ನಮಸ್ಕಾರ ಪ್ರೀಯ ರೈತ ಭಾಂಧವರೇ, ಕೃಷಿ ಈಗಿನ ಕಾಲದಲ್ಲಿಯೂ ಸಹ ಭಾರತದ ಆರ್ಥಿಕತೆಯಲ್ಲಿ ಒಂದು ಪ್ರಮುಖ ಪಾತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಇಂದು ನಾವು ಕೃಷಿಯಲ್ಲಿ ಪ್ಲಾಸ್ಟಿಕ್ ಹೊದಿಕೆ ಇಂದಾಗಿ ಆಗುವ ಉಪಯೋಗಗಳೇನು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ಮಣ್ಣಿನಲ್ಲಿಯ ತೇವಾಂಶವು ಯಾವುದೇ ಬೆಳೆಯ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತದೆ. ಕೃಷಿಯಲ್ಲಿ ಸಂಶೋಧನೆಗಳು ಕಾಲ ಕಾಲಕ್ಕೆ ಹೊಸ ವಿಷಯಗಳ ಮೇಲೆ ಹೊಸ ಬೆಳಕು ಚೆಲ್ಲುತ್ತವೆ. ಪರೋಪಜೀವಿ ಕಳೆಯ ನಿಯಂತ್ರಣಕ್ಕಾಗಿ ಭೂ ಹೊದಿಕೆಯಾಗಿ ಪ್ಲಾಸ್ಟಿಕ್ ಹಾಳೆಯ ಬಳಕೆ ಪ್ರಾರಂಭವಾಯಿತು.ಆದರೆ ಇದೇ ತಂತ್ರಜ್ಞಾನವನ್ನು ಬೆಳೆಗಳ ಉತ್ಪಾದಕತೆಯನ್ನು ಹೆಚ್ಚಿಸಲೂ ಸಮರ್ಥವಾಗಿ ಬಳಸಬಹುದೆಂಬುದು ಈಗ ಸಿದ್ಧಪಟ್ಟಿದೆ. ಮಿತವಾದ ನೀರಿನಲ್ಲಿ ಶೇಂಗಾ, ತೊಗರಿ, ಖರಬೂಜ, ಕಲ್ಲಂಗಡಿ, ಸ್ಟಾಬೇರಿ ಮುಂತಾದವುಗಳನ್ನು ಲಾಭದಾಯಕವಾಗಿ ಬೆಳೆಯಬಹುದೆಂಬುದನ್ನು ನಾವು ಇಂದು ವಿವರವಾಗಿ ತಿಳಿದುಕೊಳ್ಳೋಣ.

ಮೂಲತಃ ಕಳೆ ನಿರ್ವಹಣೆ ಅದರಲ್ಲೂ ಒರೋಬ್ಯಾಂಕೆ (ತಂಬಾಕು) ಪರೋಪಜೀವಿ ಕಳೆ ನಿಗ್ರಹಿಸುವುದಕ್ಕೆ ಮತ್ತು ಭೂಮಿಯಲ್ಲಿನ ಸಸ್ಯರೋಗಾಣುಗಳ (ನಿಮ್ಯಾಟೋಡ) ನಿಗ್ರಹದ ಉದ್ದೇಶದಿಂದ ಆರಂಭವಾದ ಪ್ಲಾಸ್ಟಿಕ್ ಭೂ ಹೊದಿಕೆಯ ಸೌರೋಷ್ಟ್ರೀಕರಣ ತಾಂತ್ರಿಕತೆಯನ್ನು ಇದೀಗ ಬೆಳೆ ಉತ್ಪಾದನೆಯಲ್ಲೂ ವಿಸ್ತರಿಸಲಾಗುತ್ತಿದೆ. ಈಗಾಗಲೇ ಬೆಳಗಾವಿಯ ಗಡಿಭಾಗಗಳಲ್ಲಿ ಬೇಸಿಗೆ ಹಂಗಾಮಿನಲ್ಲಿ ಶೇಂಗಾ ಬೆಳೆಯನ್ನು, ಗುಲ್ಬರ್ಗಾ ಹತ್ತಿರದ ಪರಹತಾಬಾದಿನಲ್ಲಿ ಖರಬೂಜ ಮತ್ತು ಕಲ್ಲಂಗಡಿಹಣ್ಣು ಬೆಳೆಗಳ ಬೇಸಾಯದಲ್ಲೂ, ಬೀದರ ಭಾಗದಲ್ಲಿ ತೊಗರಿ ಮತ್ತು ಕಲ್ಲಂಗಡಿ ಅಂತರ ಬೆಳೆ ಬೇಸಾಯದಲ್ಲೂ ಮತ್ತು ಇದರಂತೆ ಸ್ಟ್ರಾಬೆರಿ ಬೇಸಾಯದಲ್ಲೂ ಲಾಭದಾಯಕವಾಗಿ ಈ ತಾಂತ್ರಿಕತೆ ಅಳವಡಿಸಿಕೊಂಡಿದ್ದು ಕಂಡುಬಂದಿದೆ. ಆರ್ಥಿಕ ಬೆಳೆಗಳಲ್ಲಿ ಪ್ಲಾಸ್ಟಿಕ್ ಹೊದಿಕೆ ಲಾಭದಾಯಕವಾಗಿ ಬಳಸಬಹುದು.

ಚಳಿ ಪ್ರದೇಶಗಳಲ್ಲಿ ಭೂಮಿಯ ಉಷ್ಣತೆಯನ್ನು ಹೆಚ್ಚಿಸಲು ಈ ತಂತ್ರಜ್ಞಾನದ ಬಳಕೆಯಾಗುತ್ತಿದ್ದರೂ ಉತ್ತರ ಕರ್ನಾಟಕದ ಹೆಚ್ಚು ಉಷ್ಣತೆಯ ಪ್ರದೇಶದಲ್ಲಿ ಎಲ್ಲ ಹಂಗಾಮುಗಳಲ್ಲಿ ಯಾವುದೇ ವಿಶೇಷ ದುಷ್ಪರಿಣಾಮವಿಲ್ಲದೆ ಈ ತಂತ್ರಜ್ಞಾನದ ಬಳಕೆ ಸಾಧ್ಯವೆಂದು ರೈತರ ಅನುಭವ. ಮುಖ್ಯವಾಗಿ ನೀರಿನ ಸೌಲಭ್ಯ ಕಡಿಮೆ ಇರುವ ಪ್ರದೇಶಗಳಲ್ಲಿ ನೀರಿನ ಪೋಲಾಗುವಿಕೆಯನ್ನು ಕಡಿಮೆ ಮಾಡುವುದಲ್ಲದೆ ಇದ್ದ ಕಡಿಮೆ ನೀರಿನ ಸದ್ಬಳಕೆಯೊಂದಿಗೆ ಆರ್ಥಿಕ ಬೆಳೆಗಳನ್ನು ಬೆಳೆಯುವ ಸಾಧ್ಯತೆಯೇ ಈ ತಂತ್ರಜ್ಞಾನದ ವಿಶೇಷತೆ.

• ಪಾಲಿಇಥಿಲಿನ್ ಭೂ ಹೊದಿಕೆ ತಂತ್ರಜ್ಞಾನದಲ್ಲಿ ಬರುಮಡಿಯ ಸಾಗುವಳಿ ಮಾಡಿ ಹದ ಮಾಡಿದ ಜಮೀನಿನಲ್ಲಿ ಏರು ಮಡಿಗಳನ್ನು ನಿರ್ಮಿಸಿ (ಸುಮಾರು ೧ ಮೀ. ಅಗಲ ಮತ್ತು ಅನುಕೂಲಕ್ಕೆ ತಕ್ಕಂತೆ ಉದ್ದಳತೆ).

• ಒಂದು ಸಾಮಾನ್ಯ ನೀರನ್ನು ಕೊಟ್ಟು ಪಾಲಿಇಥಿಲಿನ್ ಹಾಳೆಯ ರೋಲನ್ನು ಹರಡಲಾಗುತ್ತದೆ. ಹೀಗೆ ಹರಡಿದ ಹಾಳೆಯ ಅಂಚುಗಳನ್ನು ಎರಡೂ ಪಕ್ಕಗಳಲ್ಲಿ ಭೂಮಿಯಲ್ಲಿ ಸೇರಿಸಿ ಭದ್ರ ಮಾಡಬೇಕು. ಈ ಹಂತದಲ್ಲಿ ಹನಿ ನೀರಾವರಿ ಲ್ಯಾಟರಲ್ ಲೈನನ್ನು ಪ್ಲಾಸ್ಟಿಕ್ ಹೊದಿಕೆಯ ಕೆಳಗಡೆ ಏರುಮಡಿಯ ಮಧ್ಯದಲ್ಲಿ ಬರುವಂತೆ ಅಳವಡಿಸಬೇಕು.

• ಹೀಗೆ ಬಿತ್ತನೆ ಪೂರ್ವದ ಸಿದ್ಧತೆ ಮಾಡಿಕೊಳ್ಳಬೇಕು. ಮುಂದೆ ಬಿತ್ತನೆ ಸಮಯದಲ್ಲಿ ಬಿತ್ತುವ ಬೆಳೆಯ ಬಿತ್ತನೆ ಅಂತರಗನುಗುಣವಾಗಿ ೧, ೨ ಅಥವಾ ೩ ಸಾಲುಗಳಲ್ಲಿ ಪ್ಲಾಸ್ಟಿಕ್ ಹೊದಿಕೆಯಲ್ಲಿ ರಂಧ್ರಕೊರೆಯುವ ಸಾಧನದಿಂದ ರಂದ್ರ ಕೊರೆದು ಆ ರಂದ್ರಗಳಲ್ಲಿ ಬೆಳೆಯ ಬೀಜವನ್ನು ಇಲ್ಲವೆ ಬೆಳೆ ಸಸಿಯನ್ನು ನಾಟಿ ಮಾಡಬೇಕು.

• ಬೆಳೆಗೆ ಸುಮಾರು ೨ ಅಂಗುಲದ ಆಳದವರೆಗೆ ಬಿತ್ತನೆ ಮಾಡಬೇಕು. ಭೂಮಿಯಿಂದ ಒದಗಿಸಬೇಕಾದ ಅವಶ್ಯಕ ಪೋಷಕಾಂಶಗಳನ್ನು ರಸಾವರಿ ವ್ಯವಸ್ಥೆಯ ಮೂಲಕ ಒದಗಿಸಬೇಕು. ರಸಾವರಿ ವ್ಯವಸ್ಥೆಯಿಂದ ಪೋಷಕಾಂಶಗಳ ಪೋಲಾಗುವಿಕೆ ತಪ್ಪಿ ರಸಗೊಬ್ಬರಗಳ ಸದ್ಬಳಕೆ ಪ್ರಮಾಣ ಹೆಚ್ಚಾಗುತ್ತದೆ.

• ಪ್ಲಾಸ್ಟಿಕ್ ಹಾಳೆ ಒಮ್ಮೆ ಬಳಸಿದನಂತರ ಮತ್ತೊಮ್ಮೆ ಸಾಮಾನ್ಯವಾಗಿ ಸಾಧ್ಯವಾಗುವುದಿಲ್ಲ. ನೀರು, ಸೌರ ಶಾಖ ಇತ್ಯಾದಿಗಳೊಂದಿಗಿನ ರಾಸಾಯನಿಕ ಕ್ರಿಯೆಯಿಂದಾಗಿ ಬಿರುಸಾಗಿ ಹಾಳೆಯಲ್ಲಿ ಸೀಳುಗಳು ಉಂಟಾಗಬಹುದು. ಮತ್ತು ಮೊದಲು ಹರಡಿದ ಹಾಳೆ ಚೆನ್ನಾಗಿದ್ದರೂ ನಿಶಕ್ತವಾಗಿರುವುದರಿಂದ ಮರುಬಳಕೆಗೆ ಪ್ರಯತ್ನ ಪಟ್ಟಾಗ ತುಂಡುತುಂಡಾಗಬಹುದು. ಕಾರಣ ಸಾಮಾನ್ಯವಾಗಿ ಒಮ್ಮೆ ಸಿದ್ಧಮಾಡಿದ ವ್ಯವಸ್ಥೆಯಲ್ಲಿಯೇ ಒಂದಕ್ಕಿಂತ ಹೆಚ್ಚು ಬೆಳೆಗಳನ್ನು ಪಡೆಯುವ ಯೋಜನೆ ಹಾಕಿಕೊಳ್ಳಬೇಕಾಗುತ್ತದೆ. ಅಂದರೆ ಮೊದಲು ಬೆಳೆದ ಬೆಳೆಯ ಕಟಾವಿನ ನಂತರ ಎರಡನೆಯ ಬೆಳೆಯ ಬೀಜವನ್ನು ಅದೇ ರಂಧ್ರದಲ್ಲಿ ಮತ್ತೆ ಬಿತ್ತುವುದು. ಹೀಗೆ ಕಲ್ಲಂಗಡಿ ಮತ್ತು ಖರಬೂಜ ಬೆಳೆಗಳನ್ನು ರೈತರು ತೆಗೆದುಕೊಳ್ಳುತ್ತಿದ್ದಾರೆ.

•ಗಮನಿಸಬೇಕಾಗುವ ಅಂಶವೆಂದರೆ, ಇಲ್ಲಿ ಫಲವತ್ತಾದ ಮತ್ತು ಆಳವಾದ ಭೂಮಿ ಬೇಕೆಂದೇನಿಲ್ಲ. ಈ ಪದ್ಧತಿಗೆ ಹೆಚ್ಚು ನೀರು ಬಸಿದು ಹೋಗುವಂತಿದ್ದರೆ ಸಾಕು. ಆದರೂ ಈ ವ್ಯವಸ್ಥೆ ಪೂರ್ಣ ರೂಪದಲ್ಲಿ ತೊಂದರೆ ರಹಿತವೆಂದು ಹೇಳಲಿಕ್ಕಾಗುವುದಿಲ್ಲ.

* ಉದಾಹರಣೆಗೆ ಶೇಂಗಾ ಬೇಸಾಯದಲ್ಲಿ ಬುಡ ಕೊಳೆಯುವ ರೋಗ ಉಲ್ಬಣವಾಗುವ ನಿದರ್ಶನಗಳುಂಟು. ಅಂತಹ ಸಮಯದಲ್ಲಿ ಬೆಳೆ ಕೀಳುವಾಗ ಕಾಯಿಗಳು ಒಳಗೆ ಉಳಿಯಬಹುದು. ಹೀಗೆ ಉಳಿದ ಕಾಯಿಗಳನ್ನು ಹೊರತೆಗೆಯುವಲ್ಲಿ ಹೆಚ್ಚಿನ ಆಳಿನ ಅವಶ್ಯಕತೆ ಉಂಟಾಗುತ್ತದೆ. ಶೇಂಗಾ ಕಾಯಿಗಳು ಹೆಚ್ಚಿನ ಉಷ್ಣತೆಗೆ (ಬೇಸಿಗೆ ಸಮಯ) ಒಳಪಟ್ಟರೆ ಮೊಳಕೆಯೊಡೆಯುವ ಪ್ರಮಾಣ ಕಡಿಮೆಯಾಗುವ ಸಂಭವವುಂಟು.

•ಅನೇಕ ಬಾರಿ ಜೇಕಿನಂತಹ ಕಳೆಯ ಉಪದ್ರವ ಸೌರೋಸ್ಟೀಕರಣ ನಂತರದ ಸಮಯದಲ್ಲಿ ಹೆಚ್ಚಾಗುವ ಸಾಧ್ಯತೆವುಂಟು. ಅದೇನಿದ್ದರೂ ನಿರ್ವಹಣೆ ಇಲ್ಲದೇ ವ್ಯವಸ್ಥೆಯ ಯಶಸ್ಸು ಮತ್ತು ಲಾಭ ಸಾಧ್ಯವಿಲ್ಲ. ಕೆಲವು ಬೆಳೆಗಳಲ್ಲಿ ಪ್ಲಾಸ್ಟಿಕ್ ಹೊದಿಕೆ ಬಾರಿ ಉತ್ತಮ ಲಾಭ ಬಳಸುವ ವಿವರ ಕೆಳಗಿನಂತಿದೆ.

• ಶೇಂಗಾ ಬೆಳೆ:

* ಶೇಂಗಾ ಬೆಳೆಯಲು ಉಸುಕು ಮಿಶ್ರಿತ ಭೂಮಿ ಉತ್ತಮ, ಭೂಮಿಯನ್ನು ಮೊದಲು ನೇಗಿಲಿನಿಂದ ಆಳವಾಗಿ ಉಳುಮೆ ಮಾಡಿ ನಂತರ ಕುಂಟೆಯಿಂದ ಹರಗಿ ಮಣ್ಣನ್ನು ಹುಡಿಮಾಡಬೇಕು.

* ಸುಮಾರು 10 ಟನ್‌ ಸಗಣಿಗೊಬ್ಬರ ಕೊಟ್ಟಿಗೆಗೊಬ್ಬರ ಭೂಮಿಗೆ ಸೇರಿಸಿ ಬೆಡ್ ಪದ್ಧತಿಯಲ್ಲಿ ಏರುಮಡಿಗಳನ್ನು (1, 2 ಮೀಟರ ಆಗಲ ಹಾಗೂ 10-15 ಸೆಂ.ಮೀ ಎತ್ತರ) ತಯಾರಿಸಬೇಕು. ಹಾಗೂ ಎರಡು ಮಡಿಗಳ ನಡುವೆ ನೀರನ್ನು ಹಾಯಿಸಲು ಕಾಲುವೆಗಳನ್ನು ಮಾಡಿಕೊಳ್ಳಬೇಕು.

* ಏರುಮಡಿಗಳಿಗೆ ಒಂದು ಎಕರೆಗೆ ಕೊಡಬೇಕಾದ ಜಿಪ್ಸಂ ಹಾಗೂ ರಾಸಾಯನಿಕ ಭೂಮಿಗೆ ಸೇರಿಸಬೇಕು, ಗೊಬ್ಬರ, ಪೊರೇಟ್ ಮತ್ತು ಟ್ರೈಕೋಡರ್ಮಾ ಪುಡಿಗಳನ್ನು ಭೂಮಿಗೆ ಸೇರಿಸಬೇಕು.

* ಪ್ಲಾಸ್ಟಿಕ್ ಹಾಳೆಗಳ ರೋಲನ್ನು ರಂಧ್ರ ಕೊರೆಯುವ ಯಂತ್ರದ ಸಹಾಯದಿಂದ ರಂಧ್ರಗಳನ್ನು ತೆಗೆಯಬೇಕು. ಸಾಲಿನಿಂದ ಸಾಲಿಗೆ 20 ಸೆಂ.ಮೀ. ಹಾಗೂ ಕುಣಿಯಿಂದ ಕುಣಿಗೆ 20 ಸೆಂ.ಮೀ. ರಂಧ್ರಗಳನ್ನು ಕೊರೆಯಬೇಕು.

* ಈ ಪ್ಲಾಸ್ಟಿಕ್ ಹಾಳೆಗಳನ್ನು ಏರುಮಡಿಯ ಮೇಲೆ ಹೊದಿಸಬೇಕು. ಹಾಗೂ ಎರಡು ಮಗ್ಗಲುಗಳಲ್ಲಿ ಮಣ್ಣಿನಲ್ಲಿ ಸೇರಿಸಿ ಭದ್ರಮಾಡಬೇಕು, ನಂತರ ಕಾಲುವೆಗಳ 5-6 ಕಾಲುವೆಗಳಿಗೆ ಏಕ ಕಾಲಕ್ಕೆ ಅಥವಾ ಹನಿ ನೀರಾವರಿ ಮೂಲಕ ಮೊದಲ ಬಾರಿ ಹಗುರಾಗಿ ನೀರು ಕೊಡಬೇಕು. ನಂತರ ಎಲ್ಲ ಏರುಮಡಿಗಳು ಸಂಪೂರ್ಣವಾಗಿ ಹಸಿಯಾದ ಮೇಲೆ ರಂಧ್ರಗಳಲ್ಲಿ ಬೀಜಗಳನ್ನು ಕೈಯಿಂದ ೨ ಅಂಗುಲ ಆಳವಾಗಿ ಊರಬೇಕು.

* ನೀರನ್ನು ಹನಿ ನೀರಾವರಿಯ ಲ್ಯಾಟರಲ್‌ಗಳನ್ನು ಹೊದಿಕೆಯ ಕೆಳಗಡೆ ಮೊದಲೇ ಅಳವಡಿಸಬೇಕು. ಅಥವಾ ಸಣ್ಣ ತುಂತುರು ನೀರಾವರಿಯನ್ನು ಅಳವಡಿಸಬಹುದು. ಈ ರೀತಿ ಬೇಸಾಯ ಮಾಡುವುದರಿಂದ ಬೇಸಿಗೆಯಲ್ಲಿ ನೀರಿನ ಉಳಿತಾಯ ಆಗುತ್ತದೆ ಹಾಗೂ ಕಳೆಗಳ ನಿಯಂತ್ರಣ ಆಗುವುದಲ್ಲದೇ ಬೇರುಗಳಲ್ಲಿ ರೈಜೋಬಿಯಂ (ಗಂಟುಗಳ) ಪ್ರಮಾಣ ಜಾಸ್ತಿಯಾಗಿ ಇಳುವರಿ ಪ್ರಮಾಣ ಹೆಚ್ಚಾಗುತ್ತದೆ.

* ಒಂದು ಎಕರೆಗೆ ಈ ರೀತಿ ಪ್ಲಾಸ್ಟಿಕ್ ಹೊದಿಸಲು ಸುಮಾರು ರೂ. 5-6 ಸಾವಿರ ಖರ್ಚು ಬರುತ್ತದೆ . ಆದರೆ ಇದರಿಂದ ಸುಮಾರು 3-4 ಕ್ವಿಂಟಲ್‌ ಇಳುವರಿ ಹೆಚ್ಚಾಗುತ್ತದೆ. ಮುಖ್ಯವಾಗಿ ಕಳೆ ನಿಯಂತ್ರಣ ಹಾಗೂ ನೀರಿನ ಉಳಿತಾಯವಾಗುತ್ತದೆ.

•ತೊಗರಿಯಲ್ಲಿ ಅಂತರ ಬೆಳೆಯಾಗಿ ಕಲ್ಲಂಗಡಿ :

* ಮುಂಗಾರು ಹಂಗಾಮಿನಲ್ಲಿ ಭೂಮಿಯನ್ನು ಹದಗೊಳಿಸಿ 6 ಅಡಿಗಳ ಅಂತರದಲ್ಲಿ 2 ಅಡಿಗಳ ಅಗಲವಾದ ಏರುಮಡಿಗಳನ್ನು ತಯಾರಿಸಬೇಕು.

* ಏರುಮಡಿಗಳಿಗೆ ಒಂದು ಹೆಕ್ಟೇರಿಗೆ ಕೊಡಬೇಕಾದ ಸಗಣಿಗೊಬ್ಬರ, ಕೊಟ್ಟಿಗೆ ಗೊಬ್ಬರ, ಜಿಪ್ಸಂ ಹಾಗೂ ರಾಸಾಯನಿಕ ಗೊಬ್ಬರಗಳನ್ನು ಭೂಮಿಗೆ ಸೇರಿಸಬೇಕು. ಹನಿ ನೀರಾವರಿಯ ಲ್ಯಾಟರಲ್ ಪೈಪ್‌ಗಳನ್ನು ಇಡಬೇಕು ನಂತರ ಪ್ಲಾಸ್ಟಿಕ್ ಹಾಳೆಗಳ ರೋಲನ್ನು ರಂಧ್ರ ಕೊರೆಯುವ ಯಂತ್ರದ ಸಹಾಯದಿಂದ ಎರಡು ಅಡಿಗಳ ಅಂತರದಲ್ಲಿ ರಂಧ್ರಗಳನ್ನು ಕೊರೆಯಬೇಕು.

* ಈ ಪ್ಲಾಸ್ಟಿಕ್ ಹಾಳೆಗಳನ್ನು ಏರುಮಡಿಯ ಮೇಲೆ ಹೊದಿಸಬೇಕು ಹಾಗೂ ಎರಡು ಮಗ್ಗಲುಗಳಲ್ಲಿ ಮಣ್ಣಿನಲ್ಲಿ ಸೇರಿಸಿ ಭದ್ರಗೊಳಿಸಬೇಕು. ಈ ರಂಧ್ರಗಳಲ್ಲಿ 2 ತೊಗರಿ ಬೀಜಗಳನ್ನು ಕೈಯಿಂದ ಊರಬೇಕು ಅಥವಾ ಪ್ಲಾಸ್ಟಿಕ್ ಚೀಲಗಳಲ್ಲಿ ತಯಾರಿಸಿದ ಸಸಿಗಳನ್ನು ನಾಟಿ ಮಾಡಬಹುದು.

* ಪ್ರತಿ ಎರಡು ತೊಗರಿ ಏರುಮಡಿಗಳ ಮಧ್ಯದ ಮಡಿಗಳ ಮೇಲೆ ರಂಧ್ರಗಳನ್ನು ಕೊರೆದ ಪ್ಲಾಸ್ಟಿಕ್ ಹಾಳೆಗಳ ರೋಲನ್ನು ಹೊದಿಸಬೇಕು. ಈ ರಂಧ್ರಗಳಲ್ಲಿ ಮೇ ತಿಂಗಳ ಕೊನೆಯಲ್ಲಿ ಕಲ್ಲಂಗಡಿ ಬೀಜಗಳನ್ನು ಕೈಯಿಂದ ಊರಬೇಕು ಅಥವಾ ಪ್ಲಾಸ್ಟಿಕ್ ಟ್ರೇಗಳಲ್ಲಿ ಕೋಕೋಪೀಟನ್ನು ಉಪಯೋಗಿಸಿ ನೆರಳು ಮನೆಯಲ್ಲಿ ತಯಾರಿಸಿದ ಸಸಿಗಳನ್ನು ನಾಟಿ ಮಾಡಬಹುದು. ನಂತರ ನೀರಿನಲ್ಲಿ ಕರಗುವ ರಸಗೊಬ್ಬರಗಳನ್ನು ಹನಿ ನೀರಾವರಿಯ ಮುಖಾಂತರ ಕೊಡಬೇಕು. ಹೀಗೆ ಪ್ಲಾಸ್ಟಿಕ್ ಹಾಳೆಗಳನ್ನು ಉಪಯೋಗಿಸುವುದರಿಂದ ಕಳೆಗಳ ನಿಯಂತ್ರಣವಾಗುತ್ತದೆ ಹಾಗೂ ನೀರಿನ ಉಳಿತಾಯವಾಗುತ್ತದೆ. ಕಲ್ಲಂಗಡಿ ಸುಮಾರು 75-80 ದಿನಗಳಲ್ಲಿ ಕಟಾವು ಆಗುವುದರಿಂದ ಆಡುವುದರಿಂದ ಟೊಂಗೆಗಳ ಸಂಖ್ಯೆ ಜಾಸ್ತಿಯಾಗಿ ತೊಗರಿ ಬೆಳೆ ನಂತರದ ದಿನಗಳಲ್ಲಿ ಗಾಳಿ ಚೆನ್ನಾಗಿ ಆಡುವುದರಿಂದ ಟೊಂಗೆಗಳ ಸಂಖ್ಯೆ ಜಾಸ್ತಿಯಾಗಿ ಮಧ್ಯದಲ್ಲಿಯ ಸುಮಾರು 12 ಅಡಿ ಅಂತರದ ಸ್ಥಳವನ್ನು ಆವರಿಸುತ್ತದೆ. ಕೀಟನಾಶಕಗಳ ಸಿಂಪರಣೆ ಕೂಡ ಹೆಚ್ಚು ಉಪಯೋಗಕಾರಿ ಸಾಧ್ಯವಾಗುತ್ತದೆ.

* ಹೀಗಾಗಿ ಇಳುವರಿ ಪ್ರಮಾಣ ಹೆಚ್ಚಾಗುತ್ತದೆ. ಎಕರೆಗೆ ಸುಮಾರು 17 ಕ್ವಿಂಟಲ್ ಅಂದರೆ ಸಾಮಾನ್ಯ ಬೇಸಾಯಕ್ಕಿಂತ ಮೂರುಪಟ್ಟು ಹೆಚ್ಚಿನ ಇಳುವರಿ ಸಾಧ್ಯ. ಬೀದರ ಭಾಗದ ಜಂಬಿಟ್ಟಿಗೆ ಪ್ರದೇಶದಲ್ಲಿ ಈ ವ್ಯವಸ್ಥೆಯಿಂದಾಗಿ ನೀರಿನ ಸದ್ಬಳಕೆ ಸಾಧ್ಯವಾಗಿದೆ. ಇದಲ್ಲದೇ ರಸಾವರಿಯಿಂದ ರಾಸಾಯನಿಕ ಗೊಬ್ಬರಗಳ ಪ್ರಮಾಣ ಕೂಡ ಹೆಚ್ಚಾಗುತ್ತದೆ. ಪೂರೈಕೆಯಿಂದಾಗಿ ರಸಗೊಬ್ಬರಗಳ ಉಪಯುಕ್ತತೆಯ ಪ್ರಮಾಣ ಕೂಡ ಹೆಚ್ಚಾಗಿದೆ. ಇವುಗಳ ಜೊತೆಗೆ ಅಂತರ ಬೆಳೆಯಾಗಿ ಬೆಳೆದ ಕಲ್ಲಂಗಡಿಯಿಂದಾಗಿ ಹೆಚ್ಚು ಆರ್ಥಿಕ ಲಾಭವು ಸಾಧ್ಯವಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಪೊಟ್ಯಾಷ್ ಬಳಸಿದಾಗ ಕಲ್ಲಂಗಡಿ ಹಣ್ಣಿನ ಸ್ವಾದ, ರುಚಿ ಕೂಡ ಹೆಚ್ಚಾಗುತ್ತದೆಂದು ರೈತರ ಅನುಭವ.

ಪ್ಲಾಸ್ಟಿಕ್ ಹೊದಿಕೆಯ ಖರ್ಚಿನ ವಿವರ ಈ ಕೆಳಗಿನಂತಿದೆ(ಪ್ರತಿ ಎಕರೆಗೆ):

* ಟ್ರಾಕ್ಟರದಿಂದ ಬೋದು ಹಾಕಲು : ರೂ.2000

* ಪ್ಲಾಸ್ಟಿಕ್ ಹೊದಿಕೆ : ರೂ.11,500

* ಪ್ಲಾಸ್ಟಿಕ್ ಹೊದಿಕೆ ಹಾಕಲು : ರೂ.1,000

* ಪ್ಲಾಸ್ಟಿಕ್ ಟ್ರೇ : ರೂ. 592

* ಕೋಕೋಪೀಟ್ : ರೂ. 350

* ಕಲ್ಲಂಗಡಿ ಬೀಜ 300ಗ್ರಾಂ : ರೂ.10,000

* ತೊಗರಿ ಬೀಜ 500 ಗ್ರಾಂ : ರೂ. 25

* ಇತರೆ ಖರ್ಚು : ರೂ. 3,000

* ತಿಪ್ಪೆ ಗೊಬ್ಬರ : ರೂ. 6,000

•ಖರಬೂಜ/ಕಲ್ಲಂಗಡಿ ಬೇಸಾಯ:

ಭೂಮಿಯನ್ನು ಚೆನ್ನಾಗಿ ಹದಮಾಡಿದ ನಂತರ 6 ಅಡಿಗಳ ಅಂತರದಲ್ಲಿ 3 ಅಡಿಯ ಏರುಮಡಿಗಳನ್ನು ತಯಾರಿಸಬೇಕು. ಇದರಲ್ಲಿ ಮೊದಲು ರಂಧ್ರ ಕೊರೆದ ಸ್ಥಳಗಳಲ್ಲಿ ಬೀಜಗಳನ್ನು ಊರಬೇಕು ಹಾಗೂ ಶೇಂಗ ಬೆಳೆಯಲ್ಲಿ ತಿಳಿಸಿದ ಹಾಗೆ ಗೊಬ್ಬರ ನೀರಾವರಿ ಪದ್ಧತಿಗಳನ್ನು ಅಳವಡಿಸಬೇಕು. ಇದರಿಂದ ಕಳೆ ನಿಯಂತ್ರಣದ ಜೊತೆಗೆ ಕಾಯಿಗಳು ನೆಲಕ್ಕೆ ತಾಗಿ ಹಾಳಾಗುವುದನ್ನು ತಡೆಯಬಹುದು. ಮೊದಲು ಕಲ್ಲಂಗಡಿ ನಂತರ ಅದೇ ರಂಧ್ರದಲ್ಲಿ ಕಲ್ಲಂಗಡಿ ಕಟಾವಿನ ನಂತರ ಖರಬೂಜ ಬೆಳೆಯನ್ನು ನಾಟಿಮಾಡಿ ಒಂದೇಬಾರಿ ಮಾಡಿದ ಭೂಸಿದ್ದತೆಯಿಂದ ಹೆಚ್ಚಿನ ಇಳುವರಿ ಪಡೆಯಬಹುದು.

•ಸ್ಟಾಬೇರಿ:

. ಹೊದಿಕೆ ಬೇಸಾಯ ಬೆ ಲಾಭದಾಯಕವಾಗಿ ಬೆಳೆಯಬಹುದಾಗಿದೆ

* ಕಡಿಮೆ ನೀರಿರುವ ರಂಧ್ರಗಳಲ್ಲಿ ಸಸಿಗಳನ್ನು ನಾಟಿ ಮಾಡಬೇಕು. ಹೀಗೆ ಬೆಳೆಸುವುದರಿಂದ ಗಿಡಗಳ ಹತ್ತಿರ ಇಳುವರಿ ಹೆಚ್ಚಾಗುತ್ತದೆ.

* ಭೂಮಿಯನ್ನು ತಯಾರಿಸಿದ ನಂತರ 2 ಅಡಿಯ ಏರುಮಡಿಗಳನ್ನು ತಯಾರಿಸಬೇಕು. ನಂತರಲಾಭದಾಯಕವಾಗಿ ಬೆಳೆಯಬಹುದಾಗಿದೆ

ರೈತರು ಇದರ ವಿವರವಾದ ಮಾಹಿತಿಯ ಸದುಪಯೋಗ ಪಡೆದುಕೊಂಡು ಕೃಷಿಯಲ್ಲಿ ಅಭಿವೃದ್ಧಿ ಹೊಂದಬೇಕು. ಭೂಮಿಗೆ ಪ್ಲಾಸ್ಟಿಕ್ ಹೊದಿಕೆ ಅಲ್ಲದೇ, ಒಣಗಿದ ಎಲೆಗಳ ಹೊದಿಕೆ, ಹಸುರೆಲೆಗಳ ಹೊದಿಕೆ ಅಥವಾ ಇನ್ನಿತರ ಹೊದಿಕೆಗಳಿಂದಲೂ ಸಹ ಬೆಳೆಗಳಲ್ಲಿ ಹೆಚ್ಚ್ಚಿನ ಇಳುವರಿಯನ್ನು ಪಡೆಯಬಹುದಾಗಿದೆ.

ಇನ್ನು ಹೆಚ್ಚಿನ ಮಾಹಿತಿಗಾಗಿ

ಕೃಷಿ ವಾಹಿನಿ ವೆಬ್ಸೈಟ್ ನ

ಸಂಪರ್ಕದಲ್ಲಿರಿ.

 

Leave a Reply

Your email address will not be published. Required fields are marked *