ಪ್ರೀಯ ರೈತರೇ, ಕರ್ನಾಟಕ ರಾಜ್ಯದ್ಯಂತ ಇರುವ ಎಲ್ಲಾ ಕಾರ್ಮಿಕರಿಗೆ ಹಾಗೂ ಕಾರ್ಮಿಕರ ಕಾರ್ಡ್ ಹೊಂದಿದವರಿಗೆ ರಾಜ್ಯ ಸರ್ಕಾರ ಮತ್ತೆ ಬಂಪರ್ ಗಿಫ್ಟ್ ನೀಡಿದೆ. ಸಾಕಷ್ಟು ಕಾರ್ಮಿಕರು ಕೇವಲ ಕಾರ್ಮಿಕರ ಕಾರ್ಡ್ ಹೊಂದಿದ್ದು ಅದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುತ್ತಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಎಲ್ಲಾ ಬಡವರು ಹಾಗೂ ಕಾರ್ಮಿಕರ ಕಾರ್ಡ್ ಹೊಂದಿದವರಿಗೆ ರಾಜ್ಯ ಸರ್ಕಾರ ನೀಡುವ ಸಹಾಯಧನದ ಹಣಗಳಲ್ಲಿ ಭಾರಿ ಹೆಚ್ಚಳ ಮಾಡಿ ಎಂದು ಆದೇಶವನ್ನು ಹೊರಡಿಸಲಾಗಿದೆ.

» 3,000 ರೂಪಾಯಿಗಳ ಪ್ರತಿ ತಿಂಗಳ ಪಿಂಚಣಿ ಹಣ.

» 50,000 ರೂಪಾಯಿಗಳ ಹೆರಿಗೆ ಸಹಾಯಧನ ಹಾಗೂ

» ನಿಮ್ಮ ಮಕ್ಕಳಿಗೆ ಉಚಿತ ಬಸ್ ಪಾಸ್

ಸೇರಿದಂತೆ ವಿವಿಧ ಯೋಜನೆಗಳ ಅನುದಾನವನ್ನು ಹೆಚ್ಚಿಸಲಾಗಿದೆ. ರಾಜ್ಯ ಸರ್ಕಾರವು ಹೊರಡಿಸುವಂತಹ ಹೊಸ ಆದೇಶದಲ್ಲಿ ಏನಿದೆ? ಮತ್ತು ಹೇಗೆ ಈ ಹೊಸ ರೀತಿಯ ಅನುದಾನಗಳನ್ನು ಪಡೆದುಕೊಳ್ಳಬಹುದು? ಎನ್ನುವುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

#ಕಟ್ಟಡ ಮತ್ತು ಇತರೆ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮದ ನಿಯಮಗಳಿಗೆ ರಾಜ್ಯ ಸರ್ಕಾರವು ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸಿದೆ.

• ಪಿಂಚಣಿ ಸೌಲಭ್ಯವನ್ನು 2,000 ರೂಪಾಯಿಯಿಂದ 3,000 ರೂಪಾಯಿಗಳವರೆಗೆ ಏರಿಕೆಯನ್ನು ಮಾಡಲಾಗಿದೆ.

• ಫಲಾನುಭವಿಗಳ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ, ಕಲಿಕಾಕಿಟ್, ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್ ಗಳನ್ನು ವಿತರಿಸಲಾಗುವುದು.

• ವೈದ್ಯಕೀಯ ಯೋಜನೆಯ ಸೌಲಭ್ಯದ ಅಡಿಯಲ್ಲಿ ಸರ್ಕಾರದಿಂದ ನೀಡುವ ಸಹಾಯಧನವನ್ನು 10,000 ರೂಪಾಯಿಯಿಂದ 20,000 ರೂಪಾಯಿಗಳವರೆಗೆ ಹೆಚ್ಚಳವನ್ನು ಮಾಡಲಾಗಿದೆ.

ಇದನ್ನು ಓದಿ :

1. ಒಣಮೇವು ಹಾಳಾಗುತ್ತಿದೆಯೇ??ಒಣಮೇವನ್ನು ಉಪಚರಿಸಿ ದನಗಳಿಗೆ ನೀಡುವುದು ಹೇಗೆ??

2. ಜಮೀನಿಗೆ ದಾರಿ ಇಲ್ವಾ..!!ಪಡೆಯುವುದು ಹೇಗೆ!!

• ಕಾರ್ಮಿಕರು ಕೆಲಸ ಮಾಡುವ ಸ್ಥಳಗಳಲ್ಲಿ ಸಂಚಾರಿ ವೈದ್ಯಕೀಯ ಘಟಕಗಳ ಸ್ಥಾಪನೆ.

• ಅವಶ್ಯಕತೆ ಇರುವಾಗ ಪೌಷ್ಟಿಕ ಆಹಾರದ ಕಿಟ್ ವಿತರಿಸಲಾಗುವುದು.

• ಹೆರಿಗೆ ಸೌಲಭ್ಯ ಯೋಜನೆಯ ಅಡಿಯಲ್ಲಿ ಸರ್ಕಾರದಿಂದ ನೀಡುವ ಸಹಾಯಧನವನ್ನು ಸುಮಾರು ಐವತ್ತು ಸಾವಿರ ರೂಪಾಯಿಗಳವರಿಗೆ ಹೆಚ್ಚಳವನ್ನು ಮಾಡಲಾಗಿದೆ.

• ಅಂತಿಮ ಸಂಸ್ಕಾರದ ವೆಚ್ಚ ಸೌಲಭ್ಯ ಸಹಾಯಧನವನ್ನು 50,000 ರೂಪಾಯಿಯಿಂದ

ಸುಮಾರು 71,000 ರೂಪಾಯಿಗಳವರೆಗೆ ಹೆಚ್ಚಳವನ್ನು ಮಾಡಲಾಗಿದೆ.

• ಆಕಸ್ಮಿಕವಾಗಿ ಕೋವಿಡ್ ಸಾಂಕ್ರಾಮಿಕ ರೋಗದಿಂದ ಫಲಾನುಭವಿ ಏನಾದರೂ ಮೃತಪಟ್ಟಿದ್ದರೆ ಅವಲಂಬಿತರಿಗೆ ಅಥವಾ ಸಂಬಂಧಪಟ್ಟ ಕುಟುಂಬ ಸದಸ್ಯರಿಗೆ ಸುಮಾರು 2 ಲಕ್ಷ ರೂಪಾಯಿಗಳನ್ನು ರಾಜ್ಯ ಸರ್ಕಾರದಿಂದ ಈ ಯೋಜನೆ ಅಡಿಯಲ್ಲಿ ನೀಡಲಾಗುವುದು.

• ಸಾರಿಗೆ ಸೌಲಭ್ಯದ ಅಡಿ ಫಲಾನುಭವಿಗಳಿಗೆ ಕರ್ನಾಟಕ ರಾಜ್ಯದಾದ್ಯಂತ ಕೆ.ಎಸ್.ಆರ್.ಟಿ.ಸಿ ಬಸ್ ಪಾಸ್ ವಿತರಣೆಯನ್ನು ಮಾಡಲಾಗುವುದು.

• ಗೃಹ ಭಾಗ್ಯ ಸೌಲಭ್ಯದ ಯೋಜನೆ ಅಡಿಯಲ್ಲಿ 21 ರಿಂದ 50 ವರ್ಷದ ಒಳಗಿನ ನೊಂದಾಯಿತ ಫಲಾನುಭವಿಗಳಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು 10 ಕಂತುಗಳಲ್ಲಿ ಸಾಲ ನೀಡಲು ನಿಯಮವನ್ನು ಸರಳೀಕರಣ ಮಾಡಲಾಗಿದೆ.

• ಫಲಾನುಭವಿಗಳು ತಮ್ಮ ತಮ್ಮ ಕೆಲಸದ ಸ್ಥಳಗಳಲ್ಲಿ ಅಪಘಾತದಿಂದ ಮೃತಪಟ್ಟರೆ ಅವಲಂಬಿತರಿಗೆ ಅಥವಾ ಸಂಬಂಧಪಟ್ಟ ಕುಟುಂಬ ಸದಸ್ಯರಿಗೆ ಪರಿಹಾರ ಮೊತ್ತವನ್ನು ಎರಡು ಲಕ್ಷ ರೂಪಾಯಿಯಿಂದ ಸುಮಾರು 5 ಲಕ್ಷ ರೂಪಾಯಿಗಳವರೆಗೆ ಏರಿಕೆಯನ್ನು ಮಾಡಲಾಗಿದೆ.

• ಈ ಕಾರ್ಮಿಕರ ಕಾರ್ಡ್ ಅಥವಾ ಲೇಬರ್ ಕಾರ್ಡ್ ಹೊಂದಿದಂತ ಫಲಾನುಭವಿಗಳಿಗೆ ಮದುವೆ ಸಹಾಯದನದ ಮೊತ್ತವನ್ನು 50,000 ರೂಪಾಯಿಗಳಿಂದ ಸುಮಾರು 60 ಸಾವಿರ ರೂಪಾಯಿಗಳವರೆಗೆ ಏರಿಕೆಯನ್ನು ಮಾಡಲಾಗಿದೆ.

ಫಲಾನುಭವಿಗಳು ಅಂದರೆ ಈ ಕಾರ್ಮಿಕರ ಕಾರ್ಡ್ ಅಥವಾ ಲೇಬರ್ ಕಾರ್ಡ್ ಹೊಂದಿದಂತಹ ಅಭ್ಯರ್ಥಿಗಳು ಈ ಯೋಜನೆಗಳ ಲಾಭವನ್ನು ಪಡೆದುಕೊಳ್ಳಬೇಕು.

ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕ್ ಕ್ಲಿಕ್ ಮಾಡಿ 👇

https://chat.whatsapp.com/JKdQHb2tEuFGVWVXLOLm9P

ನಿಮ್ಮ ಬಳಿಯು ಈಗಾಗಲೇ ಕಾರ್ಮಿಕರ ಕಾರ್ಡ್ ಅಥವಾ ಲೇಬರ್ ಕಾರ್ಡ್ ಇದ್ದರೆ ತಪ್ಪದೇ ಇದರ ಮಾಹಿತಿಯನ್ನು ಪಡೆದುಕೊಳ್ಳಿ.

ಹಾಗೂ ಲೇಬರ್ ಕಾರ್ಡ್ ಹೊಂದಿರುವ ನಿಮ್ಮ ಸಂಬಂಧಿಕರಿಗೂ ಸಹ ಈಗಲೇ ಈ ಮಾಹಿತಿಯ ವಿವರವನ್ನು ನೀಡಿ ಮತ್ತು ಇದರ ಉಪಯೋಗವನ್ನು ತಿಳಿಸಿ.

ಈ ಲೇಬರ್ ಕಾರ್ಡ್ ಅಥವಾ ಕಾರ್ಮಿಕರ ಕಾರ್ಡ್ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ನಿಮಗೆ ಹತ್ತಿರವಿರುವ ಅಥವಾ ನಿಮಗೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಿರಿ.

ಹೆಚ್ಚಿನ ಮಾಹಿತಿಗಾಗಿ

ಕೃಷಿ ವಾಹಿನಿ 🌱

ವೆಬ್ಸೈಟ್ ನ ಸಂಪರ್ಕದಲ್ಲಿರಿ..

2 thoughts on “ಈ ಕಾರ್ಡ್ ಹೊಂದಿದ್ದರೆ ಬಂಪರ್ ಆಫರ್!! ಸರ್ಕಾರದಿಂದ ಸಹಾಯದನ ಹೆಚ್ಚಳ!”

Leave a Reply

Your email address will not be published. Required fields are marked *