ಪ್ರೀಯ ರೈತರೇ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ರೈತ ಪಲಾನುಭವಿಗಳಿಗೆ 12 ನೇ ಕಂತಿನ ಹಣಕ್ಕಾಗಿ ಕಾಯುತ್ತಿರುವ ದೇಶಾದ್ಯಂತ ರೈತರಿಗೆ ಕೇಂದ್ರ ಸರ್ಕಾರವು ಸಿಹಿ ಸುದ್ದಿಯನ್ನು ನೀಡಿದೆ. ಕೇಂದ್ರ ಸರ್ಕಾರವು 12ನೇ ಕಂತಿನ ಹಣವನ್ನು ರೈತರ ಖಾತೆಗೆ ಜಮಾ ಮಾಡಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಅತಿ ಶೀಘ್ರದಲ್ಲಿ ಕೇಂದ್ರ ಸರ್ಕಾರವು 12ನೇ ಕಂತಿನ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗುತ್ತದೆ. ಇದರ ಬಗ್ಗೆ ಇರುವ ಸಂಪೂರ್ಣ ವಿವರವಾದ ಮಾಹಿತಿಯನ್ನು ಇವತ್ತಿನ ದಿನ ತಿಳಿದುಕೊಳ್ಳೋಣ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ರೈತರಿಗೆ ಪ್ರತಿವರ್ಷ 6,000 ರೂಪಾಯಿಗಳನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ವರ್ಷದಲ್ಲಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಮೂರು ಸಮಾನ ಕಂತುಗಳಲ್ಲಿ ಒಟ್ಟು ಆರು ಸಾವಿರ ರೂಪಾಯಿಗಳನ್ನು ಜಮಾ ಮಾಡಲಾಗುತ್ತದೆ. ಈ ಯೋಜನೆ ಅಡಿ ಇದುವರೆಗೆ 11 ಕಂತುಗಳ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗಿದೆ.
12 ನೇ ಕಂತಿನ ಹಣವನ್ನು ಆಗಸ್ಟ್ ಮತ್ತು ಡಿಸೆಂಬರ್ ತಿಂಗಳ ಒಳಗೆ ಜಮಾ ಮಾಡಬೇಕಿದೆ. ಹಾಗಾಗಿ ರೈತರು ಈ 12ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ಆಗಸ್ಟ್ ತಿಂಗಳಿನಲ್ಲೇ ಜಮವಾಗಬೇಕಿದ್ದ 12ನೇ ಕಂತಿನ ಹಣ ಸೆಪ್ಟೆಂಬರ್ ಮುಗಿಯುತ್ತ ಬಂದರು ಇನ್ನೂ ಆಗಿಲ್ಲ. ಅಕಾಲಿಕ ಮಳೆ ಮತ್ತು ಪ್ರವಾಹದಿಂದಾಗಿ ಸಂಕಷ್ಟದಲ್ಲಿರುವ ರೈತರಿಗೆ ತಮ್ಮ ಆರ್ಥಿಕ ಸ್ಥಿತಿ ಸುಧಾರಿಸಲು ಈ 12ನೇ ಕಂತಿನ ಹಣ ಬಹು ಮುಖ್ಯವಾಗಿದೆ.
ಮಾಧ್ಯಮಗಳ ವರದಿಗಳ ಪ್ರಕಾರ ಈ ಸೆಪ್ಟೆಂಬರ್ ತಿಂಗಳೊಳಗೆ 12ನೇ ಕಂತಿನ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗುತ್ತದೆ.
ದೇಶದ ಅನೇಕ ರಾಜ್ಯಗಳಲ್ಲಿ ಉಂಟಾಗಿರುವ ಪ್ರವಾಹದ ಪರಿಸ್ಥಿತಿಯಿಂದ ಈ ಕಂತಿನ ಹಣ ಆರ್ಥಿಕ ಸಹಾಯ ನೀಡಲಿದೆ.
ಕೃಷಿಗೆ ಸಂಬಂಧಿಸಿದ ಅಧಿಕೃತ ಮಾಹಿತಿ ಹಾಗೂ ಅಪ್ಡೇಟ್ ಅನ್ನು ಪಡೆಯಲು ಕೃಷಿ ವಾಹಿನಿ ಗ್ರೂಪ್ ಸೇರಲು ಈ ಕೆಳಕಂಡ ಲಿಂಕ್ ಅನ್ನು ಒತ್ತಿ 👇
https://chat.whatsapp.com/KgkiwIwv2THC2yeeT1DqYC
12ನೇ ಕಂತಿನ ಹಣವನ್ನು E-KYC ಮಾಡಿಸಿದ ರೈತರಿಗೆ ಮಾತ್ರ ಜಮಾ ಮಾಡಲಾಗುತ್ತದೆ. E-KYC ಮಾಡಿಸದಿದ್ದರೆ 12ನೇ ಕಂತಿನ ಹಣ ಜಮಾ ಆಗುವುದಿಲ್ಲ.
ಆದ್ದರಿಂದ E-KYC ಮಾಡಿಸಿಕೊಳ್ಳಲು ರೈತರಿಗೆ ಸಪ್ಟಂಬರ್ 22 ರವರೆಗೆ ಮತ್ತೊಂದು ಅವಕಾಶವನ್ನು ನೀಡಲಾಗಿದೆ. ರೈತರು ಬೇಗನೆ E-KYC ಯನ್ನು ಮಾಡಿಸಿಕೊಳ್ಳಬೇಕು.
ಎಲ್ಲಾ ರೈತರು 12 ನೇ ಕಂತಿನ ಹಣಕ್ಕಾಗಿ E-KYC ಯನ್ನು ಮಾಡಿಸಿದ ನಂತರ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಯಾವುದೇ ದಿನಾಂಕದಂದು ಈ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 12 ನೇ ಕಂತಿನ 2,000 ರೂಪಾಯಿ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರವು ತಿಳಿಸಿದೆ.
ಇದು ಪಿಎಂ ಕಿಸಾನ್ ಯೋಜನೆಯ 12 ನೇ ಕಂತಿನ ಹಣಕ್ಕಾಗಿ ಕಾಯುತ್ತಿರುವ ರೈತರಿಗೆ ಬಂದಿರುವ ಹೊಸ ಅಪ್ಡೇಟೆಡ್ ಮಾಹಿತಿಯಾಗಿದೆ.
ಈ ಮೇಲ್ಕಾಣಿಸಿದ ಹಾಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ರೈತರಿಗೆ ಜಮಾ ಆಗುವ 6,000 ರುಗಳನ್ನು ಸದ್ಯದಲ್ಲೇ ಅಕೌಂಟ್ ಗೆ ಬರುತ್ತವೆ.
ಹೆಚ್ಚಿನ ಮಾಹಿತಿಗಾಗಿ
ಕೃಷಿ ವಾಹಿನಿ🌱
ವೆಬ್ಸೈಟ್ನ ಸಂಪರ್ಕದಲ್ಲಿರಿ..