ಪ್ರೀಯ ರೈತರೇ, ದೇಶದಾದ್ಯಂತ ಇರುವ ಎಲ್ಲಾ ರೈತರಿಗೆ ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ಯ ನಿಧಿ ಯೋಜನೆಯ ಮೂಲಕ ಪ್ರತಿ ವರ್ಷಕ್ಕೆ 6,000 ಸಹಾಯಧನ ಪಡೆದುಕೊಳ್ಳುತ್ತಿರುವ ಎಲ್ಲಾ ರೈತರಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಬಂಪರ್ ಗಿಫ್ಟ್ ನೀಡಿದೆ.
ವರ್ಷಕ್ಕೆ 3 ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.
ಈ ಸಾಲ ಸೌಲಭ್ಯಕ್ಕೆ ಯಾವುದೇ ರೀತಿಯಾದಂತಹ ಬಡ್ಡಿ ಇರುವುದಿಲ್ಲ. ಒಂದು ವೇಳೆ ಬಡ್ಡಿ ಇದ್ದರು ಕೂಡ ತುಂಬಾ ಕಡಿಮೆ ಇರುತ್ತದೆ. ಇದರ ಜೊತೆಗೆ ನೀವು ಪ್ರತಿ ವರ್ಷವೂ ಕಡಿಮೆ ಇರುವ ಬಡ್ಡಿಗೆ ವರ್ಷಕ್ಕೆ ಪಾರ್ವತಿಸಲು ಹೋದರೆ ಅದರಲ್ಲಿಯೂ ಕೂಡ ನಿಮಗೆ ಸಬ್ಸಿಡಿಯನ್ನು ನೀಡಲಾಗುವುದು.
# ಇದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ತಮ್ಮ ಹೆಸರು ನೊಂದಾಯಿಸಿಕೊಂಡಂತ ಕರ್ನಾಟಕ ರಾಜ್ಯದ ಎಲ್ಲಾ ರೈತರಿಗೂ ಲಭ್ಯವಾಗಲಿದ್ದು, ರೈತರು ಈ ಒಂದು ಸಣ್ಣ ಕೆಲಸವನ್ನು ಮಾಡಿದರೆ 3 ಲಕ್ಷ ರೂಪಾಯಿಗಳವರೆಗೆ ಬಡ್ಡಿ ರಹಿತ ಸಾಲವನ್ನು ಪಡೆದುಕೊಳ್ಳಬಹುದು.
ಹಾಗಾದರೆ ರೈತರು ಹೇಗೆ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು ಹಾಗೂ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡಂತಹ ಫಲಾನುಭವಿಗಳು ಇದನ್ನು ಹೇಗೆ ಪಡೆದುಕೊಳ್ಳಬಹುದು. ಎಂಬುದರ ಸಂಪೂರ್ಣ ವಿವರವಾದ ಮಾಹಿತಿಯನ್ನು ತಿಳಿದುಕೊಳ್ಳೋಣ.
# ಈ ಕಿಸಾನ್ ಕ್ರೆಡಿಟ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲಾತಿಗಳನ್ನು ನೋಡುವುದಾದರೆ,
* 2 ಪಾಸ್ಪೋರ್ಟ್ ಗಾತ್ರದ ಫೋಟೋ
* ಆಧಾರ್ ಕಾರ್ಡ್
* ಪ್ಯಾನ್ ಕಾರ್ಡ್
* ಚಾಲನ ಪರವಾನಗಿ
ಇದನ್ನು ಓದಿ :
ಬೆಳೆ ಹಾನಿ ಪರಿಹಾರ ಜಮೆ ಆಗಿದೆ ಇಲ್ಲವೋ!!
» ಈ ವರ್ಷದ ಸೆಪ್ಟಂಬರ್ ತಿಂಗಳ ಆರಂಭದೊಂದಿಗೆ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳು 12 ನೇ ಸಹಾಯಧನದ ಕಂತಿಗಾಗಿ ಕಾಯುತ್ತಿದ್ದಾರೆ.
» ಅಂಥವರು ಈ ಯೋಜನೆಯ 2,000 ರೂಪಾಯಿಗಳನ್ನು ಪಡೆಯುವ ಮೊದಲು ಸರ್ಕಾರವು ಎಲ್ಲಾ ಫಲಾನುಭವಿಗಳಿಗೆ 2 ಸಾವಿರ ರೂಪಾಯಿಗಳ ಸಹಾಯಧನದ ಜೊತೆಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಎಂಬ ದೊಡ್ಡ ಸೌಲಭ್ಯವನ್ನು ಒದಗಿಸಲಿದೆ.
ಹೆಚ್ಚಿನ ಕೃಷಿ ಸಂಬಂದಿಸಿದ ವಿಷಯ ತಿಳಿಯಲು ಕೃಷಿ ವಾಹಿನಿ ಗ್ರೂಪ್ ಸೇರಿ 👇
https://chat.whatsapp.com/KgkiwIwv2THC2yeeT1DqYC
» ಇನ್ನು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸದಿದ್ದರೆ ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ.
» ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ನಿಮ್ಮ ಬೆಳೆಗೆ ಸಂಬಂಧಿಸಿದ ವೆಚ್ಚವನ್ನು ಸಹ ತೆಗೆದು ಹಾಕಬಹುದು.
» ಬೀಜಗಳು, ಗೊಬ್ಬರ, ಯಂತ್ರ ಇನ್ನೂ ಮುಂತಾದ ವಸ್ತುಗಳಿಗೆ ನೀವು ಹಣವನ್ನು ಹೂಡಿಕೆ ಮಾಡಬಹುದು.
» ನೀವು ಈ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಗೆ ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ ಬ್ಯಾಂಕ್ ಗಳನ್ನು ಸಂಪರ್ಕಿಸಬಹುದು.
» ನೀವು ಸುಮಾರು ಐದು ವರ್ಷಗಳವರೆಗೆ ಮೂರು ಲಕ್ಷ ರೂಪಾಯಿಗಳ ಸಾಲವನ್ನು ಪಡೆದುಕೊಳ್ಳಬಹುದು.
» ಅದೇ ರೀತಿ ಸರ್ಕಾರವು ತನ್ನ ಬಡ್ಡಿ ದರದಲ್ಲಿ ಶೇಕಡಾ 2 ರಷ್ಟು ರಿಯಾಯಿತಿಯನ್ನು ನೀಡುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ ನೀವು 9% ಬಡ್ಡಿ ದರದ ಬದಲಿಗೆ 7% ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.
» ನೀವು ಯಾವುದೇ ಬ್ಯಾಂಕಿಗೆ ಭೇಟಿ ನೀಡುವ ಮೂಲಕ ಈ ಒಂದು ಕಿಸಾನ್ ಕ್ರೆಡಿಟ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಬಹುದು. ನೀವು ಬ್ಯಾಂಕಿಗೆ ಹೋಗುವ ಮೂಲಕ ಅರ್ಜಿ ಸಲ್ಲಿಸುವ ಫಾರ್ಮನ್ನು ಭರ್ತಿ ಮಾಡಬೇಕು. ಮತ್ತು ಅದಕ್ಕೆ ಸಂಬಂಧಿಸಿದೆ ಕೆಲವು ಪ್ರಮುಖ ದಾಖಲೆಗಳನ್ನುಅಲ್ಲಿ ಸಲ್ಲಿಸಬೇಕಾಗುತ್ತದೆ.
» ಇದಾದ ನಂತರ ಬ್ಯಾಂಕ್ ನ ಅಧಿಕಾರಿಗಳು ನೀವು ನೀಡಿದ ಅರ್ಜಿಯನ್ನು ಪರಿಶೀಲಿಸಿ ಅಪ್ರೂವ್ ಮಾಡುತ್ತಾರೆ.
ಈ ರೀತಿಯಾಗಿ ನೀವು ಈ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಲ್ಲಿ ಅರ್ಜಿ ಸಲ್ಲಿಸಿ, 3 ಲಕ್ಷ ರೂಪಾಯಿಗಳವರೆಗೆ ಬಡ್ಡಿ ರಹಿತ ಅಥವಾ ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ
ಕೃಷಿ ವಾಹಿನಿ ವೆಬ್ಸೈಟ್ ನ
ಸಂಪರ್ಕರಲ್ಲಿರಿ.