ನಮಸ್ಕಾರ ಪ್ರೀಯ ರೈತ ಭಾಂಧವರೇ, ಕೃಷಿ ಈಗಿನ ಕಾಲದಲ್ಲಿಯೂ ಸಹ ಭಾರತದ ಆರ್ಥಿಕತೆಯಲ್ಲಿ ಒಂದು ಪ್ರಮುಖ ಪಾತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ರೈತರು ಈಗಿನ ಕಾಲದಲ್ಲಿ ಅತಿ ಹೆಚ್ಚಾಗಿ ಶೇಂಗಾ ಬೆಳೆಯನ್ನು ಬೆಳೆಯುತ್ತಿದ್ದಾರೆ. ಶೇಂಗಾ ಎಣ್ಣೆಯನ್ನು ಉತ್ಪಾದಿಸಲು ಶೇಂಗಾ ಬೀಜವು ಒಂದು ಪ್ರಮುಖ ಅಂಶವಾಗಿದೆ.

ನಾವು ಇಂದು ಶೇಂಗಾ ಬೆಳೆಯಲ್ಲಿ ಬರುವ ಕೀಟಗಳು ಮತ್ತು ರೋಗಗಳ ಸಮಗ್ರ ನಿರ್ವಹಣೆಯ ಬಗ್ಗೆ ತಿಳಿದುಕೊಳ್ಳೋಣ.

# ಶೇಂಗಾ ಬೆಳೆಯಲ್ಲಿ ಬರುವ ಕೀಟಗಳು ಕೀಟಗಳು:

1.ಥ್ರಿಪ್ಸ್ ನುಸಿ:

ಮರಿ ಹಾಗೂ ಪ್ರೌಢ ಕೀಡೆಗಳು ಎರಡು ಎಲೆಯ ರಸವನ್ನು ಹೀರುವುದರಿಂದ ಎಲೆಗಳು ಮುದುಡಿದಂತೆ ಕಾಣುತ್ತವೆ. ಎಲೆಗಳ ಮೇಲೆ ಬಿಳಿಯ ಹೊಳಪು ಕಂಡುಬರುವುದು ಹಾಗೂ ಎಲೆಯ ಕೆಳಭಾಗ ಕಂದು ಬಣ್ಣಕ್ಕೆ ತಿರುಗುವುದು. ಇದು ಕುಡಿಸಾಯುವ ರೋಗವಂನ್ನುಟು ಮಾಡುವ ನಂಜನುಗಳನ್ನು ಸಹ ಹರಾಡುವುದು.

2.ಜಿಗಿ ಹುಳು:

ಮರಿ ಹಾಗೂ ಪ್ರೌಢಾವ್ಯಾಸ್ತೆಯ ಕೀಟಗಳು ಎಲೆಯ ರಸವನ್ನು ಹೀರುವುದರಿಂದ ಎಲೆಯ ತೂದಿ ಭಾಗವು ಹಳದಿ ಬಣ್ಣಕ್ಕೆ ತಿರುಗಿ ನಂತರ ಒಣಗುತ್ತದೆ.

ನಿರ್ವಹಣೆ:

* ಥ್ರಿಪ್ಸ್ ಹಾಗೂ ಜಿಗಿಹುಳ ಕೀಟಗಳ ನಿಯಂತ್ರಣಕ್ಕಾಗಿ ಬೆಳೆ 20 ಅಥವಾ 30 ದಿವಸಗಳದಾಗ dimethoate 30 ಇ ಸಿ ಅಥವಾ 0.5ml phenthiyan ಅಥವಾ 1ml oxidematon methyl ಪ್ರತಿ ಲೀಟರ್ ನೀರಿಗೆ ಸಿಂಪರಣೆ ಮಾಡಬೇಕು.

* ಪ್ರತಿ ಹೆಕ್ಟರಿಗೆ 500-625 ಲೀಟರ್ ಸಿಂಪರಣ ದ್ರಾವಣವನ್ನು ಉಪಯೋಗಿಸಬೇಕು.

3.ಸುರುಳಿ ಪೂಚಿ:

ಈ ಕೀಟದ ಹಾವಳಿ ಹೆಚ್ಚಾಗಿ ಒಣ ಪ್ರದೇಶದಲ್ಲಿ ಕಂಡು ಬರುತ್ತದೆ. ಇಳುವರಿಯಲ್ಲಿ ಪ್ರತೀಶತ 20 ರಿಂದ 80 ರಷ್ಟು ಕಡಿತ ಉಂಟಾಗುವುದು. ಕೀಟವು ಚಿಗುರೆಲೆಗಳನ್ನು ಕೆರೆದು ಸುರಂಗ ಮಾಡಿ ಒಳಗೆ ಹರಿತನ್ನು ತಿನ್ನುತ್ತದೆ. ನಂತರ ಎಲೆಗಳನ್ನು ಮಡಚಿ ಅದರೊಳಗಿದ್ದು ಹಸಿರು ಭಾಗವನ್ನು ತಿನ್ನುತ್ತದೆ.

ನಿರ್ವಹಣೆ:

ಸುರುಳಿ ಪೂಚಿಯ ಹತೋಟಿಗಾಗಿ 1ml. ಮೋನೋಕ್ರೋಟೋಫಸ್ 36 ಎಸ್.ಎಲ್ ಅಥವಾ 0.5ml. phosphamidan 85 w.s.c ಪ್ರತಿ ಲೀಟರ್ ನೀರಿಗೆ ಸೇರಿಸಿ ಪ್ರತಿ ಹೆಕ್ಟರಿಗೆ 500-650 ಲೀಟರ್ ಸಿಂಪರಣ ದ್ರಾವಣವನ್ನು ಉಪಯೋಗಿಸಿ ಸಿಂಪರಣೆ ಮಾಡಬೇಕು.

4. ಸ್ಪೋಡೋಪ್ಟರಾ ಕೀಡೆ(ತಂಬಾಕಿನ ಕೀಡೆ):

ಇದೊಂದು ಬಹು ಭಕ್ಷಕ ಕೀಡೆಯಾಗಿದ್ದು ಶೇಂಗಾ, ತಂಬಾಕು, ಔಡಲ ಇತ್ಯಾದಿ ಗಳನ್ನು ಆಶ್ರಯಿಸುತ್ತದೆ. ಶೇಂಗಾ ಬೆಳೆಯಲ್ಲಿ ಪತಂಗ 200-300 ಮೊಟ್ಟೆಗಳನ್ನು ಗುಂಪಾಗಿ ಎಲೆಯ ಮೇಲ್ಬಾಗದಲ್ಲಿಡುವುದು. ಮರಿ ಹುಳುಗಳು ಎಲೆಯ ಕೆಳಭಾಗದಲ್ಲಿ ಗುಂಪಾಗಿದ್ದು ಹಸಿರು ಭಾಗವನ್ನು ಕೆರೆದು ತಿನ್ನುವುದು. ನಂತರ ಹುಳುಗಳು ರಾತ್ರಿಯ ಸಮಯದಲ್ಲಿ ಎಲೆಗಳನ್ನು ಭಕ್ಷಿಸುವುದು ಸರ್ವೆ ಸಾಮಾನ್ಯ .

ನಿರ್ವಹಣೆ:

* ಹತೋಟಿಗಾಗಿ 0.6 ಮಿ.ಲೀ. Lamdacylothrin 5 ಇ.ಸಿ. ಪ್ರತಿ ಲೀಟರ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು.

* ಇದರ ಹತೋಟಿಗಾಗಿ 2 ಮಿ.ಲೀ. ಕ್ವಿನಾಲ್‌ಫಾಸ್ 25 ಇ.ಸಿ. ಅಥವಾ 1 ಮಿ.ಲೀ. ಮಿಥೈಲ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು.

* ಈ ಕೀಟದ ಹತೋಟಿಗಾಗಿ ಪ್ರತಿ ಹೆಕ್ಟೇರಿಗೆ, ಬಿ.ಟಿ 0.5 ಗ್ರಾಂ, ಅಥವಾ ನ್ಯೂಮಾರಿಯಾ ರಿಲೆ 1 ಗ್ರಾಂ. ಪ್ರತಿ ಲೀಟರ ನೀರಿಗೆ ಬೆರೆಸಿ ಉಪಯೋಗಿಸಬೇಕು.

• 50 ಕಿ.ಗ್ರಾಂ ವಿಷಪಾಷಣ ತಯಾರಿಸಲು ಬೇಕಾಗುವ ಸಾಮಗ್ರಿಗಳೆಂದರೆ,

• 5 ಕೆ.ಜಿ. ಬೆಲ್ಲ

•625 ಮಿ.ಲೀ ಮೋನೋಕ್ರೋಟೋಫಾಸ್ 36 ಎಸ್.ಎಲ್ .

•1 ಲೀಟರ್ ನೀರಿನೊಂದಿಗೆ ಕರಗಿಸಿರಿ.

• ನಂತರ 4 ಲೀಟರ್ ನೀರಿನೊಂದಿಗೆ 50 ಕೆ.ಜಿ. ಅಕ್ಕಿ ಅಥವಾ ಗೋದಿ ತೌಡಿನಲ್ಲಿ ಸರಿಯಾಗಿ ಬೆರೆಸಬೇಕು.

5. ಗೊಣ್ಣೆ ಹುಳು:

ಇದು ಪ್ರದೇಶ ಸೀಮಿತ ಕೀಡೆಯಾಗಿದ್ದು ಒಂದೇ ಪ್ರದೇಶದಲ್ಲಿ ಪ್ರತಿ ವರ್ಷ ಬರುವುದು ಸರ್ವೇಸಾಮಾನ್ಯ. ಈ ಕೀಡೆಯು ಬೇರುಗಳನ್ನು ತಿನ್ನುವುದರಿಂದ ಗಿಡಗಳು ಒಣಗುತ್ತವೆ.

ನಿರ್ವಹಣೆ : –

• ಮುಂಗಾರು ಮಳೆ ಬಲೆಗಳಿಗೆ ದುಂಬಿಗಳನ್ನು ಆಕರ್ಷಿಸಿ ನಾಶ ಪಡಿಸಬೇಕು.

• ಬಿತ್ತನೆಯ ಕಾಲಕ್ಕೆ ಪ್ರತಿ ಬೀಜಕ್ಕೆ ಕ್ಲೋರ್ ಫೈರಿಫಾಸ್ 30 ಇ.ಸಿ. ಅಥವಾ ಕ್ವಿನಾಲ್‌ಫಾಸ್ ಔಷಧಿಯನ್ನು ಲೇಪಿಸಿ ಬಿತ್ತನೆ ಮಾಡಬೇಕು.

6.ಕೆಂಪು ತಲೆ ಕಂಬಳಿ ಹುಳು ಹಾಗೂ ಕಪ್ಪು ತಲೆ ಕಂಬಳಿ ಹುಳು:

ಪತಂಗಗಳು ಮುಂಗಾರು ಮಳೆ ಬಿದ್ದ ನಂತರ ಭೂಮಿಯಿಂದ ಹೊರಬಂದು ಮೊಟ್ಟೆಗಳನ್ನು ಗುಂಪ ಗುಂಪಾಗಿ ಇಟ್ಟು ಎಲೆಗಳನ್ನು ಕೆರೆದು ತಿನ್ನುವುದರಿಂದ ಎಲೆಗಳು ತೆಳುವಾದ ಪರದೆ(ಜಾಳಿಗೆ) ಯಂತೆ ಕಾಣುವವು. ನಂತರ ಹುಳು ಚದುರಿ ಎಲೆಗಳನ್ನು ಬಕ್ಷಿಸುವುದು ಸರ್ವೆ ಸಾಮಾನ್ಯ. ಇದರ ಹಾವಳಿಯಿಂದ ಕೆಲವೊಮ್ಮೆ ಮರು ಬಿತ್ತನೆ ಮಾಡಬೇಕಾಗುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಆರ್ಥಿಕ ನಷ್ಟದ ರೇಖೆ 1 ಮೀಟರ ಸಾಲಿಗೆ 2 ಕೀಡೆಗಳು ಇರಬೇಕು.

ನಿರ್ವಹಣೆ :

• ಆ ಕಂಬಳಿ ಹುಳುಗಳ ಹತೋಟಿಯನ್ನು ರೈತರು ಸಾಮೂಹಿಕವಾಗಿ ಕೈಗೊಳ್ಳುವುದು ಸೂಕ್ತ. ಆ ಬೇಸಿಗೆಯಲ್ಲಿ ಆಳವಾಗಿ ಉಳುಮೆ ಮಾಡಬೇಕು.

• ಹಸಿ ಮಳೆಯಾದ 2-3 ದಿನಗಳವರೆಗೆ ರಾತ್ರಿ 7 ರಿಂದ 10-11 ಘಂಟೆಯವರೆಗೆ ಪತಂಗಗಳನ್ನು ಬೆಳಕಿಗೆ ಆಕರ್ಷಿಸಿ ಸಾಯಿಸಬೇಕು. ಮೊಟ್ಟೆ ಅಥವಾ ಮರಿ ಹುಳುಗಳು ಗುಂಪಾಗಿರುವುದರಿಂದ ಇವುಗಳನ್ನು ಆಯ್ದು ನಾಶಪಡಿಸಬೇಕು.

• ಪೂರ್ಣವಾಗಿ ಬೆಳೆದ ಹುಳು ಮೈ ಮೇಲೆ ಕೂದಲು ಹೊಂದಿರುವುದರಿಂದ ಕೀಟೌಷಧೀಯ ಪರಿಣಾಮ ಕಡಿಮೆ, ಆದ್ದರಿಂದ ಕೀಟಗಳು ಚಿಕ್ಕದಿದ್ದಾಗ ಲೀಟರ್ ನೀರಿಗೆ 2 ಮಿ.ಲೀ. ಕ್ವಿನಾಲ್‌ಫಾಸ್ ಅಥವಾ 2 ಮಿ.ಲೀ ಎಂಡೋಸಲ್ಫಾನ ಫ್ಯಾರಾಥಿಯಾನ್ ಪ್ರತಿ ಹೆಕ್ಟೇರಿಗೆ 20-25 ಕಿಲೋ ಧೂಳಿಕರಿಸಬೇಕು ಅಥವಾ ಉಪಯೋಗಿಸಬೇಕು.

• ಹುಳಗಳು ಒಂದು ಹೊಲದಿಂದ ಇನ್ನೊಂದು ಹೊಲಕ್ಕೆ ವಲಸೆ ಹೋಗುವುದನ್ನು ತಡೆಯಲು ಎರಡು ಹೊಲಗಳ ಮಧ್ಯೆ ಒಂದು ಅಡಿ ಆಳದ ಕಂದಕವನ್ನು ತೋಡಿ ಕಂದಕದಲ್ಲಿ ಕೀಟನಾಶಕಗಳನ್ನು ಧೂಳಿಕರಿಸಬೇಕು.

  # ಶೇಂಗಾ ಬೆಳೆಯಲ್ಲಿ ಬರುವ ರೋಗಗಳು:

1.ಬೀಜ ಕೊಳೆ ಹಾಗೂ ಸಸಿ ಸೊರಗು ರೋಗ:

ಈ ರೋಗದ ಲಕ್ಷಣಗಳೆಂದರೆ ಬೀಜಗಳು ಮೊಳಕೆ ಒಡೆಯದೇ ಭೂಮಿಯಲ್ಲಿ ಕೊಳೆಯುತ್ತವೆ. ಈ ರೋಗದಿಂದ ಸಸಿಗಳು ಕ್ರಮೇಣವಾಗಿ ಸಾಯುವವು. ಇದರಿಂದ ಹೊಲದಲ್ಲಿ ಬೆಳೆ ಅಂಗಲಾಗುತ್ತದೆ. ಅಂತಹ ಬೀಜಗಳ ಮೇಲೆ ವಿವಿಧ ಪ್ರಕಾರ ಸೂಕ್ಷ್ಮ ಜೀವಿಗಳು ಬೆಳೆದಿರುತ್ತವೆ.

ನಿರ್ವಹಣೆ:

• ಬಿತ್ತುವ ಮೊದಲು 2 ರಿಂದ 3 ಗ್ರಾಂ ಟ್ರೈಕೋಡರ್ಮಾ, ಕ್ಯಾಪ್ಟ್ ನ್ ಅಥವಾ ಥೈರಾಮ್ ಅಥವಾ 4 ಗ್ರಾಂ. ಪ್ರತಿ ಕಿಲೋ ಬೀಜಕ್ಕೆ ಬಳಿಸಿ ಬೀಜೋಪಚಾರ ಮಾಡಿ ಬಿತ್ತಬೇಕು.

2.ಶೀಲಿಂದ್ರದ ಕತ್ತು ಕೊಳೆ ರೋಗ :

ರೋಗದ ಲಕ್ಷಣಗಳು ಬೆಳೆಯ ಯಾವುದೇ ಹಂತದಲ್ಲಿ ಬರಬಹುದು. ಭೂಮಿಗೆ ಹೊಂದಿಕೊಂಡಂತೆ ಇರುವ ಕಾಂಡಕ್ಕೆ ಬಿಳಿ ಬಣ್ಣದ ಶಿಲೀಂದ್ರದ ಸೋಂಕು ಕಂಡುಬರುವುದು. ರೋಗ ಪೀಡಿತ ಗಿಡ ಮೊದಲು ಗಿಡ್ಡವಾಗಿದ್ದು ಹಳದಿ ಬಣ್ಣಕ್ಕೆ ತಿರುಗುತ್ತದೆ. ನಂತರ ಪೂರ್ತಿ ಗಿಡ ಒಣಗಿ ಸಾಯುವುದು. ಅಂತಹ ಗಿಡಗಳನ್ನು ಪರೀಕ್ಷಿಸಿದಾಗ ಬಿಳಿ ಬೂಷ್ಟ ನಂತಹ ವಸ್ತು ಕಾಂಡದ ಮೇಲೆ ಬೆಳೆದಿದ್ದು ಕಂಡು ಬರುವುದು. ಸಾಸಿವೆ ಕಾಳಿನ ಗಾತ್ರ ಹಾಗೂ ಬಣ್ಣ ಹೊಂದಿದ ಶಿಲೀಂದ್ರದ ಬೀಜಗಳು ಕಂಡು ಬರುವವು. ರೋಗದ ಲಕ್ಷಣಗಳು ಕಾಯಿ ಹಾಗೂ ಕಾಯಿದೇಟಿಗೂ ಹರಡುವುದು. ಗಿಡಗಳನ್ನು ಕೀಳುವ ವೇಳೆ ಕಾಯಿಗಳು ಭೂಮಿಯಲ್ಲಿ ಉಳಿದು ಕೊಳ್ಳುವವು.

3.ಬೇರು ಹಾಗೂ ಕಾಯಿ ಕೊಳೆ ರೋಗ:

ರೋಗದ ಲಕ್ಷಣಗಳು ಗಿಡದ ಬೇರು, ಕಾಂಡ ಹಾಗೂ ಕಾಯಿಗಳ ಮೇಲೆ ಕಂಡು ಬರುವವು. ಅಂತಹ ಭಾಗದಲ್ಲಿ ಕಾಂಡ ಸಹಿಸಿ ತಂತುಗಳು ಕಂಡು ಬರುವುದು ಸಹಜವಾಗಿದೆ. ಅಂತಹ ರೋಗ ಪೀಡಿತ ಗಿಡಗಳು ಸೊರಗುತ್ತವೆ ಮತ್ತು ಕಾಯಿಗಳಲ್ಲಿ ಕಾಳುಗಳು ಸರಿಯಾಗಿ ತುಂಬುವುದಿಲ್ಲ.

ನಿರ್ವಹಣೆ:

• ಶೇಂಗಾ ಬೆಳೆಯ ಕತ್ತು ಕೊಳೆ ರೋಗ, ಬೇರು ಹಾಗೂ ಕಾಯಿ ಕೊಳೆ ರೋಗದ ಹತೋಟಗಾಗಿ ಪ್ರತಿ ಕಿಲೋ ಬೀಜಕ್ಕೆ 1ಗ್ರಾಂ. carboxin ಅಥವಾ 1 ಗ್ರಾಂ. ಟಿಬು ಕೊನಜೊಲ್‌ನಿಂದ ಬೀಜ ಉಪಚಾರ ಮಾಡಿದ ನಂತರ ಬಿತ್ತನೆಗೆ ಬಳಸಬೇಕು. ಈ ಕೊಳೆ ರೋಗವು ಹೆಚ್ಚಾಗಿ ಕಂಡು ಬರುವ ಹೊಲಗಳಲ್ಲಿ ಸಜ್ಜೆ, ಜೋಳ ಅಥವಾ ಮೆಕ್ಕೆ ಜೋಳದಿಂದ ಬೆಳೆ ಪರಿವರ್ತನೆ ಕೈಗೊಳ್ಳಬೇಕು. ಅಂದರೆ ಕಾಲಗೈ ಮಾಡಬೇಕು. ಮಾಗಿ ಉಳಿಮೆಯನ್ನು ಹೆಚ್ಚು ಆಳವಾಗಿ ಮಾಡಬೇಕು. ಭೂಮಿಗೆ ಹೆಚ್ಚು ಹಸುರೆಲೆ ಗೊಬ್ಬರ, ಕಾಂಪೋಸ್ಟ್ ಗೊಬ್ಬರ ಅಥವಾ ಎರೆಹುಳು ಗೊಬ್ಬರವನ್ನು ಹೆಚ್ಚಾಗಿ ಉಪಯೋಗಿಸಬೇಕು. ಇದರ ಜೊತೆಗೆ ಶೇಂಗಾ ಹಿಂಡಿ ಅಥವಾ ಬೇವಿನ ಹಿಂಡಿಯನ್ನು ಬೆರೆಸುವುದು ಉತ್ತಮ.

4.ಎಲೆಚುಕ್ಕೆ ರೋಗ:

ಈ ರೋಗದ ಲಕ್ಷಣಗಳೆಂದರೆ ಕಂದು ಬಣ್ಣದ ವೃತ್ತಾಕಾರದ ಚುಕ್ಕೆಗಳು ಬೆಳೆಯ ಕೆಳಭಾಗದಲ್ಲಿ ಕಾಣಿಸಿಕೊಳ್ಳುತ್ತವೆ. ರೋಗದ ಲಕ್ಷಣಗಳು ಎಲೆದೇಟು ಹಾಗೂ ಕಾಂಡದ ಮೇಲೆ ಸಹ ಕಾಣುತ್ತವೆ. ಈ ರೋಗದ ಲಕ್ಷಣಗಳು ಎಲೆಗಳ ಮೇಲೆ ಮೊದಲು ಕಾಣಿಸಿಕೊಂಡು ನಂತರ 2-3 ಮಿ.ಲೀ. ಗಾತ್ರದ ಕಪ್ಪು ಚುಕ್ಕೆಗಳಾಗಿ ಬೆಳೆಯುತ್ತವೆ. ತೀವ್ರವಾಗಿ ರೋಗ ಹರಡಿದಾಗ ಎಲೆಗಳು ಹಾಗೂ ದೇಟು ಉದುರಿ ಬೀಳುವುದು ಸಾಮಾನ್ಯವಾಗಿದೆ.

ನಿರ್ವಹಣೆ:

ಈ ರೋಗದ ನಿರ್ವಹಣೆಗಾಗಿ carbendizium(0.1%) ಅಥವಾ clorathalonil(0.2%) ಅಥವಾ hexaconazole(0.1%) ಸಿಂಪರಣೆಯನ್ನು ಬೆಳೆಯ 35 ಹಾಗೂ 50 ನೇ ದಿನದ ಅವಧಿಯಲ್ಲಿ ಮಾಡಬೇಕು. ಅವಶ್ಯಕತೆಯ ಮೇರೆಗೆ ಇದೇ ಸಿಂಪರಣೆಯನ್ನು 15 ದಿನಗಳ ಅಂತರದಲ್ಲಿ ಕೈಗೊಳ್ಳಬೇಕು. ಬದಲಾಗಿ ಪ್ರತಿಶತ 10 ಅಡಸಾಲಿ ಕಷಾಯವನ್ನು ಸಿಂಪರಣೆ ಮಾಡಬಹುದಾಗಿದೆ.

5.ತುಕ್ಕು ರೋಗ:

ಎಲೆಯ ಕೆಳ ಭಾಗದಲ್ಲಿ ಕಂದು ಬಣ್ಣದ ಚುಕ್ಕೆಗಳ ರೂಪದಲ್ಲಿ ಈ ರೋಗದ ಲಕ್ಷಣಗಳು ಕಂಡು ಬರುತ್ತವೆ. ಈ ರೋಗವು ಎಲೆಯ ಎಲ್ಲಾ ಭಾಗಗಳಿಗೂ ಆವರಿಸಿ ತೀವ್ರ ಬಾಧೆಯ ಸಂದರ್ಭದಲ್ಲಿ ಬೆಳೆ ಸುಟ್ಟಂತೆ ಕಾಣುತ್ತದೆ.

ನಿರ್ವಹಣೆ

• ರೋಗದ ನಿರ್ವಹಣೆಗಾಗಿ ಮ್ಯಾಂಕೊಜೆಬ್ (0.2%) ಅಥವಾ ಕ್ಲೋರೋಥ್ಯಾಲೊನಿಲ್ (0.2%) ಅಥವಾ ಡೈಫೆನ್‌ಕೊನಾಜೋಲ್ (0.15%) ಅಥವಾ ಹೆಕ್ಸಾಕೋನಜೋಲ್(0.1%) ಅಥವಾ ಸಿಂಪರಣೆಯನ್ನು ಬೆಳೆಯ 35 ಹಾಗೂ 50 ನೇ ದಿನದ ಅವಧಿಯಲ್ಲಿ ಮಾಡಬೇಕು. ಅವಶ್ಯಕತೆಯ ಮೇರೆಗೆ ಇದೇ ಸಿಂಪರಣೆಯನ್ನು 15 ದಿನಗಳ ಅಂತರದಲ್ಲಿ ಕೈಗೊಳ್ಳಬೇಕು. ಬದಲಾಗಿ ಪ್ರತಿಶತ 10 ರ ಅಡಸಾಲಿ ಕಷಾಯವನ್ನು ಸಿಂಪರಣೆ ಮಾಡಬಹುದಾಗಿದೆ.

6.ಕುಡಿ ಸಾಯವ ನಂಜಾಣು ರೋಗ:

ಗಿಡ ಗಿಡ್ಡವಾಗುವವು, ಕುಡಿ ಎಲೆಯಲ್ಲಿ ತಿಳಿ ಹಳದಿ ಬಣ್ಣದ ವೃತ್ತಕರಾದ ಮಚ್ಚೆಗಳು ಕಂಡು ಬರುವವು, ಗಿಡದಲ್ಲಿ ಹೂವು ಇಲ್ಲದಿರುವುದು, ಕುಡಿ ಸಾಯುವುದು ಹಾಗೂ ಹೊಸ ಚಿಗುರು ಬರುವುದು. ಇಂತಹ ಅನೇಕ ಲಕ್ಷಣಗಳು ಕಂಡು ಬರುತ್ತದೆ. ಈ ರೋಗದಿಂದ ಈ ಶೇಂಗಾ ಬೆಳೆಯ ಮೊಗ್ಗು ಬಾಡಿ ಸಾಯುತ್ತವೆ. ಹೀಗಾಗಿ ಸಸಿಗಳ ಸಂಖ್ಯೆ ಕಡಿಮೆ ಆಗುತ್ತದೆ.

ನಿರ್ವಹಣೆ:

• ಬೇಸಿಗೆ ಬಿತ್ತನೆಯನ್ನು ಬೇಗನೆ ಮಾಡಬೇಕು.

• ಒತ್ತಾಗಿ ಬಿತ್ತನೆ ಮಾಡಬೇಕು.ಅಂದರೆ ಸಾಮಾನ್ಯಕ್ಕಿಂತ ದಟ್ಟವಾಗಿ ಬಿತ್ತನೆಯನ್ನು ಮಾಡಬೇಕು. ಹೊಲದಲ್ಲಿ ರೋಗಲಕ್ಷಣ ಕಂಡುಬಂದ ಕೂಡಲೇ ಪ್ರತಿಶತ 4 ರಷ್ಟು ಜೋಳದ ಎಲೆಯ ಕಷಾಯವನ್ನು 15 ದಿನದ ಅವಧಿಯಲ್ಲಿ ಸಿಂಪರಣೆ ಮಾಡಬೇಕು.

• ಈ ರೋಗದ ಬಾಧೆ ತೀವ್ರವಾಗಿರುವ ಪ್ರದೇಶದಲ್ಲಿ ಶೇಂಗಾ ಮತ್ತು ಸಜ್ಜೆ (4 : 1) ಮಿಶ್ರ ಬೆಳೆ ಪದ್ದತಿಯನ್ನು ಅನುಸರಿಸುವುದು ಸೂಕ್ತ.

• ರೋಗ ನಿರೋಧಕ ಶಕ್ತಿ ಇರುವ ತಳಿಗಳನ್ನು ಬಿತ್ತನೆಗೆ ಬಳಸಬೇಕು. ಬೆಳೆಗಳು ಅಂತರವನ್ನು ಕಾಪಾಡಿಕೊಳ್ಳಬೇಕು.

       # ಜೋಳದ ಎಲೆಯ ಕಷಾಯವನ್ನು ತಯಾರಿಸುವ ವಿಧಾನ:

            ಒಂದು ಭಾಗ ಒಣಗಿದ ಜೋಳದ ಎಲೆಯನ್ನು ಪುಡಿ ಮಾಡಿ ಅದರ 4 ಭಾಗ ನೀರಿನಲ್ಲಿ ಹಾಕಿ ಒಂದು ತಾಸಿನ ವರೆಗೆ ಕುದಿಸಬೇಕು. ಕುದಿಸಿದ ನಂತರ ಈ ಮಿಶ್ರಣವನ್ನು ಸೋಸಬೇಕು. ನಂತರ ಒಂದು ಭಾಗ ಕಷಾಯವನ್ನು 9 ಭಾಗ ನೀರಿನೊಂದಿಗೆ ಬೆರಿಸಿ ಬೆಳೆಗಳಿಗೆ ಸಿಂಪಡಿಸಬೇಕು.

ಈ ಜೋಳದ ಎಲೆಯ ಕಷಾಯವು ಅನೇಕ ಬೆಳೆಗಳಲ್ಲಿ ವಿವಿಧ ರೀತಿಯ ರೋಗಗಳನ್ನು ಸಮಗ್ರವಾಗಿ ನಿರ್ವಹಣೆ ಮಾಡುವಲ್ಲಿ ಅತ್ಯಧಿಕ ಪಾತ್ರ ವಹಿಸುತ್ತದೆ.

ಇದೇ ತರವಾಗಿ ಶೇಂಗಾದಲ್ಲಿ ಸಮಗ್ರ ಕೀಟ ಮತ್ತು ರೋಗಗಳ ನಿರ್ವಹಣೆ ಮಾಡಬೇಕು.

  •  ಹೆಚ್ಚಿನ ಮಾಹಿತಿಗಾಗಿ ಕೃಷಿ ವೆಬ್ಸೈಟ್ಸ ಸoಪರ್ಕದಲ್ಲಿರಿ.

Leave a Reply

Your email address will not be published. Required fields are marked *