ನಮಸ್ಕಾರ ಪ್ರೀಯ ರೈತ ಭಾಂದವರೇ, ರೈತರು ತಮ್ಮ ದಿನನಿತ್ಯ ಜೀವನದಲ್ಲಿ ತಿಳಿದುಕೊಳ್ಳಲೇಬೇಕಾದ ಮುಖ್ಯ ವಿಷಯಗಳಲ್ಲಿ ಜಮೀನಿನ ಪೊಡಿ ಅಥವಾ ಪಹಣಿಯ ಬಗೆಗಿನ ಮಾಹಿತಿಯು ಸಹ ಒಂದು. ರೈತರು ತಮ್ಮ ಜಮೀನಿನ ಜಂಟಿ ಮಾಲೀಕರಗಿದ್ದಾರೆ ಅದನ್ನು ತಿದ್ದುಪಡಿಸಿ ಸ್ವಂತ ಅಥವಾ ಏಕ ಮಾಲೀಕತ್ವವಾಗಿ ಬದಲಾಯಿಸಲು ಅವಕಾಶವಿದೆ.

ಸಾಮಾನ್ಯವಾಗಿ ರೈತರು ತಮ್ಮ ಜಮೀನನ್ನು ಅಸಮವಾಗಿ ಹಂಚಿಕೊಂಡಿರುತ್ತಾರೆ. ಅವರ ಅನುಸಾರಕ್ಕೆ ತಕ್ಕಂತೆ ತಮ್ಮ ಜಮೀನನ್ನು ಇಟ್ಟುಕೊಂಡಿರುತ್ತಾರೆ. ಅವರು ಹೊಲದ ಅಳತೆ ಮಾಡಿರುವುದಿಲ್ಲ ಮತ್ತು ಪ್ರತಿ ರೈತರ ವಿಸ್ತೀರ್ಣಕ್ಕೆ

ತಕ್ಕಂತೆ ಹೊಲದ ನಕ್ಷೆ ಸಹ ಇರುವುದಿಲ್ಲ.

ಇದು ರೈತರು ತಮ್ಮ ಜಮೀನನ್ನು ಇನ್ನೊಬ್ಬರಿಗೆ ಮಾರುವ ಸಮಯದಲ್ಲಿ ಅಥವಾ ದಾನವಾಗಿ ನೀಡುವ ಸಮಯದಲ್ಲಿ ಅನೇಕ ಗೊಂದಲಗಳನ್ನು ಉಂಟು ಮಾಡಿ ಜಗಳಕ್ಕೆ ಮುಖ್ಯ ಕಾರಣವಾಗುತ್ತದೆ.

ತಮ್ಮ ಪಹಣಿಯನ್ನು ಸರಿಪಡಿಸಿಕೊಂಡು ಅದರಿಂದ ಏಕಮಾಲೀಕತ್ವದ ಪಹಣಿ ಪಡೆದುಕೊಳ್ಳುವುದಕ್ಕೆ ತತ್ಕಾಲ್ ಪೋಡಿ ಎಂದು ಕರೆಯುತ್ತಾರೆ. ಅಂದರೆ ನೀವು ಒಕ್ಕಲುತನ ಅಥವಾ ವ್ಯವಸಾಯ ಮಾಡುತ್ತಿರುವ ಜಮೀನಿನ ಭಾಗಗಳನ್ನು ಅಳತೆ ಮಾಡಿ, ಆ ಹೊಲದ ಸಂಪೂರ್ಣ ನಕ್ಷೆಯನ್ನು ರಚಿಸಿ ಅದರಿಂದ ಹೊಸ ಏಕಮಾಲೀಕತ್ವದ ಪಹಣಿಯನ್ನು ಪಡೆದುಕೊಳ್ಳಲಾಗುತ್ತದೆ.

ಇಂತಹ ಜಂಟಿ ಪಹಣಿಯು ಸರ್ವೇ ನಂಬರ್ನಲ್ಲಿ ಹಿಸ್ಸಾ ಸಂಖ್ಯೆಯನ್ನು ಹೊಂದಿರುತ್ತವೆ. ಎಲ್ಲಾ ಹಿಸ್ಸಾ ನಂಬರಗಳಿಗೂ ಒಂದೇ ಪಹಣಿ ಇರುತ್ತದೆ. ರೈತರು ತಮ್ಮ ಹೆಸರಿನಲ್ಲಿ ಪ್ರತ್ಯೇಕವಾದ ಪಹಣಿ ಬೇಕೆಂದರೆ ಅವರು ತತ್ಕಾಲ್ ಪೋಡಿಯ ಮುಖಾಂತರ ಪ್ರತ್ಯೇಕವಾದ ಪಹಣಿ ಮಾಡಿಕೊಳ್ಳುವುದಕ್ಕೆ ಅವಕಾಶವಿರುತ್ತದೆ.

ಈ ತತ್ಕಾಲ್ ಫೋಡಿಯಲ್ಲಿ ಅರ್ಜಿ ಸಲ್ಲಿಸಲು ದಾಖಲಾತಿಗಳು ಮತ್ತು ಮುಖ್ಯವಾದ ಕಾಗದ ಪತ್ರಗಳ ಅವಶ್ಯಕತೆ ಇರುತ್ತದೆ. ಈಗ ನಾವು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳ ಬಗ್ಗೆ ತಿಳಿದುಕೊಳ್ಳೋಣ:

• ಸರ್ವೆ ಇಲಾಖೆಯವರು ತಾವು ಜಮೀನಿನ ಸರ್ವೆ ಮಾಡಿದ ನಂತರ ತಾವು ನೀಡುವ,

* 11 ಇ ನಕ್ಷೆ

*ಅಧಾರ್ ಕಾರ್ಡ

*ಸಾಕ್ಷಿದಾರರ ಹೆಸರು

*ವಂಶಾವಳಿ ಪ್ರಮಾಣ ಪತ್ರಗಳು ಬೇಕಾಗುತ್ತವೆ.

ಅರ್ಜಿದಾರರು ಅಥವಾ ರೈತರು ತಮ್ಮ ಜಂಟಿ ಪಹಣಿಯ ಖಾತೆಯಿಂದ ಉಳಿದ ಎಲ್ಲಾ ಅರ್ಜಿದಾರರ ಹೆಸರನ್ನು ತೆಗೆಯಬೇಕಾದರೆ ಅಥವಾ ರದ್ದುಗೊಳಿಸಬೇಕಾದರೆ ಪಹಣಿಯಲ್ಲಿರುವ ಎಲ್ಲ ಅರ್ಜಿದಾರರ ಕೊಡುವ ಒಪ್ಪಿಗೆ ಪತ್ರವು ಕಡ್ಡಾಯವಾಗಿರುತ್ತದೆ. ಜಂಟಿ ಮಾಲೀಕತ್ವ ಜಮೀನಿನ ಪ್ರತ್ಯೇಕವಾದ ಹಕ್ಕು ಪತ್ರವನ್ನು ಪಡೆಯಲು ಹೊಲದ ಪಹಣಿ ಮತ್ತು ಫಾರ್ಮ್ ನಂ.10 ಕಡ್ಡಾಯವಾಗಿ ಬೇಕಾಗುತ್ತದೆ.

ನಾವು ಈಗ ತತ್ಕಾಲ್ ಪೋಡಿಗೆ ಅರ್ಜಿ ಸಲ್ಲಿಸುವ ವಿಧಾನ ಮತ್ತು ಪ್ರಕ್ರಿಯೆ ಬಗ್ಗೆ ತಿಳಿದುಕೊಳ್ಳೋಣ:

• ಅರ್ಜಿದಾರರು ತಮ್ಮ ಆಧಾರ್ ಕಾರ್ಡ ಮತ್ತು ಅವರು ತಿದ್ದುಪಡಿಯನ್ನು ಮಾಡಬೇಕಾದ ಜಂಟಿ ಪಹಣಿಯೊಂದಿಗೆ ಸಮೀಪದ ಅಥವಾ ಸಂಬಂಧಪಟ್ಟ ಹೋಬಳಿಯಲ್ಲಿ ಬರುವ ನಾಡಕಚೇರಿಗೆ ಹೋಗಿ ಅರ್ಜಿಯನ್ನು ಕೊಟ್ಟು ಅದರ ರಶೀದಿಯನ್ನು ಪಡೆಯಬೇಕು.

• ಭೂಮಾಪಕರು ಗೊತ್ತುಪಡಿಸಿದ ದಿನಾಂಕದಂದು ಅಂದರೆ ನಿಗದಿಪಡಿಸಿದ ದಿನದಂದು ನಿಮ್ಮ ಜಮೀನಿಗೆ ಭೂಮಾಪಕರು ಬಂದು ನಿಮ್ಮ ಜಮೀನನ್ನು ಪಹಣಿಯಲ್ಲಿ ನಮೂದಿಸಿರುವ ವಿಸ್ತೀರ್ಣವನ್ನು ಮೀರದಂತೆ ಅಳತೆಯನ್ನು ಮಾಡಿ, ಹೊಲದ ನಕ್ಷೆಯನ್ನು ರಚಿಸಿ, ಆ ಜಮೀನಿಗೆ ಸಂಬಂಧಪಟ್ಟ ಕಡತಗಳನ್ನು ಮತ್ತು ಇನ್ನಿತರೆ ಪತ್ರಗಳ್ಳನ್ನು ಮುಂದಿನ ಕ್ರಮಕ್ಕಾಗಿ ಭೂಮಿ ಕೇಂದ್ರಕ್ಕೆ ಕಳಿಸಿಕೊಡಲಾಗುತ್ತದೆ.

• ಭೂಮಿ ಕೇಂದ್ರದಲ್ಲಿ ಅರ್ಜಿದಾರರ ಕಡತಗಳನ್ನು ರೆವನ್ಯು ಇನ್ಸ್ಪೆಕ್ಟರ್ ಅಥವಾ ಕಂದಾಯ ಇಲಾಖೆಯವರು ಅವನ್ನು ಪರಿಶೀಲಿಸಿದ ನಂತರ ಅವನ್ನು ಅನುಮೋದಿಸುತ್ತಾರೆ.

• ತದನಂತರ ಪೋಡಿ ಆಗಿರುವ ಜಮೀನಿಗೆ ಟಿಪ್ಪಣಿಯನ್ನು ತಯಾರು ಮಾಡಿಕೊಂಡು ಹೊಸ ಪಹಣಿಯ ರೆಕಾರ್ಡ್ಸಗಳನ್ನು ತಯಾರಿಸುತ್ತಾರೆ.

• ಈ ರೀತಿ ರೈತರ ಜಮೀನುಗಳಿಗೆ ಹೊಸ ರೆಕಾರ್ಡ್ಸಗಳು ತಯಾರಾಗುತ್ತವೆ.

• ತದನಂತರ ಜಮೀನನ್ನು ರೈತರ ಪಹಣಿಯಲ್ಲಿರುವ ವಿಸ್ತೀರ್ಣಕ್ಕೆ ತಕ್ಕಂತೆ ಅನುಗುಣವಾಗಿ ಜಮೀನನ್ನು ಮಾಲೀಕರ ಮಧ್ಯೆ ಹಂಚಿಕೆಯನ್ನು ಮಾಡಲಾಗುತ್ತದೆ.

• ಹಂಚಿಕೆಯಾದ ಜಮೀನಿಗೆ ಹೊಸ ಹಿಸ್ಸಾ ನಂಬರ್ ಮತ್ತು ಹೊಸ ನಕ್ಷೆ ಸಹಿತ ಏಕಮಾಲೀಕತ್ವದ ಪಹಣಿ ತಯಾರಾಗುತ್ತದೆ.

• ಈ ರೀತಿಯಾಗಿ ತಾತ್ಕಾಲ ಫೋಡಿ ಮುಖಾಂತರ ಜಂಟಿ ಭೂಮಾಲೀಕತ್ವ ಪಹಣಿ ಇದ್ದರೆ ಅದನ್ನು ಏಕ ಮಾಲೀಕತ್ವದ ಪಹಣಿಯನ್ನಾಗಿ ಮಾರ್ಪಡಿಸುವುದಕ್ಕೆ ಅವಕಾಶವಿದೆ ಎಂದು ಹೇಳಬಹುದು.

ಅರ್ಜಿದಾರರು ಅಥವಾ ರೈತರು ತಮ್ಮ ಜಂಟಿ ಪಹಣಿಯ ಖಾತೆಯಿಂದ ಉಳಿದ ಎಲ್ಲಾ ಅರ್ಜಿದಾರರ ಹೆಸರನ್ನು ತೆಗೆಯಬೇಕಾದರೆ ಅಥವಾ ರದ್ದುಗೊಳಿಸಬೇಕಾದರೆ ಪಹಣಿಯಲ್ಲಿರುವ ಎಲ್ಲ ಅರ್ಜಿದಾರರ ಕೊಡುವ ಒಪ್ಪಿಗೆ ಪತ್ರವು ಕಡ್ಡಾಯವಾಗಿರುತ್ತದೆ.

ನಿಮ್ಮ ಹೊಲದ ಸ್ವಂತ ಮಾಲೀಕರಗಿದ್ದಾರೆ ಅಥವಾ ಏಕಮಾಲೀಕತ್ವದ ಪಹಣಿಯನ್ನು ಹೊಂದಿದ್ದರೆ ಬ್ಯಾಂಕಿನಿಂದ ಆಗಲಿ ಅಥವಾ ಯಾವುದೇ ಸಂಘ ಸಂಸ್ಥೆಯಿಂದ ಆಗಲಿ ಸಾಲ ಸೌಲಭ್ಯವನ್ನು ಸುಲಭವಾಗಿ ಪಡೆದುಕೊಳ್ಳುವುದಕ್ಕೆ ಅವಕಾಶವಿರುತ್ತದೆ.
• ಭವಿಷ್ಯದಲ್ಲಿ ಅಂದರೆ ಜಮೀನಿಗೆ ಪ್ರತ್ಯೇಕವಾದ ಪೋಡಿ ಮಾಡಿಸಿದ ನಂತರ, ಅದರಲ್ಲಿ ಪ್ರತ್ಯೇಕವಾದ ಹಿಸ್ಸಾ ನಂಬರ್ ಸಿಗುವುದರಿಂದ ನಿಮ್ಮ ಪಾಲಿಗೆ ಬಂದಿರುವ ಜಮೀನನ್ನು ಸುಲಭವಾಗಿ ಇನ್ನೊಬ್ಬರಿಗೆ ಅಥವಾ ರೈತರಿಗೆ ಮಾರಬಹುದು.
• ರೈತರು ತಮ್ಮ ಜಮೀನನ್ನು ವಿಭಾಗ ಮಾಡಿಕೊಳ್ಳುವ ಸಮಯದಲ್ಲಿ ತುಂಬಾ ಸಹಾಯಕವಾಗುತ್ತದೆ.
• ಅಂತಹ ಜಮೀನಿಗೆ ಖಚಿತವಾದ ತಮ್ಮದೇ ಆದ ಸ್ವಂತ ಬೌಂಡರಿ ಇರುವುದರಿಂದ ಯಾವುದೇ ತೊಂದರೆ ಇಲ್ಲದೆ ರೈತರು ತಮ್ಮ ಹೊಲದ ಭೂ ಅಭಿವೃದ್ಧಿಯನ್ನು ಅಂದರೆ ನಿಮ್ಮ ಜಮೀನಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಕ್ಕೆ ಅವಕಾಶವಿರುತ್ತದೆ.

ಇದರಲ್ಲಿ ತತ್ಕಾಲ್ ಪೋಡಿಯ ಉದ್ದೇಶಗಳು ಮತ್ತು ಮುಖ್ಯವಾಗಿ ಅದರ ನಿಯಮಗಳು ಮತ್ತು ಇದರ ಉಪಯೋಗಗಳು ಜನಸಾಮಾನ್ಯರಿಗೆ ಅಥವಾ ಅರ್ಜಿದಾರರಿಗೆ ಗೊತ್ತಿರಲೇಬೇಕಾದ ಪ್ರಮುಖ ಅಂಶಗಳಾಗಿವೆ. ಈಗ ನಾವು ಅವುಗಳ ಬಗ್ಗೆ ತಿಳಿದುಕೊಳ್ಳೋಣ:

• ಈ ತತ್ಕಾಲ್ ಪೋಡಿಯಲ್ಲಿ ಯಾವುದೇ ಕಾರಣಕ್ಕೂ ಅರ್ಜಿದಾರರ ಹೆಸರು ತಿದ್ದುಪಡಿ ಮಾಡುವುದಕ್ಕೆ ಅಂದರೆ ಪಹಣಿಯಲ್ಲಿರುವ ಮಾಲೀಕರ ಹೆಸರನ್ನು ತಿದ್ದುಪಡಿ ಮಾಡುವುದಕ್ಕೆ ಅಥವಾ ಸೇರ್ಪಡೆಯಾಗಲಿ ಮಾಡುವುದಕ್ಕೆ ಯಾವುದೇ ಅವಕಾಶವಿರುವುದಿಲ್ಲ ಎಂದು ಹೇಳಲಾಗಿದೆ.

• ಈ ಹೊಸ ಪಹಣಿಯಲ್ಲಿ ಕೇವಲ ನಿಮ್ಮ ಪಾಲಿಗೆ ಬಂದಿರುವ ಜಮೀನಿನ ಭಾಗಕ್ಕೆ ನಕ್ಷೆ ಮಾಡಿ, ಹೊಸ ಹಿಸ್ಸಾ ನಂಬರ್ ಕೊಡುವುದರಿಂದ ಇಲ್ಲಿ ರಿಜಿಸ್ಟರ್ ಮಾಡಿಸುವ ಅವಶ್ಯಕತೆ ಇರುವುದಿಲ್ಲ.

• ತತ್ಕಾಲ್ ಪೊಡಿಯ ಮೂಲಕ ನಿಮ್ಮ ಭಾಗಕ್ಕೆ ಬಂದಿರುವ ಹೊಸ ಪಹಣಿಯನ್ನು ಪಡೆಯಬೇಕಾದರೆ ಅಂದರೆ ನಿಮ್ಮ ಜಮೀನಿಗೆ ಹೊಸ ಪಹಣಿಯನ್ನು ಪಡೆಯಬೇಕೆಂದರೆ ಕಲಂ ನಂಬರ್ 9 ರಲ್ಲಿ ಬರುವ ಉಳಿದ ಎಲ್ಲ ಜಂಟಿ ರೈತರ ಒಪ್ಪಿಗೆ ಸಹಿ ಹಾಕಗಬೇಕಾಗಿರುವುದು ಅಗತ್ಯವಾಗಿರುತ್ತದೆ.

• ಉಳಿದ ಎಲ್ಲಾ ಜಂಟಿ ರೈತರು ಒಪ್ಪಿ ಒಂದೇ ಅರ್ಜಿಯಲ್ಲಿ ಸಹಿ ಮಾಡಿದರೆ ಅವರ ಪಾಲಿಗೆ ಬಂದಿರುವ ಭಾಗಕ್ಕೂ, ಹೊಸ ನಕ್ಷೆಯನ್ನು ರಚಿಸಿ, ಹೊಸ ಏಕಮಾಲೀಕತ್ವದ ಪಹಣಿಯನ್ನು ಪಡೆಯಬಹುದಾಗಿದೆ.

• ಈ ತತ್ಕಾಲ್ ಪೋಡಿಯಲ್ಲಿ ಪಹಣಿಯ ಬದಲಾವಣೆಯ ಅರ್ಜಿ ಶುಲ್ಕವಾಗಿ ಪ್ರತಿ ಎಕರೆಗೆ ಕನಿಷ್ಠ 1,200ರೂ.ಗಳನ್ನು ವಿಧಿಸುತ್ತಾರೆ.

• ಇನ್ನೂ ಹೆಚ್ಚಾಗುತ್ತಾ ಹೋದಂತೆ ಗ್ರಾಮೀಣ ಪ್ರದೇಶದಲ್ಲಿ ಪೋಡಿಯ ಅರ್ಜಿ ಶುಲ್ಕವು 4,000ರೂ.ವರೆಗೂ ವಿಧಿಸಬಹುದು.

• ಅದೇ ರೀತಿಯಾಗಿ ನಗರ ಪ್ರದೇಶಕ್ಕೆ ಅನ್ವಯಿಸುವ ಜಮೀನುಗಳಿಗೆ ಅರ್ಜಿ ಶುಲ್ಕವಾಗಿ ಕನಿಷ್ಠ 2,000ರೂ.ಗಳಿಂದ ಗರಿಷ್ಠ 5,000ರೂ.ವರೆಗೂ ಇರುತ್ತದೆ.

• ಇದರಲ್ಲಿ ಮುಖ್ಯವಾಗಿ ತಿಳಿದುಕೊಳ್ಳಲೇಬೇಕಾದ ವಿಷಯವೇನೆಂದರೆ ತತ್ಕಾಲ್ ಪೋಡಿಯಲ್ಲಿ ನಿಮ್ಮ ಜಮೀನಿನ ಬದಲಾವಣೆ ಆಗುವುದಿಲ್ಲ. ಅಂದರೆ ಆ ಜಮೀನಿನ ಹಕ್ಕು ಇನ್ನೊಬ್ಬರಿಗೆ ವರ್ಗಾವಣೆ ಮಾಡಲು ಸಾಧ್ಯವಿಲ್ಲ.

• ನಿಮ್ಮ ಜಮೀನಿನ ಅನುಭವದ ಆಧಾರದ ಮೇಲೆ, ಪಹಣಿಯಲ್ಲಿರುವ ವಿಸ್ತೀರ್ಣದ ಆಧಾರದ ಮೇಲೆ ನಿಮ್ಮ ಜಮೀನಿಗೆ ಬೌಂಡರಿ ಹಾಕಿದಾಗ ಮಾತ್ರ ನಿಮ್ಮ ಹೆಸರಿನಲ್ಲಿ ಪಹಣಿಗಳು ಪ್ರತ್ಯೇಕವಾಗುತ್ತದೆ ಎಂದು ಹೇಳಬಹುದು.

ನಿಮ್ಮ ಹೊಲದ ಸ್ವಂತ ಮಾಲೀಕರಗಿದ್ದಾರೆ ಅಥವಾ ಏಕಮಾಲೀಕತ್ವದ ಪಹಣಿಯನ್ನು ಹೊಂದಿದ್ದರೆ ಬ್ಯಾಂಕಿನಿಂದ ಆಗಲಿ ಅಥವಾ ಯಾವುದೇ ಸಂಘ ಸಂಸ್ಥೆಯಿಂದ ಆಗಲಿ ಸಾಲ ಸೌಲಭ್ಯವನ್ನು ಸುಲಭವಾಗಿ ಪಡೆದುಕೊಳ್ಳುವುದಕ್ಕೆ ಅವಕಾಶವಿರುತ್ತದೆ.

• ಭವಿಷ್ಯದಲ್ಲಿ ಅಂದರೆ ಜಮೀನಿಗೆ ಪ್ರತ್ಯೇಕವಾದ ಪೋಡಿ ಮಾಡಿಸಿದ ನಂತರ, ಅದರಲ್ಲಿ ಪ್ರತ್ಯೇಕವಾದ ಹಿಸ್ಸಾ ನಂಬರ್ ಸಿಗುವುದರಿಂದ ನಿಮ್ಮ ಪಾಲಿಗೆ ಬಂದಿರುವ ಜಮೀನನ್ನು ಸುಲಭವಾಗಿ ಇನ್ನೊಬ್ಬರಿಗೆ ಅಥವಾ ರೈತರಿಗೆ ಮಾರಬಹುದು.

• ರೈತರು ತಮ್ಮ ಜಮೀನನ್ನು ವಿಭಾಗ ಮಾಡಿಕೊಳ್ಳುವ ಸಮಯದಲ್ಲಿ ತುಂಬಾ ಸಹಾಯಕವಾಗುತ್ತದೆ.

• ಅಂತಹ ಜಮೀನಿಗೆ ಖಚಿತವಾದ ತಮ್ಮದೇ ಆದ ಸ್ವಂತ ಬೌಂಡರಿ ಇರುವುದರಿಂದ ಯಾವುದೇ ತೊಂದರೆ ಇಲ್ಲದೆ ರೈತರು ತಮ್ಮ ಹೊಲದ ಭೂ ಅಭಿವೃದ್ಧಿಯನ್ನು ಅಂದರೆ ನಿಮ್ಮ ಜಮೀನಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಕ್ಕೆ ಅವಕಾಶವಿರುತ್ತದೆ

ಇದರಲ್ಲಿ, ನಾವು ಏಕಮಾಲೀಕತ್ವದ ಪಹಣಿ ಹೊಂದಿದ್ದರೆ ಅದರಿಂದ ಆಗುವ ಉಪಯೋಗಗಳು ಏನೇನು? ಎಂಬುದರ ಬಗ್ಗೆ ನೋಡುವುದಾದರೆ:

• ನೀವು ನಿಮ್ಮ ಹೊಲದ ಸ್ವಂತ ಮಾಲೀಕರಗಿದ್ದಾರೆ ಅಥವಾ ಏಕಮಾಲೀಕತ್ವದ ಪಹಣಿಯನ್ನು ಹೊಂದಿದ್ದರೆ ಬ್ಯಾಂಕಿನಿಂದ ಆಗಲಿ ಅಥವಾ ಯಾವುದೇ ಸಂಘ ಸಂಸ್ಥೆಯಿಂದ ಆಗಲಿ ಸಾಲ ಸೌಲಭ್ಯವನ್ನು ಸುಲಭವಾಗಿ ಪಡೆದುಕೊಳ್ಳುವುದಕ್ಕೆ ಅವಕಾಶವಿರುತ್ತದೆ.

• ಭವಿಷ್ಯದಲ್ಲಿ ಅಂದರೆ ಜಮೀನಿಗೆ ಪ್ರತ್ಯೇಕವಾದ ಪೋಡಿ ಮಾಡಿಸಿದ ನಂತರ, ಅದರಲ್ಲಿ ಪ್ರತ್ಯೇಕವಾದ ಹಿಸ್ಸಾ ನಂಬರ್ ಸಿಗುವುದರಿಂದ ನಿಮ್ಮ ಪಾಲಿಗೆ ಬಂದಿರುವ ಜಮೀನನ್ನು ಸುಲಭವಾಗಿ ಇನ್ನೊಬ್ಬರಿಗೆ ಅಥವಾ ರೈತರಿಗೆ ಮಾರಬಹುದು.

• ರೈತರು ತಮ್ಮ ಜಮೀನನ್ನು ವಿಭಾಗ ಮಾಡಿಕೊಳ್ಳುವ ಸಮಯದಲ್ಲಿ ತುಂಬಾ ಸಹಾಯಕವಾಗುತ್ತದೆ.

• ಅಂತಹ ಜಮೀನಿಗೆ ಖಚಿತವಾದ ತಮ್ಮದೇ ಆದ ಸ್ವಂತ ಬೌಂಡರಿ ಇರುವುದರಿಂದ ಯಾವುದೇ ತೊಂದರೆ ಇಲ್ಲದೆ ರೈತರು ತಮ್ಮ ಹೊಲದ ಭೂ ಅಭಿವೃದ್ಧಿಯನ್ನು ಅಂದರೆ ನಿಮ್ಮ ಜಮೀನಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಕ್ಕೆ ಅವಕಾಶವಿರುತ್ತದೆ.

ರೈತರು ತಮ್ಮ ಜಮೀನನ್ನು ಅಸಮವಾಗಿ ಹಂಚಿಕೊಂಡಿರುತ್ತಾರೆ. ಅವರ ಅನುಸಾರಕ್ಕೆ ತಕ್ಕಂತೆ ತಮ್ಮ ಜಮೀನನ್ನು ಇಟ್ಟುಕೊಂಡಿರುತ್ತಾರೆ. ಅವರು ಹೊಲದ ಅಳತೆ ಮಾಡಿರುವುದಿಲ್ಲ ಮತ್ತು ಪ್ರತಿ ರೈತರ ವಿಸ್ತೀರ್ಣಕ್ಕೆ

ತಕ್ಕಂತೆ ಹೊಲದ ನಕ್ಷೆ ಸಹ ಇರುವುದಿಲ್ಲ.

ಇದು ರೈತರು ತಮ್ಮ ಜಮೀನನ್ನು ಇನ್ನೊಬ್ಬರಿಗೆ ಮಾರುವ ಸಮಯದಲ್ಲಿ ಅಥವಾ ದಾನವಾಗಿ ನೀಡುವ ಸಮಯದಲ್ಲಿ ಅನೇಕ ಗೊಂದಲಗಳನ್ನು ಉಂಟು ಮಾಡಿ ಜಗಳಕ್ಕೆ ಮುಖ್ಯ ಕಾರಣವಾಗುತ್ತದೆ.

ಈಗಿನ ಕಾಲದಲ್ಲಿ ಈ ಜಂಟಿ ಮಾಲೀಕತ್ವ ಹೊಂದಿರುವ ಜಮೀನುಗಳು ಸಾಮಾನ್ಯವಾಗಿ ಗೊಂದಲಗಳಿಗೆ ಕಾರಣವಾಗುತ್ತವೆ. ಇವು ತಮ್ಮ ಕುಟುಂಬದಿಂದ ಬೇರೆ ಬೇರೆಯಾದ ಅಣ್ಣ ತಮ್ಮಂದಿರ ಮತ್ತು ಬಂದು ಬಳಗದವರ ನಡುವೆ ಜಗಳಕ್ಕೆ ಕಾರಣವಾಗುತ್ತವೆ. ಆದ್ದರಿಂದ ರೈತರು ಹಾಗೂ ತಮ್ಮ ಹೊಲದ ಜಂಟಿ ಮಾಲೀಕತ್ವ ಹೊಂದಿರುವ ಜನಸಾಮಾನ್ಯರು ಆದಷ್ಟು ಬೇಗ ತಮ್ಮ ಹೊಲದ ಜಂಟಿ ಮಾಲೀಕತ್ವವನ್ನು ಏಕಮಾಲೀಕತ್ವವಾಗಿ ಬದಲಾಯಿಸಿಕೊಂಡರೆ ರೈತರಿಗೆ ಅನುಕೂಲವಾಗುತ್ತದೆ.

ರೈತರು ಇದರ ಸದುಪಯೋಗವನ್ನು ಪಡೆದುಕೊಂಡು ತಮ್ಮ ಕೆಲಸಗಳನ್ನು ಇನ್ನೂ ಸುಲಭವಾಗಿ ಮತ್ತು ಸರಳ ರೀತಿಯಲ್ಲಿ ಮುಗಿಸಿಕೊಳ್ಳಲು ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇದರಿಂದ ರೈತರು ಅಂತಹ ಹೊಸ ಹೊಸ ಯೋಜನೆಗಳ ಉಪಯೋಗವನ್ನು ಪಡೆದುಕೊಂಡು, ರೈತರು ಅದರಿಂದ ಅಭಿವೃದ್ಧಿಯನ್ನು ಹೊಂದಲು ಸರ್ಕಾರವು ಶ್ರಮಿಸುತ್ತಿದೆ.

ಇದರ ಸದುಪಯೋಗ ಪಡಿಸಿಕೊಂಡು ರೈತರು ಅಭಿವೃದ್ಧಿ ಹೊಂದಬೇಕು ಎನ್ನುವ ದೃಷ್ಟಿಯಿಂದ ಸರ್ಕಾರವು ಮಹತ್ವದ ಕಾರ್ಯ ಮಾಡುತ್ತಿದೆ. ಹಾಗೂ ರೈತರು ಸ್ವಾವಲಂಬಿ ಜೀವನ ನಡೆಸಲು ಇದು ಪ್ರಮುಖ ಪಾತ್ರ ವಹಿಸುತ್ತದೆ.

ಹಾಗೂ ಸುಸ್ಥಿರ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿ, ರೈತರು ಅಭಿವೃದ್ಧಿಯಲ್ಲಿ ಸಾಗಬೇಕು ಎಂಬ ಗುರಿಯನ್ನು ಇಟ್ಟುಕೊಂಡು ಕಾರ್ಯಗಳನ್ನು ಸರ್ಕಾರ ಮಾಡುತ್ತಿದೆ.

ರೈತರು ಅಥವಾ ನಾಗರಿಕರು ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ಈ ಕೆಳಕಂಡ ಲಿಂಕನ್ನು ತೆರೆಯಿರಿ. ನಿಮಗೆ ಮಾಹಿತಿ ದೊರೆಯುತ್ತದೆ..

https://youtu.be/a2Fc8ddesjg

ಪಹಣಿಯಲ್ಲಿರುವ ಜಂಟಿ ಖಾತೆಯಿಂದ ಒಬ್ಬರ ಹೆಸರು ಮಾಡಿಕೊಳ್ಳುವುದು.

ಹೆಚ್ಚಿನ ಮಾಹಿತಿಗಾಗಿ

ಕೃಷಿ ವಾಹಿನಿ 🌱🌾

ವೆಬ್ ಸೈಟನ ಸಂಪರ್ಕದಲ್ಲಿ ಇರಿ

Leave a Reply

Your email address will not be published. Required fields are marked *