮೇವನ್ನು ತುಂಬಬಹುದು. ಆಗಲವು 9 ಮೀಟರ್ ಇದ್ದರೆ, ಉದ್ದವು 25-75 ಮೀಟರ್‌ವರೆಗೆ ಇರಬಹುದು.

# ರಸಮೇವಿನ ಗುಂಡಿಯನ್ನು ಮುಚ್ಚುವ ವಿಧಾನ.

ಗುಂಡಿಗಳಲ್ಲಿ ಮೇವನ್ನು ಮಧ್ಯ ಭಾಗದಲ್ಲಿ 4-6 ಅಡಿ ಎತ್ತರವಾಗಿ (ಮಗ್ಗುಲಿಗಿಂತ ಹೆಚ್ಚಾಗಿ)ತುಂಬಬೇಕು. ಈ ರೀತಿ ತುಂಬಿದ ಮೇಲೆ 6-12 ಅಂಗುಲ ದಪ್ಪವಾದ ಒಣಹುಲ್ಲಿನ ಅಥವಾ ಒಣ ದಂಡುಗಳ ಪದರಿನಿಂದ ಮುಚ್ಚಬೇಕು. ನಂತರ 2-3 ಸೇಂ.ಮೀ ದಪ್ಪವಾದ ಮಣ್ಣು ಮತ್ತು ಕೊಟ್ಟಿಗೆ ಗೊಬ್ಬರ (ಸಮಭಾಗ) ಮಿಶ್ರಿತ ಕೆಸರನ್ನು ಚೆನ್ನಾಗಿ ಹರಡಿ ಹವೆಯಾಡದಂತೆ ಸೀಲು ಮಾಡಬೇಕು. ಪ್ಲಾಸ್ಟಿಕ್ ಹಾಳೆಯಿಂದಲೂ ಸೀಲು ಮಾಡಬಹುದು. ಗಾಳಿ ಮತ್ತು ಮಳೆಯ ನೀರು ಗುಂಡಿಯೋಗಳಗೆ ಹೋಗದಂತೆ ಮೇಲ್ಚಾವಣಿಯ ವ್ಯವಸ್ಥೆ ಇರಬೇಕು.

ರಸ ಮೇವು ತಯಾರಾಗಲು ಬೇಕಾಗುವು ಅವಧಿ:

ಕಡಿಮೆಯೆಂದರೆ ಮೂರು ವಾರದ ಒಳಗೆ ರಸಮೇವು ತಯಾರಾಗುವುದು.

ರಸಮೇವಿನ ಗುಂಡಿಗಳ ಹೊದಿಕೆಯನ್ನು ತೆಗೆಯುವ ರೀತಿ:

ಒಂದು ತುದಿಯಿಂದ ಗುಂಡಿಯು ಹೊದಿಕೆಯನ್ನು ತೆಗೆದರೆ ಪದರ ಪದರವಾಗಿ ಮೇವನ್ನು ತೆಗೆಯಬೇಕು. ಒಮ್ಮೆ ಗುಂಡಿಯನ್ನು ತೆಗೆದ ಮೇಲೆ ಪ್ರತಿ ದಿವಸವೂ ರಸಮೇವನ್ನು ತೆಗೆದು ಪಶುಗಳಿಗೆ ಕೊಡಬೇಕು. ಒಂದು ದಿನಕ್ಕೆ ಪ್ರತಿ ಜಾನುವಾರಿಗೆ 10 ಕಿ.ಗ್ರಾಂ ತಿನ್ನಲು ಕೊಡಬೇಕು.

ಕೃಷಿಗೆ ಸಂಬಂಧಿಸಿದ ಅಧಿಕೃತ ಮಾಹಿತಿಗಾಗಿ ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ 👇

https://chat.whatsapp.com/KgkiwIwv2THC2yeeT1DqYC

#ಗುಂಡಿಯಲ್ಲಿ ರಸಮೇವಿಡುವ ಅವಧಿ.

ನೀರು ಹೋಗದಂತೆ ಮತ್ತು ಗಾಳಿಯಾಡದಂತೆ ನೋಡಿಕೊಂಡಲ್ಲಿ ರಸಮೇವನ್ನು ಒಂದು ವರ್ಷಕ್ಕಿಂತ ಹೆಚ್ಚಿನ ಸಮಯ ರಕ್ಷಿಸಿಡಬಹುದು. ಒಂದು ಸಲ ಗುಂಡಿಯ ಹೊದಿಕೆಯನ್ನು ತಗೆದ ಮೇಲೆ ರಸಮೇವನ್ನು ತಿನ್ನಿಸಿ ಮುಗಿಸುವುದು ಒಳ್ಳೆಯದು. ಈ ರೀತಿ ಹೊದಿಕೆ ತೆಗೆದ ಗುಂಡಿಯನ್ನು ಯಾವುದೇ ಕಾರಣಕ್ಕೆ ಪುನ : ಮುಚ್ಚಿಡಬಾರದು.

#ಮೊದಲ ಬಾರಿ ರಸ ಮೇವು ತಿನ್ನಿಸುವ ರೀತಿ.

ಪಶುಗಳು ರಸಮೇವಿನ ವಾಸನೆಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಕ್ರಮೇಣ ಹೆಚ್ಚು ಹೆಚ್ಚು ಮೇವನ್ನು ತಿನ್ನುವವು.

• ಉತ್ತಮವಾದ ರಸಮೇವು ಹಸಿರುಮೇವು ಸಿಗದೆ ಇರುವ ವೇಳೆಯಲ್ಲಿ ಹಾಲು ಹಿಂಡುವ ಪಶುಗಳಿಗೆ ಅತ್ಯಂತ ಉಪಯುಕ್ತ.

• ರಸಮೇವು ತಯಾರಿಕೆಯು ಹವಾಮಾನದ ಬದಲಾವಣೆ ವ್ಯತ್ಯಾಸದ ಮೇಲೆ ಅವಲಂಬಿಸಿರುವದಿಲ್ಲ. ರಸಮೇವನ್ನು ಸರಿಯಾಗಿ ಸಂಗ್ರಹಿಸಿದ್ದಾಗ ಅದರಲ್ಲಿ ಇರುವ ಎಲ್ಲಾ ಅವಶ್ಯಕ ಪೋಷಕಾಂಶಗಳ ಬಹಳ ದಿನಗಳವರೆಗೆ ಉಳಿಯುತ್ತವೆ.

• ದಪ್ಪಕಾಂಡ ಇರುವ ಮೇವನ್ನು ಒಳ್ಳೆಯ ಗುಣಮಟ್ಟದ ರಸಮೇವನ್ನಾಗಿ ಪರಿವರ್ತಿಸಬಹುದು.

• ಮೇವಿನ ಪೌಷ್ಟಿಕತೆಯನ್ನು ಯೂರಿಯಾ, ಕಾಕಂಬಿ/ಬೆಲ್ಲ, ಖನಿಜ ಮಿಶ್ರಣ ಮಾಡಿ ಹೆಚ್ಚಿಸಬಹುದು.

• ರಸಮೇವು ಮಾಡುವದರಿಂದ ರಾಸುಗಳ ಪಚನ ಶಕ್ತಿಯನ್ನು ಹೆಚ್ಚಿಸಬಹುದು.

• ಹಸಿ ಕಬ್ಬಿನ ಸೋಗೆಯಿಂದ ಕೂಡ ರಸಮೇವು ತಯಾರಿಸಬಹುದು.

ಹೆಚ್ಚಿನ ಮಾಹಿತಿಗಾಗಿ

ಕೃಷಿ ವಾಹಿನಿ🌱

ವೆಬ್ಸೈಟ್ನ ಸಂಪರ್ಕದಲ್ಲಿರಿ…

Leave a Reply

Your email address will not be published. Required fields are marked *