ಪ್ರಿಯ ರೈತರೇ, ಇವತ್ತಿನ ದಿನ ನಾವು 2022 ಮತ್ತು 23ನೇ ಸಾಲಿನ ಅತಿವೃಷ್ಟಿಯಿಂದ ಅಥವಾ ಪ್ರವಾಹದಿಂದ ಉಂಟಾದ ಬೆಳೆ ಹಾನಿಗಳಿಗೆ ಕೇಂದ್ರ ಸರ್ಕಾರದ SDRF ಮಾರ್ಗ ಸೂಚಿ ಪ್ರಕಾರ ರಾಜ್ಯ ಸರ್ಕಾರವು ಕೂಡ ಹೆಚ್ಚುವರಿ ಹಣವನ್ನು ಅಥವಾ ಸಹಾಯಧನವನ್ನು ವಿವಿಧ ರೀತಿಯ ಹಾನಿಗೆ ಒಳಗಾದ ಬೆಳೆಗಳಿಗೆ ಒಂದು ಪರಿಹಾರ ಹಣವನ್ನು ನೀಡುತ್ತದೆ. ಇದರ ಬಗ್ಗೆ ಇರುವ ಸಂಪೂರ್ಣವಾದ ಮಾಹಿತಿ ವಿವರವನ್ನು ತಿಳಿದುಕೊಳ್ಳೋಣ.

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಅತಿವೃಷ್ಟಿ ಅಥವಾ ಹೆಚ್ಚು ಮಳೆಯಿಂದಾಗಿ ಮತ್ತು ಪ್ರವಾಹದಿಂದಾಗಿ ಬಹಳಷ್ಟು ರೈತರ ಬೆಳೆಗಳು ಹಾನಿಗೆ ಒಳಪಟ್ಟಿವೆ.

ಈ ಒಂದು 2022 ಮತ್ತು 23ನೇ ಸಾಲಿನ ಪ್ರವಾಹ ಮತ್ತು ಅತಿವೃಷ್ಟಿಯಿಂದ ಉಂಟಾದಂತಹ ಬೆಳೆ ಹಾನಿಗಳಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಅದರಲ್ಲಿ ನಿಗದಿಪಡಿಸಿರುವ ಹೆಚ್ಚುವರಿ ಪರಿಹಾರ ಅಥವಾ ಸಹಾಯಧನವನ್ನು ರಾಜ್ಯ ಸರ್ಕಾರ ರೈತರಿಗೆ ನೀಡಬೇಕು ಎಂದು ಆದೇಶ ಹೊರಡಿಸಿದೆ.

ಇಲ್ಲಿ ವಿವಿಧ ಬೆಳೆಗಳಿಗೆ ವಿವಿಧ ರೀತಿಯ ಹೆಚ್ಚುವರಿ ಹಣವನ್ನು ಅಥವಾ ಒಟ್ಟು ಸಹಾಯಧನದ ಅಥವಾ ಪರಿಹಾರದ ಮೊತ್ತವನ್ನು ನೀಡಲಾಗಿದೆ.

# ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಮಳೆಯಾಶ್ರಿತ ಬೆಳೆಗಳಿಗೆ 6,800 ರೂಪಾಯಿಗಳನ್ನು ಕೇಂದ್ರ ಸರ್ಕಾರದಿಂದ ನೀಡಲಾಗುತ್ತಿತ್ತು. ಈಗ ರಾಜ್ಯ ಸರ್ಕಾರದಿಂದ ಹೆಚ್ಚುವರೆಯಾಗಿ ಈ 6,800 ರೂಪಾಯಿಗಳಿಗೆ ರಾಜ್ಯ ಸರ್ಕಾರದ ಕಡೆಯಿಂದ 6,800 ರೂಪಾಯಿಗಳನ್ನು ಹೆಚ್ಚುವರಿಯಾಗಿ ಸೇರಿಸಿ ಒಟ್ಟು 13,600 ರೂಪಾಯಿಗಳನ್ನು ಸಹಾಯಧನವನ್ನಾಗಿ ಅಥವಾ ಪರಿಹಾರ ಧನವನ್ನಾಗಿ ನೀಡಲಾಗುತ್ತದೆ. ಇದು ಕೇವಲ ಮಳೆಯಾಶ್ರಿತ ಬೆಳೆಗಳ ಹಾನಿಯಾದರೆ ಮಾತ್ರ. ಕೇಂದ್ರ ಸರ್ಕಾರದಿಂದ ಕೊಡುವ ಈ ಸೌಲಭ್ಯವನ್ನು ಎಲ್ಲರೂ ಗಮನಹರಿಸಿ ಪರಿಯಾರ ಹಣ ಪಡೆದುಕೊಳ್ಳಬೇಕು.

# ಅದೇ ರೀತಿಯಾಗಿ ನೀರಾವರಿಯಲ್ಲಿ ಬೆಳೆಯುವಂತ ಬೆಳೆಗಳು ಇದ್ದರೆ ಅಂತಹ ಬೆಳೆಗಳು ಮಳೆಯಿಂದ ಆಗಿರಬಹುದು ಅಥವಾ ಪ್ರವಾಹದಿಂದ ಆಗಿರಬಹುದು. ಏನಾದರೂ ಬೆಳೆ ಹಾನಿ ಉಂಟಾದರೆ ಕೇಂದ್ರ ಸರ್ಕಾರದ ಕಡೆಯಿಂದ 13,500 ರೂಪಾಯಿಗಳನ್ನು ಪರಿಹಾರವಾಗಿ ನೀಡಲಾಗುತ್ತಿತ್ತು

ಈಗ ರಾಜ್ಯ ಸರ್ಕಾರದ ಕಡೆಯಿಂದ ಹೆಚ್ಚುವರಿ ಪರಿಹಾರ ಧನವನ್ನಾಗಿ 11,500 ರೂಪಾಯಿಗಳನ್ನು ಸೇರಿಸಿ ಒಟ್ಟು ಪರಿಹಾರ ಧನ 25,000 ರೂಪಾಯಿಗಳನ್ನು ಈ ನೀರಾವರಿ ಬೆಳೆ ಹಾನಿಗೆ ಪರಿಹಾರ ಧನವಾಗಿ ನೀಡಲಾಗುತ್ತದೆ. ಈ 25,000 ರೂಪಾಯಿಗಳನ್ನು ಪ್ರತಿ ಹೆಕ್ಟರಿಗೆ ನೀಡಲಾಗುತ್ತದೆ.

# ಒಂದು ವೇಳೆ ನೀವು ಬಹು ವಾರ್ಷಿಕ ಬೆಳೆಗಳನ್ನು ಹೊಂದಿದ್ದರೆ ಕೇಂದ್ರ ಸರ್ಕಾರದ ಕಡೆಯಿಂದ 18,000 ರೂಪಾಯಿಗಳನ್ನು ಪರಿಹಾರಧನವನ್ನಾಗಿ ನೀಡಲಾಗುತ್ತಿತ್ತು. ಈಗ ರಾಜ್ಯ ಸರ್ಕಾರ ಇದಕ್ಕೆ ಹತ್ತು ಸಾವಿರ ರೂಪಾಯಿಗಳನ್ನು ಜೋಡಿಸಿ ಒಟ್ಟು ಪರಿಹಾರ ಧನ 28 ಸಾವಿರ ರೂಪಾಯಿಗಳನ್ನು ಬಹು ವಾರ್ಷಿಕ ಬೆಳೆಗಳ ಹಾನಿಗೆ ಪರಿಹಾರ ಧನವಾಗಿ ನೀಡಲಾಗುತ್ತದೆ. 28,000 ರೂಪಾಯಿಗಳ ಪರಿಹಾರ ಧನವನ್ನು ಪ್ರತಿ ಹೆಕ್ಟರಿಗೆ ನೀಡಲಾಗುತ್ತದೆ.

ಕೃಷಿಗೆ ಸಂಬಂಧಿಸಿದ ಯಾವುದೇ ಮಾಹಿತಿಗಳು ಬೇಕಾದಲ್ಲಿ ಕೃಷಿ ವಾಹಿನಿ ಗ್ರೂಪನ್ನು ಸೇರಲು ಕೆಳಗಿನ ಲಿಂಕ್ ಅನ್ನು ಒತ್ತಿ👇 :

https://chat.whatsapp.com/KgkiwIwv2THC2yeeT1DqYC

ಈ ತರಹ 2022 ರಲ್ಲಿ ಮಳೆಯಿಂದ ಆಗಿರಬಹುದು ಅಥವಾ ಪ್ರವಾಹದಿಂದ ಆಗಿರಬಹುದು ಅತಿವೃಷ್ಟಿಯಿಂದ ರೈತರ ಹಾನಿಗೊಳಗಾದಂತಹ ಬೆಳೆಗಳ ಪರಿಹಾರ ಧನವನ್ನು ನಿಗದಿಪಡಿಸಲಾಗಿದೆ.

ಇದನ್ನು ಓದಿ :

ಲೇಬರ್ ಕಾರ್ಡ್ ತಿದ್ದುಪಡಿ ಮಾಡುವುದು ಹೇಗೆ!!

ಸರ್ಕಾರದಿಂದ ಹೊಸ ಪಿಂಚಣಿ ಯೋಜನೆ ಜಾರಿ!! ಮನೆಗೆ ಪಿಂಚಣಿ ಸೌಲಭ್ಯ

ಅದೇ ರೀತಿಯಾಗಿ ಸರ್ವೆಯನ್ನು ಮಾಡಿ ರೈತರ ಬೆಳೆ ಹಾನಿಗೆ ಪರಿಹಾರ ಧನವನ್ನು ನೀಡಲಾಗುತ್ತದೆ.

ಹೆಚ್ಚು ಮಳೆಯಿಂದ ಅಥವಾ ಪ್ರವಾಹದಿಂದ ಹಾನಿಗೊಳಗಾದಂತ ರೈತರು ಈ ಬಹುಮುಖ್ಯ ಮಾಹಿತಿಯ ಸದುಪಯೋಗವನ್ನು ಪಡೆದುಕೊಂಡು ಹಾನಿಗೊಳಗಾದ ಬೆಳೆಗಳಿಗೆ ಪರಿಹಾರ ಧನವನ್ನು ಪಡೆದುಕೊಂಡು ಅದರ ಲಾಭವನ್ನು ಪಡೆದುಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ ನಿಮಗೆ ಹತ್ತಿರವಿರುವ ಅಥವಾ ನಿಮಗೆ ಸಂಬಂಧಪಟ್ಟ ಪಂಚಾಯಿತಿ ಶಾಖೆಯನ್ನು ಸಂಪರ್ಕಿಸಿ.

ಹೆಚ್ಚಿನ ಮಾಹಿತಿಗಾಗಿ

ಕೃಷಿ ವಾಹಿನಿ

ವೆಬ್ಸೈಟ್ನ ಸಂಪರ್ಕದಲ್ಲಿರಿ..

One thought on “ಬೆಳೆ ಹಾನಿಗೆ ಪರಿಹಾರ ಧನ ಹೆಚ್ಚಳ!!”

Leave a Reply

Your email address will not be published. Required fields are marked *