ರೈತ ಬಾಂಧವರೆ ದೇಶದಲ್ಲಿ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಹಾಗೂ ಹೆಚ್ಚಾಗಿ ಈಗ ಕೃಷಿಯ ಜೊತೆಗೆ ಕೃಷಿಯೇತರ ಚಟುವಟಿಕೆಗಳಿಗೆ ಮಹತ್ವ ನೀಡಲಾಗಿದೆ. ಹೀಗೆ ಹೈನುಗಾರಿಕೆ, ಕೋಳಿ, ಮೀನು, ಹಂದಿ ಸಾಕಾಣಿಕೆ ಬಹಳ ಪ್ರಾಮುಖ್ಯತೆ ಪಡೆದಿದೆ. ಹೀಗಾಗಿ ರೈತರು ಕೃಷಿಯೇತರ ಚಟುವಟಿಕೆಗೆ ಉತ್ತೇಜನ ನೀಡುವ ಮೂಲಕ ಹೆಚ್ಚಿನ ಅಭಿವೃದ್ಧಿ ಆಗುತ್ತಿದ್ದಾರೆ. ಆದರೆ ನಾವು ಇಲ್ಲಿ ತಿಳಿಯಬೇಕಾದ ಅಂಶವೆಂದರೆ, ಕೃಷಿಯಲ್ಲಿ ಕೋಳಿ ಗೊಬ್ಬರದ ಮಹತ್ವವನ್ನು ನಾವು ತಿಳಿದುಕೊಳ್ಳಬೇಕಾದ ಅಂಶ. ಭೂಮಿಯ ಫಲವತ್ತತೆಯನ್ನು ಹೆಚ್ಚಿಸಲು ಕೃಷಿಕರು ಬೇರೆ ಬೇರೆ ಸಾವಯವ ಗೊಬ್ಬರಗಳನ್ನು ಬಳಸುತ್ತಿದ್ದಾರೆ. ಆದರೆ ರಾಸಾಯನಿಕ ಗೊಬ್ಬರದ ಹೆಚ್ಚಿನ ಬಳಕೆಯಿಂದ ಅಧಿಕ ಇಳುವರಿ ಪಡೆಯುವುದಲ್ಲದೆ ಮಣ್ಣಿನ ಫಲವತ್ತತೆ ಕುಂಠಿತವಾಗುತ್ತದೆ. ಹೀಗಾಗಿ ರೈತರಿಗೆ ಇದರ ಬಗ್ಗೆ ಅರಿವಾದಾಗ ಎಲ್ಲಾ ರೈತಾಪಿ ಜನರು ಸಾವಯವ ಗೊಬ್ಬರಗಳ ಮೊರೆ ಹೋಗುತ್ತಿದ್ದಾರೆ.

ಹೀಗಾಗಿ ನಮಗೆ ದೊರೆಯುವ ಸಾವಯವ ಗೊಬ್ಬರಗಳಾದ ಕೊಟ್ಟಿಗೆ ಗೊಬ್ಬರ, ಕೋಳಿ ಗೊಬ್ಬರ, ಕುರಿ ಗೊಬ್ಬರ, ಹಂದಿಯ ಗೊಬ್ಬರ, ಎರೆಹುಳು ಗೊಬ್ಬರ, ಇತ್ಯಾದಿಗಳನ್ನು ರೈತರು ತಮ್ಮ ಕೃಷಿಯಲ್ಲಿ ಬಳಸಿ ಪೋಷಕಾಂಶವನ್ನು ಹೆಚ್ಚಿಸಬಹುದು. ಹಾಗೂ ನಮ್ಮ ದೇಶದಲ್ಲಿ ಕೃಷಿಯೇತರ ಚಟುವಟಿಕೆಗಳಲ್ಲಿ ಕೋಳಿ ಉದ್ದಿಮೆ ಇತರೆ ಎಲ್ಲಾ ಕೃಷಿ ಉಪ ಕಸಬುಗಳಿಗಿಂತ ಹೆಚ್ಚಿನ ಲಾಭ ನೀಡುತ್ತದೆ. ಉತ್ತಮ ಪೋಷಕಾಂಶ ಒದಗಿಸುತ್ತದೆ. ಮುಖ್ಯವಾಗಿ ಹೇಳಬೇಕೆಂದರೆ ಕೋಳಿಗಳಲ್ಲಿ ಜೀರ್ಣಾಂಗ ಮತ್ತು ಮೂತ್ರ ಜನಕಾಂಗ ಒಂದೆಡೆ ಸೇರುವುದರಿಂದ ಅವುಗಳ ಮಲ ಮತ್ತು ಮೂತ್ರ ಒಂದೇ ಕಡೆ ಬೆರೆತು ಇತರೆ ಪ್ರಾಣಿಗಳಿಗಿಂತ ಉತ್ತಮ ಗುಣಮಟ್ಟದ ಗೊಬ್ಬರವಾಗಿ ದೊರೆಯುತ್ತದೆ.

ಇಲ್ಲಿ ಮುಖ್ಯವಾಗಿ ಇತರೆ ಸಾವಯವ ಗೊಬ್ಬರಗಳಿಗೆ ಹೋಲಿಸಿದರೆ ಕೋಳಿ ಗೊಬ್ಬರ ಹೆಚ್ಚಿನ ಸಾರಜನಕ, ರಂಜಕ ಮತ್ತು ಪೊಟ್ಯಾಷಿಯಂ ಹಾಗೂ ಇತರೇ ಪೋಷಕಾಂಶಗಳಾದ ಕಬ್ಬಿಣ, ಮ್ಯಾಂಗನೀಸ್, ಮೆಗ್ನಿಸಿಯಂ, ಕಾಪರ್, ಕೋಬಾಲ್ಟ್ , ಮುಂತಾದ ಲಘು ಪೋಷಕಾಂಶಗಳ ಹೊಂದಿವೆ. ರೈತರು ಕೋಳಿ ಹಿಕ್ಕೆಯನ್ನು ಯಾವ ರೀತಿಯಲ್ಲಿ ಶೇಖರಣೆ ಮಾಡಿಡುತ್ತಾರೆ ಎನ್ನುವುದರ ಮೇಲೆ ಅದರ ಮೌಲ್ಯವನ್ನು ಕೂಡ ಹೆಚ್ಚಿಸಬಹುದು. ಅವುಗಳ ಶೇಖರಣೆ ಸಂದರ್ಭದಲ್ಲಿ ಅವುಗಳ ಗುಣಮಟ್ಟ ಹೆಚ್ಚಿಸಲು ಗಮನದಲ್ಲಿ ಇಟ್ಟುಕೊಳ್ಳಬೇಕು. ನೇರವಾದ ಬಿಸಿಲಿನಲ್ಲಿ ಶೇಖರಿಸಿದರೆ ಗೊಬ್ಬರದ ಮೌಲ್ಯ ಕಡಿಮೆಯಾಗುತ್ತದೆ, ಹಾಗೂ ಗುಂಡಿಗಳಲ್ಲಿ ಶೇಖರಿಸುವುದರಿಂದ ಮೌಲ್ಯವನ್ನು ಹೆಚ್ಚಿಸಬಹುದು. ಮುಖ್ಯವಾಗಿ ಈ ಗೊಬ್ಬರವನ್ನು ಸೂಪರ್ ಫಾಸ್ಪೇಟ್ ಮತ್ತು ಸುಣ್ಣದ ಗೊಬ್ಬರದ ಜೊತೆ ಬೆರೆಸಿದರೆ ಹಿಕ್ಕೆಯ ಗೊಬ್ಬರದ ಮೌಲ್ಯವನ್ನು ಬಹಳಷ್ಟು ಹೆಚ್ಚಿಸಬಹುದು.

ಕೋಳಿ ಸಾಕಾಣಿಕೆ ಮಾಡುವಾಗ ಸಾಮಾನ್ಯವಾಗಿ ದಪ್ಪ ಸತ್ತೆಯಲ್ಲಿ ಸಾಕಾಣಿಕೆ ಮಾಡುತ್ತಾರೆ, ಹಾಗೂ ಅದರ ಗೊಬ್ಬರವು ದಪ್ಪಸತ್ತೆಯಲ್ಲಿ ಮಿಶ್ರಣಗೊಂಡಿರುತ್ತದೆ. ಹಾಗೂ ನಾವು ಶೇಖರಿಸಿಟ್ಟ ಒಂದು ಟನ್ ದಪ್ಪ ಸತ್ತೆಯ ಗೊಬ್ಬರವು ಸುಮಾರು 160 ಕಿ.ಗ್ರಾಂ ಅಮೋನಿಯಂ ಸಲ್ಫೇಟ್, 150 ಕಿ.ಗ್ರಾಂ ಸೂಪರ್ ಫಾಸ್ಪೇಟ್, 30 ಕಿ.ಗ್ರಾಂ ಸುಣ್ಣ, 50 ಕಿ.ಗ್ರಾಂ ಪೊಟ್ಯಾಷಿಯಂ, 7.ಕಿ.ಗ್ರಾಂ ಸೋಡಿಯಂ, 7 ಕಿ.ಗ್ರಾಂ ಮೆಗ್ನಿಷಿಯಂ ಸಮವಾಗಿದೆ ಎಂದು ತಿಳಿಸಲಾಗಿದೆ. ಗೊಬ್ಬರದ ಗುಣಮಟ್ಟದ ಪ್ರಮಾಣ ಹೆಚ್ಚಿಸಲು 4000 ಕಿ.ಗ್ರಾಂ ದಪ್ಪ ಸತ್ತೆಯ ಕೋಳಿ ಗೊಬ್ಬರಕ್ಕೆ ನೆಲದ ಮೇಲೆ ಸಾಕಾಣಿಕೆ ಮಾಡಿದ ಗೊಬ್ಬರಕ್ಕೆ 300 ಕಿ.ಗ್ರಾಂ ಸೂಪರ್ ಫಾಸ್ಟೇಟ್ ಅನ್ನು ಬೆರೆಸಿದಾಗ ಅದು 10:2 ಪ್ರಮಾಣದ ಗೊಬ್ಬರವಾಗುತ್ತದೆ. ಹೀಗೆ ಹಲವು ರೀತಿಯಲ್ಲಿ ಗೊಬ್ಬರದ ಗುಣಮಟ್ಟವನ್ನು ಹೆಚ್ಚಿಸುವ ಮೂಲಕ ಫಲವತ್ತತೆ ಕಾಪಾಡುವುದು. ಮುಖ್ಯವಾಗಿ ಇದು ಕಬ್ಬಿನ ಬೆಳೆಗೆ ಬಹಳ ಉತ್ತಮ ಪೋಷಕಾಂಶ ಒದಗಿಸುತ್ತದೆ.

ಕೃಷಿ ಬಗ್ಗೆ ಅಧಿಕೃತ ಮಾಹಿತಿಗಾಗಿ ಕೃಷಿ ವಾಹಿನಿ ವೆಬ್ಸೈಟ್ ಸೇರಲು ಕೆಳಗಿನ ಲಿಂಕ್ ಅನ್ನು ಒತ್ತಿ 👇

https://chat.whatsapp.com/KgkiwIwv2THC2yeeT1DqYC

ಕೋಳಿ ಗೊಬ್ಬರವನ್ನು ಎಲ್ಲಾ ಬೆಳೆಗಳಿಗೆ ಉಪಯೋಗಿಸಬಹುದು. ಹೆಚ್ಚಾಗಿ ಕಬ್ಬು ಹಾಗೂ ಇತರೆ ವಾರ್ಷಿಕ ಬೆಳೆಗಳಿಗೆ ಉಪಯೋಗಿಸುವುದು ಉತ್ತಮ. ಹಾಗೂ ಕೋಳಿ ಗೊಬ್ಬರವು ಬಹಳಷ್ಟು ಉಷ್ಣತೆ ಹೊಂದಿರುವುದರಿಂದ ನೀರಾವರಿ ಸೌಲಭ್ಯ ಇರುವ ಕೃಷಿಗೆ ಉಪಯೋಗಿಸಬೇಕು. ಹೆಚ್ಚಿನ ಪೋಷಕಾಂಶ ಒದಗಿಸುವ ಸಾವಯವ ಗೊಬ್ಬರಗಳಲ್ಲಿ ಕೋಳಿ ಗೊಬ್ಬರವು ಬಹಳಷ್ಟು ಮಹತ್ವವನ್ನು ಪಡೆದಿದೆ.

Leave a Reply

Your email address will not be published. Required fields are marked *