ಪ್ರೀಯ ರೈತರೇ, ಭೂಮಿ ಹೊಂದಿಲ್ಲದ ಮಹಿಳಾ ಕೃಷಿ ಕಾರ್ಮಿಕರಿಗೆ ಭೂ ಒಡೆತನ ಯೋಜನೆ ಅಡಿಯಲ್ಲಿ ಜಮೀನು ಖರೀದಿಗೆ 7.50 ಲಕ್ಷ ರೂಗಳವರೆಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಸರ್ಕಾರದಿಂದ 2022 ಮತ್ತು 23ನೇ ಸಾಲಿನಲ್ಲಿ ಜಮೀನು ಇಲ್ಲದ ರೈತ ಮಹಿಳೆಯರಿಗೆ ಜಮೀನು ಪಡೆದುಕೊಳ್ಳುವ ಯೋಜನೆ ಇದಾಗಿದೆ.

» ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಭೂಮಿಯನ್ನು ಖರೀದಿಸಲು ಸರ್ಕಾರದಿಂದ 7.50 ಲಕ್ಷ ರೂಪಾಯಿಗಳನ್ನು ಸಹಾಯಧನವಾಗಿ ಮತ್ತು ಉಳಿದ 7.50 ಲಕ್ಷ ರೂಪಾಯಿಗಳನ್ನು ಸಾಲವಾಗಿ ಒಟ್ಟು 15 ಲಕ್ಷ ರೂಪಾಯಿಗಳನ್ನುನೀಡಲಾಗುವುದು.

» ಸಾಲದ ರೂಪದಲ್ಲಿ ನೀಡುವಂತಹ ಹಣಕ್ಕೆ ಶೇಕಡ 6ರಷ್ಟು ಬಡ್ಡಿ ಇರುತ್ತದೆ. ಹಾಗೂ ಅದನ್ನು ಕಟ್ಟಲು ನಿಮಗೆ 10 ವರ್ಷದ ತನಕ ಕಂತುಗಳನ್ನು ನೀಡಲಾಗುವುದು.

» ನೀವೇನಾದರೂ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳಿಗೆ ಸೇರಿದ್ದರೆ 10 ಲಕ್ಷ ರೂಪಾಯಿ ಸಹಾಯದನ ಮತ್ತು 10 ಲಕ್ಷ ರೂಪಾಯಿಗಳನ್ನು ಸಾಲವಾಗಿ ನೀಡುವುದು.

# ಭೂ ಒಡೆತನ ಯೋಜನೆ ಲಾಭವನ್ನು ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳನ್ನು ನೋಡುವುದಾದರೆ:

• ಮಹಿಳೆಯರು ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿರಬೇಕು.

• ಅರ್ಜಿದಾರ ಮಹಿಳೆಯರು ಭೂ ರಹಿತ ಕೃಷಿ ಕಾರ್ಮಿಕ ಕುಟುಂಬಕ್ಕೆ ಸೇರಿರಬೇಕು.

• ಅರ್ಜಿದಾರರ ಹೆಸರಿನಲ್ಲಿ ಯಾವುದೇ ಜಮೀನು ನೋಂದಣಿಯಾಗಿರಬಾರದು.

• ಕುಟುಂಬದ ಯಾವುದೇ ಒಂದು ಸದಸ್ಯರು ಸರ್ಕಾರಿ ಮತ್ತು ಅರೆ ಸರ್ಕಾರಿ ಹುದ್ದೆಯಲ್ಲಿ ಇರಬಾರದು.

# ಅರ್ಜಿಯನ್ನು ಯಾವ ಯಾವ ನಿಗಮದಲ್ಲಿ ಸಲ್ಲಿಸಬಹುದು ಎಂಬುದನ್ನು ನೋಡುವುದಾದರೆ,

• ಡಾ. ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ

• ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ • ಕರ್ನಾಟಕ ಗೋವಿ ಅಭಿವೃದ್ಧಿ ನಿಗಮ

• ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ

# ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳನ್ನು ನೋಡುವುದಾದರೆ,

* ಅರ್ಜಿದಾರರ ಆಧಾರ್ ಕಾರ್ಡ್

* ಜಾತಿ ಮತ್ತು ಆದಾಯ ಪ್ರಮಾಣ ಪತ್ರ

* ಕೃಷಿ ಕಾರ್ಮಿಕ ದೃಢೀಕರಣ ಪ್ರಮಾಣ ಪತ್ರ

ಇದನ್ನು ಓದಿ :

ಬೆಳೆ ಹಾನಿಗೆ ಪರಿಹಾರ ಧನ ಹೆಚ್ಚಳ!! ಯಾರಿಗೆ ಎಷ್ಟು ಹಣ!!

ರೇಷ್ಮೆ ಕೃಷಿಗೆ ಸರ್ಕಾರದಿಂದ ಸಹಾಯದನ ಲಭ್ಯ!!

# ನೀವು ಅರ್ಜಿಯನ್ನು ಸೇವಾ ಸಿಂಧು ಪೋರ್ಟಲ್ ಅಥವಾ ಗ್ರಾಮ ಒನ್ ನಲ್ಲಿ ಸಲ್ಲಿಸಬಹುದು.

# ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15/09/2022 ಆಗಿರುತ್ತದೆ. ನೀವು ಅರ್ಜಿಯನ್ನು ಆನ್ಲೈನಲ್ಲಿ ಸಲ್ಲಿಸಿ ಮತ್ತು ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಲಗತ್ತಿಸಿ ನಿಮಗೆ ಹತ್ತಿರದ ಮೇಲೆ ಹೇಳಿರುವ ನಿಗಮಗಳಿಗೆ ಹೋಗಿ ಸಲ್ಲಿಸಬೇಕು.

ಕೃಷಿಗೆ ಸಂಬಂದಿಸಿದ ಮಾಹಿತಿಗಾಗಿ ಕೃಷಿ ವಾಹಿನಿ ಗ್ರೂಪ್ ಸೇರಲು ಈ ಲಿಂಕ್ ಒತ್ತಿ 👇

https://chat.whatsapp.com/KgkiwIwv2THC2yeeT1DqYC

# ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ನೋಡುವುದಾದರೆ,

• ಮೊದಲಿಗೆ ಸೇವಾ ಸಿಂಧು ಪೋರ್ಟಲ್ ಓಪನ್ ಮಾಡಬೇಕು.

• ಅಲ್ಲಿ ಕಾಣುವ department and services ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿದ ಮೇಲೆ ಕೆಲವು ಸೇವೆಗಳ ಪಟ್ಟಿಯನ್ನು ನೀಡಲಾಗುತ್ತದೆ.

• ಅಲ್ಲಿ ಸುವಿಧ ಯೋಜನೆಗಳು (suvidha schemes) ಎಂಬುದಾಗಿ ನಮೂದಿಸಿರುತ್ತದೆ. ಆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

• ಅಲ್ಲಿ ಕಾಣುವ ಲ್ಯಾಂಡ್ ಪರ್ಚೇಸ್ ಸ್ಕೀಮ್ (land purchase scheme) ಎಂಬ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಿ.

• ಕೆಳಗಡೆ ಕಾಣುವ apply online ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.

• ಅದರಲ್ಲಿ ಲಾಗಿನ್ ಆದ ನಂತರ ನಿಮಗೆ ಸೇವಾ ಸಿಂಧು ಪೋರ್ಟಲ್ ಓಪನ್ ಆಗುತ್ತದೆ.

• ಅಲ್ಲಿ ಕಾಣುವ apply for services ಎಂಬುದರ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ಹಲವು ಸೇವೆಗಳ ಪಟ್ಟಿಯನ್ನು ನೀಡಲಾಗುವುದು.

• ಇದಾದ ನಂತರ ಅಲ್ಲಿ ಕಾಣುವ ಸರ್ಚ್ ಬಾಕ್ಸ್ ನಲ್ಲಿ ಲ್ಯಾಂಡ್ ಪರ್ಚೇಸ್ (land purchase) ಎಂದು ಬರೆದು ಸರ್ಚ್ ಮಾಡಿ.

• ಅಲ್ಲಿ ಬರುವ ಲ್ಯಾಂಡ್ ಪರ್ಚೇಸ್ ಯೋಜನೆ ಮೇಲೆ ಕ್ಲಿಕ್ ಮಾಡಿದಾಗ ಅರ್ಜಿಯ ನಮೂನೆ ತೆರೆದುಕೊಳ್ಳುತ್ತದೆ.

• ನೀವು ನಿಮಗೆ ಸಂಬಂಧಪಟ್ಟ ನಿಗಮದ ಆಯ್ಕೆಯನ್ನು ಮಾಡಿ ಮತ್ತು ಅಲ್ಲಿ ಕೇಳಲಾಗುವ ಇನ್ನಿತರ ಮಾಹಿತಿಗಳನ್ನು ಸರಿಯಾದ ಜಾಗದಲ್ಲಿ ತುಂಬಬೇಕು.

• ಎಲ್ಲ ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ ಕೊನೆಯಲ್ಲಿ ಸಬ್ಮಿಟ್ ಮಾಡಿದಾಗ ದೃಢೀಕರಣ ಪತ್ರ ಜನರೇಟ್ ಆಗುತ್ತದೆ.

• ಅದರ ಪ್ರಿಂಟ್ ತೆಗೆದುಕೊಂಡು ಮತ್ತು ಅದಕ್ಕೆ ಸಂಬಂಧಪಟ್ಟ ಇನ್ನಿತರ ದಾಖಲೆಗಳನ್ನು ಲಗತ್ತಿಸಿ ನಿಮಗೆ ಸಂಬಂಧಪಟ್ಟ ನಿಗಮಕ್ಕೆ ಹೋಗಿ ದಾಖಲೆಗಳನ್ನು ಸಲ್ಲಿಸಬೇಕು. ಮತ್ತು ನೀವು ಸಲ್ಲಿಸಿದ ಅರ್ಜಿ ಬಗ್ಗೆ ಮಾಹಿತಿಯನ್ನು ತಿಳಿಸಿ.

ಈ ಯೋಜನೆ ಬಗೆಗಿನ ಹೆಚ್ಚಿನ ಮಾಹಿತಿಗಾಗಿ 9482300400 ಸಂಖ್ಯೆಗೆ ಕರೆ ಮಾಡಬಹುದು ಅಥವಾ ನಿಮಗೆ ಹತ್ತಿರವಿರುವ ನಿಗಮಕ್ಕೆ ಭೇಟಿ ನೀಡಬಹುದು.

ಭೂಮಿ ಹೊಂದಿಲ್ಲದ ಕೃಷಿ ರೈತ ಮಹಿಳೆಯರು ಈ ಭೂ ಒಡೆತನ ಯೋಜನೆ ಲಾಭವನ್ನು ಪಡೆದುಕೊಂಡು ಸರ್ಕಾರದಿಂದ ಜಮೀನಿನನ್ನು ಖರೀದಿಸಲು ಸಹಾಯಧನವನ್ನು ಪಡೆದುಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ

ಕೃಷಿ ವಾಹಿನಿ🌱

ವೆಬ್ಸೈಟ್ ನ ಸಂಪರ್ಕದಲ್ಲಿರಿ..

One thought on “ಕೃಷಿ ಭೂಮಿ ಪಡೆಯಲು ಸಹಾಯಧನಕ್ಕೆ ಅರ್ಜಿ ಅಹ್ವಾನ!!”

Leave a Reply

Your email address will not be published. Required fields are marked *