ಪ್ರೀಯ ರೈತರೇ, ಕರ್ನಾಟಕ ರಾಜ್ಯ ಸರ್ಕಾರದ ಕಡೆಯಿಂದ ರೈತರಿಗೆ ಭರ್ಜರಿ ಸುದ್ದಿ ನೀಡಿದೆ. ಗಂಗಾ ಕಲ್ಯಾಣ ಯೋಜನೆಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ರೈತರಿಗೆ ಎರಡು ಸಿಹಿ ಸುದ್ದಿಗಳನ್ನು ನೀಡಿದೆ. ಹಾಗಾದರೆ ನೀವೇನಾದರೂ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದರೆ ಅಥವಾ ಅರ್ಜಿಯನ್ನು ಸಲ್ಲಿಸಬೇಕೆಂದಿದ್ದರೆ ಈ ಬಹುಮುಖ್ಯ ಮಾಹಿತಿಯ ಸದುಪಯೋಗವನ್ನು ಪಡೆದುಕೊಳ್ಳಬೇಕು.
ಇದೀಗ ಬಂದ ಸುದ್ದಿಯ ಪ್ರಕಾರ ಗಂಗಾ ಕಲ್ಯಾಣ ಯೋಜನೆ ಸಂಬಂಧ ಪಟ್ಟಂತೆ ಎರಡು ರೀತಿಯ ಅಪ್ಡೇಟ್ ನೀಡಲಾಗಿದೆ. ಈ ಎರಡು ಅಪ್ಡೇಟ್ ಗಳನ್ನು ನೋಡುವುದಾದರೆ,
# ಗಂಗಾ ಕಲ್ಯಾಣ ಯೋಜನೆ ಬಗ್ಗೆ ಎಲ್ಲಾ ರೈತರಿಗೂ ಗೊತ್ತಿರುವ ವಿಚಾರ. ಮೊದಲಿನಿಂದ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ ಮೇಲೆ ಸರ್ಕಾರವು ಕೊಳವೆಬಾವಿ ಕೊರೆಸುವಂತಹ ಗುತ್ತಿಗೆದಾರರ ಬ್ಯಾಂಕ್ ಖಾತೆಗೆ ಸಹಾಯಧನದ ಹಣವನ್ನು ಬಿಡುಗಡೆ ಅಥವಾ ಜಮಾ ಮಾಡಲಾಗುತ್ತಿತ್ತು.
ನಂತರ ಅಂತಹ ಗುತ್ತಿಗೆದಾರರು ಕೊಳವೆ ಬಾವಿಯನ್ನು ರೈತರ ಹೊಲಗದ್ದೆಗಳಲ್ಲಿ ಕೊರೆಸಿ ಅದಕ್ಕೆ ಮೋಟರ್ ಮತ್ತು ಪಂಪ್ಸೆಟ್ಟುಗಳನ್ನು ಅಳವಡಿಕೆ ಮಾಡಿ ನೀರಿನ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತ್ತಿತ್ತು.
ಕೆಲವು ದಿನಗಳ ಹಿಂದೆ ಈ ಯೋಜನೆಯಲ್ಲಿ ಹಲವಾರು ಅವ್ಯವಹಾರಗಳು ನಡೆದಿರುವುದು ಬೆಳಕಿಗೆ ಬಂದಿದೆ. ಅಂದರೆ ಗುತ್ತಿಗೆದಾರರು ಈಗಾಗಲೇ ಕೊಳವೆ ಬಾವಿಗಳನ್ನು ರೈತರ ಹೊಲಗದ್ದೆಗಳಲ್ಲಿ ಕೊರೆಸಿದ್ದೇವೆ ಎಂದು ಸುಳ್ಳು ಪ್ರಮಾಣ ಪತ್ರಗಳನ್ನು ನೀಡಿ ಹಣವನ್ನು ಪಡೆದುಕೊಳ್ಳುತ್ತಿದ್ದರು. ಇದು ರಾಜ್ಯ ಸರ್ಕಾರದ ಗಮನಕ್ಕೆ ಬಂದ ನಂತರ ಸದ್ಯಕ್ಕೆ ಈ ಹಣ ಬಿಡುಗಡೆಯ ಪ್ರಕ್ರಿಯೆಯನ್ನು ನಿಲ್ಲಿಸಲಾಗಿದೆ.
ಅಂದರೆ ಗುತ್ತಿಗೆದಾರರ ಖಾತೆಗೆ ಹಣವನ್ನು ಬಿಡುಗಡೆ ಮಾಡುವುದು ನಿಲ್ಲಿಸಲಾಗಿದೆ.
ಅದಕ್ಕಾಗಿ ರಾಜ್ಯ ಸರ್ಕಾರ ರೈತರಿಗೆ ಸಿಹಿ ಸುದ್ದಿ ನೀಡಿದೆ.
ಮುಂದಿನ ದಿನಗಳಲ್ಲಿ ಅಂದರೆ ಈ ವರ್ಷದ 2022 ಮತ್ತು 23ನೇ ಸಾಲಿನಲ್ಲಿ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಸಹಾಯಧನದ ಹಣವನ್ನು ಬಿಡುಗಡೆ ಮಾಡಲಾಗುತ್ತದೆ.
ತದನಂತರ ರೈತರು ಹಣ ಬಿಡುಗಡೆ ಆದ ಮೇಲೆ ಕೊಳವೆ ಬಾವಿಗಳನ್ನು ಅವರೇ ಕೊರೆಸಿಕೊಂಡು, ಮೋಟಾರ್ ಮತ್ತು ಪಂಪ್ಸೆಟ್ಟುಗಳನ್ನು ಅಳವಡಿಕೆ ಮಾಡಿಕೊಂಡು, ತಮ್ಮ ಹೊಲದ ನೀರಿನ ವ್ಯವಸ್ಥೆಯನ್ನು ಅವರೇ ಮಾಡಿಕೊಳ್ಳಬಹುದು.
# ರಾಜ್ಯ ಸರ್ಕಾರ ರೈತರಿಗೆ ನೀಡಿದ ಎರಡನೇ ಸಿಹಿ ಸುದ್ದಿಯನ್ನು ನೋಡುವುದಾದರೆ,
2018 ರಿಂದ ಕೆಲವು ರೈತರು ಗಂಗಾ ಕಲ್ಯಾಣ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಅಂತಹ ಒಂದು ರೈತರ ಹೊಲ ಗದ್ದೆಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಸಿ, ಅದಕ್ಕೆ ಪಂಪ್ಸೆಟ್ಟುಗಳನ್ನು ಅಳವಡಿಕೆ ಮಾಡಿ, ನೀರಿನ ವ್ಯವಸ್ಥೆಯನ್ನು ಮಾಡಿಕೊಂಡಿದ್ದರು. ಅಂತಹ ರೈತರಿಗೆ ನೀಡುವ ಸಹಾಯಧನದಲ್ಲಿ ಬಾಕಿ ಉಳಿಸಲಾಗಿತ್ತು.
ನಿಮಗೆ ಕೃಷಿಗೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಅಧಿಕೃತ ಮಾಹಿತಿಯನ್ನು ಪಡೆದುಕೊಳ್ಳಲು ಕೃಷಿ ವಾಹಿನಿ ಗ್ರೂಪನ್ನು ಸೇರಲು ಈ ಕೆಳಕಂಡ ಲಿಂಕ್ ಅನ್ನು👇👇 https://chat.whatsapp.com/KgkiwIwv2THC2yeeT1DqYC
2018 ರಿಂದ ಬಾಕಿ ಇರುವ ಗಂಗಾ ಕಲ್ಯಾಣ ಯೋಜನೆಯನ್ನು ಈ ವರ್ಷ ಸಂಪೂರ್ಣವಾಗಿ ಪೂರ್ಣಗೊಳಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
ಈ ಎರಡು ರೀತಿಯ ಸಿಹಿ ಸುದ್ದಿಗಳನ್ನು ರಾಜ್ಯ ಸರ್ಕಾರ ರೈತರಿಗೆ ನೀಡಿದೆ. ಅಂದರೆ ಇನ್ನು ಮುಂದೆ ಕಲ್ಯಾಣ ಯೋಜನೆಗೆ ಯಾವ ರೈತರು ಅರ್ಜಿಯನ್ನು ಸಲ್ಲಿಸುತ್ತಾರೋ ಅಂತಹ ರೈತರ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗುವುದು.
ಈ ಮೇಲ್ಕಾಣಿಸಿದ ವಿಷಯದ ಬಗ್ಗೆ ಗಮನ ಹರಿಸಿ ರೈತರು ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ಬರುವಂತಹ ಸೌಲಭ್ಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಇನ್ನೂ ಅಧಿಕೃತ ಮಾಹಿತಿಗಾಗಿ ಗಂಗಾ ಕಲ್ಯಾಣ ಯೋಜನೇ ಪೋರ್ಟಲ್ನಲ್ಲಿ ಸಿಗುತ್ತದೆ..
ಹೆಚ್ಚಿನ ಮಾಹಿತಿಗಾಗಿ
ಕೃಷಿ ವಾಹಿನಿ🌱
ವೆಬ್ಸೈಟ್ನ ಸಂಪರ್ಕದಲ್ಲಿರಿ…