ಸಸ್ಯರೋಗಗಳ ಹತೋಟಿ ಕ್ರಮಗಳು!!
ಬೆಳೆ ರೋಗ ನಿರ್ವಹಣೆಗೆ ರೈತರು ಅನೇಕ ಕ್ರಮ ಅಮಸರಿಸುತ್ತಿದ್ದು , ಅದರಲ್ಲಿ ಕಳೆಗಳ ನಿಯಂತ್ರಣ ,ಮಣ್ಣಿಗೆ ಸೂರ್ಯರಶ್ಮಿಯ ಉಪಚಾರ ಪ್ರಮುಖವಾಗಿವೆ ಈ ಕುರಿತು ವಿಜಯಪುರ ಕೃಷಿ ಮಹಾವಿದ್ಯಾಲಯದ ಕೃಷಿ ವಿಸ್ತರಣಾ ಸಹ ನಿರ್ದೇಶಕ ಡಾ.ಆರ್.ಬಿ.ಬೆಳ್ಳಿ ಉಪಯುಕ್ತ ಮಾಹಿತಿ ನೀಡಿದ್ದಾರೆ.
• ಸಸ್ಯರೋಗ ನಿರ್ವಹಣೆಯಲ್ಲಿ ಹೊಲದ ಸ್ವಚ್ಛತೆ ಮತ್ತು ಮಣ್ಣಿನ ಆರೋಗ್ಯ ಸಂರಕ್ಷಣೆ ಮುಖ್ಯವಾಗಿದೆ .
• ರೋಗ ಪೀಡಿತ ಸಸ್ಯಗಳ ಉದುರಿದ ಎಲೆ , ರೆಂಬೆ , ಕೊಂಬೆ , ಕಾಯಿ , ಹಣ್ಣು ಮತ್ತಿತರ ಭಾಗಗಳನ್ನು ಹೊಲದಿಂದ ತೆಗೆದು ನಾಶಪಡಿಸುವುದು.
• ಹೊಲದಲ್ಲಿ ಕಂಡುಬರುವ ಹಾಗೂ ಬದುಗಳ ಮೇಲಿನ ಕಳೆಗಳನ್ನು ತೆಗೆಯುವುದರಿಂದ ಇವುಗಳಲ್ಲಿರುವ ರೋಗಾಣುಗಳು ಮುಂದಿನ ಹಂಗಾಮಿನಲ್ಲಿ ಮತ್ತೆ ಹರಡದಂತೆ ತಡೆಗಟ್ಟಬಹುದು.
• ಬೆಳೆ ಪರಿವರ್ತನೆ, ಬೆಳೆ ಕಾಲೆ ಪದ್ಧತಿ ಅನುಸರಿಸಬೇಕು.
ಮಾಹಿತಿಗೆ ಮೊ : 9448418389 ಸಂಪರ್ಕಿಸಿ .
ಮೆಟರೈಜಿಯಂ ಬಳಕೆಯಲ್ಲಿ ಮುನ್ನೆಚ್ಚರಿಕೆ ಕ್ರಮ!
• ಮೆಟರೈಜಿಯಂ ಅನಿಸೋಪ್ಲಿ ಶಿಲೀಂದ್ರ ಕೀಟನಾಶಕ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಪಡೆಯುವ ಪರಿಸರಸ್ನೇಹಿ ಕೀಟ ನಿರ್ವಹಣಾ ಶಾಂತಿಕತೆಯಾಗಿದೆ , ಮೆಟಾರೈಜಿಯಂ ಶಿಲಿಂದ್ರ ಕೀಟನಾಶಕವನ್ನು ಗೊಣ್ಣೆಹುಳುವಿನ ನಿಯಂತ್ರಣಕ್ಕಾಗಿ ಬಳಸಲಾಗುತ್ತದೆ , ಅದರ ಮುನ್ನೆಚ್ಚರಿಕೆ ಕ್ರಮಗಳ ಕುರಿತು ವಿಜಯಪುರ ಕೃಷಿ ಮಹಾವಿದ್ಯಾಲಯದ ಕೃಷಿ ವಿಸ್ತರಣಾ ಸಹನಿರ್ದೇಶಕ ಡಾ.ಆರ್.ಬಿ.ಬೆಳ್ಳಿ ಉಪಯುಕ್ತ ಮಾಹಿತಿ ನೀಡಿದ್ದಾರೆ .
* ಮಣ್ಣಿನ ಕನಿಷ್ಠ ತೇವಾಂಶವನ್ನು ಕಾಪಾಡಬೇಕು .
* ಇದನ್ನು ಉಪಯೋಗಿಸುವಾಗ ಮಣ್ಣಿನಲ್ಲಿ ಸಾವಯವ ಪದಾರ್ಥಗಳಾದ ಕೊಟ್ಟಿಗೆ ಗೊಬ್ಬರ / ಕಾಂಪೋಸ್ಟ್ / ಎರೆಹುಳು ಗೊಬ್ಬರ ಇರುವಂತೆ ನೋಡಿಕೊಳ್ಳಬೇಕು .( 4kg metarhizium +100 kg compost is to soil drench)
* ಇದನ್ನು ಯಾವುದೇ ರಾಸಾಯನಿಕ ಗೊಬ್ಬರಗಳ / ಕೀಟನಾಶಕಗಳ ಜತೆ ಉಪಯೋಗಿಸಬಾರದು.ಶೇಖರಣೆ ಮಾಡುವಾಗ ರಾಸಾಯನಿಕ ಗೊಬ್ಬರ / ಕೀಟನಾಶಕಗಳಿಗೆ ಸೇರಿಸಬಾರದು.
* ಶಿಲೀಂದ್ರ ಕೀಟನಾಶಕದ ಚೀಲವನ್ನು ಶಾಖ ಹಾಗೂ ನೇರ ಸೂರ್ಯನ ಕಿರಣಗಳಿಂದ ರಕ್ಷಿಸಿ ತಂಪಾದ ಹಾಗೂ ಒಣ ಪ್ರದೇಶದಲ್ಲಿಡಬೇಕು .
* ಒಣ ಹವೆ ಅಥವಾ ಬೇಸಿಗೆ ಹಂಗಾಮಿನಲ್ಲಿ ಮೆಟಾರೈಜಿಯಂ ಬಳಸಿದರೆ ಗೊಣ್ಣೆ ಹುಳುವಿನ ಹತೋಟಿ ಪರಿಣಾಮಕಾರಿಯಾಗುವುದಿಲ್ಲ .
ಹೆಚ್ಚಿನ ಮಾಹಿತಿಗಾಗಿ
ಕೃಷಿ ವಾಹಿನಿ 🌱
ವೆಬ್ಸೈಟ್ ನ ಸಂಪರ್ಕದಲ್ಲಿರಿ..