ಮೆಣಸಿನಕಾಯಿಯಲ್ಲಿ ವಿದೇಶಿ ಥ್ರಿಪ್ಸ್ ನಿರ್ವಹಣೆ ಮೆಣಸಿನಕಾಯಿಯು ಪ್ರಮುಖ ತರಕಾರಿಯಾಗಿ ಹಾಗೂ ಸಾಂಬಾರು ಬೆಳೆಯಾಗಿ ರೈತರು ಬೆಳೆಯುತ್ತಿದ್ದಾರೆ , ಆದರೆ ಉತ್ಪಾದಕತೆ ಹಾಗೂ ಗುಣಮಟ್ಟದಲ್ಲಿ ಪ್ರಗತಿ ಕಾಣಬೇಕಿದ್ದು , ವಿದೇಶಿ ಥ್ರಿಪ್ಸ್ ಹಾವಳಿ ಇದಕ್ಕೆ ಪ್ರಮುಖ ತೊಡಕಾಗಿದೆ.

ಮೆಣಸಿನ ಕಾಯಿಯಲ್ಲಿ ಈ ಮುಟುರು ರೋಗದ ಸಂಪೂರ್ಣ ನಿರ್ವಹಣೆ..

ಮೊದಲನೆಯದಾಗಿ ಮೆಣಸಿನಕಾಯಿಯಲ್ಲಿ ಈ ಮುಟುರು ರೋಗವು ವೈರಸ್ ನಿಂದ ಹರಡುತ್ತದೆ. ಅಥವಾ ನಂಜಾಣುಗಳಿಂದ ಬರುತ್ತದೆ. ಇದನ್ನು ಹೊಲದ ತುಂಬಾ ಹರಡಿಸಲು ರಸ ಹೀರುವ ಕೀಟಗಳಾದ ಅಫೀಡ್ಸ್ (Aphids) ಮತ್ತು ಟ್ರಿಪ್ಸ್ (Trips) ಹಾಗೂ ಮಿಟ್ಸ್ (Mites) ಈ ರೋಗವನ್ನು ಹೊಲದ ತುಂಬಾ ಹರಡಿಸುತ್ತವೆ.

ಈ ಮುಟುರು ರೋಗವು ಬಂದಲ್ಲಿ ಶೇಕಡ 90 ರಿಂದ 100 % ಇಳುವರಿ ಕಡಿಮೆಯಾಗುತ್ತದೆ. ಪ್ರಮುಖವಾಗಿ ಈ ಮುಟುರು ರೋಗವು ಕೀಟಗಳಿಂದ ಹೊರಡಲ್ಪಡುತ್ತದೆ.

ಸಾವಯುವ ಕೃಷಿ ಪದ್ಧತಿಯಲ್ಲಿ ಮುಟುರು ರೋಗದ ನಿರ್ವಹಣೆ :

• ಮೊದಲನೇದಾಗಿ ಜಮೀನಿನ ಸುತ್ತಲೂ ಗಡಿ ಬೆಳೆಯನ್ನಾಗಿ 2-3 ಸಾಲುಗಳು ಜೋಳ / ಸಜ್ಜೆ / ಮೇವಿನ ಹುಲ್ಲು ಇತ್ಯಾದಿ ಬೆಳೆಗಳನ್ನು ಬೆಳೆಯುವುದರಿಂದ ಥಿಪ್ಸ್ , ಇತರ ಕಾಯಿಕೊರಕ ಮತ್ತು ರಸಹೀರುವ ಕೀಟಗಳನ್ನು ನಿಯಂತ್ರಿಸಬಹುದು .

ಇವುಗಳನ್ನು ಬಾರ್ಡರ್ ಗಿಡಗಳು ಎಂದು ಕರೆಯುತ್ತಾರೆ. ಇವುಗಳ ಸಹಾಯದಿಂದ ಬೇರೆ ಹೊಲದ ಕೀಟಗಳು ನಮ್ಮ ಹೊಲಕ್ಕೆ ಪ್ರವೇಶ ಮಾಡುವುದನ್ನು ತಡೆ ಹಿಡಿಯುತ್ತವೆ.

• ಪ್ರತಿ ಐದರಿಂದ ಏಳು ಗಿಡದ ಮಧ್ಯದಲ್ಲಿ ಒಂದು ಸಾಲು ಚೆಂಡು ಹೂವಿನ ಗಿಡವನ್ನು ಬೆಳೆಯಬೇಕು. ಇದನ್ನು ಬೆಳೆಯುವುದರಿಂದ ಚಂಡು ಹೂವಿನ ವಾಸನೆ ಹಾಗೂ ಅದರ ಬಣ್ಣಕ್ಕೆ ಈ ಮುಟುರು ರೋಗ ಹರಡಿಸುವಂತಹ ಕೀಟಗಳಾದ ಟ್ರಿಪ್ಸ್, ಅಫೀಡ್ಸ್, ಮಿಟ್ಸ್, ಹಸಿರುನೋಣ ಆ ಹೂವಿಗೆ ಆಕರ್ಷಿತವಾಗುತ್ತವೆ. ಮತ್ತು ರೋಗವನ್ನು ಹರಡಿಸುವದಿಲ್ಲ. ಹಾಗೂ ಮುಖ್ಯಬೆಳೆಗೆ ಹಾನಿಯನ್ನು ತಪ್ಪಿಸುತ್ತವೆ.

• ಬಹಳ ಹಾನಿಗೊಳಗಾದ ಅಥವಾ ಲಕ್ಷಣಗಳು ಕಂಡುಬಂದ ಗಿಡಗಳನ್ನು ಬೇರುಸಮೇತ ಕಿತ್ತು ಜಮೀನಿನಿಂದ ಹೊರಹಾಕಬೇಕು ಅಥವಾ ಸುಡಬೇಕು.

• ರೋಗಮುಕ್ತ ಸಸಿಗಳನ್ನು ಹಚ್ಚಬೇಕು.

• ಗಿಡಗಳನ್ನು ಹಚ್ಚುವ ಮೊದಲು ಮಣ್ಣಿಗೆ ಬೇವಿನ ಹಿಂಡಿಯನ್ನು ಉಪಚರಿಸಬೇಕು

• ಅಂತೂ ಬಲೆಗಳನ್ನು ಬಳಸುವುದು ಹಳದಿ ಹಾಗೂ ನೀಲಿ ಬಲೆಗಳನ್ನು ಬಳಸಬೇಕು. ಒಂದು ಎಕರೆಗೆ 5 ರಿಂದ 10 ಬಲೆಗಳನ್ನು ಹಾಕುವುದು ಸೂಕ್ತ.

ಇದನ್ನು ಓದಿ :

1. ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಅರ್ಜಿ ಆಹ್ವಾನ!!

2. ಈ ಕಾರ್ಡ್ ಹೊಂದಿದವರಿಗೆ ಬಂಪರ್ ಆಫರ್!!

ಮುಟುರು ರೋಗಕ್ಕೆ ಸಿಂಪರಣೆ ಯಾವುದನ್ನೂ ಮಾಡಬೇಕು??

• ಎಕರೆಗೆ ಡೈಮಿಥೋಯೇಟ್ (Dimethoate)ಶೇ.30 ಇ.ಸಿ 250 ಮಿ.ಲೀ.ಯನ್ನು (200-400 ಲೀ) . ಅಥವಾ ಪಿಪ್ರೊ ನಿಲ್ (fipronil) ಶೇ.05 ಎಸ್.ಸಿ 300 ಗ್ರಾಂ ಅನ್ನು 200 ಲೀಟರ್ ಅಥವಾ ಪೆಗಸಸ್ (Pegasus) 0.5-1gm/litre ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ಕೃಷಿ ವಾಹಿನಿ ಗ್ರೂಪ್ ಸೇರಲು ಈ ಲಿಂಕ್ ಮೇಲೆ ಕ್ಲಿಕ್ಕಿಸಿ 👇

https://chat.whatsapp.com/JKdQHb2tEuFGVWVXLOLm9P

• ಬಳ್ಳೋಳ್ಳಿ – ಹಸಿಮೆಣಸಿನಕಾಯಿ – ಸೀಮೆ ಎಣ್ಣೆ ಕಷಾಯದ ತಯಾರಿಕೆ ವಿಧಾನ ಪ್ರತಿ ಎಕರೆಗೆ ಬೇಕಾಗುವ 600 ಗ್ರಾಂ ಬಳ್ಳೋಳ್ಳಿ ಹಾಗೂ 600 ಗ್ರಾಂ ಹಸಿಮೆಣಸಿನಕಾಯಿಯನ್ನು ಕುಟ್ಟಿ ಪ್ರತ್ಯೇಕವಾಗಿ 600 ಮಿ .ಲೀ . ಸೀಮೆ ಎಣ್ಣೆಯಲ್ಲಿ ಎಂಟು ಗಂಟೆ ನೆನಸಿಡಬೇಕು. ನಂತರ ಹಿಂಡಿ ರಸತೆಗೆದು ಸೋಸಬೇಕು. ಎರಡೂಕಷಾಯಗಳನ್ನು ಬೆರೆಸಿ ಅದಕ್ಕೆ 0.4 ಕಿ. ಗ್ರಾಂ. ಸಾಬೂನಿನ ದ್ರಾವಣ ಬೆರೆಸಿ ಸಿಂಪರಣೆಗೆ ಪ್ರತಿ ಲೀಟರ್ ನೀರಿಗೆ 5 ಮಿ.ಲೀ .ನಂತೆ ಉಪಯೋಗಿಸಬೇಕು.

ಈ ಮೇಲ್ಕಾಣಿಸಿದ ನಿರ್ವಹಣೆಗಳನ್ನು ತಪ್ಪದೇ ಮಾಡಿದಲ್ಲಿ ಈ ಮೆಣಸಿನಕಾಯಿಯಲ್ಲಿ ಬರುವ ಮುಟುರು ರೋಗವನ್ನು ಸಂಪೂರ್ಣವಾಗಿ ನಿರ್ವಹಣೆಯಲ್ಲಿ ಇಡಬಹುದು. ಹಾಗೂ ಮೆಣಸಿನ ಕಾಯಿಯಲ್ಲಿ ಉತ್ತಮ ಇಳುವರಿಯನ್ನು ತೆಗೆಯಬಹುದು.

ಹೆಚ್ಚಿನ ಮಾಹಿತಿಗಾಗಿ

ಕೃಷಿ ವಾಹಿನಿ🌱

ವೆಬ್ಸೈಟ್ನ ಸಂಪರ್ಕದಲ್ಲಿರಿ..

Leave a Reply

Your email address will not be published. Required fields are marked *