ನಮಸ್ಕಾರ ಪ್ರಿಯ ರೈತ ಭಾಂದವರೇ, ಕೃಷಿ ಈಗಿನ ಕಾಲದಲ್ಲಿಯೂ ಸಹ ಭಾರತದ ಆರ್ಥಿಕತೆಯಲ್ಲಿ ಒಂದು ಪ್ರಮುಖ ಪಾತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ದೇಶವು ಕೃಷಿಯಿಂದ ಉದ್ಯಮದ ಕಡೆಗೆ ಸಾಗುತ್ತಿದ್ದರು ಸಹ ಭಾರತದಲ್ಲಿ ಕೃಷಿಯ ಮಹತ್ವವನ್ನು ಕಡೆಗಣಿಸುವಂತಿಲ್ಲ.

ಕರ್ನಾಟಕದಿಂದ ಎಲ್ಲಾ ರೈತರಿಗೆ ರಾಜ್ಯ ಸರ್ಕಾರವು ಮತ್ತೊಂದು ಭರ್ಜರಿ ಬಹುಮಾನ ನೀಡಿದೆ. ನಿಮ್ಮ ಅಥವಾ ರೈತರ ಜಮೀನಿನ ಅಥವಾ ಹೊಲದ ಮ್ಯಾಪ್ ಮತ್ತು ನಕ್ಷೆ ತಮ್ಮ ತಮ್ಮ ಮೊಬೈಲ್ ನಲ್ಲಿಯೇ ಲಭ್ಯವಿರುವಂತೆ ಮಾಡಲಾಗಿದೆ.

ಕರ್ನಾಟಕ ರಾಜ್ಯ ಸರ್ಕಾರದ ಭೂ ಮಾಪನ ಮತ್ತು ಕಂದಾಯ ಇಲಾಖೆಯು ರೈತರ ಜಮೀನಿನ ನಕ್ಷೆಯಲ್ಲಿ ಅಥವಾ ಅವರ ಮ್ಯಾಪ್ ನಲ್ಲಿ ಕಾಲುದಾರಿ ಹಾಗೂ ರಸ್ತೆ ಬಂಡಿ ದಾರಿ ಸೇರಿದಂತೆ, ಇತರೆ ಇನ್ನೂ ಎಲ್ಲಾ ರೀತಿಯ ವಿವರವಾದ ಮಾಹಿತಿಯನ್ನು ಒಳಗೊಂಡ,

ರೈತರಿಗೆ ಅವರ ಕೈನ ಬೆರಳ ತುದಿಗೆ ಸಿಗುವಂತೆ ಕರ್ನಾಟಕ ರಾಜ್ಯ ಸರ್ಕಾರವು ಜಮೀನಿನ ಮ್ಯಾಪ್ ಅಥವಾ ಹೊಲದ ನಕ್ಷೆಯು ತಮ್ಮ ಮೊಬೈಲ್ ನಲ್ಲಿ ದೊರೆಯುವಂತೆ ಹೊಸ ಅವಕಾಶವನ್ನು ಮಾಡಿಕೊಡಲಾಗಿದೆ. ಇದರಿಂದ ರೈತರು ತಮ್ಮ ಅನೇಕ ಸಮಸ್ಯೆಗಳನ್ನು ಕೂಡ ಬಗೆಹರಿಸಿಕೊಳ್ಳುವಷ್ಟು ಅನುಕೂಲ ರಾಜ್ಯ ಸರ್ಕಾರ ಮಾಡಿಕೊಡಲಾಗಿದೆ.

ಬನ್ನಿ, ನೀವು ಕೂಡ ರೈತರಾಗಿದ್ದರೆ ಅಥವಾ ರೈತರ ಕುಟುಂಬಕ್ಕೆ ಸೇರಿದವರಾಗಿದ್ದರೆ ತಪ್ಪದೇ ಇದರ ಸಹಾಯವನ್ನು ಪಡೆದುಕೊಳ್ಳಿ.

 

ಇನ್ನು ಮುಂದೆ ರೈತರು ತಾಲೂಕು ಕಚೇರಿ ಕಂದಾಯ ಇಲಾಖೆಗೆ ಭೇಟಿ ನೀಡಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ತಮ್ಮ ಜಮೀನಿನ ಅಥವಾ ಹೊಲದ ಮ್ಯಾಪನ್ನು ಅಥವಾ ನಕ್ಷೆಯನ್ನು ತಮ್ಮ ಮೊಬೈಲ್ ನಲ್ಲಿಯೇ ಪಡೆಯುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ರೈತರ ಬಳಿ ಯಾವುದಾದರೂ ಒಂದು ಸ್ಮಾರ್ಟ್ ಫೋನ್ (smart phone) ಇದ್ದರೆ ಸಾಕು. ಅದರಿಂದ ರೈತರು ತಮ್ಮ ಜಮೀನಿನ ಅಥವಾ ಹೊಲದ ಮ್ಯಾಪನ್ನು ಮನೆಯಲ್ಲಿ ಕುಳಿತುಕೊಂಡು ವೀಕ್ಷಿಸಬಹುದು ಅಥವಾ ಬೇಕೆಂದರೆ ಅದನ್ನು ಡೌನ್ಲೋಡ್ ಸಹ ಮಾಡಿಕೊಳ್ಳಬಹುದು.

 

ಈಗ ನಾವು ರೈತರ ಜಮೀನಿನ ಅಥವಾ ನಕ್ಷೆಯನ್ನು ನೋಡುವುದು ಹೇಗೆ?

 ಹಾಗೂ ಅದೇ ರೀತಿಯಲ್ಲಿ ಅದರ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುವುದು ಹೇಗೆ?

 ಎಂಬುದರ ಬಗ್ಗೆ ಇರುವ ವಿವರವಾದ ಮಾಹಿತಿಯನ್ನು ಈಗ ತಿಳಿದುಕೊಳ್ಳೋಣ.

 

• ರೈತರು ತಮ್ಮ ಜಮೀನಿನ ಅಥವಾ ತಮ್ಮ ಅಥವಾ ಸಂಬಂಧಪಟ್ಟವರ ಹೊಲದ ಮ್ಯಾಪ್ ಅಥವಾ ನಕ್ಷೆ ಡೌನ್ಲೋಡ್ ಮಾಡಿಕೊಳ್ಳಲು ಅಥವಾ ಅದರ ಬಗ್ಗೆ ಮಾಹಿತಿ ಪಡೆಯಲು ಮೊದಲಿಗೆ ಕರ್ನಾಟಕ ರಾಜ್ಯ ಸರ್ಕಾರದ ವೆಬ್ ಸೈಟ್ ಆದಂತಹ

www.landrecords.karnataka.gov.in ಎಂಬ 

 ಈ ವೆಬ್ ಸೈಟನ್ನು ತೆರೆಯಬೇಕಾಗುತ್ತದೆ.

 

• ಈ ವೆಬ್ ಸೈಟ್ ಅನ್ನು ತೆರೆದ ನಂತರ ಅಥವಾ ಅದರ ಮೇಲೆ ಕ್ಲಿಕ್ಕ ಮಾಡಿ ತೆರೆದ ನಂತರ ನಿಮಗೆ ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಅಂದರೆ ರೆವೆನ್ಯೂ ಮ್ಯಾಪ್ ವೆಬ್ ಸೈಟ್ (revenue map website) ನ ಮುಖಪುಟ ತೆರೆದುಕೊಳ್ಳುತ್ತದೆ.

• ರೈತರಿಗೆ ಈ ಮುಖ ಪುಟದಲ್ಲಿ ಕೇಳಲಾಗುವ ಮಾಹಿತಿಯ ವಿವರಗಳನ್ನು ನಮೂದಿಸಬೇಕಾಗುತ್ತದೆ.

ಅದರಲ್ಲಿ ರೈತರಿಗೆ ಅಂದರೆ ಈ ಮುಖ ಪುಟದಲ್ಲಿ ರೈತರಿಗೆ ತಮ್ಮ ಜಿಲ್ಲೆಯ ಆಯ್ಕೆ ಮತ್ತು ತಮ್ಮ ತಾಲೂಕಿನ ಆಯ್ಕೆಯನ್ನು ಕೇಳಲಾಗುತ್ತದೆ. ರೈತರು ತಮಗೆ ಸಂಭದಪಟ್ಟ ಜಿಲ್ಲೆಯ ಮತ್ತು ತಾಲೂಕಿನ ಆಯ್ಕೆಯನ್ನು ಮಾಡಬೇಕಾಗುತ್ತದೆ.

• ಅದೇ ರೀತಿಯಾಗಿ ಅದರಲ್ಲಿ ರೈತರಿಗೆ ಅಂದರೆ ಈ ಮುಖ ಪುಟದಲ್ಲಿ ರೈತರಿಗೆ ಅವರ ವ್ಯಾಪ್ತಿಯಲ್ಲಿ ಬರುವ ಹೋಬಳಿ ಮತ್ತು ಅವರ ಹಳ್ಳಿಯ ಆಯ್ಕೆಯನ್ನು ನೀಡಲಾಗುತ್ತದೆ. ರೈತರು ತಮಗೆ ಸಂಬಂಧ ಪಟ್ಟ ಹೋಬಳಿ ಮತ್ತು ತಮ್ಮ ಹಳ್ಳಿಯ ಆಯ್ಕೆಯನ್ನು ಮಾಡಬೇಕಾಗುತ್ತದೆ.

• ಇದಾದ ನಂತರ ರೈತರು ತಮ್ಮ ಹೋಬಳಿಯ ಆಯ್ಕೆಯನ್ನು ಮಾಡಿಕೊಂಡ ನಂತರ, ಅವರ ಹೋಬಳಿಯ ವ್ಯಾಪ್ತಿಯಲ್ಲಿ ಬರುವಂತಹ ಅನೇಕ ಗ್ರಾಮಗಳ ಪಟ್ಟಿಯನ್ನು ಈ ಮುಖ ಪುಟದಲ್ಲಿ ನೀಡಲಾಗುವುದು.

• ನಂತರ ರೈತರು ಅಲ್ಲಿ ತಮ್ಮ ಗ್ರಾಮಗಳ ಅಥವಾ ತಮಗೆ ಯಾವ ಊರಿನ ಮಾಹಿತಿಯನ್ನು ಬೇಕೋ ಆ ಊರಿನ ಹೆಸರಿನ ಮುಂದೆ ಇರುವ ಪಿಡಿಎಫ್ (pdf) ಫೈಲ್ ಐಕಾನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.

• ಪಿಡಿಎಫ್ (pdf) ಫೈಲ್ ಐಕಾನ್ ಮೇಲೆ ಕ್ಲಿಕ್ ಮಾಡಿದ ನಂತರ ಆ ಊರಿನ ಅಂದರೆ ನೀವು ಆಯ್ಕೆ ಮಾಡಿದ ಊರಿನ ಮ್ಯಾಪ್ ತೆರೆದುಕೊಳ್ಳುತ್ತದೆ. ಒಂದು ವೇಳೆ ರೈತರು ತಮಗೆ ಸಂಬಂಧಪಟ್ಟ ಅಥವಾ ರೈತರು ಆಯ್ಕೆ ಮಾಡಿಕೊಂಡ ಪಿಡಿಎಫ್ ಮ್ಯಾಪ್ (pdf map) ಡೌನ್ಲೋಡ್ ಆಗದಿದ್ದರೆ ರೈತರಿಗೆ pop up blocked ಎಂಬ ಮೆಸೇಜ್ ಕಾಣುತ್ತದೆ.

• ಅದರಲ್ಲಿ ರೈತರು ಅಲ್ಲಿ ಮೆಸೇಜ್ ನಲ್ಲಿ ಕಾಣುವ ಆಲ್ವೇಸ್ ಶೇರ್ (always share) ಎಂಬುದರ ಮೇಲೆ ಕ್ಲಿಕ್ ಮಾಡಿದರೆ ಸಾಕು. ರೈತರು ಯಾವ ಊರು ಆಯ್ಕೆ ಮಾಡಿಕೊಂಡಿದ್ದರೋ ಅಥವಾ ಯಾವ ಊರಿನ ಬಗ್ಗೆ ವಿವರವಾದ ಮಾಹಿತಿಯ ಅಗತ್ಯವಿದೆಯೋ ಅಂತಹ ಊರಿನ ಸರ್ವೇ ನಂಬರ್ ಮತ್ತು ಇನ್ನಿತರೇ ಅನೇಕ ಮಾಹಿತಿಯನ್ನು ಒಳಗೊಂಡ ಮ್ಯಾಪ್ ಡೌನ್ಲೋಡ್ ಆಗುತ್ತದೆ.

• ರೈತರು ತಮ್ಮ ಊರಿನ ಅಥವಾ ತಾವು ಆಯ್ಕೆ ಮಾಡಿದ ಊರಿನ ಮ್ಯಾಪ್ ಡೌನ್ಲೋಡ್ ಆದ ನಂತರ ಅವರಿಗೆ ತಮ್ಮ ಅಥವಾ ತಾವು ಆಯ್ಕೆ ಮಾಡಿದ ಊರಿನ ಗಡಿ ರೇಖೆಗಳು ಮತ್ತು ಆ ಊರಿನ ಜಮೀನಿನ ಅಥವಾ ಹೊಲಗಳ ಸರ್ವೆ ನಂಬರ್ ಗಳ ಮಾಹಿತಿ ಲಭ್ಯ ವಾಗುತ್ತದೆ.

 

• ಹಾಗೂ ಅದೇ ರೀತಿಯಲ್ಲಿ ಆ ಊರಿನ ಸುತ್ತಮುತ್ತಲಿನ

• ಸರ್ವೆ ನಂಬರಗಳು

•ಹಳ್ಳ

•ಕೊಳ್ಳ

•ನದಿ

• ಕಾಲುವೆ

• ಬಂಡಿದಾರಿಗಳು ಮತ್ತು

•ಕಾಲುಧಾರಿಗಳು

ಇವೆಲ್ಲವುದರ ಬಗ್ಗೆ ಇರುವ ವಿವರವಾದ ಮಾಹಿತಿಯನ್ನು ಈ ಡೌನ್ಲೋಡ್ ಮಾಡಿಕೊಂಡ ಮ್ಯಾಪ್ ನ ಸಹಾಯದಿಂದ ಪಡೆದುಕೊಳ್ಳಬಹುದು.

 

» ರೈತರಿಗೆ ತಮ್ಮ ಮೊಬೈಲ್ ನಲ್ಲಿಯೇ ತಮ್ಮ ಜಮೀನಿನ ಅಥವಾ ಹೊಲದ ಮತ್ತು ಜಮೀನಿನ ಸರ್ವೆ ನಂಬರ್ ಗಳ ಮಾಹಿತಿ ತಿಳಿದುಕೊಳ್ಳುವ ವ್ಯವಸ್ಥೆ ರಾಜ್ಯ ಸರ್ಕಾರದ ಕಂದಾಯ ಇಲಾಖೆಯು ಮಾಡಿಕೊಡಲಾಗಿದೆ.

» ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕರ್ನಾಟಕ ರಾಜ್ಯ ಸರ್ಕಾರವು ಮೃತರ ಅಥವಾ ಮರಣ ಹೊಂದಿದ ವ್ಯಕ್ತಿಗಳ ಹೆಸರಿನಲ್ಲಿರುವ ಜಮೀನುಗಳನ್ನು ಅಥವಾ ಭೂ ಪ್ರದೇಶಗಳನ್ನು ಮತ್ತು ಅದಕ್ಕೆ ಸಂಭಂದ ಪಟ್ಟ ಭೂ ದಾಖಲೆಗಳನ್ನು ಅದಕ್ಕೆ ಸಂಬಂಧಪಟ್ಟ ವಾರಸುದಾರರಿಗೆ ಅಥವಾ ಹಾಲಿ ವಾರಸುದಾರರಿಗೆ ವರ್ಗಾಯಿಸಲು ಅಥವಾ ಹಸ್ತಾಂತರಿಸಲು ಪೌತಿ ಖಾತೆ ಅಭಿಯಾನವನ್ನು ಸಹ ಆರಂಭಿಸಲು ಕಂದಾಯ ಇಲಾಖೆಯ ನಿರ್ಧರಿಸಿದೆ.

ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯು ಈ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

 

       ಈ ಮ್ಯಾಪ್ ನ ಸಹಾಯದಿಂದ,

 

• ತಮ್ಮ ಜಮೀನಿನ ಅಥವಾ ಹೊಲದ ಸರ್ವೇ ನಂಬರ್ ನ ಸುತ್ತಮುತ್ತ ಯಾವ ಯಾವ ಜಮೀನುಗಳು ಅಥವಾ ಸರ್ವೇ ನಂಬರ್ ಗಳು ಇವೆ ಎಂಬುದರ ಬಗ್ಗೆ ಇರುವ ಮಾಹಿತಿಯನ್ನು ತಿಳಿದುಕೊಳ್ಳಬಹುದು.

• ಹಾಗೂ ಅದೇ ರೀತಿಯಾಗಿ ಜಮೀನಿನ ಅಥವಾ ಹೊಲದ ಸುತ್ತಮುತ್ತ ಕೆರೆಕಟ್ಟೆಗಳು ಅಥವಾ ಹತ್ತಿರದಲ್ಲಿ ಗುಡ್ಡ ಬೆಟ್ಟಗಳು ಇರುವ ಬಗ್ಗೆಯೂ ಸಹ ಮಾಹಿತಿಯನ್ನು ಪಡೆಯಬಹುದು.

• ಜಮೀನಿನ ಅಥವಾ ಹೊಲದ ಸುತ್ತಮುತ್ತ ಬಂಡಿ ದಾರಿ ಅಥವಾ ಕಾಲುದಾರಿ ಮತ್ತು ಕಾಲುವೆ ಮತ್ತು ಊರಿನ ಅಕ್ಕ ಪಕ್ಕ ಊರುಗಳಿಗೆ ಹೋಗಲು ಇರುವ ರಸ್ತೆಗಳ ಅಥವಾ ದಾರಿಗಳ ಮಾಹಿತಿಯು ಈ ಮ್ಯಾಪ್ ನಲ್ಲಿ ಸಿಗುತ್ತದೆ.

• ಹಾಗೂ ಅದೇ ರೀತಿಯಾಗಿ ಇನ್ನು ಅನೇಕ ವಿಷಯಗಳ ಬಗ್ಗೆ ನಿಖರವಾದ ಮಾಹಿತಿಯನ್ನು ಈ ಮ್ಯಾಪ್ ನಿಂದ ಪಡೆಯಬಹುದಾಗಿದೆ.

 

• ರೈತರು ತಮ್ಮ ತಮ್ಮ ಊರುಗಳ ಗಡಿ ರೇಖೆಗಳನ್ನು ಈ ಮ್ಯಾಪ್ ನ ಸಹಾಯದಿಂದ ಪಡೆದುಕೊಳ್ಳಬಹುದು ಅಥವಾ ನೋಡಬಹುದು ಎಂಬುದಾಗಿ ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿರುತ್ತಾರೆ.

• ರೈತರು ಆಯ್ಕೆ ಮಾಡಿಕೊಂಡ ಅಥವಾ ತಮ್ಮ ಗ್ರಾಮಕ್ಕೆ ಅಕ್ಕ ಪಕ್ಕದ ಬೇರೆ ಬೇರೆ ಗ್ರಾಮಗಳಿಂದ ಅಥವಾ ಬೇರೆ ಬೇರೆ ಊರುಗಳಿಂದ ತಮ್ಮ ಗ್ರಾಮಕ್ಕೆ ಬರುವ ರಸ್ತೆಗಳು ಎಲ್ಲಿಂದ ಹಾದು ಹೋಗುತ್ತದೆ. ಎಂಬುದರ ಮಾಹಿತಿಯನ್ನು ಸಹ ಈ ಮ್ಯಾಪ್ ನ ಸಹಾಯದಿಂದ ಪಡೆಯಬಹುದು.

• ಹಿಂದಿನ ಕಾಲದಲ್ಲಿ ಅಂದರೆ ತಾತ ಅಜ್ಜಂದಿರ ಕಾಲದಲ್ಲಿ ಅಕ್ಕ ಪಕ್ಕದ ಊರಿಗೆ ಹೋಗುವ ದಾರಿ, ಬಂಡಿಯ ದಾರಿಗಳು ಮತ್ತು ಅನೇಕ ಕಾಲು ದಾರಿಗಳು ಎಲ್ಲಿಂದ ಹಾದು ಹೋಗುತ್ತವೆ. ಎಂಬುದರ ಮಾಹಿತಿಯನ್ನು ಸಹ ಈ ಮ್ಯಾಪ್ ನ ಸಹಾಯದಿಂದ ನೋಡಬಹುದು ಅಥವಾ ಪಡೆದುಕೊಳ್ಳಬಹುದು.

• ಹಾಗೇನಾದರೂ ನಿಮ್ಮ ಊರಿನ ಅಥವಾ ರೈತರು ಯಾವ ಊರಿನ ಬಗ್ಗೆ ಮಾಹಿತಿಯನ್ನು ಪಡೆಯಬೇಕು ಎಂದು ಬಯಸುವ ಊರಿನ ಸುತ್ತಮುತ್ತ ಹಳ್ಳ ಅಥವಾ ನದಿಗಳದ್ದರೆ ಅಥವಾ ಯಾವುದಾದರೂ ನೀರಿನ ಕಾಲುವೆಗಳು ಇದ್ದರೆ ಅವುಗಳು ಎಲ್ಲಿಂದ ಹರಿದು ಬರುತ್ತಿದೆ. ಹಾಗೂ ಅದೇ ರೀತಿಯಲ್ಲಿ ಹಳ್ಳ ಅಥವಾ ಕಾಲುವೆ ಯಾವ ಸರ್ವೇ ನಂಬರ್ ನ್ ಹತ್ತಿರದಿಂದ ಹಾದು ಹೋಗುತ್ತವೆ. ಮತ್ತು ಯಾವ ಊರಿಗೆ ಹರಿದು ಹೋಗುತ್ತದೆ. ಎಂದು ತಿಳಿಯುವ ದಿಕ್ಕನ್ನು ಸಹ ಈ ಮ್ಯಾಪ್ ನ ಸಹಾಯದಿಂದ ಪಡೆಯಬಹುದು.

 

ಈ ಕರ್ನಾಟಕ ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಮ್ಯಾಪ್ ನ ಎಡ ಭಾಗದಲ್ಲಿ ಹಳ್ಳ, ಕೊಳ್ಳ, ಕೆರೆ,ಬಾವಿ, ದೇವಸ್ಥಾನ, ಮಠ ಮತ್ತು ಅನೇಕ ಗುಡಿಗಳು ಸೇರಿದಂತೆ ಇನ್ನಿತರ ಅನೇಕ ಮಾಹಿತಿಯ ವಿವರಗಳನ್ನು ಗುರುತಿಸಲು ಮ್ಯಾಪ್ ನಲ್ಲಿ ಒಂದು ವಿಶಿಷ್ಟ ಸಂಕೇತದ ಮೂಲಕ ಗುರುತು ಮಾಡಲಾಗಿರುತ್ತದೆ ಅಥವಾ ಸೂಚಿಸಲಾಗಿರುತ್ತದೆ.

 

* ಈ ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಮ್ಯಾಪ್ ನಲ್ಲಿರುವ ಈ ಗುರುತುಗಳ ಅಥವಾ ನಿರ್ದಿಷ್ಟ ಸಂಕೇತಗಳ ಆಧಾರದ ಮೇಲೆ ಆ ವಿಷಯಕ್ಕೆ ಸಂಬಂಧಪಟ್ಟ ಎಲ್ಲ ಮಾಹಿತಿಗಳನ್ನು ಪಡೆದುಕೊಳ್ಳಬಹುದು ಎಂಬುದಾಗಿ ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿರುತ್ತಾರೆ.

ರೈತರು, ಈ ಮೇಲೆ ಸೂಚಿಸಿರುವ ಮಾಹಿತಿಯ ಉಪಯೋಗವನ್ನು ಪಡೆದುಕೊಂಡು, ಈ ರೀತಿಯ ತಮ್ಮ ಹೊಲದ ಅಥವಾ ಜಮೀನಿನ ಕೆಲಸಗಳನ್ನು ಮತ್ತು ಸಮಸ್ಯೆಗಳನ್ನು ಇನ್ನೂ ಸುಲಭದ ರೀತಿಯಲ್ಲಿ ಬಗೆಹರಿಸಿಕೊಂಡು ಅದಕ್ಕೆ ಶಾಶ್ವತ ಪರಿಹಾರವನ್ನು ಕಂಡು ಕೊಳ್ಳಬೇಕು.

 

• ಸರ್ಕಾರವು ರೈತರ ಏಳಿಗೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಕೃಷಿ ಈಗಿನ ಕಾಲದಲ್ಲಿಯೂ ಸಹ ಭಾರತದ ಆರ್ಥಿಕತೆಯಲ್ಲಿ ಒಂದು ಪ್ರಮುಖ ಪಾತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ರೈತರು, ಸರ್ಕಾರ ಜಾರಿತರುವ ಇಂತಹ ಯೋಜನೆಗಳ ಲಾಭವನ್ನು ಪಡೆದುಕೊಂಡು ಕೃಷಿಯಲ್ಲಿ ಅಭಿವೃದ್ಧಿಯನ್ನು ಕಾಣಬೇಕು.

ರೈತರು, ಇಂತಹ ವಿಷಯಗಳ ಬಗೆಗಿನ ಹೆಚ್ಚಿನ ವಿವರವಾದ ಮತ್ತು ನಿಕರವಾದ ಮಾಹಿತಿಯನ್ನು ಪಡೆದು ಕೊಳ್ಳಲು ರೈತರಿಗೆ ಹತ್ತಿರ ಇರುವ ಅಥವಾ ನಿಮಗೆ ಸಂಬಂಧ ಪಟ್ಟ ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಕಚೇರಿಗೆ ಭೇಟಿ ನೀಡಬಹುದು. ರೈತರು ಇಂತಹ ಇನ್ನೂ ಅನೇಕ ರಾಜ್ಯ ಸರ್ಕಾರದ ಯೋಜನೆಗಳ ಹಕ್ಕುದಾರರಾಗಿ ಅದರ ಲಾಭವನ್ನು ಅಥವಾ ಉಪಯೋಗವನ್ನು ಪಡೆದುಕೊಂಡು ಕೃಷಿಯಲ್ಲಿ ಅಭಿವೃದ್ಧಿ ಹೊಂದಬೇಕು.

ಇದರ ಸದುಪಯೋಗ ಪಡಿಸಿಕೊಂಡು ರೈತರು ಅಭಿವೃದ್ಧಿ ಹೊಂದಬೇಕು ಎನ್ನುವ ದೃಷ್ಟಿಯಿಂದ ಸರ್ಕಾರವು ಮಹತ್ವದ ಕಾರ್ಯ ಮಾಡುತ್ತಿದೆ. ಹಾಗೂ ರೈತರು ಸ್ವಾವಲಂಬಿ ಜೀವನ ನಡೆಸಲು ಇದು ಪ್ರಮುಖ ಪಾತ್ರ ವಹಿಸುತ್ತದೆ.

ರೈತರು ಮುಖ್ಯ ಕೃಷಿ ಚಟುವಟಿಕೆಗಳ ಜೊತೆಗೆ ಕೃಷಿಯೇತರ ಚಟುವಟಿಕೆಗಳಿಗೆ ಆಸಕ್ತಿ ತೋರಿಸಿ, ವರ್ಷವಿಡೀ ಆದಾಯ ಪಡೆಯಬಹುದು. ಹಾಗೂ ರೈತರು ಸ್ವಯಂ ಪ್ರೇರಿತವಾಗಿ ಕೃಷಿಯಲ್ಲಿ ತೊಡಗಿರುವ ಹಾಗೂ ಸ್ವಂತ ಉದ್ಯೋಗ ಅವಕಾಶ ಮಾಡಿ ಕೊಟ್ಟಂತಾಗುತ್ತದೆ.

ಹಾಗೂ ಸುಸ್ಥಿರ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿ, ರೈತರು ಅಭಿವೃದ್ಧಿಯಲ್ಲಿ ಸಾಗಬೇಕು ಎಂಬ ಗುರಿಯನ್ನು ಇಟ್ಟುಕೊಂಡು ಕಾರ್ಯಗಳನ್ನು ಸರ್ಕಾರ ಮಾಡುತ್ತಿದೆ.

ಹೆಚ್ಚಿನ ಮಾಹಿತಿಗಾಗಿ

ಕೃಷಿ ವಾಹಿನಿ 🌱

ವೆಬ್ಸೈಟ್ನ ಸಂಪರ್ಕದಲ್ಲಿರಿ..

Leave a Reply

Your email address will not be published. Required fields are marked *