ಪ್ರಿಯ ರೈತರೇ, ಇವತ್ತಿನ ದಿನ ಕೃಷಿಗೆ ಸಂಬಂಧಪಟ್ಟಂತೆ ಸರ್ಕಾರದಿಂದ ರೈತರಿಗೆ ಅನೇಕ ಸಬ್ಸಿಡಿ ಮತ್ತು ಸವಲತ್ತಗಳನ್ನು ನೀಡಲಾಗುತ್ತಿದೆ. ಅನೇಕ ರೈತರು ಸಹ ಇದರ ಸದುಪಯೋಗವನ್ನು ಸಹ ಪಡೆದುಕೊಂಡಿದ್ದಾರೆ.
ರಾಜ್ಯ ಸರ್ಕಾರ ಹೊರಡಿಸಿದ ಹೊಸ ನಿಯಮದ ಪ್ರಕಾರ, ನಾವು ಸರ್ಕಾರದ ಕಡೆಯಿಂದ ಯಾವುದೇ ಸವಲತ್ತು ಅಥವಾ ಸಬ್ಸಿಡಿಯನ್ನು ಪಡೆಯಲು ಆಧಾರ್ ಕಾರ್ಡ್ ಅಥವಾ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ನೀಡಬೇಕು ಎಂದು ಕರ್ನಾಟಕ ಸರ್ಕಾರ ಆದೇಶಿಸಿದೆ. ಆಧಾರ್ ಕಾರ್ಡನ್ನು ಹೊಂದಿಲ್ಲದ ರೈತರು ಸರ್ಕಾರದ ಯಾವುದೇ ಸಬ್ಸಿಡಿ ಅಥವಾ ಸಹಾಯಧನವನ್ನು ಪಡೆಯಲು ಅರ್ಹರಾಗಲು ಬರುವುದಿಲ್ಲ.
ಇಂದು ನಾವು ಇದರ ಬಗ್ಗೆ ಇರುವ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ.
» ಇನ್ನು ಮುಂದೆ ಸರ್ಕಾರದಿಂದ ಏನಾದರೂ ಸಹಾಯಧನವನ್ನು ಪಡೆಯಬೇಕೆಂದರೆ ಅಂತಹವರು ಆಧಾರ್ ಕಾರ್ಡನ್ನು ಇನ್ನು ಮುಂದೆ ಕಡ್ಡಾಯವಾಗಿ ಸರ್ಕಾರಕ್ಕೆ ಅರ್ಜಿ ಜೊತೆಗೆ ನೀಡಬೇಕಾಗುತ್ತದೆ.
» ಸರ್ಕಾರದ ಸಹಾಯಧನ ಮತ್ತು ಇತರೆ ಸೌಲತ್ತು ಪಡೆಯಲು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಕಡ್ಡಾಯವಾಗಿ ನೀಡಬೇಕು ಎಂದು ವಿಶಿಷ್ಟ ಗುರುತಿನ ಪ್ರಾಧಿಕಾರ ಹೊಸ ಸುತ್ತೋಲೆಯನ್ನು ಹೊರಡಿಸಿದೆ.
» ಇದರಿಂದ, ನೀವು ಸರ್ಕಾರದ ಕಡೆಯಿಂದ ಸೌಲಭ್ಯಗಳನ್ನು ಪಡೆಯಲು ಬಯಸಿದರೆ ಆಧಾರ್ ಕಾರ್ಡ್ ಸಂಖ್ಯೆಯ ಆಧಾರದ ಮೇಲೆ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಸರ್ಕಾರದ ಸಬ್ಸಿಡಿ ಅಥವಾ ಸಹಾಯಧನವನ್ನು ನೀಡಲಾಗುತ್ತಿದೆ. ಇದಕ್ಕಾಗಿ ರೈತರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಅನ್ನು ಕಡ್ಡಾಯವಾಗಿ ಮಾಡಿಸಿರಬೇಕಾಗುತ್ತದೆ.
» ನೀವು ಸರ್ಕಾರದ ಯಾವುದೇ ಒಂದು ಸಬ್ಸಿಡಿ ಅಥವಾ ಸಹಾಯಧನವನ್ನು ಪಡೆಯಬೇಕೆಂದರೆ ಆಧಾರ್ ಕಾರ್ಡನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ. ಯಾಕೆಂದರೆ ನೀವು ಸರ್ಕಾರದಿಂದ ಪಡೆಯುವಂತ ಸಬ್ಸಿಡಿ ಅಥವಾ ಸಹಾಯಧನವನ್ನು ನಿಮ್ಮ ನಿರ್ದಿಷ್ಟ ಬ್ಯಾಂಕ್ ಖಾತೆಗೆ ಹಾಕಬೇಕಾದರೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ.
1)ಕೆಲವು ಸಲ ನಿಮ್ಮ ಮೊಬೈಲ್ ಸಂಖ್ಯೆ ಬದಲಾಗಿರುತ್ತದೆ.
2) ಕೆಲವೊಂದು ಸಲ ನಿಮ್ಮ ಬ್ಯಾಂಕಿನ ಐಎಫ್‌ಎಸ್‌ಸಿ(IFSC) ಕೋಡ್ ಬದಲಾಗಿರುತ್ತದೆ.
3)ಬ್ಯಾಂಕ್ ಖಾತೆದಾರರ ಹೆಸರು ಬದಲಾಗಿರಬಹುದು.
ಈ ತರಹದ ಸಮಸ್ಯೆಗಳು ಉಂಟಾಗುವುದರಿಂದ ನಿರ್ದಿಷ್ಟ ಖಾತೆಗೆ ಜಮಾ ಮಾಡುವ ಸಲುವಾಗಿ ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
» ನೀವೇನಾದರೂ ಒಂದಕ್ಕಿಂತ ಹಲವು ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೆ ನಿಮ್ಮ ಆಧಾರ್ ಕಾರ್ಡ್ ಗೆ ಒಂದೇ ಬ್ಯಾಂಕ್ ಖಾತೆಯನ್ನು NPCI ಮ್ಯಾಪಿಂಗ್ ಅಥವಾ ಡೆಬಿಟ್ ಮ್ಯಾಪಿಂಗ್ ಅನ್ನು ಮಾಡಬೇಕಾಗುತ್ತದೆ.
» ನಿಮ್ಮ ಆಧಾರ್ ಕಾರ್ಡ್ ನಂಬರ್ ಗೆ ಯಾವ ಬ್ಯಾಂಕ್ ಖಾತೆ ಲಿಂಕ್ ಆಗಿದೆ ಅಥವಾ ಡೆಬಿಟ್(Debit) ಮ್ಯಾಪಿಂಗ್ ಆಗಿದೆ ಎಂಬುದನ್ನು ಸಹ ಚೆಕ್ ಮಾಡಬಹುದು.
» ಪ್ರತಿಯೊಬ್ಬರೂ ಸರಕಾರದಿಂದ ಸಬ್ಸಿಡಿ ಅಥವಾ ಸಹಾಯಧನವನ್ನು ಪಡೆಯಬೇಕೆಂದುಕೊಳ್ಳುವವರು ಕಡ್ಡಾಯವಾಗಿ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಆಧಾರ್ ಕಾರ್ಡನ್ನು ಲಿಂಕ್ ಮಾಡಿಸಬೇಕಾಗುತ್ತದೆ. ನೀವು ಇನ್ನು ಮುಂದೆ ಸರ್ಕಾರದಿಂದ ಯಾವುದೇ ಸಹಾಯಧನವನ್ನು ಪಡೆಯಬೇಕೆಂದರೆ ಆಧಾರ್ ಕಾರ್ಡನ್ನು ಕಡ್ಡಾಯವಾಗಿ ನೀಡಬೇಕು. ನಂತರ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಸಬ್ಸಿಡಿ ಅಥವಾ ಸಹಾಯಧನವನ್ನು ಜಮಾ ಮಾಡಲಾಗುತ್ತದೆ.
ಇಲ್ಲಿ ಬರುವ ಸಮಸ್ಯೆ ಏನೆಂದರೆ ನಿಮ್ಮ ಆಧಾರ್ ಕಾರ್ಡಿಗೆ ಯಾವ ಬ್ಯಾಂಕ್ ಖಾತೆ ಮ್ಯಾಪಿಂಗ್ ಅಥವಾ ಲಿಂಕ್(Link) ಆಗಿದೆ ಎಂಬುದನ್ನು ನೋಡುವುದು ಹೇಗೆ? ಅಥವಾ ಚೆಕ್ ಮಾಡುವುದು ಹೇಗೆ? ಇದನ್ನು ತಿಳಿದುಕೊಳ್ಳುವ ಕ್ರಿಯೆಯನ್ನು ನೋಡುವುದಾದರೆ,
1) ಮೊದಲು ನೀವು ಸರ್ಕಾರದ ಆಧಾರ್ ಕಾರ್ಡ್ ವೆಬ್ ಸೈಟಿಗೆ ಭೇಟಿ ನೀಡಬೇಕು.
2) ಅಲ್ಲಿ ಮೈ ಆಧಾರ್ (my aadhar) ಎಂಬುದಾಗಿ ಇರುತ್ತದೆ. ಅದರಲ್ಲಿ ಚೆಕ್ ಆಧಾರ್ ಬ್ಯಾಂಕ್ ಲಿಂಕಿಂಗ್ ಸ್ಟೇಟಸ್ (check Aadhar Bank Linking status) ಎಂಬ ಆಯ್ಕೆ ಮೇಲೆ ಕ್ಲಿಕ್ (Click) ಮಾಡಿಕೊಳ್ಳಬೇಕು.
3) ಅಲ್ಲಿ ನೀವು ನಿಮ್ಮ 12 ಸಂಖ್ಯೆಯ ಆಧಾರ್ ಕಾರ್ಡ್ ನಂಬರನ್ನು ನಮೂದಿಸಬೇಕು. ನಂತರ ಓಟಿಪಿ ಕಳುಹಿಸಿ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು.
4) ನಿಮ್ಮ ಆಧಾರ್ ಕಾರ್ಡಿಗೆ ಲಿಂಕ್ ಇರುವ ಮೊಬೈಲ್ ನಂಬರ್ ಗೆ ಒಂದು ಓಟಿಪಿ ಸಂಖ್ಯೆಯನ್ನು ಕಳುಹಿಸಲಾಗುತ್ತದೆ. ನಿಮಗೆ ಬಂದ ಒಟಿಪಿಯನ್ನು ಸರಿಯಾದ ಜಾಗದಲ್ಲಿ ನಮೂದಿಸಿ ಮುಂದುವರೆದಾಗ ನಿಮ್ಮ ಬ್ಯಾಂಕ್ ಸ್ಟೇಟಸ್ ಅನ್ನು ತೋರಿಸುತ್ತದೆ.
5) ಅದರಲ್ಲಿ ನಿಮ್ಮ 12 ಸಂಖ್ಯೆಯ ಆಧಾರ್ ಕಾರ್ಡ್ ನಂಬರ್ ಮತ್ತು ನಿಮ್ಮ ಆಧಾರ್ ಕಾರ್ಡಿಗೆ ಯಾವ ಬ್ಯಾಂಕ್ ಖಾತೆ ಲಿಂಕ್ ಆಗಿದೆ ಮತ್ತು ಅದು ಚಾಲ್ತಿಯಲ್ಲಿ ಇದೆಯೋ ಇಲ್ಲವೋ ಇವೆಲ್ಲದರ ಮಾಹಿತಿಯನ್ನು ನೀಡಲಾಗುತ್ತದೆ.
ಇನ್ನು ಮುಂದೆ ಸರ್ಕಾರದ ಯಾವುದೇ ಸವಲತ್ತು ಅಥವಾ ಸಹಾಯಧನವನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಾಗಿ ನೀಡಬೇಕು.
ರೈತರು ಈ ಬಹು ಮುಖ್ಯ ಮಾಹಿತಿಯ ಉಪಯೋಗವನ್ನು ಪಡೆದುಕೊಳ್ಳಬೇಕು.
ಹಾಗೂ ಇಂತಹ ಅನೇಕ ರೀತಿಯ ಮಾಹಿತಿಗಳನ್ನು ಪಡೆದುಕೊಳ್ಳಲು ನಮ್ಮ ಸಂಪರ್ಕದಲ್ಲಿರಿ.