ಪ್ರಿಯ ರೈತರೇ, ಇವತ್ತಿನ ದಿನ ನಾವು ಕಾರ್ಮಿಕರ ಕಾರ್ಡ್ ಅಥವಾ ಲೇಬರ್ ಕಾರ್ಡ್ ನಲ್ಲಿ ತಿದ್ದುಪಡಿಯನ್ನು ಮಾಡುವುದು ಹೇಗೆ? ನೀವು ಮೊದಲು ಏನಾದರೂ ತಪ್ಪುಗಳನ್ನು ಮಾಡಿದ್ದರೆ ಅದರ ತಿದ್ದುಪಡಿಯನ್ನು ಮಾಡುವುದು ಹೇಗೆ? ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.
ಯಾವ ರೀತಿಯಾಗಿ ಲೇಬರ್ ಕಾರ್ಡ್ ನಲ್ಲಿ ತಪ್ಪುಗಳಾಗಿದ್ದರೆ ಅದರ ತಿದ್ದುಪಡಿ ಮಾಡಿ ಹೊಸ ಲೇಬರ್ ಕಾರ್ಡನ್ನು ಪಡೆಯುವುದು ಹೇಗೆ ಎಂಬುದನ್ನು ನೋಡುವುದಾದರೆ,
# ಲೇಬರ್ ಅಥವಾ ಕಾರ್ಮಿಕರ ಕಾರ್ಡನ್ನು ನೀವು ಮಾಡಿಸುವಾಗ ಏನಾದರೂ ತಪ್ಪುಗಳನ್ನು ಮಾಡಿದ್ದರೆ ಅಥವಾ ನೀವು ತಪ್ಪು ಮಾಹಿತಿಯನ್ನು ನೀಡಿ ಲೇಬರ್ ಕಾರ್ಡ್ ಪಡೆದುಕೊಂಡಿದ್ದರೆ ಅದರ ತಿದ್ದುಪಡಿಗೆ ನಿಮಗೆ ಎರಡು ಆಯ್ಕೆಗಳನ್ನು ನೀಡಲಾಗುತ್ತದೆ.
# ಮೊದಲನೇ ಆಯ್ಕೆ ಏನೆಂದರೆ ನೀವು ಪಡೆದುಕೊಂಡಂತಹ ಲೇಬರ್ ಕಾರ್ಡ್ ಗೆ ವ್ಯಾಲಿಡಿಟಿ ಅಥವಾ ಸೀಮಿತ ಅವಧಿ ಇರುತ್ತದೆ. ಈ ಸೀಮಿತ ಅವಧಿಯು ಒಂದು ವರ್ಷ ಆಗಿರಬಹುದು ಅಥವಾ ಮೂರು ವರ್ಷ ಆಗಿರಬಹುದು.
# ಒಂದು ವರ್ಷ ವ್ಯಾಲಿಡಿಟಿ ಹೊಂದಿದ ಲೇಬರ್ ಕಾರ್ಡುಗಳನ್ನು ಅದರ ಅವಧಿ ಮುಗಿದ ನಂತರ ರಿನಿವಲ್ (renewal) ಮಾಡಿಸಿಕೊಳ್ಳಬಹುದು.
# ಏನಾದರೂ ನಿಮ್ಮ ಲೇಬರ್ ಕಾರ್ಡ್ ನ ವ್ಯಾಲಿಡಿಟಿ ಮೂರು ವರ್ಷದ್ದಾಗಿದ್ದರೆ ಅದರ ತಿದ್ದುಪಡಿಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.
# ನಕಲಿ ಲೇಬರ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಿ ನಿಮ್ಮ ತಪ್ಪುಗಳನ್ನು ತಿದ್ದುಪಡಿ ಮಾಡಬಹುದು.
ಈಗ ನಾವು ಆನ್ ಲೈನ್ ನಲ್ಲಿ ಲೇಬರ್ ಕಾರ್ಡ್ ತಿದ್ದುಪಡಿ ಮಾಡುವುದು ಹೇಗೆ ಮತ್ತು ಅದರ ಸಂಪೂರ್ಣ ಪ್ರಕ್ರಿಯೆಯನ್ನು ತಿಳಿದುಕೊಳ್ಳೋಣ.
» ಮೊದಲಿಗೆ ನೀವು ಸೇವಾ ಸಿಂಧು ಅಕೌಂಟ್ ಅನ್ನು ಹೊಂದಿರಬೇಕಾಗುತ್ತದೆ.
» ನೀವು ಸೇವಾ ಸಿಂದು ಪೋರ್ಟಲ್ ನಲ್ಲಿ ಲಾಗಿನ್ ಆದ ನಂತರ ಒಂದು ಮುಖಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ನಿಮಗೆ apply for services ಎಂಬ ಆಯ್ಕೆ ಕಾಣುತ್ತದೆ.
ಅದರ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.
» ನಂತರ ‘ಎಲ್ಲಾ ಸೇವೆಗಳನ್ನು ತೋರಿಸಿ’ (view all services) ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ಮುಂದುವರೆದಾಗ ನಿಮಗೆ ಒಂದು ಸರ್ಚ್ ಬಾಕ್ಸ್ ಕಾಣುತ್ತದೆ.
# ಅದರಲ್ಲಿ ಲೇಬರ್ ಕಾರ್ಡ್ ಎಂದು ಸರ್ಚ್ ಮಾಡಿ ಸರ್ಚ್ ಮಾಡಿದಾಗ ನಿಮಗೆ ನಕಲಿ ಲೇಬರ್ ಕಾರ್ಡಿಗೆ ಅರ್ಜಿ ಸಲ್ಲಿಸಿ (application for duplicate labour card) ಎಂಬ ಆಯ್ಕೆ ಕಾಣುತ್ತದೆ.
# ಅದರ ಮೇಲೆ ಕ್ಲಿಕ್ ಮಾಡಿದಾಗ ಅರ್ಜಿಯ ನಮೂನೆ ತೆಗೆದುಕೊಳ್ಳುತ್ತದೆ. ಅಲ್ಲಿ ಕೇಳಿದಂತಹ ಮಾಹಿತಿಯ ವಿವರಗಳನ್ನು ತುಂಬಬೇಕಾಗುತ್ತದೆ. ನೀವು ಅಲ್ಲಿ ತಿದ್ದುಪಡಿ ಮಾಡಬೇಕೆಂದುಕೊಳ್ಳುವ ಸರಿಯಾದ ಮಾಹಿತಿಯನ್ನು ನೀಡಬೇಕು.
# ಪ್ರತೀ ತಿದ್ದುಪಡಿಗೆ ನಿಮಗೆ ಹತ್ತು ರೂಪಾಯಿಗಳ ಶುಲ್ಕವನ್ನು ವಿಧಿಸಲಾಗುತ್ತದೆ.
ಇದನ್ನು ಓದಿ :
ಸರ್ಕಾರದಿಂದ ಹೊಸ ಪಿಂಚಣಿ ಯೋಜನೆ ಜಾರಿ!!
ಕೃಷಿ ಇಲಾಖೆಯಿಂದ ರೈತರಿಗೆ ಟ್ರ್ಯಾಕ್ಟರ್ ಸಬ್ಸಿಡಿ!!
# ಎಲ್ಲಾ ಸರಿಯಾದ ಮಾಹಿತಿಯನ್ನು ತುಂಬಿದ ನಂತರ ಸಬ್ಮಿಟ್ ನೀಡಬೇಕಾಗುತ್ತದೆ. ಅದರಲ್ಲಿ ಕೆಲವು ದಾಖಲೆಗಳನ್ನು ಸಹ ಅಪ್ಲೋಡ್ ಮಾಡಬೇಕಾಗುತ್ತದೆ.
• ಆಧಾರ್ ಕಾರ್ಡ್
• ರೇಷನ್ ಕಾರ್ಡ್
• ಲೇಬರ್ ಕಾರ್ಡ್
ಕೃಷಿ ವಾಹಿನಿ ಗ್ರೂಪ್ ಸೇರಲು ಈ ಕೆಳಕಂಡ ಲಿಂಕನ್ನು ಕ್ಲಿಕ್ಕಿಸಿ 👇
https://chat.whatsapp.com/JKdQHb2tEuFGVWVXLOLm9P
• ಇನ್ನಿತರ ದಾಖಲೆಗಳು.
ನೀವು ಸಬ್ಮಿಟ್ ಮಾಡಿದ ಕೆಲವು ದಿನಗಳ ನಂತರ ನೀವು ಈ ಸೇವಾ ಸಿಂಧು ಪೋರ್ಟಲ್ ಗೆ ಬಂದು ಹೊಸ ಲೇಬರ್ ಕಾರ್ಡನ್ನು ಡೌನ್ಲೋಡ್ ಮಾಡಿಕೊಳ್ಳ ಬಹುದು.
ನಿಮಗೆ ಲೇಬರ್ ಕಾರ್ಡ್ ತಿದ್ದುಪಡಿ ಮಾಡಲು ಕೇವಲ ಈ ಎರಡು ಆಯ್ಕೆಗಳನ್ನು ಮಾತ್ರ ನೀಡಲಾಗುತ್ತದೆ.
ಲೇಬರ್ ಕಾರ್ಡ್ ಹೊಂದಿದವರು ಅಥವಾ ಲೇಬರ್ ಕಾರ್ಡ್ ತಿದ್ದುಪಡಿ ಮಾಡಬೇಕೆಂದುಕೊಳ್ಳುವರು ಈ ಬಹುಮುಖ್ಯ ಮಾಹಿತಿಯ ಸದುಪಯೋಗವನ್ನು ಪಡೆದುಕೊಂಡು ತಮ್ಮ ತಪ್ಪಾದ ಮಾಹಿತಿಯ ತಿದ್ದುಪಡಿಯನ್ನು ಮಾಡಿ ಹೊಸ ಲೇಬರ್ ಕಾರ್ಡನ್ನು ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ
ಕೃಷಿ ವಾಹಿನಿ🌱
ವೆಬ್ಸೈಟ್ನ ಸಂಪರ್ಕದಲ್ಲಿರಿ..
Very nice ….