ಪ್ರಿಯ ಭಾಂದವರೇ, ಕರ್ನಾಟಕ ಸರ್ಕಾರದಿಂದ ಎಲ್ಲಾ ನಾಗರಿಕರಿಗೆ ಹೊಸ ಪಿಂಚಣಿ ಸೌಲಭ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಹೆಸರು ‘ಮನೆ ಬಾಗಿಲಿಗೆ ಪಿಂಚಣಿ ಸೌಲಭ್ಯ’. ಮನೆ ಬಾಗಿಲಿಗೆ ಪಿಂಚಣಿ ಸೌಲಭ್ಯ ಎಂದರೇನು? ಈ ಪಿಂಚಣಿ ಸೌಲಭ್ಯವನ್ನು ಪಡೆಯಲು ಅರ್ಹರು ಯಾರು ಯಾರು?
ಪಿಂಚಣಿ ಸೌಲಭ್ಯಕ್ಕೆ ಅರ್ಜಿ ಹಾಕಿದ ನಂತರ ಎಷ್ಟು ಗಂಟೆಗಳಲ್ಲಿ ಪಿಂಚಣಿ ಸೌಲಭ್ಯ ಒದಗಿಸಲಾಗುತ್ತದೆ?
ಈ ಪಿಂಚಣಿ ಸೌಲಭ್ಯಕ್ಕೆ ಅರ್ಜಿ ಹಾಕಲು ಏನೇನು ದಾಖಲೆಗಳು ಬೇಕು? ಇವೆಲ್ಲವಗಳ ಬಗ್ಗೆ ಇರುವ ವಿವರವಾದ ಮಾಹಿತಿಯನ್ನು ಈಗ ತಿಳಿದುಕೊಳ್ಳೋಣ.
ನಮ್ಮ ರಾಜ್ಯ ಸರ್ಕಾರದ ಕಡೆಯಿಂದ ಎಲ್ಲಾ ನಾಗರಿಕರಿಗೆ ಇನ್ನು ಮುಂದೆ ಯಾರೆಲ್ಲ ಪಿಂಚಣಿ ಸೌಲಭ್ಯಕ್ಕೆ ಅರ್ಹರಿರುತ್ತಾರೆ ಅಂಥವರು ಯಾವುದೇ ಕಚೇರಿಗೆ ಅಲೆದಾಡದೆ, ಯಾವುದೇ ತೊಂದರೆಗಳಿಲ್ಲದೆ ಕೇವಲ 72 ಗಂಟೆಗಳಲ್ಲಿ ನಿಮ್ಮ ಪಿಂಚಣಿ ಸೌಲಭ್ಯವನ್ನು ಪಡೆಯಬಹುದು.
# ಮೊದಲಿಗೆ ನೀವು ಒಂದು ಸಂಖ್ಯೆಗೆ ಕರೆ ಮಾಡಬೇಕಾಗುತ್ತದೆ. ಆ ಸಂಖ್ಯೆ 155245 ಆಗಿರುತ್ತದೆ.
# ಈ ಸಂಖ್ಯೆಗೆ ನೀವು ಕರೆ ಮಾಡಿದರೆ ಅಥವಾ ನೀವು ಪಿಂಚಣಿ ಸೌಲಭ್ಯಕ್ಕೆ ಅರ್ಹರಿದ್ದರೆ ಅವರೇ ನಿಮ್ಮ ಮನೆ ಬಾಗಿಲಿಗೆ ಬಂದು ಪಿಂಚಣಿ ಸೌಲಭ್ಯಕ್ಕೆ ಅರ್ಜಿಯನ್ನು ಹಾಕುತ್ತಾರೆ. ನೀವು ಕೇವಲ 72 ಗಂಟೆಗಳಲ್ಲಿ ಪಿಂಚಣಿ ಸೌಲಭ್ಯವನ್ನು ಪಡೆಯಬಹುದು.
# ಈ ಪಿಂಚಣಿ ಸೌಲಭ್ಯವನ್ನು ಪಡೆಯಲು ಯಾರು ಯಾರು ಅರ್ಹರು ಎಂಬುದನ್ನು ನೋಡುವುದಾದರೆ,
• ಕುಟುಂಬದ ವಾರ್ಷಿಕ ಆದಾಯ 32 ಸಾವಿರಕ್ಕಿಂತ ಕಡಿಮೆ ಇರಬೇಕು.
• ವೃದ್ಧರು ಪಿಂಚಣಿ ಸೌಲಭ್ಯವನ್ನು ಪಡೆಯಬಹುದು.
• ವಿಶೇಷ ಚೇತನರು
• ವಿಧವೆಯರು
• ಅವಿವಾಹಿತ ಅಥವಾ ವಿಚ್ಛೇದನ ಪಡೆದ ಮಹಿಳೆಯರು.
ಇದನ್ನು ಓದಿ :
ಕೃಷಿ ಇಲಾಖೆಯಿಂದ ರೈತರಿಗೆ ಟ್ರ್ಯಾಕ್ಟರ್ ಸಬ್ಸಿಡಿ!!
ಮೆಣಸಿನ ಗಿಡದಲ್ಲಿ ಮುಟುರು ರೋಗದ ಸಮಗ್ರ ನಿರ್ವಹಣೆ??
ಇಂಥವರು ಮಾತ್ರ ಪಿಂಚಣಿ ಸೌಲಭ್ಯಕ್ಕೆ ಅರ್ಹರಿರುತ್ತಾರೆ.
# ಇದು ಮಾಸಿಕ ಪಿಂಚಣಿ ಯೋಜನೆ ಆಗಿರುತ್ತದೆ. ಅಂದರೆ ಈ ಪಿಂಚಣಿಯನ್ನು ಪ್ರತಿ ತಿಂಗಳು ನೀಡಲಾಗುತ್ತದೆ.
# ನೀವು ಮೇಲೆ ಹೇಳಿರುವ ಸಂಖ್ಯೆಗೆ ಕರೆ ಮಾಡಿದಾಗ ಗ್ರಾಮ ಲೆಕ್ಕಾಧಿಕಾರಿಗಳು ನಿಮ್ಮ ಮನೆಗೆ ಬಂದು, ದಾಖಲೆಗಳನ್ನು ಪರಿಶೀಲಿಸಿ, ಮೊಬೈಲ್ ಅಥವಾ ಆ್ಯಪ್ ಮೂಲಕ ಅರ್ಜಿ ಸಲ್ಲಿಸಿ, ನಿಮ್ಮ ಫೋಟೋವನ್ನು ತೆಗೆದುಕೊಂಡು, ಕೇವಲ 72 ಗಂಟೆಗಳಲ್ಲಿ ನಿಮಗೆ ಪಿಂಚಣಿ ಸೌಲಭ್ಯವನ್ನು ಒದಗಿಸುತ್ತಾರೆ.
# ಇದಕ್ಕೆ ಬೇಕಾಗುವ ದಾಖಲೆಗಳೇನು ಎಂಬುದನ್ನು ನೋಡುವುದಾದರೆ,
• ಮೊದಲನೆಯದಾಗಿ ಆಧಾರ ಕಾರ್ಡನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ.
• ಇದರ ಜೊತೆಗೆ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ.
• ರೇಷನ್ ಕಾರ್ಡ್
• ವೋಟರ್ ಐಡಿ
• ಇತರೆ ಸರ್ಕಾರದ ಗುರುತಿನ ಚೀಟಿಗಳು
ಕೃಷಿ ವಾಹಿನಿ ಗ್ರೂಪ್ ಸೇರಲು ಈ ಕೆಳಕಂಡ ಲಿಂಕನ್ನು ಕ್ಲಿಕ್ಕಿಸಿ 👇
https://chat.whatsapp.com/JKdQHb2tEuFGVWVXLOLm9P
# ಗ್ರಾಮ ಲೆಕ್ಕಾಧಿಕಾರಿಗಳು ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಆಪ್(App) ಮೂಲಕ ಅರ್ಜಿಗಳನ್ನು ಸಲ್ಲಿಸುತ್ತಾರೆ. ಮತ್ತು ನೀವು ನೀಡಿದ ದಾಖಲೆಗಳನ್ನು ಮೊಬೈಲ್ ಮೂಲಕ ಅಪ್ಲೋಡ್ ಮಾಡಲಾಗುತ್ತದೆ.
# ನಿಮಗೆ ಕೇವಲ 72 ಗಂಟೆಗಳಲ್ಲಿ ನಾಡಕಛೇರಿಯ ಉಪ ತಹಶೀಲ್ದಾರ್ ಅವರು ಮಂಜೂರಾತಿಯನ್ನು ನೀಡಿ ಮನೆ ಬಾಗಿಲಿಗೆ ಪಿಂಚಣಿ ಸೌಲಭ್ಯವನ್ನು ಒದಗಿಸುತ್ತಾರೆ.
# ಸರ್ಕಾರದ ಕಡೆಯಿಂದ ಹೊಸದಾಗಿ ಮನೆ ಬಾಗಿಲಿಗೆ ಪಿಂಚಣಿ ಸೌಲಭ್ಯ ಯೋಜನೆಯ ಮಾಹಿತಿ ಇದಾಗಿದೆ.
ರೈತರು ಅಥವಾ ಅರ್ಜಿದಾರರು ಹೊಸ ಪಿಂಚಣಿ ಯೋಜನೆಯ ಈ ಬಹು ಮುಖ್ಯ ಮಾಹಿತಿಯ ಸದುಪಯೋಗವನ್ನು ಪಡೆದುಕೊಂಡು ಇದರ ಸೌಲಭ್ಯವನ್ನು ಪಡೆದುಕೊಳ್ಳಬೇಕು. ರೈತರು ಈ ಮೇಲ್ಕಾಣಿಸಿದ ವಿಷಯವನ್ನು ಸರಿಯಾದ ತರನಾಗಿ ಉಪಯೋಗಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ
ಕೃಷಿ ವಾಹಿನಿ 🌱
ವೆಬ್ಸೈಟ್ ನ ಸಂಪರ್ಕದಲ್ಲಿರಿ..
One thought on “ಸರ್ಕಾರದಿಂದ ಹೊಸ ಪಿಂಚಣಿ ಯೋಜನೆ ಜಾರಿ!!”