ನಮಸ್ಕಾರ ಪ್ರಿಯ ರೈತ ಭಾಂದವರೇ, ಕೃಷಿ ಈಗಿನ ಕಾಲದಲ್ಲಿಯೂ ಸಹ ಭಾರತದ ಆರ್ಥಿಕತೆಯಲ್ಲಿ ಒಂದು ಪ್ರಮುಖ ಪಾತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ದೇಶವು ಕೃಷಿಯಿಂದ ಉದ್ಯಮದ ಕಡೆಗೆ ಸಾಗುತ್ತಿದ್ದರು ಸಹ ಭಾರತದಲ್ಲಿ ಕೃಷಿಯ ಮಹತ್ವವನ್ನು ಕಡೆಗಣಿಸುವಂತಿಲ್ಲ.
ಇವತ್ತಿನ ದಿನ ನಾವು ಇಂದು ನಿಮಗೆ ಅಥವಾ ರೈತರಿಗೆ ತಿಳಿಸಿಕೊಡುವ ವಿಷಯವೇನೆಂದರೆ ಕರ್ನಾಟಕ ರಾಜ್ಯ ಸರ್ಕಾರದ ಕೃಷಿ ಇಲಾಖೆ ಕಡೆಯಿಂದಲೂ ಸಹ ಅರ್ಹರಾದ ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ನೊಂದಣಿ ಮಾಡಿಕೊಂಡಂತಹ ರೈತರು ಕೂಡ ರಾಜ್ಯ ಸರ್ಕಾರದಿಂದ ಸಹಾಯಧನವನ್ನು ಪಡೆಯಬಹುದಾಗಿದೆ. ಕರ್ನಾಟಕ ರಾಜ್ಯ ಸರ್ಕಾರವು ಈ ಪ್ರಧಾನ ಮಂತ್ರಿ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ವರ್ಷಕ್ಕೆ ಎರಡು ಕಂತುಗಳಂತೆ ಒಟ್ಟು ಸಹಾಯಧನದ ಮೊತ್ತ ಸುಮಾರು ನಾಲ್ಕು ಸಾವಿರ ರೂಪಾಯಿಗಳನ್ನು ಫಲಾನುಭವಿ ರೈತರು ಈ ಯೋಜನೆಯ ಅಡಿಯಲ್ಲಿ ಪಡೆಯಬಹುದಾಗಿದೆ.
ಈ ವರ್ಷದ ಮೊದಲ ಕಂತಿನ ಹಣ ಅಂದರೆ ಮೊದಲ 2 ಸಾವಿರ ರೂಪಾಯಿಗಳ ಸಹಾಯಧನವನ್ನು ಈಗಾಗಲೇ ರೈತರ ಖಾತೆಗೆ ಜಮಾ ಮಾಡಲಾಗಿದೆ. ಈಗ ನಾವು ಇದರ ಬಗ್ಗೆ ಇರುವ ವಿವರವಾದ ಮಾಹಿತಿಯನ್ನು ಇಂದು ನಾವು ತಿಳಿದುಕೊಳ್ಳೋಣ ಹಾಗೂ ಅದೇ ರೀತಿಯಾಗಿ ಇದರ ಜೊತೆಗೆ ನಿಮ್ಮ ಈ ಒಂದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ನಮ್ಮ ರಾಜ್ಯ ಸರ್ಕಾರದಿಂದ ನೀಡುವ ಹಣದ ಸ್ಟೇಟಸ್ ಅನ್ನು ಚೆಕ್ ಮಾಡುವುದು ಹೇಗೆ?
ಮತ್ತು ಈ ಯೋಜನಲ್ಲಿ ಬರುವ ಸಹಾಯಧನಗಳ ಮೊತ್ತವು ರೈತರು ತಾವು ನೀಡಿದ ಬ್ಯಾಂಕ್ ಖಾತೆಗೆ ಜಮಾ ಆಗಿದಿಯೋ? ಇಲ್ಲವೋ
ಎಂಬುದನ್ನು ಯಾವ ರೀತಿ ಚೆಕ್ ಮಾಡಬೇಕು ಅಥವಾ ಪರಿಶೀಲನೆ ಮಾಡಬೇಕು ಎಂಬುದನ್ನು ಈಗ ತಿಳಿಯೋಣ.
» ಈಗ ನಾವು ರೈತರ ಖಾತೆಗೆ ಜಮಾ ಆದಂತಹ ಹಣವನ್ನು ಚೆಕ್ ಮಾಡುವುದು ಹೇಗೆ? ಎಂಬುದನ್ನು ತಿಳಿದುಕೊಳ್ಳೋಣ.
* ಮೊದಲು ನೀವು ನಿಮ್ಮ ಹತ್ತಿರ ಇರುವ ಸ್ಮಾರ್ಟ್ ಫೋನ್ ನಲ್ಲಿ ಅಥವಾ ಅಥವಾ ಕಂಪ್ಯೂಟರ್ನಲ್ಲಿ ‘ಕೆ ಕಿಸಾನ್’
(K kisan) ಎಂಬುದಾಗಿ ನಮೂದಿಸಬೇಕಾಗುತ್ತದೆ.
* ನೀವು ಅದರಲ್ಲಿ ‘ಕೆ ಕಿಸಾನ್’
(K kisan) ಎಂಬುದಾಗಿ ನಮೂದಿಸಿದ ನಂತರ ನಿಮಗೆ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿರುವ ಒಂದು ಲಿಂಕ್ ಕಾಣುತ್ತದೆ. ಅಲ್ಲಿ ಕಾಣುತ್ತಿರುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
* ನೀವು ಅಥವಾ ಅರ್ಜಿದಾರರು ಆ ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ಅಲ್ಲಿ ಒಂದು ಪೋರ್ಟಲ್(portal) ಅಥವಾ ಒಂದು ಮುಖಪುಟ ತೆರೆದುಕೊಳ್ಳುತ್ತದೆ.
* ತೆರೆದುಕೊಂಡ ಅಂತಹ ಮುಖಪುಟದಲ್ಲಿ ಅಥವಾ ಪೋರ್ಟಲ್ (portal) ನಲ್ಲಿ ರೈತರ ನೋಂದಣಿ ಅಥವಾ ಫಾರ್ಮರ್ ರೆಜಿಸ್ಟ್ರೇಷನ್ (Farmer registration) ಎಂಬುದಾಗಿ ನಮೂದಿಸಿರುತ್ತದೆ. ಈ ರೈತರ ನೊಂದಣಿ ಆಯ್ಕೆ ಮೇಲೆ ಕ್ಲಿಕ್ ಮಾಡಿದ ನಂತರ ಮುಂದುವರೆಯಬೇಕಾಗುತ್ತದೆ.
* ಅಲ್ಲಿ ನಿಮಗೆ ರೈತರ ನೋಂದಣಿ ಅಥವಾ ಫಾರ್ಮರ್ ರೆಜಿಸ್ಟ್ರೇಷನ್ (Farmer registration) ನ ವೆಬ್ ಸೈಟ್ ಓಪನ್ ಆಗುತ್ತದೆ. ಅಲ್ಲಿ ಕಾಣುತ್ತಿರುವ ಇನ್ನೊಂದು ಮುಖಪುಟ ಅಥವಾ ಪೋರ್ಟಲ್ (portal) ನಲ್ಲಿ ನೀವು ನಾಗರಿಕರ ಪ್ರವೇಶ ಅಥವಾ ಸಿಟಿಜನ್ ಲಾಗಿನ್ ಎಂದು ನಮೂದಿಸಿರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದ ನಂತರ ಮುಂದುವರೆಬೇಕಾಗುತ್ತದೆ.
* ಆ ಮುಖಪುಟದಲ್ಲಿ ಅಲ್ಲಿ ನೀವು ನಿಮ್ಮ ಮೊಬೈಲ್ ನಂಬರ್ ಮತ್ತು ನಿಮ್ಮ ಪಾಸ್ವರ್ಡ್ ಸಂಖ್ಯೆಯನ್ನು ನಮೂದಿಸಿ ಲಾಗಿನ್ ಆಗಬೇಕಾಗುತ್ತದೆ
* ಹಾಗೇನಾದರೂ ನೀವು ಅಲ್ಲಿ ಅಥವಾ ಈ ಪೋರ್ಟಲ್ ನಲ್ಲಿ ಅಕೌಂಟ್ ಅನ್ನು ಹೊಂದಿರದಿದ್ದರೆ ಅಂತಹ ರೈತರು ಅಥವಾ ಅಭ್ಯರ್ಥಿಗಳು ರಿಜಿಸ್ಟ್ರೇಷನ್ ಮಾಡಿಸಬೇಕಾಗುತ್ತದೆ. ರೈತರು ರಿಜಿಸ್ಟ್ರೇಷನ್ ಮಾಡಿಸಲು ಅಲ್ಲಿ ಕಾಣುವ ನಾಗರಿಕರ ನೋಂದಣಿ ಅಥವಾ ಸಿಟಿಜನ್ ರಿಜಿಸ್ಟ್ರೇಷನ್ (citizen registration) ಎಂಬುದರ ಮೂಲಕ ಸಹ ನೀವು ಈ ಪೋರ್ಟಲ್ ನಲ್ಲಿ ಅಕೌಂಟನ್ನು ಪಡೆಯಬಹುದು.
* ನಿಮಗೆ ಸಿಟಿಜನ್ ರೆಜಿಸ್ಟ್ರೇಷನ್ ಅಥವಾ ನಾಗರಿಕರ ನೋಂದಣಿ ಮಾಡಿಕೊಳ್ಳಲು ಆಧಾರ್ ಕಾರ್ಡನ್ನು ಅಥವಾ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ. ಇಲ್ಲದಿದ್ದರೆ ನೀವು ಅಲ್ಲಿ ರೆಜಿಸ್ಟ್ರೇಷನ್ ಮಾಡಿಸಲು ಬರುವುದಿಲ್ಲ. ( ಕಡ್ಡಾಯವಾಗಿ ಮೊಬೈಲ್ ಸಂಖ್ಯೆ ರಿಜಿಸ್ಟರ್ ಆದಂತಹ ಆಧಾರ್ ಕಾರ್ಡ್ ಇರಬೇಕು.
* ನೀವು ಅಲ್ಲಿ ಅಂದರೆ ಈ ಪೋರ್ಟಲ್ ನಲ್ಲಿ ರಿಜಿಸ್ಟ್ರೇಷನ್ ಮಾಡಿದ ನಂತರ ಅದರ ಮೊಬೈಲ್ ನಂಬರ್ ಮತ್ತು ಪಾಸ್ವರ್ಡ್ ಸಂಖ್ಯೆಯನ್ನು ನಮೂದಿಸಿ ಈ ಒಂದು ಫ್ರೂಟ್ಸ್ ಐಡಿ (FRUITS I D) ವೆಬ್ ಸೈಟ್ ಗೆ ಲಾಗಿನ್ ಆಗಬಹುದು.
* ನೀವು ಅದರಲ್ಲಿ ಅಂದರೆ ಈ ಪೋರ್ಟಲ್ ನಲ್ಲಿ ಲಾಗಿನ್ ಆದ ನಂತರ ನಿಮಗೆ ಇನ್ನೊಂದು ಮುಖಪುಟ ತೆಗೆದುಕೊಳ್ಳುತ್ತದೆ. ಅದರಲ್ಲಿ ನಿಮಗೆ ಅನೇಕ ರೀತಿಯ ಆಯ್ಕೆಗಳನ್ನು ನೀಡಲಾಗುತ್ತದೆ.
* ಆ ಮುಖಪುಟದಲ್ಲಿ ಮೇಲೆ ಕಾಣುವ ಸರ್ಚ್(search) ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಪೇಮೆಂಟ್ ಡೀಟೇಲ್ಸ್ (payment details) ಎಂಬುದನ್ನು ಸರ್ಚ್ ಮಾಡಬೇಕಾಗುತ್ತದೆ.
* ಇದಾದ ನಂತರ ಅಲ್ಲಿ ಕಾಣುವ ಪೇಮೆಂಟ್ ಡೀಟೇಲ್ಸ್ (payment details) ಎಂಬುದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದ ನಂತರ ಅವರು ನೀಡಿದ ಅಥವಾ ರೈತರು ಹೊಂದಿರುವ ಫಾರ್ಮರ್ ಐಡೆಂಟಿಫಿಕೇಶನ್ ನಂಬರ್ (FID) ಆಧಾರದ ಮೇಲೆ ಅವರ ಪೇಮೆಂಟ್ ಡೀಟೇಲ್ಸ್ ಅನ್ನು ನೀಡುತ್ತದೆ.
* ಸಂಬಂಧಪಟ್ಟ ರೈತರ ಹೆಸರ ಮೇಲೆ ಅಥವಾ ಫಲಾನುಭವಿಯ ರೈತರ ಹೆಸರಿನಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ರಾಜ್ಯದ ಸರ್ಕಾರದ ಕಡೆಯಿಂದ ಹಣ ಖಾತೆಗೆ ಜಮಾ ಆಗಿರುವ ಮಾಹಿತಿಯನ್ನು ನೀಡುತ್ತದೆ.
* ನೀವು ಅಥವಾ ರೈತರು ಈ ರೀತಿಯಲ್ಲಿ ‘ಕೆ ಕಿಸಾನ್’
(K kisan) ನ ಫ್ರೂಟ್ಸ್ ಐಡಿಯನ್ನು ಅಥವಾ ಫಾರ್ಮರ್ ಐಡೆಂಟಿಫಿಕೇಶನ್ ನಂಬರನ್ನು ಪಡೆದಿದ್ದರೆ ಮಾತ್ರ ಈ ಮಾಹಿತಿಯನ್ನು ನೋಡಬಹುದು ಅಥವಾ ಪಡೆಯಬಹುದು.( ಈ ಮಾಹಿತಿಯನ್ನು ತಿಳಿದುಕೊಳ್ಳಲು ಫ್ರೂಟ್ಸ್ ಐಡಿ ಮತ್ತು ಫಾರ್ಮರ್ ಐಡೆಂಟಿಫಿಕೇಶನ್ ನಂಬರ್ ಕಡ್ಡಾಯವಾಗಿರುತ್ತದೆ ) ಹಾಗೂ ಅದೇ ರೀತಿಯಾಗಿ ನಾಗರಿಕರ ಪ್ರವೇಶ ಅಥವಾ ಸಿಟಿಜನ್ ಲಾಗಿನ್ ನನ್ನು ಹೊಂದಿದ್ದರೆ ಮಾತ್ರ ಈ ಮಾಹಿತಿಯನ್ನು ನೋಡಬಹುದು ಅಥವಾ ಪಡೆಯಬಹುದು. ಇಲ್ಲದಿದ್ದರೆ ನೀವು ಈ ಮಾಹಿತಿಯನ್ನು ಪಡೆಯಲು ಬರುವುದಿಲ್ಲ.
* ಈ ರೀತಿಯಾಗಿ ರೈತರು ಈ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ತಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿರುವ ಹಣವನ್ನು ಚೆಕ್ ಮಾಡಬಹುದು ಅಥವಾ ಪರಿಶೀಲನೆ ಮಾಡಬಹುದು.
* ಒಂದು ವೇಳೆ ನೀವೇನಾದರೂ ಅಥವಾ ರೈತರು ಫ್ರೂಟ್ಸ್ ಐಡಿ (FRUITS I D) ಯನ್ನು ಅಥವಾ ‘ಕೆ ಕಿಸಾನ್’ (K kisan) ವೆಬ್ ಸೈಟ್ ನಲ್ಲಿ ಲಾಗಿನ್ ಅನುಮತಿಯನ್ನು ಹೊಂದಿಲ್ಲದಿದ್ದರೆ ನೀವು ಹತ್ತಿರದ ಕೃಷಿ ಇಲಾಖೆಗೆ ಅಥವಾ ನಿಮಗೆ ಸಂಬಂಧ ಪಟ್ಟ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ತಮ್ಮ ಸಮಸ್ಯೆಗಳನ್ನು ಮತ್ತು ಗೊಂದಲಗಳನ್ನು ಪರಿಹರಿಸಿ ಕೊಳ್ಳಬಹುದು.
# ಎಲ್ಲಾ ರೈತರಿಗೂ ತಿಳಿದಿರುವ ಹಾಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ರೈತರಿಗೋಸ್ಕರ ಜಾರಿಗೆ ತಂದಿರುವಂತಹ ಯೋಜನೆಯಾಗಿದೆ. ಈ ಯೋಜನೆಯನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಂಯೋಗದಲ್ಲಿ ಜಾರಿಗೆ ತರಲಾಗಿದೆ.
# ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ರೈತರಿಗೆ ಕೇಂದ್ರ ಸರ್ಕಾರದಿಂದ ವರ್ಷಕ್ಕೆ 2,000 ರೂಪಾಯಿಗಳ 3 ಕಂತುಗಳಂತೆ ಒಟ್ಟು ಸಹಾಯಧನದ ಮೊತ್ತ 6,000 ರೂಪಾಯಿಗಳನ್ನು ರೈತರ ಖಾತೆಗೆ ಈ ಯೋಜನೆ ಅಡಿಯಲ್ಲಿ ಜಮಾ ಮಾಡಲಾಗುವುದು.
# ಅದೇ ರೀತಿಯಲ್ಲಿ ರಾಜ್ಯ ಸರ್ಕಾರವು ಕೂಡ ಈ ಯೋಜನೆ ಅಡಿಯಲ್ಲಿವರ್ಷಕ್ಕೆ 2 ಸಾವಿರ ರೂಪಾಯಿಗಳಂತೆ ಎರಡು ಕಂತುಗಳಲ್ಲಿ ಒಟ್ಟು ಸಹಾಯಧನದ ಮೊತ್ತ ಸುಮಾರು ನಾಲ್ಕು ಸಾವಿರ ರೂಪಾಯಿಗಳನ್ನು ರಾಜ್ಯ ಸರ್ಕಾರದಿಂದ ಈ ಯೋಜನೆ ಅಡಿಯಲ್ಲಿ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
# ಕೇಂದ್ರ ಸರ್ಕಾರದಿಂದ ಈ ವರ್ಷದ ಮೊದಲ ಕಂತಿನ ಹಣ ಅಥವಾ 11ನೇ ಕಂತಿನ ಹಣವನ್ನು ಈಗಾಗಲೇ ಎಲ್ಲ ರೈತರ ಖಾತೆಗೆ ಜಮ್ಮ ಮಾಡಲಾಗಿದೆ.
ಅದೇ ರೀತಿಯಲ್ಲಿ ನಮ್ಮ ಕರ್ನಾಟಕ ರಾಜ್ಯ ಸರ್ಕಾರದಿಂದಲೂ ಕೂಡ ಈ ವರ್ಷದ ಮೊದಲ ಕಂತಿನ ಹಣ ಅಂದರೆ ಹನ್ನೊಂದನೇ ಕಂತಿನ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗಿದೆ.
#ಸರ್ಕಾರವು ರೈತರ ಏಳಿಗೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಕೃಷಿ ಈಗಿನ ಕಾಲದಲ್ಲಿಯೂ ಸಹ ಭಾರತದ ಆರ್ಥಿಕತೆಯಲ್ಲಿ ಒಂದು ಪ್ರಮುಖ ಪಾತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ರೈತರು, ಸರ್ಕಾರವು ಜಾರಿತರುವ ಇಂತಹ ಯೋಜನೆಗಳ ಲಾಭವನ್ನು ಪಡೆದುಕೊಂಡು ಕೃಷಿಯಲ್ಲಿ ಅಭಿವೃದ್ಧಿಯನ್ನು ಕಾಣಬೇಕು.
# ಈ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿಯಲ್ಲಿ ರಾಜ್ಯದ ಒಟ್ಟು ಕಂತಿನ ಮೊತ್ತವಾದಂತಹ ಸುಮಾರು 957 ಕೋಟಿ ರೂಪಾಯಿಗಳಷ್ಟು ಹಣವನ್ನು ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ. ಎಲ್ಲಾ ಫಲಾನುಭವಿಗಳ ರೈತರಿಗೆ ತಲಾ ಎರಡು ಸಾವಿರ ರೂಪಾಯಿಗಳಂತೆ ಅವರ ಖಾತೆಗೆ ಜಮಾ ಮಾಡಲಾಗುತ್ತದೆ.
ರೈತರು, ಈ ಮೇಲೆ ಸೂಚಿಸಿರುವ ಮಾಹಿತಿಯ ಉಪಯೋಗವನ್ನು ಪಡೆದುಕೊಂಡು, ಈ ರೀತಿಯ ತಮ್ಮ ಹೊಲದ ಅಥವಾ ಜಮೀನಿಗೆ ಸಂಬಂಧಪಟ್ಟ ಕೆಲಸಗಳನ್ನು ಮತ್ತು ಸಮಸ್ಯೆಗಳನ್ನು ಇನ್ನೂ ಸುಲಭದ ರೀತಿಯಲ್ಲಿ ಬಗೆಹರಿಸಿಕೊಂಡು ಅದಕ್ಕೆ ಶಾಶ್ವತ ಪರಿಹಾರವನ್ನು ಕಂಡು ಕೊಳ್ಳಬೇಕು.
ರೈತರು, ಇಂತಹ ವಿಷಯಗಳ ಬಗೆಗಿನ ಹೆಚ್ಚಿನ ವಿವರವಾದ ಮತ್ತು ನಿಕರವಾದ ಮಾಹಿತಿಯನ್ನು ಪಡೆದು ಕೊಳ್ಳಲು ರೈತರಿಗೆ ಹತ್ತಿರ ಇರುವ ಅಥವಾ ನಿಮಗೆ ಸಂಬಂಧ ಪಟ್ಟ ರಾಜ್ಯ ಸರ್ಕಾರದ ಕೃಷಿ ಇಲಾಖೆಯ ಕಚೇರಿಗೆ ಭೇಟಿ ನೀಡಬಹುದು. ರೈತರು ಇಂತಹ ಇನ್ನೂ ಅನೇಕ ರಾಜ್ಯ ಸರ್ಕಾರದ ಯೋಜನೆಗಳ ಹಕ್ಕುದಾರರಾಗಿ ಅದರ ಲಾಭವನ್ನು ಅಥವಾ ಉಪಯೋಗವನ್ನು ಪಡೆದುಕೊಂಡು ಕೃಷಿಯಲ್ಲಿ ಅಭಿವೃದ್ಧಿ ಹೊಂದಬೇಕು.
ಸರ್ಕಾರವು ರೈತರ ಏಳಿಗೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಕೃಷಿ ಈಗಿನ ಕಾಲದಲ್ಲಿಯೂ ಸಹ ಭಾರತದ ಆರ್ಥಿಕತೆಯಲ್ಲಿ ಒಂದು ಪ್ರಮುಖ ಪಾತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ರೈತರು, ಸರ್ಕಾರವು ಜಾರಿತರುವ ಇಂತಹ ಯೋಜನೆಗಳ ಲಾಭವನ್ನು ಪಡೆದುಕೊಂಡು ಕೃಷಿಯಲ್ಲಿ ಅಭಿವೃದ್ಧಿಯನ್ನು ಕಾಣಬೇಕು.
ಇವತ್ತಿನ ದಿನ ನಾವು ಇಂದು ನಿಮಗೆ ಅಥವಾ ರೈತರಿಗೆ ತಿಳಿಸಿಕೊಡುವ ವಿಷಯವೇನೆಂದರೆ ಕರ್ನಾಟಕ ರಾಜ್ಯ ಸರ್ಕಾರದ ಕೃಷಿ ಇಲಾಖೆ ಕಡೆಯಿಂದಲೂ ಸಹ ಅರ್ಹರಾದ ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ನೊಂದಣಿ ಮಾಡಿಕೊಂಡಂತಹ ರೈತರು ಕೂಡ ರಾಜ್ಯ ಸರ್ಕಾರದಿಂದ ಸಹಾಯಧನವನ್ನು ಪಡೆಯಬಹುದಾಗಿದೆ. ಕರ್ನಾಟಕ ರಾಜ್ಯ ಸರ್ಕಾರವು ಈ ಪ್ರಧಾನ ಮಂತ್ರಿ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ವರ್ಷಕ್ಕೆ ಎರಡು ಕಂತುಗಳಂತೆ ಒಟ್ಟು ಸಹಾಯಧನದ ಮೊತ್ತ ಸುಮಾರು ನಾಲ್ಕು ಸಾವಿರ ರೂಪಾಯಿಗಳನ್ನು ಫಲಾನುಭವಿ ರೈತರು ಈ ಯೋಜನೆಯ ಅಡಿಯಲ್ಲಿ ಪಡೆಯಬಹುದಾಗಿದೆ.
ರೈತರು, ಇಂತಹ ವಿಷಯಗಳ ಬಗೆಗಿನ ಹೆಚ್ಚಿನ ವಿವರವಾದ ಮತ್ತು ನಿಕರವಾದ ಮಾಹಿತಿಯನ್ನು ಪಡೆದು ಕೊಳ್ಳಲು ರೈತರಿಗೆ ಹತ್ತಿರ ಇರುವ ಅಥವಾ ನಿಮಗೆ ಸಂಬಂಧ ಪಟ್ಟ ರಾಜ್ಯ ಸರ್ಕಾರದ ಕೃಷಿ ಇಲಾಖೆಯ ಕಚೇರಿಗೆ ಭೇಟಿ ನೀಡಬಹುದು. ರೈತರು ಇಂತಹ ಇನ್ನೂ ಅನೇಕ ರಾಜ್ಯ ಸರ್ಕಾರದ ಯೋಜನೆಗಳ ಹಕ್ಕುದಾರರಾಗಿ ಅದರ ಲಾಭವನ್ನು ಅಥವಾ ಉಪಯೋಗವನ್ನು ಪಡೆದುಕೊಂಡು ಕೃಷಿಯಲ್ಲಿ ಅಭಿವೃದ್ಧಿ ಹೊಂದಬೇಕು.
ಹೆಚ್ಚಿನ ಮಾಹಿತಿಗಾಗಿ
ಕೃಷಿ ವಾಹಿನಿ🌱
ವೆಬ್ಸೈಟ್ ಸಂಪರ್ಕದಲ್ಲಿರಿ..
[…] 1.ರಾಜ್ಯ ಸರ್ಕಾರದಿಂದ ರೈತರ ಖಾತೆಗೆ ₹2,000 ಜಮಾ!! […]