ನಮಸ್ಕಾರ ಪ್ರೀಯರೇ, ಕರ್ನಾಟಕ ರಾಜ್ಯ ಸರ್ಕಾರವು ಹಿಂದುಳಿದ ವರ್ಗದ ಜನರ ಅಭಿವೃದ್ಧಿಗಾಗಿ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಕಡೆಯಿಂದ 2 ಲಕ್ಷ ರೂಪಾಯಿಗಳವರೆಗೆ ಸ್ವಯಂ ಉದ್ಯೋಗ ಮತ್ತು ವೈಯಕ್ತಿಕ ಸಾಲ ನೀಡುವ ಯೋಜನೆಯ ಅಡಿಯಲ್ಲಿ 2 ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯವನ್ನು ಪಡೆಯಬಹುದಾಗಿದೆ. ಇಂದು ನಾವು ಈ ಯೋಜನೆಯ ಅಡಿಯಲ್ಲಿ ಈ ಸಾಲ ಸೌಲಭ್ಯ ವನ್ನು ಪಡೆಯುವುದು ಹೇಗೆ?

ಮತ್ತು ಈ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು??

ಎಂಬುದರ ಬಗ್ಗೆ ಇರುವ ವಿವರವಾದ ಮಾಹಿತಿಯನ್ನು ತಿಳಿದುಕೊಳ್ಳೋಣ.

ನೀವು ಈ ಯೋಜನೆಯ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಲು ಸುವಿಧಾ ಕರ್ನಾಟಕ ಎಂಬ ವೆಬ್ ಸೈಟ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ನೀವು ಈ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯವನ್ನು ಪಡೆಯಲು ಬೇಕಾಗುವ ಪ್ರಮಾಣ ಪತ್ರಗಳೇನು? ಮತ್ತು ಇದರ ಬಗ್ಗೆ ಇರುವಂತಹ ಸಂಪೂರ್ಣ ಮಾಹಿತಿಯನ್ನು ಇಂದು ನಾವು ತಿಳಿದುಕೊಳ್ಳೋಣ.

ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯ ಸರ್ಕಾರವು ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಕಡೆಯಿಂದ ವೈಯಕ್ತಿಕ ಉದ್ಯೋಗ ಸಲುವಾಗಿ ಸಾಲ ನೀಡುವ ಯೋಜನೆ ಇದಾಗಿದೆ. ಈ ಒಂದು ಯೋಜನೆ ಅಡಿಯಲ್ಲಿ 2,00,000ರೂಪಾಯಿ ಗಳವರೆಗೆ ಸಾಲ ಸೌಲಭ್ಯವನ್ನು ಪಡೆಯಬಹುದಾಗಿದೆ. ಇದಕ್ಕೆ ಯಾರು ಯಾರು ಅರ್ಹರು ಅಂದರೆ ಯಾವ ಯಾವ ವರ್ಗದ ಜನರು ಈ ಯೋಜನೆಯ ಫಲಾನುಭವಿ ಆಗಬಹುದು ಎಂಬುದನ್ನು ನೋಡುವುದಾದರೆ,

* ಪ್ರವರ್ಗ 1

* 2 ಎ

* 3ಎ ಮತ್ತು

* 3ಬಿ

ಸೇರಿರುವಂತಹ ವ್ಯಕ್ತಿಗಳ ವೈಯಕ್ತಿಕ ಸಾಲ ಸೌಲಭ್ಯ ಅಂದರೆ ವ್ಯಾಪಾರ ಮಾಡಲು, ಉದ್ಯೋಗ ಮಾಡಲು, ಒಂದು ಸ್ವಯಂ ಉದ್ಯೋಗ ಸಲುವಾಗಿ ಯಾವ ರೀತಿಯಾಗಿ ಈ ಯೋಜನೆ ಅಡಿಯಲ್ಲಿ ಸಾಲಕ್ಕೆ ಅರ್ಜಿಯನ್ನು ಸಲ್ಲಿಸಬೇಕು ಎಂಬುದನ್ನು ಈಗ ತಿಳಿಯೋಣ.

ಹಿಂದುಳಿದ ವರ್ಗಗಳ ಇಲಾಖೆ ಕಡೆಯಿಂದ ಅಥವಾ ನಿಗಮದ ಕಡೆಯಿಂದ

ನೀವು ಸ್ವಯಂ ಉದ್ಯೋಗಕ್ಕೋಸ್ಕರ ಸಾಲವನ್ನು ಪಡಿಯಬೇಕೆಂದಿದ್ದರೆ ಅದಕ್ಕೆ ಸಬ್ಸಿಡಿಯನ್ನು ಸಹ ನೀಡಲಾಗುತ್ತದೆ. ಹಾಗೆ ಅದೇ ರೀತಿಯಾಗಿ ಉಳಿದ ಮೊತ್ತವನ್ನು ನೀವು ಅಂದರೆ ಫಲಾನುಭವಿಗಳು ಸಾಲದ ರೂಪದಲ್ಲಿ ತೀರಿಸಬೇಕಾಗುತ್ತದೆ.

• ನೀವೇನಾದರೂ ಒಂದು ವ್ಯಾಪಾರದ ಸಲುವಾಗಿ 50,000 ರೂ.ಗಳ ವರೆಗೆ ಸಾಲವನ್ನು ಪಡೆದಿದ್ದರೆ ಅಥವಾ ಪಡೆಯಬೇಕೆಂದಿದ್ದರೆ ನಿಮಗೆ ಗರಿಷ್ಠ ಶೇಕಡಾ 30ರಷ್ಟು ಅಂದರೆ ಸುಮಾರು 10,000ರೂ.ಗಳವರೆಗೆ ಸಬ್ಸಿಡಿ ಅಥವಾ ಸಹಾಯಧನ ಸಿಗುತ್ತದೆ. ಉಳಿದ 70 ಪರ್ಸೆಂಟ್ ಅಂದರೆ ಉಳಿದ 40,000ರೂ. ಗಳನ್ನು ನೀವು 4ರ ಬಡ್ಡಿ ದರದಂತೆ ಸಾಲವಾಗಿ ತೀರಿಸಬೇಕಾಗುತ್ತದೆ.

• ಒಂದು ವೇಳೆ ನೀವೇನಾದರೂ 50,000ರೂ.ಗಳಿಂದ 1 ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಪಡೆಯಬೇಕೆಂದರೆ, ನಿಮಗೆ ಶೇಕಡ 20ರಷ್ಟು ಸಬ್ಸಿಡಿ ಅಥವಾ ಸಹಾಯಧನವನ್ನು ನೀಡಲಾಗುವುದು. ಅಂದರೆ ಸುಮಾರು 20,000ರೂ.ಗಳನ್ನು ಸಬ್ಸಿಡಿ ಅಥವಾ ಸಹಾಯಧನವನ್ನಾಗಿ ನೀಡಲಾಗುವುದು. ನಂತರ ಉಳಿದ 80,000 ಗಳನ್ನು 4ರ ಬಡ್ಡಿ ದರದಂತೆ ಸಾಲವಾಗಿ ನೀಡಲಾಗುತ್ತದೆ.

• ಅದೇ ರೀತಿಯಾಗಿ ನೀವು 2 ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಪಡೆಯಲು ಬಯಸಿದರೆ ನಿಮಗೆ ಶೇಕಡಾ 15ರಷ್ಟು ಅಂದರೆ ಗರಿಷ್ಠ 30,000 ರೂ.ಗಳವರೆಗೆ ಸಹಾಯಧನ ಅಥವಾ ಸಬ್ಸಿಡಿ ನೀಡಲಾಗುವುದು. ಇದಾದ ನಂತರ ಉಳಿದ ಮೊತ್ತವನ್ನು ಅಂದರೆ 1,70,000ರೂ. ಗಳನ್ನು ಶೇಕಡಾ 4ರ ಬಡ್ಡಿ ದರದಂತೆ ಸಾಲವಾಗಿ ನೀಡಲಾಗುವುದು.

ಹಾಗಾದರೆ ಇಂದು ನಾವು ಈ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯ ಪಡೆಯಲು ಇರಬೇಕಾದ ಅರ್ಹತೆಗಳೇನು ಎಂಬುದನ್ನು ತಿಳಿಯೋಣ.

• ಮೊದಲೇ ಹೇಳಿದಂತೆ ಅರ್ಜಿದಾರರು ಮೇಲೆ ಉಲ್ಲೆಕಿಸಿದ ಯಾವುದಾದರೂ ಒಂದು ವರ್ಗಕ್ಕೆ ಸೇರಿರಬೇಕಾಗುತ್ತದೆ.

• ಗ್ರಾಮೀಣ ಪ್ರದೇಶದಲ್ಲಿರುವ ಜನರು ಅಥವಾ ಅರ್ಜಿದಾರರ ವಾರ್ಷಿಕ ಆದಾಯ ಅಥವಾ ವರಮನ ಗರಿಷ್ಠ 40,000ರೂ. ಗಳನ್ನು ಮೀರಿರಬಾರದು. ಹಾಗೂ ಅದೇ ರೀತಿಯಾಗಿ ನಗರ ಪ್ರದೇಶದಲ್ಲಿ ಇರುವ ಜನರು ಅಥವಾ ಅರ್ಜಿದಾರರು ಗರಿಷ್ಠ 55,000ರೂ. ಗಳ ಆದಾಯವನ್ನು ಮೀರಿರಬಾರದು.

• ಈ ಯೋಜನಾ ಅಡಿಯಲ್ಲಿ ಸಾಲ ಸೌಲಭ್ಯವನ್ನು ಪಡೆಯಲು ಅರ್ಜಿದಾರರು ಕನಿಷ್ಠ ವಯಸ್ಸು 18 ಮತ್ತು ಗರಿಷ್ಠ ವಯಸ್ಸು 55 ಇರಬೇಕಾಗಿರುತ್ತದೆ.

• ಮುಖ್ಯವಾಗಿ ಈ ಯೋಜನೆ ಅಡಿಯಲ್ಲಿ ಸಾಲವನ್ನು ಪಡೆಯಲು ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.

• ಅದೇ ರೀತಿಯಾಗಿ ಇನ್ನೂ ತನಕ ಈ ಯೋಜನೆಯಡಿ ಅಥವಾ ಯಾವುದೇ ನಿಗಮದಿಂದ ಸಾಲದ ಸೌಲಭ್ಯವನ್ನು ಪಡೆದಿರಬಾರದು ಎಂಬುದಾಗಿ ಹೇಳಿರುತ್ತಾರೆ.

ಹಾಗಾದರೆ ಈಗ ನಾವು ಈ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯವನ್ನು ಪಡೆಯಲು ಅರ್ಜಿಯನ್ನು ಸಲ್ಲಿಸುವುದು ಹೇಗೆ ಎಂಬುದನ್ನು ತಿಳಿಯೋಣ.

» ನೀವು ಸ್ವಯಂ ವೈಯಕ್ತಿಕ ಉದ್ಯೋಗ ಸಲುವಾಗಿ ವೈಯಕ್ತಿಕ ಸಾಲವನ್ನು ಪಡೆಯಲು ಬಯಸಿದರೆ ಮೊದಲು ನೀವು ಸುವಿಧಾ ಕರ್ನಾಟಕ ಎಂಬ ಸರ್ಕಾರದ ವೆಬ್ ಸೈಟನ್ನು ತೆರೆಯ ಬೇಕಾಗುತ್ತದೆ.

» ಅಲ್ಲಿ ಮುಂದುವರಿಸಿ ಎಂಬುದಾಗಿ ನಮೂದಿಸಿರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ನಿಮ್ಮ ಭಾಷೆಯ ಆಯ್ಕೆಯನ್ನು ನೀಡುತ್ತದೆ. ನಂತರ ನೀವು ಭಾಷೆಯನ್ನು ಆಯ್ಕೆ ಮಾಡಬೇಕಾಗುತ್ತದೆ ಉದಾಹರಣೆಗೆ ಕನ್ನಡ ಇಂಗ್ಲೀಷ ಎಂದು ಅಲ್ಲಿ ಬರೆದಿರುತ್ತಾರೆ.

» ನಂತರ ನಿಮಗೆ ಲಾಗಿನ್ ಮಾಡಲು ಅಥವಾ ಅತಿಥಿಯಾಗಿ ಮುಂದುವರಿಸಲು ಕೇಳುತ್ತದೆ. ಮೊದಲಿಗೆ ನೀವು ಅಲ್ಲಿ ಅಕೌಂಟ್ ಅನ್ನು ಕ್ರಿಯೇಟ್ ಮಾಡಬೇಕಾಗುತ್ತದೆ. ಅಕೌಂಟನ್ನು ಕ್ರಿಯೇಟ್ ಮಾಡಲು ಮೊದಲು ನೀವು ವೆಬ್ ಸೈಟ್ ನಲ್ಲಿ ಸೈನ್ ಅಪ್ ಮಾಡಬೇಕಾಗಿರುತ್ತದೆ.

» ಅದರ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ಮೊಬೈಲ್ ನಂಬರ್ ನೀಡಬೇಕಾಗುತ್ತದೆ. ಮತ್ತು ನಿಮಗೆ ಕಳಿಸಿದ ಓಟಿಪಿ ಅನ್ನು ನಮೂದಿಸಿ ಮತ್ತು ನಿಮ್ಮ ಸ್ವಂತ ಪಾಸ್ವರ್ಡ್ ಅನ್ನು ಹಾಕಿ ಅಕೌಂಟ್ ಅನ್ನು ಕ್ರಿಯೇಟ್ ಮಾಡಬೇಕಾಗಿರುತ್ತದೆ.

» ಅಕೌಂಟ್ ಕ್ರಿಯೇಟ್ ಮಾಡಿದ ನಂತರ ನಿಮಗೆ ಸೈನ್ ಇನ್ ಎಂಬ ಆಯ್ಕೆ ನೀಡಲಾಗುತ್ತದೆ. ನೀವು ಅಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಪಾಸ್ವರ್ಡ್ ಅನ್ನು ಹಾಕಿ ಲಾಗಿನ್ ಆಗಬೇಕಾಗುತ್ತದೆ.

» ನೀವು ಲಾಗಿನ್ ಆದ ನಂತರ ಒಂದು ಮುಖಪುಟ ತೆಗೆದುಕೊಳ್ಳುತ್ತದೆ.

ಅದರಲ್ಲಿ ಯೋಜನೆಗಳು ಎಂಬುದಾಗಿ ನಮೂದಿಸಿರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ಅನೇಕ ರೀತಿಯ ಯೋಜನೆಗಳ ಪಟ್ಟಿಯನ್ನು ನೀಡಲಾಗುವುದು.

» ಅದರಲ್ಲಿ ನೀವು ಯಾವ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಬಯಸುವಿರೋ ಆ ಯೋಜನೆಯ ಮೇಲೆ ಕ್ಲಿಕ್ ಮಾಡಬೇಕಾಗಿರುತ್ತದೆ.

» ನೀವು ಡಿ ದೇವರಾಜ್ ಅರಸು ಹಿಂದುಳಿದ ವರ್ಗಗಳ ನಿಗಮದ ಕಡೆಯಿಂದ ಸ್ವಯಂ ಉದ್ಯೋಗಕ್ಕಾಗಿ ಸಾಲವನ್ನು ಪಡೆಯಲು ಬಯಸಿದರೆ ಆ ಯೋಜನೆ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.

» ಅಲ್ಲಿ ನಿಮಗೆ ಕೇಳಲಾದ

• ನಿಮ್ಮ ಹೆಸರು

• ಆಧಾರ್ ಕಾರ್ಡ್ ಸಂಖ್ಯೆ

• ಆದಾಯ ಪ್ರಮಾಣ ಪತ್ರ

• ನಿಮ್ಮ ಜಾತಿ ಮತ್ತು ಧರ್ಮ

• ನಿಮ್ಮ ವಿದ್ಯಾಭ್ಯಾಸದ ಮಾಹಿತಿಯನ್ನು ಅಲ್ಲಿ                       ನೀಡಬೇಕಾಗುತ್ತದೆ.

» ನಿಮ್ಮನ್ನು ಸಂಪರ್ಕಿಸಬಹುದಾದ ನಿಮ್ಮ ಮನೆಯ ವಿಳಾಸವನ್ನು ಸಹ ಅಲ್ಲಿ ನಮೂದಿಸಬೇಕಾಗುತ್ತದೆ. ಇದಾದ ನಂತರ ನೀವು ಮುಂದುವರಿಸಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿದ ಮೇಲೆ ನಿಮ್ಮ ಉದ್ಯೋಗದ ಮಾಹಿತಿಯನ್ನು ನೀಡಬೇಕಾಗುತ್ತದೆ.

» ಇದಾದ ನಂತರ ಅಲ್ಲಿ ನಿಮ್ಮ ಉದ್ಯೋಗದ ವರ್ಗವನ್ನು ಆಯ್ಕೆ ಮಾಡಲು ಹೇಳಲಾಗುತ್ತದೆ. ನಂತರ ನೀವು ಮುಂದುವರೆದಾಗ ಸ್ವಯಂ ಉದ್ಯೋಗ ಎಂಬ ಆಯ್ಕೆ ನೀಡಲಾಗುತ್ತದೆ. ಅರ್ಜಿದಾರರು ಅದರ ಮೇಲೆ ಕ್ಲಿಕ್ ಮಾಡಿ ಮುಂದುವರಿಯಬೇಕಾಗುತ್ತದೆ.

» ಅದರಲ್ಲಿ ನೀವು ಯಾವ ಕ್ಷೇತ್ರದಲ್ಲಿ ಸ್ವಯಂ ಉದ್ಯೋಗ ಮಾಡಲು ಬಯಸುವಿರೋ ಅದನ್ನು ಆಯ್ಕೆ ಮಾಡಬೇಕಾಗುತ್ತದೆ. ನಂತರ ಆ ಕ್ಷೇತ್ರದ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ನೀಡಲಾಗುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.

» ಇದಾದ ನಂತರ ನಿಮಗೆ ಅಲ್ಲಿ ಹಲವಾರು ಯೋಜನೆಗಳ ಪಟ್ಟಿಯನ್ನು ನೀಡಲಾಗುವುದು. ನೀವು ಅದರಲ್ಲಿ ಸ್ವಯಂ ಉದ್ಯೋಗಕ್ಕಾಗಿ ಸಾಲ ಪಡೆಯಲು ಬಯಸುವ ಡಿ ದೇವರಾಜ ಅರಸ್ ಸ್ವಯಂ ಉದ್ಯೋಗ ಸಾಲ ಎಂಬ ಯೋಜನೆಯನ್ನು ಆರಿಸಿಕೊಳ್ಳಬೇಕಾಗುತ್ತದೆ.

» ನೀವು ಅದರ ಮೇಲೆ ಕ್ಲಿಕ್ ಮಾಡಿದ ನಂತರ ನೀವು ಹಿಂದೆ ನೀಡಿದ ಮಾಹಿತಿಯನ್ನು ಪರಿಶೀಲಿಸಲು ಕೇಳುತ್ತದೆ. ಎಲ್ಲವೂ ಸರಿಯಾಗಿದೆ ಎಂಬುದನ್ನು ಅರಿತ ಮೇಲೆ ಮುಂದುವರೆಯಬೇಕಾಗುತ್ತದೆ.

» ಇದಾದ ನಂತರ ನಿಮಗೆ ನಿಮ್ಮ ವಯಸ್ಸಿನ ಪರಿಶೀಲನೆ ಕೇಳುತ್ತದೆ. ಹಾಗೂ ಅದೇ ರೀತಿಯಾಗಿ ಮೇಲೆ ಹೇಳಿರುವಂತಹ ಜಾತಿಯ ವರ್ಗಗಳಿಗೆ ಅರ್ಜಿದಾರರು ಸೇರಿರುವಿರಿ. ಎಂಬುದನ್ನು ಖಾತ್ರಿ ಮಾಡಲು ಹೇಳಲಾಗುತ್ತದೆ.

» ನಿಮ್ಮ ಕುಟುಂಬದ ವಾರ್ಷಿಕ ಆದಾಯವನ್ನು ನಮೂದಿಸಬೇಕಾಗುತ್ತದೆ. ನೀವು ಹಿಂದೆ ಯಾವುದಾದರು ನಿಗಮದ ಅಥವಾ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯವನ್ನು ಪಡೆದಿದ್ದರೆ ಅದರ ಮಾಹಿತಿಯನ್ನು ಸಹ ನೀಡಬೇಕಾಗುತ್ತದೆ.

» ನಂತರ ನೀವು ಸಾಲ ಪಡೆಯಲು ಬಯಸುವ ಸಾಲದ ಮೊತ್ತವನ್ನು ಅಲ್ಲಿ ಆಯ್ಕೆ ಮಾಡಬೇಕಾಗಿರುತ್ತದೆ. ಅಂದರೆ ನಿಮಗೆ ಸ್ವಯಂ ಉದ್ಯೋಗಕ್ಕಾಗಿ ಎಷ್ಟು ಹಣದ ಅವಶ್ಯಕತೆ ಬೇಕು ಎಂಬುದರ ಮಾಹಿತಿಯನ್ನು ನೀಡಬೇಕಾಗುತ್ತದೆ.

» ನಂತರ ನಿಮಗೆ ಈ ಯೋಜನೆ ಅಡಿ ಸಾಲ ಸೌಲಭ್ಯವನ್ನು ಪಡೆಯಲು ಬೇಕಾಗುವ ದಾಖಲಾತಿಗಳನ್ನು ಅಂದರೆ ಪ್ರಮಾಣ ಪತ್ರಗಳನ್ನು ಕೇಳಲಾಗುತ್ತದೆ.

» ನಂತರ ನಿಮಗೆ ಈ ಯೋಜನೆಯ ಅಡಿಯಲ್ಲಿ ಎಷ್ಟು ರೂಪಾಯಿ ಸಾಲವನ್ನು ನೀಡಲಾಗುತ್ತದೆ.

ಅದಕ್ಕೆ ಬೀಳುವ ಬಡ್ಡಿ ದರ ಮತ್ತು ಆ ಮೊತ್ತಕ್ಕೆ ನೀಡಲಾಗುವ ಸಬ್ಸಿಡಿ ಮಾಹಿತಿಯನ್ನು ನೀಡಲಾಗುತ್ತದೆ. ಹಾಗೂ ಅದೇ ರೀತಿಯಾಗಿ ನೀವು ಪಡೆದ ಸಾಲದ ಮೊತ್ತವನ್ನು ಮರುಪಾವತಿ ಹೇಗೆ ಮಾಡುವುದು ಎಂಬುದರ ಮಾಹಿತಿಯನ್ನು ಸಹ ನೀಡಲಾಗುತ್ತದೆ.

» ಇದಾದ ನಂತರ ನಿಮಗೆ ಈ ಯೋಜನೆ ಅಡಿ ಸಾಲ ಸೌಲಭ್ಯ ಪಡೆಯಲು ಬೇಕಾಗುವ ದಾಖಲಾತಿಗಳ ಪಟ್ಟಿಯನ್ನು ನೀಡಲಾಗುವುದು. ಈ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳೆಂದರೆ,

* ಆದಾಯ ಪ್ರಮಾಣ ಪತ್ರ

*ಅರ್ಜಿದಾರರ ಭಾವಚಿತ್ರ (ಪಾಸ್ ಪೊರ್ಟ್

ಸೈಜ್ ಫೋಟೋ )

* ಜಾತಿ ಪ್ರಮಾಣ ಪತ್ರ

* ಭೂಮಿ ಪತ್ರ

* ಹಕ್ಕು ಪತ್ರ

» ಈ ಮೇಲೆ ಹೇಳಿದ ದಾಖಲೆಗಳನ್ನು ಮತ್ತು ಮೇಲೆ ನಮದಿಸಲಾಗಿರುವ ಮಾಹಿತಿಯನ್ನು ಚೆನ್ನಾಗಿ ಓದಿದ ನಂತರ ನೀವು ಅರ್ಜಿಯನ್ನು ಸಲ್ಲಿಸಲು ಮುಂದುವರೆಸಬಹುದು.

» ನೀವು ಅರ್ಜಿಯನ್ನು ಸಲ್ಲಿಸಲು ಅರ್ಜಿದಾರರ ಆಧಾರ್ ಕಾರ್ಡ್ ನಂಬರ್ ಮತ್ತು ಅವರ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಅರ್ಜಿಯನ್ನು ಸಲ್ಲಿಸಲು ಮುಂದುವರೆಸಬಹುದು.

» ನಿಮ್ಮ ಆಧಾರ್ ಕಾರ್ಡ್ ಲಿಂಕ್ ಇರುವ ಮೊಬೈಲ್ ಸಂಖ್ಯೆ ಗೆ ಬಂದಿರುವ ಓಟಿಪಿಯನ್ನು ನಮೂದಿಸಿ ಮುಂದುವರೆಸಬೇಕಾಗುತ್ತದೆ.

» ಅರ್ಜಿ ಸಲ್ಲಿಸಲು ನಿಮಗೆ ಅಂದರೆ ಅರ್ಜಿದಾರರಿಗೆ ಕುಟುಂಬದ ಮಾಹಿತಿ, ವೈಯಕ್ತಿಕ ವಿವರಗಳು ಮತ್ತು ದಾಖಲಾತಿಗಳನ್ನು ಅಪ್ಲೋಡ್ ಮಾಡಲು ಕೇಳುತ್ತದೆ.

» ಕೊನೆಯದಾಗಿ ನೀವು ಅಂದರೆ ಅರ್ಜಿದಾರರು ಸ್ವಯಂ ದೃಡಿಕರಣವನ್ನು ನೀಡಬೇಕಾಗುತ್ತದೆ.

» ಕೊನೆಯದಾಗಿ ನೀವು ಎಲ್ಲಾ ಸರಿಯಾಗಿದೆ ಎಂಬುದನ್ನು ಖಚಿತಪಡಿಸಿಕೊಂಡ ನಂತರ ನಿಮ್ಮ ಅರ್ಜಿಯನ್ನು ಸುಭ್ಮಿಟ್( ಸಲ್ಲಿಸಬೇಕು)ಮಾಡಬೇಕೆಗುತ್ತದೆ.

» ನಂತರ ನೀವು ಸಲ್ಲಿಸಿದ ಅರ್ಜಿಯ ಪ್ರತಿಯನ್ನು ಪ್ರಿಂಟ್ ತೆಗೆದುಕೊಂಡು ಅದಕ್ಕೆ ನೀವು ಅಪ್ಲೋಡ್ ಮಾಡಿದ ದಾಖಲೆಗಳ ಪ್ರತಿಯನ್ನು ಅದರ ಜೊತೆಗೆ ಲಗತ್ತಿಸಬೇಕಾಗುತ್ತದೆ. ಈ ಎಲ್ಲಾ ದಾಖಲೆಗಳನ್ನು ನಿಮಗೆ ಹತ್ತಿರವಿರುವ ಅಥವಾ ನಿಮಗೆ ಸಂಬಂಧಪಟ್ಟ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮಕ್ಕೆ ಒಯ್ದು ನಿಮ್ಮ ಅರ್ಜಿಯನ್ನು ನೀಡಬೇಕಾಗುತ್ತದೆ.

» ಅಲ್ಲಿನ ಅಧಿಕಾರಿಗಳು ನಿಮ್ಮ ಅರ್ಜಿಯನ್ನು ಪರಿಶೀಲಿಸಿ ನಿಮಗೆ ಸಾಲ ಸೌಲಭ್ಯವನ್ನು ಒದಗಿಸುತ್ತಾರೆ.        ಈ ಯೋಜನೆಯ ಬಗೆಗಿನ ಹೆಚ್ಚ್ಚಿನ ವಿವರವಾದ ಮಾಹಿತಿಗಾಗಿ ನಿಮಗೆ ಹತ್ತಿರವಿರುವ ಅಥವಾ ನಿಮಗೆ ಸಂಬಂಧಪಟ್ಟ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮವನ್ನು ಸಂಪರ್ಕಿಸಿ.

ಸರ್ಕಾರವು ರೈತರ ಏಳಿಗೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಕೃಷಿ ಈಗಿನ ಕಾಲದಲ್ಲಿಯೂ ಸಹ ಭಾರತದ ಆರ್ಥಿಕತೆಯಲ್ಲಿ ಒಂದು ಪ್ರಮುಖ ಪಾತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ರೈತರು, ಸರ್ಕಾರ ಜಾರಿತರುವ ಇಂತಹ ಯೋಜನೆಗಳ ಲಾಭವನ್ನು ಪಡೆದುಕೊಂಡು ಕೃಷಿಯಲ್ಲಿ ಅಭಿವೃದ್ಧಿಯನ್ನು ಕಾಣಬೇಕು.

ಹೆಚ್ಚಿನ ಮಾಹಿತಿಗಾಗಿ

ಕೃಷಿ ವಾಹಿನಿ🌱

ವೆಬ್ಸೈಟ್ನ ಸಂಪರ್ಕದಲ್ಲಿರಿ..

Leave a Reply

Your email address will not be published. Required fields are marked *