ರೈತ ಭಾಂದವರೇ, ಲೇಬರ್ ಕಾರ್ಡ್ ಅಥವಾ ಕಾರ್ಮಿಕರ ಕಾರ್ಡ್ ಹೊಂದಿದವರಿಗೆ “ಕಾರ್ಮಿಕ ಚಿಕಿತ್ಸಾ ಭಾಗ್ಯ” ಯೋಜನೆ ಅಡಿಯಲ್ಲಿ ಅನೇಕ ಕಾಯಿಲೆಗಳಿಗೆ ಸರ್ಕಾರದ ಕಡೆಯಿಂದ ಸುಮಾರು 2 ಲಕ್ಷ ರೂಪಾಯಿಗಳವರೆಗೆ ವೈದ್ಯಕೀಯ ವೆಚ್ಚ ಸಹಾಯಧನವನ್ನು ನೀಡಲಾಗುತ್ತದೆ.

ಯಾವ ರೀತಿಯಾಗಿ ಲೇಬರ್ ಕಾರ್ಡ್ ಹೊಂದಿದವರು ವೈದ್ಯಕೀಯ ಸಹಾಯಧನವನ್ನು ಪಡೆಯಬಹುದು? ಇರಬೇಕಾದ ಅರ್ಹತೆಗಳೇನು? ಮತ್ತು ಯಾವೆಲ್ಲಾ ರೋಗಕ್ಕೆ ಸಹಯಧನವನ್ನು ಪಡೆಯಬಹುದು ಎಂಬುದರ ಸಂಪೂರ್ಣ ವಿವರವನ್ನು ತಿಳಿದುಕೊಳ್ಳೋಣ.

# ಯಾವೆಲ್ಲ ಕಾಯಿಲೆಗಳಿಗೆ ಚಿಕಿತ್ಸಾ ವೆಚ್ಚವನ್ನು ನೀಡುತ್ತಾರೆ ಎಂಬುದನ್ನು ನೋಡುವುದಾದರೆ,

• ಹೃದಯ ರೋಗ

• ಕಿಡ್ನಿ ಜೋಡಣೆ

• ಕಣ್ಣಿನ ಶಸ್ತ್ರ ಚಿಕಿತ್ಸೆ

• ಗರ್ಭಕೋಶ ಚಿಕಿತ್ಸೆ

• ಅಸ್ತಮಾ

• ಮೂಳೆ ಶಸ್ತ್ರ ಚಿಕಿತ್ಸೆ

• ಮೂತ್ರಪಿಂಡದ ಕಲ್ಲು ತೆಗೆಯುವ ಚಿಕಿತ್ಸೆ

• ಡಯಾಲಿಸಿಸ್

• ಕಿಡ್ನಿ ಶಸ್ತ್ರ ಚಿಕಿತ್ಸೆ

ಹಾಗೂ ಅದೇ ರೀತಿಯಾಗಿ ಇನ್ನೂ ಅನೇಕ ಔಷಧೀಯ ಕಾಯಿಲೆಗಳ ವೈದ್ಯಕೀಯ ವೆಚ್ಚಕ್ಕಾಗಿ ಸಹಾಯಧನವನ್ನು ನೀಡಲಾಗುವುದು.

# ಈ ವೈದ್ಯಕೀಯ ಸಹಾಯಧನ ಪಡೆಯಲು ಇರಬೇಕಾದ ಅರ್ಹತೆಗಳನ್ನು ನೋಡುವುದಾದರೆ,

• ಕೇವಲ ನೋಂದಾಯಿತ ಔಷಧಿ ಕಾಯಿಲೆಗಳಿಗೆ ಮಾತ್ರ ಸಹಾಯಧನವನ್ನು ನೀಡಲಾಗುವುದು. ಎಲ್ಲಾ ಖಾಯಿಲೆಗಳಿಗೆ ನೀಡಲು ಬರುವುದಿಲ್ಲ.

• ನಿಮ್ಮ ಹತ್ತಿರ ಇರುವ ಲೇಬರ್ ಕಾರ್ಡ್ ಅಥವಾ ಕಾರ್ಮಿಕರ ಕಾರ್ಡ್ ಚಾಲ್ತಿಯಲ್ಲಿ ಇರಬೇಕಾಗುತ್ತದೆ.

• ಆಸ್ಪತ್ರೆಯಲ್ಲಿ ದಾಖಲಾಗಿರುವಂತಹ ಮತ್ತು ಬಿಡುಗಡೆಯ ದಿನಾಂಕ ಮತ್ತು ವೆಚ್ಚದ ಬಿಲ್ಲುಗಳ ವಿವರಗಳನ್ನು ನೀಡಬೇಕಾಗುತ್ತದೆ.

# ಈ ವೈದ್ಯಕೀಯ ವೆಚ್ಚ ಸಹಾಯಧನವನ್ನು ಪಡೆಯಲು ಬೇಕಾಗುವ ದಾಖಲಾತಿಗಳನ್ನು ನೋಡುವುದಾದರೆ,

* ಮೊದಲಿಗೆ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

* ಮಂಡಳಿ ನೀಡಿರುವ ಗುರುತಿನ ಚೀಟಿ

* ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ

* ವೈದ್ಯಕೀಯ ದಾಖಲಾತಿಗಳನ್ನು ಸಲ್ಲಿಸಬೇಕು.

* ಆಸ್ಪತ್ರೆಗೆ ದಾಖಲಾದ ದಿನಾಂಕದಿಂದ 6 ತಿಂಗಳ ಒಳಗೆ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನು ಓದಿ:

ರೈತರ ಖಾತೆಗೆ ಬೆಳೆ ಹಾನಿ ಹಣ ಜಮಾ!!

ಕೃಷಿ ಭೂಮಿ ಪಡೆಯಲು ಸಹಾಯಧನ!!

ಈ ಸಹಾಯಧನಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ನೋಡುವುದಾದರೆ,

» ನೀವು ಈ ಲೇಬರ್ ಕಾರ್ಡ್ ಮೂಲಕ 2 ಲಕ್ಷ ರೂಪಾಯಿಗಳ ವೈದ್ಯಕೀಯ ವೆಚ್ಚದ ಸಹಾಯಧನವನ್ನು ಪಡೆಯಲು ಸೇವಾ ಸಿಂಧು ಪೋರ್ಟಲ್ ಮೂಲಕ ಆನ್ ಲೈನ್ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

» ನೀವು ಸೇವಾ ಸಿಂದುವಿನಲ್ಲಿ ಅಕೌಂಟ್ ಹೊಂದಿಲ್ಲದಿದ್ದರೆ ನೀವು ಹತ್ತಿರವಿರುವ ಗ್ರಾಮ ಒನ್ ಸೆಂಟರ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

» ಸೇವಾ ಸಿಂಧು ಪೋರ್ಟಲ್ ನಲ್ಲಿ ಲಾಗಿನ್ ಆದ ನಂತರ apply for services ಎಂಬುದಾಗಿ ನಮೂದಿಸಿರುವುದು ಕಾಣುತ್ತದೆ.

» ಅದರ ಮೇಲೆ ಕ್ಲಿಕ್ ಮಾಡಿ ಮುಂದುವರೆದಾಗ ಕೆಲವು ಸೇವೆಗಳ ಪಟ್ಟಿಯನ್ನು ನೀಡಲಾಗುವುದು.

» ಇಲ್ಲಿ ಕಾಣುವ ಸರ್ಚ್ ಬಾಕ್ಸ್ ನಲ್ಲಿ ಮೆಡಿಕಲ್ ಅಸಿಸ್ಟೆಂಟ್(medical assistant) ಎಂಬುದಾಗಿ ನಮೂದಿಸಿ ಸರ್ಚ್ ನೀಡಬೇಕು.

» ಅದರಲ್ಲಿ ‘application for medical assistant‘ ಎಂಬುದಾಗಿ ನಮೂದಿಸಿರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದ ನಂತರ ಅರ್ಜಿಯ ನಮೂನೆ ತೆರೆಯುತ್ತದೆ.

» ನೀವು ಅರ್ಜಿಯನ್ನು ಡೌನ್ಲೋಡ್ ಮಾಡಿಕೊಂಡು ಅದರೆ ಪ್ರಿಂಟ್ ತೆಗೆದುಕೊಳ್ಳಬೇಕು.

» ಅದರಲ್ಲಿ ನಿಮಗೆ ಆಸ್ಪತ್ರೆಯ ಹೆಸರು, ದಾಖಲಾದ ದಿನಾಂಕ, ಬಿಡುಗಡೆಯ ದಿನಾಂಕ ಮತ್ತು ಇನ್ನಿತರ ಮಾಹಿತಿ ವಿವರಗಳನ್ನು ಕೇಳಲಾಗುತ್ತದೆ. ಅವನ್ನು ಸರಿಯಾದ ಜಾಗದಲ್ಲಿ ತುಂಬಬೇಕು.

» ಅದಕ್ಕೆ ಮೇಲೆ ಹೇಳಿರುವ ದಾಖಲಾತಿಗಳನ್ನು ಲಗತ್ತಿಸಿ ಅರ್ಜಿಯ ಮೇಲೆ ನಿಮ್ಮ ಸಹಿಯನ್ನು ಮಾಡಿ ಇಟ್ಟುಕೊಳ್ಳಬೇಕು.

» ಇದಾದ ನಂತರ ಮೊದಲೇ ಹೇಳಿದ ಹಾಗೆ

application for medical assistant’ ಎಂಬುದರ ಮೇಲೆ ಕ್ಲಿಕ್ ಮಾಡಿದಾಗ ಅಪ್ಲೈ ಆನ್ಲೈನ್ (apply online) ಎಂಬ ಆಯ್ಕೆ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.

ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ 👇

https://chat.whatsapp.com/IFrNUsCZb6t4gKne7YdS3g

ಸೇವಾ ಸಿಂಧು ಪೋರ್ಟಲ್ ಓಪನ್ ಮಾಡಿದ ನಂತರ ಅದರಲ್ಲಿ ನಿಮಗೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವೈದ್ಯಕೀಯ ಸಹಾಯಧನ ಅರ್ಜಿ ಎಂಬ ಮುಖಪುಟ ತೆಗೆದುಕೊಳ್ಳುತ್ತದೆ

ಅಲ್ಲಿ ಕೇಳಲಾಗುವ ಪರಚಿದಾರರ ಮಾಹಿತಿ ವಿವರಗಳನ್ನು ಸರಿಯಾದ ಜಾಗದಲ್ಲಿ ತುಂಬಬೇಕು

ಎಲ್ಲಾ ಮಾಹಿತಿಗಳನ್ನು ಸರಿಯಾಗಿ ತುಂಬಿದ ನಂತರ ಕೊನೆಯಲ್ಲಿ ಸಬ್ಮಿಟ್ ಮಾಡಬೇಕು.

ಕೊನೆಯದಾಗಿ ನಿಮಗೆ ಒಂದು ದೃಢೀಕರಣ ಪತ್ರ ಸಿಗುತ್ತದೆ. ಅವರ ಪ್ರಿಂಟ್ ತೆಗೆದು ಕೊಂಡು ಮತ್ತು ಇದರ ಜೊತೆಗೆ ಇತರೆ ದಾಖಲೆಗಳನ್ನು ಲಗತ್ತಿಸಿ ನಿಮಗೆ ಹತ್ತಿರದ ಕಾರ್ಮಿಕರ ಇಲಾಖೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ದಾಖಲಾದ ದಿನಾಂಕದಿಂದ ಆರು ತಿಂಗಳ ಒಳಗೆ ಅರ್ಜಿಯನ್ನು ಸಲ್ಲಿಸಬೇಕು

ಅಲ್ಲಿನ ಅಧಿಕಾರಿಗಳು ನಿಮ್ಮ ಅರ್ಜಿಯನ್ನು ಪರಿಶೀಲಿಸಿದ ನಂತರ ನೀವು ಅರಳಾಗಿದ್ದರೆ ಈ ಸಹಾಯಧನವನ್ನು ಬಿಡುಗಡೆ ಮಾಡಲಾಗುತ್ತದೆ

ಹೆಚ್ಚಿನ ಮಾಹಿತಿಗಾಗಿ ನೀವು 155214 ಈ ಸಂಖ್ಯೆಗೆ ಕರೆ ಮಾಡಬಹುದು ಅಥವಾ ಕಾರ್ಮಿಕ ಇಲಾಖೆಯ ಕಾರ್ಮಿಕ ಅಧಿಕಾರಿಗಳನ್ನು ಸಂಪರ್ಕಿಸಬಹುದು

ಈ ರೀತಿಯಾಗಿ ಲೇಬರ್ ಕಾರ್ಡ್ ಅಥವಾ ಕಾರ್ಮಿಕರ ಕಾರ್ಡ್ ಹೊಂದಿದವರು ಕಾರ್ಮಿಕ ಚಿಕಿತ್ಸಾಹ ಭಾಗ್ಯ ಯೋಜನೆಯ ಅಡಿಯಲ್ಲಿ 2 ಲಕ್ಷ ರೂಪಾಯಿಗಳವರೆಗೆ ವೈದ್ಯಕೀಯ ವೆಚ್ಚ ಸಹಾಯಧನವನ್ನು ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ

ಕೃಷಿ ವಾಹಿನಿ🌱

ವೆಬ್ಸೈಟ್ನ ಸಂಪರ್ಕದಲ್ಲಿರಿ..

Leave a Reply

Your email address will not be published. Required fields are marked *