ಪ್ರೀಯ ರೈತರೇ, ಕರ್ನಾಟಕ ರಾಜ್ಯ ಸರ್ಕಾರವು ಬಡವರಿಗಾಗಿ ಅದರಲ್ಲೂ ಕೂಲಿ ಕಾರ್ಮಿಕರಿಗೆ ಹಾಗೂ ದುಡಿಯುವವರಿಗಾಗಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಬಹಳಷ್ಟು ಜನರು ಈ ಯೋಜನೆಗಳ ಲಾಭವನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ. ಅಂತಹ ಯೋಜನೆಗಳಲ್ಲಿ ಕಾರ್ಮಿಕರ ಕಾರ್ಡ್ ಅಂದರೆ ಲೇಬರ್ ಕಾರ್ಡ್ ಯೋಜನೆಯು ಸಹ ಒಂದು.
ಈ ಯೋಜನೆಯ ಮುಖಾಂತರ ಬಡವರು, ನಿರ್ಗತಿಕರು, ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು ಮತ್ತು ಗಾರೆ ಕೆಲಸಗಾರರು, ಟೆಲರಿಂಗ್ ಕೆಲಸ ಮಾಡುವವರು, ಕೂಲಿ ಕಾರ್ಮಿಕರು ಹೀಗೆ ಬೇರೆ ಬೇರೆ ರೀತಿಯ ಕೆಲಸಗಳನ್ನು ಮಾಡುವ ಎಲ್ಲಾ ಕಾರ್ಮಿಕರು ಸಹ ಈ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ. ಈ ಕಾರ್ಡ್ ಅನ್ನು ಮಾಡಿಸುವುದರಿಂದ ಬರೋಬ್ಬರಿ 5 ಲಕ್ಷ ರೂಪಾಯಿವರೆಗೆ ಸಹಾಯಧನವನ್ನು ಈ ಯೋಜನೆ ಮೂಲಕ ಕಾರ್ಮಿಕರು ಅಂದರೆ ಕೂಲಿಯನ್ನು ಮಾಡುವ ಕೆಲಸಗಾರರು ಪಡೆಯಬಹುದಾಗಿದೆ. ಈ ಸಹಾಯಧನವನ್ನು ಕೇವಲ ಕಾರ್ಮಿಕರ ಕಾರ್ಡ್ ಅಥವಾ ಲೇಬರ್ ಕಾರ್ಡ್ ಹೊಂದಿರುವ ಜನರು ಮಾತ್ರ ಪಡೆಯಬಹುದಾಗಿದೆ.
ಬನ್ನಿ ಇವತ್ತಿನ ದಿನದಲ್ಲಿ ನಾವು ಕಾರ್ಮಿಕರ ಕಾರ್ಡ್ ಅಂದರೆ ಲೇಬರ್ ಕಾರ್ಡನ್ನು ಮಾಡಿಸಿಕೊಳ್ಳುವುದು ಹೇಗೆ?
ಮತ್ತು ಅದನ್ನು ಮಾಡಿಸಲು ನೀವು ಹೊಂದಿರಬೇಕಾದ ಅರ್ಹತೆಗಳೇನು?
ಅಂದರೆ ಯಾರೆಲ್ಲ ಈ ಕಾರ್ಡನ್ನು ಮಾಡಿಸಬಹುದು?
ಈ ಲೇಬರ್ ಕಾರ್ಡ್ ಅಥವಾ ಕಾರ್ಮಿಕರ ಕಾರ್ಡ್ ನಿಂದ ದೊರೆಯಬಹುದಾದ ಲಾಭಗಳೇನು?
ಎಂಬುದರ ಬಗ್ಗೆ ಇರುವ ವಿವರದ ಮಾಹಿತಿಯನ್ನು ಇಂದು ನಾವು ತಿಳಿದುಕೊಳ್ಳೋಣ.
ನೀವು ಸಹ ಕಾರ್ಮಿಕರಾಗಿದ್ದರೆ ಅಂದರೆ ದಿನಗೂಲಿ ನೌಕರರಾಗಿದ್ದರೆ ನೀವು ಈ ಯೋಜನೆಯ ಉಪಯೋಗವನ್ನು ಪಡೆದುಕೊಳ್ಳಬಹುದು.
ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಲೇಬರ್ ಕಾರ್ಡ್ ಯೋಜನೆ ಅಂದರೆ ಕಾರ್ಮಿಕರ ಕಾರ್ಡ್ ಯೋಜನೆಗೆ ಯಾರೆಲ್ಲ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ನೋಡುವುದಾದರೆ,
* ಕೂಲಿ ಕಾರ್ಮಿಕರು
* ಗಾರೆ ಕೆಲಸ ಮಾಡುವವರು
* ಎಲೆಕ್ಟ್ರಿಷಿಯನ್ ಕೆಲಸ ಮಾಡುವವರು
* ಪ್ಲಂಬರ್ ಕೆಲಸ
* ಪೇಂಟಿಂಗ್ ಕೆಲಸ
* ಟೈಲರಿಂಗ್ ಕೆಲಸ
* ರಸ್ತೆ ಡಾಂಬರೀಕರಣ
* ಬಡಿಗಿತನ
* ಅದೇ ರೀತಿ ವೈರಿಂಗ್ ಕೆಲಸ ಮಾಡುವವರು ಈ ಯೋಜನೆ ಅಡಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳಬಹುದು.
ಇವಷ್ಟೇ ಅಲ್ಲದೆ ಇನ್ನು ಹಲವಾರು ಬೇರೆ ಬೇರೆ ರೀತಿಯ ಕೂಲಿ ಕೆಲಸವನ್ನು ಮಾಡುವವರು ಸಹ ಲೇಬರ್ ಕಾರ್ಡ್ ಅಥವಾ ಕಾರ್ಮಿಕರ ಕಾರ್ಡನ್ನು ಪಡೆಯುವ ಅರ್ಹತೆಯನ್ನು ಹೊಂದಿರುತ್ತಾರೆ.
ಹಾಗಾದರೆ ಈ ಲೇಬರ್ ಕಾರ್ಡ್ ಮಾಡಿಸುವುದರಿಂದ ನಿಮಗೆ ಏನೇನು ಪ್ರಯೋಜನಗಳು ಸಿಗುತ್ತವೆ. ಎಂಬುದರ ಬಗ್ಗೆ ಇಂದು ನಾವು ತಿಳಿದುಕೊಳ್ಳೋಣ.
• ಮೊದಲಿಗೆ ನೋಡುವುದಾದರೆ ಲೇಬರ್ ಕಾರ್ಡ್ ಅಥವಾ ಕಾರ್ಮಿಕರ ಕಾರ್ಡ್ ಯೋಜನೆಯ ಅಡಿಯಲ್ಲಿ ನೊಂದಾಯಿತರಾದವರಿಗೆ 60 ವರ್ಷ ವಯಸ್ಸು ಆದ ನಂತರ ಅಥವಾ ಅರ್ಜಿದಾರರಿಗೆ 60 ವರ್ಷ ವಯಸ್ಸು ದಾಟಿದ ನಂತರ ಅವರಿಗೆ ಪ್ರತಿ ತಿಂಗಳು ಕನಿಷ್ಠ 1,000 ರೂಪಾಯಿಗಳ ಪಿಂಚಣಿ ಸೌಲಭ್ಯವು ಈ ಯೋಜನೆಯಡಿ ಎಲ್ಲ ಕಾರ್ಮಿಕರಿಗೂ ಲಭ್ಯವಿರುತ್ತದೆ.
• ಅದೇ ರೀತಿ ನೀವೇನಾದರೂ ಸ್ವಂತ ಮನೆಯನ್ನು ಕಟ್ಟುವ ಯೋಜನೆಯನ್ನು ಮಾಡಿಕೊಳ್ಳುತ್ತಿದ್ದರೆ, ನಿಮಗೆ ರಾಜ್ಯ ಸರ್ಕಾರದಿಂದ ಬರೋಬ್ಬರಿ 2 ಲಕ್ಷ ರೂಗಳ. ವರೆಗೆ ಸ್ವಂತ ಮನೆ ನಿರ್ಮಾಣಕ್ಕಾಗಿ ಈ ಯೋಜನೆ ಅಡಿ ಎಲ್ಲ ಕಾರ್ಮಿಕರಿಗೆ ರಾಜ್ಯ ಸರ್ಕಾರದಿಂದ ಸಹಾಯಧನವನ್ನು ನೀಡಲಾಗುತ್ತದೆ. ಅಂದರೆ ಇಲ್ಲಿ ಲೇಬರ್ ಕಾರ್ಡ್ ಅಥವಾ ಕಾರ್ಮಿಕರ ಕಾರ್ಡನ್ನು ಹೊಂದಿರುವ ಎಲ್ಲ ಅರ್ಜಿದಾರರು ಈ ಯೋಜನೆ ಲಾಭವನ್ನು ಪಡೆದುಕೊಳ್ಳಬಹುದು.
• ಒಂದು ವೇಳೆ 60 ವರ್ಷ ವಯಸ್ಸುಗಳ ನಂತರ ನೀವು ನಿವೃತ್ತಿ ಹೊಂದಿದರೆ ಅಥವಾ ನೀವು ಅಂಗವಿಕಲತೆಯನ್ನು ಹೊಂದಿದ್ದರೆ ನಿಮಗೆ ಗರಿಷ್ಠ 2,00,000ರೂಗಳ. ವರೆಗೆ ಅನುಗ್ರಹ ರಾಶಿ ಸಹಾಯಧನವನ್ನು ಎಲ್ಲ ಕಾರ್ಮಿಕರಿಗೆ ನೀಡಲಾಗುತ್ತದೆ. ಈ ಸಹಾಯಧನವನ್ನು ಕೇವಲ ಅಂಗವಿಕಲತೆಯನ್ನು ಹೊಂದಿರುವ ಫಲಾನುಭವಿಗಳಿಗೆ ಮಾತ್ರ ನೀಡಲಾಗುತ್ತದೆ.
• ಈ ಯೋಜನೆಗೆ ತಮ್ಮ ಹೆಸರನ್ನು ನೊಂದಾಯಿಸಿದ ದಂಪತಿಗಳಿಗೆ ಹೆಣ್ಣು ಮಗುವಿನ ಹೆರಿಗೆ ಬತ್ತೆಯಾಗಿ ರೂಪಾಯಿ 30,000ರೂ.ಗಳನ್ನು ಸಹಾಯಧನವಾಗಿ ನೀಡಲಾಗುತ್ತದೆ. ಒಂದು ವೇಳೆ ಗಂಡು ಮಗುವಾದರೆ ರೂಪಾಯಿ 20,000ರೂ. ಗಳ ಹೆರಿಗೆ ಬತ್ತೆಯಾಗಿ ರಾಜ್ಯ ಸರ್ಕಾರ ಈ ಯೋಜನೆ ಅಡಿ ನೀಡುತ್ತದೆ. ಈ ಸಹಾಯಧನವನ್ನು ಗರಿಷ್ಠ ಎರಡು ಮಕ್ಕಳಿಗೆ ಮಾತ್ರ ಈ ಯೋಜನೆಯ ಅಡಿಯಲ್ಲಿ ಸಹಾಯಧನವನ್ನು ಪಡೆಯಬಹುದಾಗಿದೆ.
• ನಿಮ್ಮ ಮಕ್ಕಳ ಶೈಕ್ಷಣಿಕ ವಿದ್ಯಾಭ್ಯಾಸಕ್ಕಾಗಿ ಅಥವಾ ಹೆಚ್ಚಿನ ಓದಿಗಾಗಿಯು ಸಹ ಈ ಯೋಜನೆ ಅಡಿ ಹಲವಾರು ಯೋಜನೆಗಳಿದ್ದು, ಒಂದರಿಂದ ಡಿಗ್ರೀ ಓದುವ ಮಕ್ಕಳಿಗೆ ಕನಿಷ್ಠ 2,000ರೂ. ಗಳಿಂದ ಗರಿಷ್ಠ 20 ಸಾವಿರ ರೂಪಾಯಿಗಳವರೆಗೆ ವಿದ್ಯಾರ್ಥಿ ವೇತನವನ್ನು ಪ್ರತಿ ವರ್ಷ ಕಾರ್ಮಿಕರ ಮಕ್ಕಳಿಗೆ ಈ ಲೇಬರ್ ಕಾರ್ಡ್ ಅಥವಾ ಕಾರ್ಮಿಕರ ಕಾರ್ಡ್ ಯೋಜನೆ ಅಡಿ ನೀಡಲಾಗುತ್ತದೆ.
• ಇದೇ ರೀತಿ ಎಸ್.ಎಸ್.ಎಲ್.ಸಿ ಇಂದ ಡಿಗ್ರಿವರೆಗೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಂದರೆ ಕನಿಷ್ಠ ಶೇಕಡಾ 75ರಷ್ಟು ಪ್ರತಿಶತ ಅಂಕಗಳಿಂದ ಪಾಸಾದ ಅಂತಹ ವಿದ್ಯಾರ್ಥಿಗಳಿಗೆ ಕನಿಷ್ಠ 5,000ರೂ.ಗಳಿಂದ ಗರಿಷ್ಠ 15 ಸಾವಿರ ರೂಪಾಯಿಗಳವರೆಗೆ ಪ್ರತಿಭಾ ಪುರಸ್ಕಾರವನ್ನು ಸಹ ಈ ಯೋಜನೆ ಅಡಿಯಲ್ಲಿ ನೀಡಲಾಗುತ್ತದೆ.
• ಇದಾದ ನಂತರ ಈ ಲೇಬರ್ ಕಾರ್ಡ್ ಅಥವಾ ಕಾರ್ಮಿಕರ ಕಾರ್ಡ್ ಯೋಜನೆಯ ಅಡಿಯಲ್ಲಿ ಕಾರ್ಮಿಕರಿಗೆ ವೈದ್ಯಕೀಯ ಸಹಾಯಧನವನ್ನು ಸಹ ನೀಡಲಾಗುತ್ತದೆ. ಕಾರ್ಮಿಕರು ಆಕಸ್ಮಿಕವಾಗಿ ಮೃತರಾದರೆ, ಅವರ ಮೃತರ ಕುಟುಂಬಕ್ಕೆ ನಷ್ಟ ಪರಿಹಾರವಾಗಿ ಸೂಮಾರು 5 ಲಕ್ಷ ರೂಪಾಯಿಗಳವರೆಗೆ ಸಹಾಯಧನವನ್ನು ನೀಡಲಾಗುತ್ತದೆ. ಒಂದು ವೇಳೆ ಕಾರಣಾಂತರಗಳಿಂದ ಶಾಶ್ವತ ಅಂಗವಿಕಲತೆಯನ್ನು ಹೊಂದಿದ್ದರೆ ಅಥವಾ ಶಾಶ್ವತ ಅಂಗವಿಕಲರಾದರೆ ಅಂತಹ ಅಭ್ಯರ್ಥಿಗಳಿಗೆ ಎರಡು ಲಕ್ಷ ರೂಪಾಯಿಗಳವರೆಗೆ ಸಹಾಯಧನವನ್ನು ಈ ಯೋಜನೆ ಅಡಿ ನೀಡಲಾಗುತ್ತದೆ. ಇದಲ್ಲದೆ ಭಾಗಶಃ ಅಂಗವಿಕಲತೆಯನ್ನು ಹೊಂದಿದ್ದರೆ ಅಥವಾ ಭಾಗಶಃ ಅಂಗವಿಕಲರಾದರೆ ಅಂತಹ ಅಭ್ಯರ್ಥಿಗಳಿಗೆ ಬರೋಬ್ಬರಿ 1 ಲಕ್ಷ ರೂಪಾಯಿಗಳ ವರೆಗೆ ಸಹಾಯಧನವನ್ನು ರಾಜ್ಯ ಸರ್ಕಾರದಿಂದ ಎಲ್ಲ ಕೂಲಿ ಕಾರ್ಮಿಕರಿಗೆ ನೀಡಲಾಗುತ್ತದೆ. ಅಂದರೆ ಲೇಬರ್ ಕಾರ್ಡ್ ಅಥವಾ ಕಾರ್ಮಿಕರ ಕಾರ್ಡ್ ಹೊಂದಿದವರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.
# ಅದೇ ರೀತಿ ವೈದ್ಯಕೀಯ ವೆಚ್ಚವಾಗಿ,ಮನುಷ್ಯರಿಗೆ ಹೆಚ್ಚಾಗಿ ಬರುವಂತಹ ಪ್ರಮುಖ ರೋಗಗಳಾದ,
* ಹೃದಯ ರೋಗ
* ಕಿಡ್ನಿ ವೈಫಲ್ಯ
* ಕ್ಯಾನ್ಸರ್
* ಕಣ್ಣಿನ ಚಿಕಿತ್ಸೆ
* ಅಸ್ತಮಾ ಮತ್ತು
* ಗರ್ಭಪಾತ
ಇಂತಹ ಅನೇಕ ಪ್ರಕರಣಗಳಲ್ಲಿ ಗರಿಷ್ಠ ಎರಡು ಲಕ್ಷ ರೂಪಾಯಿಗಳವರೆಗೆ ಸಹಾಯಧನವನ್ನು ರಾಜ್ಯ ಸರ್ಕಾರದಿಂದ ಈ ಯೋಜನೆ ಅಡಿ ಸಹಾಯಧನವನ್ನು ನೀಡಲಾಗುತ್ತದೆ.
• ಅದೇ ರೀತಿ ಕಟ್ಟಡ ಕಾರ್ಮಿಕರಿಗೆ ಅಥವಾ ಕೂಲಿ ಕಾರ್ಮಿಕರಿಗೆ ತಮ್ಮ ಸ್ವಂತ ಮದುವೆ ಮಾಡಿಕೊಳ್ಳಲು ಇಲ್ಲವೇ ತಮ್ಮ ಇಬ್ಬರ ಮಕ್ಕಳ ಮದುವೆಯ ಖರ್ಚಿಗಾಗಿ ತಲಾ ಇವತ್ತು ಸಾವಿರ ರೂಪಾಯಿಗಳ ಸಹಾಯಧನವನ್ನು ಮದುವೆಗಾಗಿ ರಾಜ್ಯ ಸರ್ಕಾರದಿಂದ ಈ ಯೋಜನೆ ಅಡಿಯಲ್ಲಿ ನೀಡಲಾಗುತ್ತದೆ.
• ಇವಷ್ಟೇ ಪ್ರಯೋಜನಗಳಲ್ಲದೆ ಕಾರ್ಮಿಕರ ಕಾರ್ಡ್ ಅಥವಾ ಲೇಬರ್ ಕಾರ್ಡನ್ನು ಹೊಂದಿದವರಿಗೆ ರಾಜ್ಯ ಸರ್ಕಾರವು ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿಯಲ್ಲಿ ರಿಯಾಯಿತಿ ದರದಲ್ಲಿ ಪಾಸುಗಳನ್ನು ವಿತರಣೆ ಮಾಡಲಾಗುತ್ತದೆ.
• ಇಷ್ಟೆಲ್ಲಾ ಪ್ರಯೋಜನ ನೀಡುವ ಈ ಲೇಬರ್ ಕಾರ್ಡ್ ಅಥವಾ ಕಾರ್ಮಿಕರ ಕಾರ್ಡನ್ನು ಮಾಡಿಸುವುದು ಹೇಗೆ?
ಈ ಕಾರ್ಡ್ ಅನ್ನು ಪಡೆಯಲು ಅರ್ಜಿಯನ್ನು ಹೇಗೆ ಸಲ್ಲಿಸಬೇಕು?
ಮತ್ತು ಅರ್ಜಿಯೊಂದಿಗೆ ಲಗತಿಸಬೇಕಾದ ದಾಖಲೆಗಳೇನು?
ಇದರ ಬಗೆಗಿನ ಸಂಪೂರ್ಣವಾದ ಮಾಹಿತಿಯನ್ನು ಇಲ್ಲಿ ಕೆಳಗಡೆ ನೀಡಲಾಗಿದೆ.
• ನೀವು ಕಟ್ಟಡ ಕಾರ್ಮಿಕರು ಅಥವಾ ಯಾವುದೇ ರೀತಿಯ ಕಾರ್ಮಿಕರಾಗಿದ್ದಾರೆ ಈ ಯೋಜನೆಯ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಲು ಅರ್ಹತೆಯನ್ನು ಹೊಂದಿರುತ್ತೀರಿ.
• ನಿಮ್ಮ ಕನಿಷ್ಠ ವಯಸ್ಸು 18 ವರ್ಷವಾಗಿರಬೇಕು ಮತ್ತು ನಿಮ್ಮ ಗರಿಷ್ಠ ವಯಸ್ಸು 60 ವರ್ಷವಾಗಿರಬೇಕು. ಇಂತಹ ಅಭ್ಯರ್ಥಿಗಳು ಮಾತ್ರ ಈ ಯೋಜನೆಯ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
• ಅದೇ ರೀತಿಯಾಗಿ ನೀವು ಹೊಂದಿರಬೇಕಾದ ದಾಖಲೆಗಳನ್ನು ನೋಡುವುದಾದರೆ,
* ಪ್ರಮುಖವಾಗಿ ಮೊಬೈಲ್ ನಂಬರ್ ಲಿಂಕ್ ಆಗಿರುವ ಆಧಾರ್ ಕಾರ್ಡ್
* ರೇಷನ್ ಕಾರ್ಡ್
* ವೋಟರ್ ಐಡಿ ಮತ್ತು
* ನೀವು ಕೆಲಸ ಮಾಡುತ್ತಿರುವ ಗುತ್ತಿಗೆದಾರರು ಅಥವಾ ಮೇಸ್ತ್ರಿಯವರಿಂದ ಪಡೆದ ಒಂದು ಪ್ರಮಾಣ ಪತ್ರ.
• ಈ ಅರ್ಜಿಗಳ ನಮೂನೆಯನ್ನು ನೀವು ಹತ್ತಿರವಿರುವ ಕಂಪ್ಯೂಟರ್ ಸೆಂಟರ್ ನಲ್ಲಿ ಅಥವಾ ಗ್ರಾಹಕ ಸೇವಾ ಕೇಂದ್ರಗಳಲ್ಲಿ ಅಥವಾ ನಿಮಗೆ ಹತ್ತಿರವಿರುವ ಕಾರ್ಮಿಕ ಇಲಾಖೆಯಲ್ಲಿ ನೀವು ಈ ಅರ್ಜಿಗಳ ನಮೂನೆಯನ್ನು ಪಡೆಯಬಹುದು.
• ಕಾರ್ಮಿಕ ಇಲಾಖೆಯ ವೆಬ್ ಸೈಟನಲ್ಲಿ ದೊರೆಯುವ ನಮೂನೆಯ ಫಾರ್ಮ್ ಅನ್ನು ಭರ್ತಿ ಮಾಡಿ, ಅರ್ಜಿಯನ್ನು ಸಲ್ಲಿಸುವ ಮೂಲಕ ಈ ಯೋಜನೆಯ ಎಲ್ಲ ಲಾಭಗಳನ್ನು ನೀವು ಪಡೆಯಬಹುದು.
• ಈ ಯೋಜನೆ ಬಗ್ಗೆ ಮತ್ತು ಈ ಅರ್ಜಿಗಳ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ನಿಮ್ಮ ಹತ್ತಿರದ ಕಾರ್ಮಿಕರ ಇಲಾಖೆಯ ಕಚೇರಿಗೆ ಭೇಟಿ ನೀಡಬೇಕಾಗುತ್ತದೆ. ಇಲ್ಲವೇ ಗ್ರಾಹಕ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡ ನಂತರ ಈ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
• ಒಂದು ವೇಳೆ ನೀವು ಈ ಯೋಜನೆಯಡಿ ಯಾವುದಾದರು ಸಮಸ್ಯೆಗಳನ್ನು ಎದುರಿಸಿದರೆ, ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಹಾಯವಾಣಿ ಸಂಖ್ಯೆಯನ್ನು ನೀಡಲಾಗಿದ್ದು, ನೀವು ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ, ನಿಮ್ಮ ಎಲ್ಲ ಸಮಸ್ಯೆಗಳನ್ನು ನೀವು ಬಗೆಹರಿಸಿಕೊಳ್ಳಬಹುದಾಗಿದೆ.
• ಈ ಯೋಜನೆಗೆ ಸಂಬಂಧಪಟ್ಟ ಅರ್ಜಿಯ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಲು ವೆಬ್ ಸೈಟ್ ವಿಳಾಸವನ್ನು ಮತ್ತು ಸಹಾಯವಾಣಿ ಸಂಖ್ಯೆಯನ್ನು ಇಲ್ಲಿ ಕೆಳಗೆ ನೀಡಲಾಗಿದೆ.
* ವೆಬ್ ಸೈಟ್ ವಿಳಾಸ :
> https://labouronline.kar.nic.in > ಸಹಾಯವಾಣಿ ಸಂಖ್ಯೆ:155214 ನೀವು ಈ ಮೇಲೆ ಕಾಣುತ್ತಿರುವ ಸಹಾಯವಾಣಿಗೆ ಕರೆ ಮಾಡಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಅದೇ ರೀತಿಯಾಗಿ ಈ ಯೋಜನೆ ಬಗ್ಗೆ ಯಾವುದೇ ಮಾಹಿತಿ ಬೇಕಾಗಿದ್ದಾರೆ ಮೇಲೆ ಕಾಣುತ್ತಿರುವ ವೆಬ್ ಸೈಟ್ಗಳ ವಿಳಾಸವನ್ನು ಸಂಪರ್ಕಿಸಬಹುದು.
• ರಾಜ್ಯ ಸರ್ಕಾರವು ಕಾರ್ಮಿಕರ ಕಾರ್ಡ್ ಅಂದರೆ ಲೇಬರ್ ಕಾರ್ಡ್ ಮುಖಾಂತರ ರಾಜ್ಯದ ಕೂಲಿ ಕಾರ್ಮಿಕರಿಗೆ ಮತ್ತು ದುಡಿಯುವವರಿಗೆ ಹತ್ತು ಹಲವಾರು ಪ್ರಯೋಜನಗಳನ್ನು ನೀಡುತ್ತಾ ಬಂದಿದೆ.
ಈಗಾಗಲೇ ಬಹಳಷ್ಟು ಜನರು ಈ ಯೋಜನೆಯ ಲಾಭವನ್ನು ಪಡೆದುಕೊಂಡಿದ್ದಾರೆ. ಇನ್ನು ಕೆಲವರು ಈ ಲೇಬರ್ ಕಾರ್ಡ್ ಅಥವಾ ಕಾರ್ಮಿಕರ ಕಾರ್ಡನ್ನು ಮಾಡಿಸಿಕೊಂಡಿದ್ದರು ಸಹ ಇನ್ನೂ ಲಕ್ಷಾಂತರ ಜನರಿಗೆ ಈ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲ. ಹಾಗಾಗಿ ನೀವು ಸಹ ಲೇಬರ್ ಕಾರ್ಡ್ ಮಾಡಿಸಿಕೊಳ್ಳದಿದ್ದರೆ ಇಂದೇ ಲೇಬರ್ ಕಾರ್ಡ್ ಮಾಡಿಸಿಕೊಳ್ಳಲು ಅರ್ಜಿಸಲ್ಲಿಸಿ ಮತ್ತು ಈ ಯೋಜನೆಯ ಲಾಭಗಳನ್ನು ಪಡೆಯಿರಿ.
ಅದೇ ರೀತಿ ನಿಮ್ಮ ಸ್ನೇಹಿತರು ಅಥವಾ ನಿಮ್ಮ ಸಂಬಂಧಿಕರು ಈ ಕಾರ್ಡನ್ನು ಮಾಡಿಸಿಕೊಂಡಿಲ್ಲವೆಂದರೆ ಅಂಥವರಿಗೆ ಈ ಯೋಜನೆ ಬಗ್ಗೆ ಮಾಹಿತಿಯನ್ನು ನೀಡಿ ಲೇಬರ್ ಕಾರ್ಡ್ ಅಥವಾ ಕಾರ್ಮಿಕರ ಕಾರ್ಡನ್ನು ಮಾಡಿಸಿಕೊಳ್ಳಲು ಸಹಾಯ ಮಾಡಿ.
ಈ ಲೇಬರ್ ಕಾರ್ಡ್ ಅಥವಾ ಕಾರ್ಮಿಕರ ಕಾರ್ಡ್ ನ ಯೋಜನೆಯ ಬಗ್ಗೆ ಹೆಚ್ಚ್ಚಿನ ಮಾಹಿತಿಗಾಗಿ ನಿಮಗೆ ಹತ್ತಿರವಿರುವ ಅಥವಾ ನಿಮ್ಮ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಿರಿ. ಸರ್ಕಾರವು ರೈತರ ಏಳಿಗೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಕೃಷಿ ಈಗಿನ ಕಾಲದಲ್ಲಿಯೂ ಸಹ ಭಾರತದ ಆರ್ಥಿಕತೆಯಲ್ಲಿ ಒಂದು ಪ್ರಮುಖ ಪಾತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ರೈತರು, ಸರ್ಕಾರ ಜಾರಿತರುವ ಇಂತಹ ಯೋಜನೆಗಳ ಲಾಭವನ್ನು ಪಡೆದುಕೊಂಡು ಕೃಷಿಯಲ್ಲಿ ಅಭಿವೃದ್ಧಿಯನ್ನು ಕಾಣಬೇಕು.ಮೇಲೆ ಪ್ರಕಟಸಿರುವ ಹಾಗೆ ಲೇಬರ್ ಕಾರ್ಡ್ ರೈತರಿಗೆ ಎಷ್ಟು ಉಪಯೋಗಕರವಾಗಿದೆ. ಎಲ್ಲಾ ರೈತರು ಇದರ ಸೌಲಭ್ಯವನ್ನು ಪಡೆಯರಿ. ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಎಲ್ಲಾ ತರಹದ ಸ್ಕಾಲರಿಶಿಪ್ ಪಡೆಯಿರಿ
ಇದರ ಸದುಪಯೋಗ ಪಡಿಸಿಕೊಂಡು ರೈತರು ಅಭಿವೃದ್ಧಿ ಹೊಂದಬೇಕು ಎನ್ನುವ ದೃಷ್ಟಿಯಿಂದ ಸರ್ಕಾರವು ಮಹತ್ವದ ಕಾರ್ಯ ಮಾಡುತ್ತಿದೆ. ಹಾಗೂ ರೈತರು ಸ್ವಾವಲಂಬಿ ಜೀವನ ನಡೆಸಲು ಇದು ಪ್ರಮುಖ ಪಾತ್ರ ವಹಿಸುತ್ತದೆ.
ಹೆಚ್ಚಿನ ಮಾಹಿತಿಗಾಗಿ
ಕೃಷಿ ವಾಹಿನಿ🌱
ವೆಬ್ಸೈಟ್ನ ಸಂಪರ್ಕದಲ್ಲಿರಿ..