ಪ್ರಿಯ ರೈತರೇ, ರಾಜ್ಯ ಸರ್ಕಾರವು ಅತಿ ಹೆಚ್ಚು ಮಳೆಯಿಂದ ಬೆಳೆ ಹಾನಿಯಾದಂತಹ ರೈತರಿಗೆ ಪರಿಹಾರ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗಿದೆ. ರೈತರು ಬೆಳೆ ಹಾನಿ ಪರಿಹಾರ ಹಣ ಅವರ ಖಾತೆಗೆ ಜಮಾ ಆಗಿದಿಯೋ ಇಲವೋ ಮತ್ತು ಜಮಾ ಆಗದಿದ್ದರೆ ಏನು ಮಾಡಬೇಕು? ಎಂಬುದರ ಬಗ್ಗೆ ಇರುವ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ.

# ಮೊದಲಿಗೆ ರೈತರು “ಭೂಮಿ ಆನ್ಲೈನ್-ಪರಿಹಾರ” ಎಂಬ ಮುಖಪುಟವನ್ನು ತೆರೆಯಬೇಕಾಗುತ್ತದೆ.

# ಆ “ಭೂಮಿ-ಪರಿಹಾರ” ಮುಖಪುಟದಲ್ಲಿ ‘ಪರಿಹಾರದ ಲಿಂಕ್’ ಎಂಬುದಾಗಿ ನಮೂದಿಸಿರುತ್ತದೆ. ಅದರ ಕೆಳಗೆ ಕಾಣುವ ‘ಪರಿಹಾರ ಪೇಮೆಂಟ್’ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

# ರೈತರು ತಾವೇನಾದರೂ ಪರಿಹಾರದ ಐಡಿಯನ್ನು ಹೊಂದಿದ್ದರೆ ಅದರ ಮುಖಾಂತರ ಅಥವಾ ನಿಮ್ಮ ಆಧಾರ್ ಕಾರ್ಡ್ ನಂಬರ್ ನ ಮುಖಾಂತರ ಪರಿಹಾರ ಹಣ ಚೆಕ್ ಮಾಡಬಹುದು.

# ಆಧಾರ್ ಕಾರ್ಡ್ ಆಯ್ಕೆಯನ್ನು ಕ್ಲಿಕ್ ಮಾಡಿದಾಗ ಇನ್ನೊಂದು ಮುಖಪುಟ ತೆಗೆದುಕೊಳ್ಳುತ್ತದೆ.

# ಅದರಲ್ಲಿ ನಿಮಗೆ ಕೇಳಲಾಗುವ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಇನ್ನಿತರ ಮಾಹಿತಿಗಳನ್ನು ಸರಿಯಾದ ಜಾಗದಲ್ಲಿ ತುಂಬಿ “ವಿವರಗಳನ್ನು ವೀಕ್ಷಿಸಿ” ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.

# ಇದಾದ ನಂತರ ನಿಮಗೆ ನಿಮ್ಮ ಖಾತೆಗೆ ಪರಿಹಾರ ಹಣ ಬಂದಿದ್ಯೋ ಇಲ್ಲವೋ ಎಂಬುದರ ಮಾಹಿತಿಯನ್ನು ನೀಡಲಾಗುತ್ತದೆ.

ಒಂದು ವೇಳೆ ಹಣ ಬಂದಿದ್ದರೆ ನಿಮ್ಮ ಬ್ಯಾಂಕ್ ಖಾತೆ ಹೆಸರು, ಅಕೌಂಟ್ ನಂಬರ್ ಮತ್ತು ಎಷ್ಟು ಪರಿಹಾರ ಹಣ ಜಮಾ ಮಾಡಲಾಗಿದೆ ಎಂಬುದರ ವಿವರವನ್ನು ತೋರಿಸಲಾಗುತ್ತದೆ.

ಈ ರೀತಿಯಾಗಿ ನೀವು ನಿಮ್ಮ ಬ್ಯಾಂಕ್ ಖಾತೆಗೆ ಬೆಳೆ ಪರಿಹಾರದ ಹಣ ಜಮಾ ಆಗಿದೆಯೋ ಇಲ್ಲೋ ಎಂಬುದನ್ನು ಚೆಕ್ ಮಾಡಬಹುದು.

ಒಂದು ವೇಳೆ ನಿಮಗೆ ಬೆಳೆ ಪರಿಹಾರ ಹಣ ಜಮಾ ಆಗದಿದ್ದರೆ ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ಏಕೆಂದರೆ ರಾಜ್ಯ ಸರ್ಕಾರವು ಇನ್ನು ಎರಡೇ ದಿನಗಳಲ್ಲಿ ಪರಿಹಾರ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ತಿಳಿಸಿದ್ದರು.

# ರೈತರೇ ನಿಮ್ಮ ಖಾತೆಗೆ ಹಣ ಜಮಾ ಆಗದಿದ್ದರೆ ಮೊದಲು ನೀವು ಮೊದಲೇ ಹೇಳಿದ ಹಾಗೆ “ಭೂಮಿ-ಪರಿಹಾರ” ದ ಮುಖಪುಟದಲ್ಲಿ ಕಾಣುವ ‘ಪರಿಹಾರ ಡಾಟಾ ಎಂಟ್ರಿ’ (parihara data entry) ಎಂಬ ಎರಡನೇ ಆಯ್ಕೆಯನ್ನು ಕ್ಲಿಕ್ ಮಾಡಿ.

# ಕ್ಲಿಕ್ ಮಾಡಿದ ನಂತರ ನಿಮಗೆ ವಿಭಾಗದ (division) ಆಯ್ಕೆ ಮಾಡಲು ಕೇಳಲಾಗುತ್ತದೆ. ಆ ವಿಭಾಗದಲ್ಲಿ ಬರುವ ನಿಮ್ಮ ಜಿಲ್ಲೆ ಆಯ್ಕೆಯನ್ನು ಆಯ್ಕೆ ಮಾಡಿ.

# ಇದಾದ ನಂತರ ನಿಮ್ಮ ಜಿಲ್ಲೆಗೆ ಸಂಬಂಧಪಟ್ಟಂತೆ ಕೆಲವು ಅಧಿಕಾರಿಗಳ ಮೊಬೈಲ್ ಸಂಖ್ಯೆಯನ್ನು ಮತ್ತು ಇಮೇಲ್ ವಿಳಾಸವನ್ನು ನೀಡಲಾಗುವುದು.

# ನಿಮ್ಮ ಖಾತೆಗೆ ಪರಿಹಾರ ಹಣ ಜಮಾ ಆಗದಿದ್ದರೆ ಅಲ್ಲಿ ಕಾಣುವ ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದು ಅಥವಾ ಇಮೇಲ್ ವಿಳಾಸವನ್ನು ಸಂಪರ್ಕಿಸಬಹುದು.

# ಆ ಸಂಖ್ಯೆಗೆ ಕರೆ ಮಾಡುವುದರ ಮೂಲಕ ನಿಮಗೆ ಪರಿಹಾರದ ಹಣ ಜಮಾ ಆಗದಿರುವ ಕುರಿತು ಮತ್ತು ಈ ವಿಷಯಕ್ಕೆ ಸಂಬಂಧಿಸಿದಂತೆ ಇನ್ನಿತರೇ ಗೊಂದಲಗಳನ್ನು ನೀವು ಬಗೆಹರಿಸಿಕೊಳ್ಳಬಹುದು.

ಕೃಷಿಗೆ ಸಂಬಂಧಿಸಿದ ಅಧಿಕೃತ ಮಾಹಿತಿಗಾಗಿ ಕೃಷಿ ಮಾಹಿತಿಗಾಗಿ ಕೃಷಿ ವಾಹಿನಿ ಗ್ರೂಪ್ ಸೇರಲು ಈ ಕೆಳಕಂಡ ಲಿಂಕ್ ಒತ್ತಿ.. 👇

https://chat.whatsapp.com/KgkiwIwv2THC2yeeT1DqYC

# ಈ ರೀತಿಯಾಗಿ ನೀವು ನಿಮ್ಮ ಖಾತೆಗೆ ಬೆಳೆ ಪರಿಹಾರದ ಹಣ ಜಮಾ ಆಗಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು. ಅದೇ ರೀತಿಯಾಗಿ ಬೆಳೆ ಪರಿಹಾರ ಹಣ ಜಮಾ ಆಗದಿದ್ದರೆ ಮೇಲೆ ಹೇಳಿದಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು.

ಮೊದಲಿಗೆ ರೈತರು ಈ ಬೆಳೆ ಹಾನಿ ಪರಿಹಾರ ಹಣವನ್ನು ಪಡೆಯಲು ಆನ್ ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಿರಬೇಕಾಗುತ್ತದೆ. ಅರ್ಜಿಯನ್ನು ಸಲ್ಲಿಸದಿದ್ದರೆ ಬೆಳೆ ಹಾನಿ ಪರಿಹಾರ ಹಣ ಪಡೆಯಲು ಬರುವುದಿಲ್ಲ.

ರೈತರು ಈ ಬಹು ಮುಖ್ಯ ಮಾಹಿತಿಯ ಸದುಪಯೋಗವನ್ನು ಪಡೆದುಕೊಂಡು ಅತಿ ಹೆಚ್ಚು ಮಳೆಯಿಂದ ಬೆಳೆ ಹಾನಿ ಪರಿಹಾರ ಹಣವನ್ನು ಪಡೆದುಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ

ಕೃಷಿ ವಾಹಿನಿ🌱

ವೆಬ್ಸೈಟ್ ನ ಸಂಪರ್ಕದಲ್ಲಿರಿ..

One thought on “ರೈತರ ಖಾತೆಗೆ ಬೆಳೆ ಪರಿಹಾರ ಹಣ ಜಮಾ..!!”

Leave a Reply

Your email address will not be published. Required fields are marked *