ನಮಸ್ಕಾರ ಪ್ರೀಯ ರೈತ ಭಾಂಧವರೇ, ನಾವು ಇವತ್ತಿನ ದಿನ ಕೃಷಿ ಇಲಾಖೆ ಆಗಿರಬಹುದು ಅಥವಾ ಪ್ರತಿ ಹೋಬಳಿ ಅಥವಾ ಪ್ರತಿ ತಾಲೂಕಿನಲ್ಲಿ ಇರುವ ರೈತ ಸಂಪರ್ಕ ಕೇಂದ್ರಗಳಿಂದ ರೈತರು ಪಡೆಯಬಹುದಾದ ಸಾಲ ಸೌಲಭ್ಯ ಮತ್ತು ಸವಲತ್ತುಗಳನ್ನು ಅಂದರೆ ನಿಮಗೆ ಸಂಬಂಧಪಟ್ಟ ಅಥವಾ ನಿಮಗೆ ಹತ್ತಿರವಿರುವ ರೈತ ಸಂಪರ್ಕ ಕೇಂದ್ರಗಳಿಂದ

ರೈತರಿಗೆ ಏನೇನು ಸೌಲಭ್ಯ ಅಥವಾ ಸವಲತ್ತುಗಳನ್ನು ನೀಡಲಾಗುತ್ತದೆ?

ಹಾಗೂ ಏನೇನು ಸಬ್ಸಿಡಿ ಅಥವಾ ಸಹಾಯ ಧನವನ್ನು ನೀಡಲಾಗುತ್ತದೆ?

ಮತ್ತು ಎಷ್ಟು ಪರ್ಸೆಂಟ್ ಸಬ್ಸಿಡಿ ಅಥವಾ ಸಹಾಯಧನವನ್ನು ಪಡೆಯಬಹುದು?

ಸಾಗುವಳಿ ಅಥವಾ ಕೃಷಿಯಲ್ಲಿ ಬಳಕೆಯಾಗುವ ಯಾವ ಯಾವ ಉಪಕರಣಗಳಿಗೆ ಸಬ್ಸಿಡಿ ಅಥವಾ ಸಹಾಯಧನವನ್ನು ಒದಗಿಸಲಾಗುತ್ತದೆ?

ಹಾಗೂ ಯಾವ ಯಾವ ರೈತರು ಈ ಸರ್ಕಾರದಿಂದ ಸೌಲಭ್ಯ ಅಥವಾ ಸವಲತ್ತುಗಳನ್ನು ಪಡೆಯಲು ಅರ್ಹರಾಗಿರುತ್ತಾರೆ?ಎಂಬುದರ ಬಗ್ಗೆ ಇರುವ ವಿವರವಾದ ಮಾಹಿತಿಯನ್ನು ನಾವು ಈಗ ತಿಳಿದುಕೊಳ್ಳೋಣ.

ಕೃಷಿ ಇಲಾಖೆಯಿಂದ ಅಥವಾ ರೈತ ಸಂಪರ್ಕ ಕೇಂದ್ರದಿಂದ ಬಿಡುಗಡೆಗೊಳಿಸುವ ಅನೇಕ ರೀತಿಯ ಸಬ್ಸಿಡಿಗಳನ್ನು ಯಾವ ರೀತಿ ಪಡೆಯಬಹುದು ಎಂಬುದನ್ನು ಸಹ ನಾವು ಈಗ ತಿಳಿದುಕೊಳ್ಳೋಣ.

ಕೃಷಿ ಇಲಾಖೆಯಿಂದ ಅಥವಾ ನಿಮಗೆ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಗಳಿಂದ ರೈತರಿಗೆ ಸಿಗುವ ಸೌಲಭ್ಯಗಳು ಏನೇನೆಂದರೆ,

* ಸಾಗುವಳಿ ಅಥವಾ ಕೃಷಿಯನ್ನು ಮಾಡಲು ಬೇಕಾಗುವ ಉಪಕರಣಗಳನ್ನು ಕೊಂಡುಕೊಳ್ಳಲು ಅದರ ಮೇಲೆ ಸಬ್ಸಿಡಿಯನ್ನು ನೀಡಲಾಗುತ್ತದೆ. ಯಾವ ಯಾವ ರೈತರು ಸಬ್ಸಿಡಿಯನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ? ಮತ್ತು ಎಂತಹ ಉಪಕರಣಗಳ ಮೇಲೆ ಸಬ್ಸಿಡಿಯನ್ನು ನೀಡಲಾಗುತ್ತದೆ? ಎಂಬುದರ ಬಗ್ಗೆ ವಿವರವಾದ ಮಾಹಿತಿಯನ್ನು ನಿಮಗೆ ಸರ್ಕಾರದಿಂದ ರೈತರ ಏಳಿಗೆಗೆ ನಿರ್ಮಿಸಿದ ರೈತ ಮಿತ್ರ(ರೈತ ಮಿತ್ರ) ಎಂಬ ವೆಬ್ ಸೈಟ್ ನಲ್ಲಿ ಲಭ್ಯವಿರುತ್ತದೆ.

* ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆ ಕಡೆಯಿಂದ ಕೆಲವೊಂದು ಉಪ ಇಲಾಖೆಗಳು ಕಾರ್ಯನಿರ್ವಹಿಸುತ್ತಿರುತ್ತವೆ. ಇಂತಹ ರೈತ ಸಂಪರ್ಕ ಕೇಂದ್ರಗಳು ಹೋಬಳಿ ಮಟ್ಟದಲ್ಲಿ ಇರುತ್ತವೆ. ಇಲ್ಲವೇ ತಾಲೂಕು ಮಟ್ಟದಲ್ಲಿ ಇರುತ್ತವೆ. ಅಲ್ಲಿ ಕೃಷಿ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿರುತ್ತಾರೆ. ಮತ್ತು ಅವರ ಕೆಳಗಡೆ ಕೃಷಿ ಅಧಿಕಾರಿಗಳ ಸಹಾಯಕ್ಕಾಗಿ ಅಥವಾ ಅವರ ಅನುಪಸ್ಥಿತಿಯಲ್ಲಿ ಕಾರ್ಯನಿರ್ವಾಹಿಸಲು ಸಹಾಯಕ ಕೃಷಿ ಅಧಿಕಾರಿಗಳು ಸಹ ಇರುತ್ತಾರೆ.

* ಎಲ್ಲಾ ರೈತರಿಗೆ ಹತ್ತಿರವಾಗಲು ಮತ್ತು ರೈತರ ಜೊತೆಗಿನ ಸಂಪರ್ಕವನ್ನು ಸುಲಭವಾಗಿಸಲು ಈ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳನ್ನು ಹೋಬಳಿ ಅಥವಾ ತಾಲೂಕು ಮಟ್ಟದಲ್ಲಿ ಮಾಡಿರುತ್ತಾರೆ.

 

ರೈತರು ಅಥವಾ ಸಾಮಾನ್ಯ ಜನರು ಈ ಒಂದು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಏನೇನು ಸಬ್ಸಿಡಿ ಅನ್ನು ಪಡೆಯಬಹುದು ಎನ್ನುವುದನ್ನು ನೋಡುವುದಾದರೆ,

* ಮೊದಲಿಗೆ, ರೈತರಿಗೆ ಬೇಕಾಗುವ ಬೀಜಗಳನ್ನು ಅಂದರೆ ರೈತರಿಗೆ ಬಿತ್ತುವ ಸಮಯದಲ್ಲಿ ಬೇಕಾಗುವ ಬಿತ್ತನೆ ಬೀಜಗಳನ್ನು ಕೊಳ್ಳಲು ಸಬ್ಸಿಡಿಯನ್ನು ಪಡೆಯಬಹುದು.

ಅಂದರೆ ಯಾವ ತರಹದ ಬೀಜಗಳಿಗೆ ಸಬ್ಸಿಡಿಯನ್ನು ನೀಡಲಾಗುತ್ತದೆ? ಮತ್ತು ಬೆತ್ತನಗೆ ಬೇಕಾಗುವ ಬೀಜಗಳಿಗೆ ಎಷ್ಟು ಸಬ್ಸಿಡಿಯನ್ನು ನೀಡಲಾಗುತ್ತದೆ? ಎಲ್ಲವನ್ನು ಸಹ ಅದರಲ್ಲಿ ತಿಳಿಸಲಾಗಿರುತ್ತದೆ.

* ಕೇವಲ ಬೀಜಗಳು ಅಲ್ಲದೆ ಅದರ ಜೊತೆಗೆ ರಸ ಗೊಬ್ಬರಗಳ ಮೇಲೆಯು ಸಹ ಸಬ್ಸಿಡಿಯನ್ನು ಪಡೆಯಬಹುದು. ಪ್ರತಿಯೊಂದು ರೈತ ಸಂಪರ್ಕ ಕೇಂದ್ರದಲ್ಲಿ ಅಥವಾ ಕೃಷಿ ಇಲಾಖೆಯಲ್ಲಿ ರಸಗೊಬ್ಬರಗಳ ವಿಭಾಗವನ್ನು ಹೊಂದಿರುತ್ತದೆ. ರೈತರು ತಮಗೆ ಸಂಬಂಧಪಟ್ಟ ಅಥವಾ ತಮಗೆ ಹತ್ತಿರವಿರುವ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ ಅಲ್ಲಿ ನೀವು ರಸಗೊಬ್ಬರಗಳನ್ನು ಕೊಳ್ಳಲು ಅವುಗಳ ಮೇಲೆ ಸಬ್ಸಿಡಿಯನ್ನು ಪಡೆಯಬಹುದು. ಎಲ್ಲಾ ವರ್ಗದ ರೈತರಿಗೆ ರಸಗೊಬ್ಬರಗಳನ್ನು ಕೊಳ್ಳಲು ಅವುಗಳ ಮೇಲೆ ಸುಮಾರು ಶೇಕಡಾ 50ರಷ್ಟು ಸಬ್ಸಿಡಿಯನ್ನು ಅಥವಾ ಸಹಾಯಧನವನ್ನು ನೀಡಲಾಗುತ್ತದೆ.

* ಇದಲ್ಲದೆ ಇವುಗಳ ಜೊತೆಗೆ, ಅಂದರೆ ರಸಗೊಬ್ಬರಗಳ ಮೇಲೆ ಸಬ್ಸಿಡಿ ಅಲ್ಲದೇ, ರೈತರಿಗೆ ಸಾಗುವಳಿ ಅಥವಾ ಕೃಷಿಯನ್ನು ಮಾಡಲು ಉಪಕರಣಗಳ ಅವಶ್ಯಕತೆ ತುಂಬಾ ಇರುತ್ತದೆ. ಇದಕ್ಕಾಗಿಯೇ ಸರ್ಕಾರದಿಂದ ಕೃಷಿ ಸಂಪರ್ಕ ಕೇಂದ್ರದಲ್ಲಿ ಅಥವಾ ಕೃಷಿ ಇಲಾಖೆಯಲ್ಲಿ ಉಪಯುಕ್ತ ಉಪಕರಣ ಅಥವಾ ಸಾಮಗ್ರಿಗಳನ್ನು ಕೊಳ್ಳಲು ಸಬ್ಸಿಡಿ ಅಥವಾ ಸಹಾಯಧನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

* ಈ ಯೋಜನೆ ಅಡಿ ರೈತರಿಗೆ ‘ಕೃಷಿ ಯಂತ್ರೀಕರಣ’ ಎಂಬ ಶೀರ್ಷಿಕೆ ಅಡಿ ರೈತರು ಸಾಗುವಳಿ ಮಾಡಲು ಬೇಕಾಗುವ ಉಪಕರಣಗಳ ಮೇಲೆ ಸಬ್ಸಿಡಿಯನ್ನು ಪಡೆಯಬಹುದು. ಈ ಕಾರ್ಯಕ್ರಮದ ಅಡಿಯಲ್ಲಿ ರೈತರು ತಮಗೆ ಬಿತ್ತನಗೆ ಅಥವಾ ಉಳುಮೆ ಮಾಡಲು ಬೇಕಾಗುವ ಉಪಕರಣಗಳಾದ ಪವರ್ ಟಿಲ್ಲರ್, ರೋಟೋವೇಟರ್, ಟಿಲ್ಲರ್ ಗಳನ್ನು ಪಡೆಯಬಹುದು. ಇದರ ಜೊತೆಗೆ ಫ್ಲೋಫ್ ಗಳನ್ನು ಸಹ ಪಡೆಯಬಹುದು. ಅಂದರೆ ಉಳುಮೆಗೆ ನೇಗಿಲನ್ನು ಸಹ ಸಬ್ಸಿಡಿ ಅಥವಾ ಸಹಾಯಧನದಲ್ಲಿ ಪಡೆಯಬಹುದು.

ಇಲ್ಲಿ ಸಾಮಾನ್ಯ ವರ್ಗದ ರೈತರಿಗೆ ಅಂದರೆ ಜನರಲ್ ಕೆಟಗೆರಿಯ ರೈತರಿಗೆ ಸರಿ ಸುಮಾರು ಶೇಕಡಾ 50ರಷ್ಟು ಸಹಾಯಧನವನ್ನು ನೀಡಲಾಗುವುದು.

ಹಾಗೂ ಅದೇ ರೀತಿಯಾಗಿ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಗೆ ಹೊಂದಿರುವಂತಹ ರೈತರಿಗೆ ಸುಮಾರು ಶೇಕಡಾ 75ರಷ್ಟು ಸಹಾಯಧನವನ್ನು ಅಥವಾ ಸಬ್ಸಿಡಿ ನೀಡಲಾಗುವುದು.

* ಇದರಲ್ಲಿ ಯಾವುದೇ ತರಹದ ಸಣ್ಣ ರೈತರು, ದೊಡ್ಡ ರೈತರು ಮತ್ತು ಅತಿ ಸಣ್ಣ ರೈತರು ಎಂಬುದಾಗಿ ವಿಂಗಡನೆ ಮಾಡಲು ಬರುವುದಿಲ್ಲ. ಎಲ್ಲ ರೈತರಿಗೂ ಅಂದರೆ ಪ್ರತಿಯೊಬ್ಬ ರೈತನಿಗೂ ಸಹ 5 ಎಕರೆಯವರಿಗೆ ಸಹಾಯಧನವನ್ನು ನೀಡಲಾಗುವುದು.

* ಇದರ ಜೊತೆಗೆ ಕೃಷಿ ಇಲಾಖೆಗಳು ಅಥವಾ ರೈತ ಸಂಪರ್ಕ ಕೇಂದ್ರಗಳು, ಕೃಷಿ ಉತ್ಪನ್ನಗಳ ಸಂಸ್ಕರಣ ಘಟಕಗಳನ್ನು ಹೊಂದಿರುತ್ತವೆ. ಅಂದರೆ ಅಲ್ಲಿ ಅಕ್ಕಿ ಸಂಸ್ಕರಣ ಘಟಕ, ಬೆಳೆಕಾಳುಗಳ ಸಂಸ್ಕರಣ ಘಟಕ, ಹೀಗೆ ಅನೇಕ ನಾನಾ ತರಹದ ಕೃಷಿ ಸಂಸ್ಕರಣ ಘಟಕಗಳನ್ನು ಹೊಂದಿರುತ್ತದೆ. ರೈತರು ಇಂತಹ ಸಂಸ್ಕರಣ ಘಟಕಗಳನ್ನು ಸ್ಥಾಪಿಸುವ ಆಸಕ್ತಿ ಹೊಂದಿರುವ ರೈತರು ಅವನ್ನು ಸ್ಥಾಪಿಸಲು ಸಹಾಯಧನ ಅಥವಾ ಸಬ್ಸಿಡಿಯನ್ನು ಪಡೆಯಬಹುದು.

* ಮೊದಲೇ ಹೇಳಿದ ಹಾಗೆ ಕೃಷಿ ಯಂತ್ರಧಾರೆ ಎಂಬ ಇಲಾಖೆಯಿಂದ ಯಾವುದೇ ಮಷೀನ್ ಅಥವಾ ಯಂತ್ರವನ್ನು ಬಾಡಿಗೆ ಸಹ ಪಡೆಯಬಹುದಾಗಿದೆ. ಹಾಗೂ ಅದೇ ರೀತಿಯಾಗಿ ಅದರ ಉಪಯೋಗ ಮುಗಿದ ನಂತರ ಅದನ್ನು ಮರಳಿ ಅವರಿಗೇ ಹಿಂತಿರುಗಿಸಬಹುದಾಗಿದೆ.

* ಇದಾದ ಮೇಲೆ ಸೂಕ್ಷ್ಮ ನೀರಾವರಿ ಯೋಜನೆಗಳಿಗೂ ಸಹ ಸಬ್ಸಿಡಿ ಅಥವಾ ಸಹಾಯಧನವನ್ನು ನೀಡಲಾಗುವುದು. ಇದರಲ್ಲಿ ಹನಿ ನೀರಾವರಿ ಪದ್ಧತಿ ಮತ್ತು ತುಂತುರು ನೀರಾವರಿ ಪದ್ಧತಿಗೆ ಬೇಕಾಗುವ ಸಾಮಗ್ರಿಗಳನ್ನು ಅಥವಾ ಉಪಕರಣಗಳನ್ನು ಕೊಳ್ಳಲು ಸಹಾಯಧನ ಅಥವಾ ಸಬ್ಸಿಡಿಯನ್ನು ನೀಡಲಾಗುವುದು. ಈ ಸೂಕ್ಷ್ಮ ನೀರಾವರಿ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗುಂಪಿಗೆ ಸೇರಿರುವಂತ ರೈತರಿಗೆ ಸುಮಾರು ಶೇಕಡಾ 90ರಷ್ಟು ಸಹಾಯಧನವನ್ನು ನೀಡಲಾಗುವುದು.

ಹಾಗೂ ಅದೇ ರೀತಿಯಾಗಿ ಸಾಮಾನ್ಯ ವರ್ಗದ ಜನರಿಗೆ ಅಂದರೆ ಜನರಲ್ ಕೇಟಗರಿಯ ರೈತರಿಗೆ ಸುಮಾರು ಶೇಕಡಾ 75ರಷ್ಟು ಸಹಾಯಧನವನ್ನು ಸಬ್ಸಿಡಿಯನ್ನು ನೀಡಲಾಗುವುದು.

 

* ಇದೇ ರೀತಿಯಾಗಿ ‘ಸಮಗ್ರ ಕೃಷಿ ಅಭಿಯಾನ’ ಎಂಬ ಕಾರ್ಯಕ್ರಮದ ಅಡಿಯಲ್ಲಿ ‘ಕೃಷಿ ಪಂಡಿತ್’ ಎಂಬ ಪ್ರಶಸ್ತಿಯನ್ನೂ ಸಹ ಕೃಷಿ ಇಲಾಖೆಯ ಕಡೆಯಿಂದ ಪ್ರಧಾನ ಮಾಡಲಾಗುತ್ತದೆ. ಸಾಮಾನ್ಯವಾಗಿ ರೈತರು ಕೃಷಿಯಲ್ಲಿ ಏನಾದರೂ ಅಭಿವೃದ್ಧಿಯನ್ನು ಮಾಡಿದ್ದರೆ, ಅಥವಾ ಒಬ್ಬ ಕ್ರಿಯಾಶೀಲ ರೈತರಾಗಿದ್ದರೆ, ಅಥವಾ ರೈತರು ಸಮಗ್ರ ಕೃಷಿಯನ್ನು ಮಾಡುತ್ತಿದ್ದರೆ, ಅಂತಹ ರೈತರನ್ನು ಗುರುತಿಸಿ ‘ಕೃಷಿ ಪಂಡಿತ್’ ಎಂಬ ಪ್ರಶಸ್ತಿಯನ್ನು ಕೃಷಿ ಇಲಾಖೆಯ ಕಡೆಯಿಂದ ಪ್ರದಾನ ಮಾಡಲಾಗುವುದು. ಹಾಗೂ ಅದೇ ರೀತಿಯಾಗಿ ಪ್ರಶಸ್ತಿಗೆ ಅರ್ಹರಾದ ರೈತರು ಅದರ ಸರ್ಟಿಫಿಕೇಟ್ ಅನ್ನು ಸಹ ಪಡೆಯಬಹುದು.

* ಇದರ ಜೊತೆಗೆ ಇತ್ತೀಚೆಗೆ ಸನ್ಮಾನ್ಯರಾದ ರಾಜ್ಯದ ಮುಖ್ಯಮಂತ್ರಿಗಳು ರೈತರ ಮಕ್ಕಳ ವಿಧ್ಯಾಭ್ಯಾಸಕ್ಕೆ ಸಹಾಯವಾಗಲೆಂದು ಮತ್ತು ರೈತ ಮಕ್ಕಳ ವಿದ್ಯಾಭ್ಯಾಸದ ಪ್ರೋತ್ಸಾಹಕ್ಕೆಂದು, ಮುಖ್ಯಮಂತ್ರಿ ರೈತ ಮಕ್ಕಳ ವಿದ್ಯಾನಿಧಿ ಎಂಬ ಹೊಸ ಸ್ಕಾಲರ್ಷಿಪ್ ಅಥವಾ ಸಹಾಯದನವನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆಯನ್ನು ಸಹ ರೈತ ಮಕ್ಕಳು ಕೃಷಿ ಇಲಾಖೆ ಅಥವಾ ರೈತ ಸಂಪರ್ಕ ಕೇಂದ್ರದಿಂದ ಈ ಸಹಾಯಧನವನ್ನು ಪಡೆಯಬಹುದಾಗಿದೆ. ಈ ಸಹಾಯಧನವನ್ನು ಪಡೆಯಲು ಫ್ರೂಟ್ಸ್ ಐ. ಡಿ(FRUITS I.D) ಯನ್ನು ಕಡ್ಡಾಯವಾಗಿ ನಮೂದಿಸಬೇಕಾಗುತ್ತದೆ.

* ಅದೇ ರೀತಿಯಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿ ಇದರ ಜೊತೆಗೆ ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ಸುಮಾರು 4,000 ರೂಪಾಯಿಯನ್ನು ಸಹ ಪಡೆಯಬಹುದಾಗಿದೆ.

* ಹಾಗೂ ಅದೇ ರೀತಿಯಾಗಿ ಈ ರಾಜ್ಯ ಸರ್ಕಾರದ ಪ್ರಮುಖ ಯೋಜನೆಯಾದ ಈ ಒಂದು ಕೃಷಿ ಭಾಗ್ಯ ಯೋಜನೆಯ ಅಡಿಯಲ್ಲಿ ಕೃಷಿ ಹೊಂಡವನ್ನು ನಿರ್ಮಿಸಲು ಬೇಕಾಗುವ ಸಹಾಯಧನವನ್ನು ಪಡೆಯಬಹುದಾಗಿದೆ. ಅಂದರೆ ರೈತರಿಗೆ ಕೃಷಿ ಹೊಂಡವನ್ನು ನಿರ್ಮಿಸಲು ಬೇಕಾಗುವ ಸಾಮಾಗ್ರಿಗಳ ಅಥವಾ ಉಪಕರಣಗಳ ವೆಚ್ಚಕ್ಕಾಗಿ ಸಬ್ಸಿಡಿ ಅಥವಾ ಸಹಾಯಧನವನ್ನು ಪಡೆಯಬಹುದಾಗಿದೆ.

* ನೀವು ಕೃಷಿ ಇಲಾಖೆಯಲ್ಲಿ ಅಥವಾ ನಿಮಗೆ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಮಣ್ಣು ಮತ್ತು ನೀರಿನ ಪರೀಕ್ಷೆಯನ್ನು ಸಹ ಮಾಡಿಸಬಹುದು. ಅದೇ ರೀತಿಯಾಗಿ ರೈತರಿಗೆ ಕೃಷಿಗೆ ಸಂಬಂಧಪಟ್ಟ ತರಬೇತಿಗಳನ್ನು ಸಹ ನಿಮಗೆ ಈ ರೈತ ಸಂಪರ್ಕ ಕೇಂದ್ರದಲ್ಲಿ ನೀಡಲಾಗುವುದು.

* ರೈತರ ಹೊಲದಲ್ಲಿ ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ಬೆಳೆಗಳು ಹಾಳಾದರೆ ಅಥವಾ ನಾಶವಾದರೆ ಅಥವಾ ರೈತರು ಇದರಿಂದ ಆತ್ಮಹತ್ಯೆ ಮಾಡಿಕೊಂಡರೆ ಇದಕ್ಕೂ ಸಹ ನೀವು ಈ ಕೃಷಿ ಇಲಾಖೆ ಅಥವಾ ರೈತ ಸಂಪರ್ಕ ಕೇಂದ್ರಗಳಿಂದ ಪರಿಹಾರವಾಗಿ ಸಹಾಯಧನವನ್ನು ಪಡೆಯಬಹುದಾಗಿದೆ.

ಹೀಗೆ ಅನೇಕ ನಾನಾ ತರಹದ ಸಬ್ಸಿಡಿ ಅಥವಾ ಸಹಾಯಧನವನ್ನು ರಾಜ್ಯ ಸರ್ಕಾರದ ಕೃಷಿ ಇಲಾಖೆಯಲ್ಲಿ ಅಥವಾ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಗಳಲ್ಲಿ ನೀಡಲಾಗುವುದು. ರೈತರು ಇದರ ಸದುಪಯೋಗವನ್ನು ಪಡೆದುಕೊಂಡು ಕೃಷಿಯಲ್ಲಿ ಅಭಿವೃದ್ಧಿ ಹೊಂದಬೇಕು.

    ಈಗ ನಾವು ಈ ಮೇಲೆ ಹೇಳಿರುವ ಸಬ್ಸಿಡಿ ಅಥವಾ ಸಹಾಯಧನಗಳನ್ನು ಪಡೆಯಲು

ಯಾವ ರೀತಿ ಅರ್ಜಿ ಸಲ್ಲಿಸಬೇಕು?

ಯಾವ ವೆಬ್ ಸೈಟನ್ನು ತೆರೆಯಬೇಕು?

ಮತ್ತು ಹೇಗೆ ಸಲ್ಲಿಸಬೇಕು?

ಎಂಬುದರ ಸಂಪೂರ್ಣ ಕ್ರಿಯೆಯನ್ನು ನಾವು ಈಗ ತಿಳಿದುಕೊಳ್ಳೋಣ.

* ರೈತರು ಈ ಸಬ್ಸಿಡಿ ಅಥವಾ ಸಹಾಯಧನಗಳನ್ನು ಪಡೆಯಲು ಮೊದಲು ರೈತರು ಗೂಗಲ್ ನಲ್ಲಿ ರೈತರಿಗಾಗಿ ಇರುವ ಈ ‘ರೈತ ಮಿತ್ರ’ ವೆಬ್ ಸೈಟನ್ನು ತೆರೆಯಬೇಕಾಗುತ್ತದೆ.

* ಅಲ್ಲಿ ರೈತರ ಮಿತ್ರ ಮುಖ್ಯ ವೆಬ್ ಸೈಟ್ ನ ಮೇಲೆ ಕ್ಲಿಕ್ ಮಾಡಿದ ನಂತರ ಅದರ ಮುಖಪುಟ ತೆರೆದುಕೊಳ್ಳುತ್ತದೆ.

* ಅಲ್ಲಿ ನಿಮಗೆ ಭಾಷೆಯ ಆಯ್ಕೆಗಳನ್ನು ಸಹ ನೀಡಲಾಗಿದೆ. ಅಂದರೆ ನಿಮಗೆ ಯಾವ ಭಾಷೆ ಬೇಕು ಅದನ್ನು ಆಯ್ಕೆ ಮಾಡಬಹುದು.

* ಇದು ರಾಜ್ಯ ಸರ್ಕಾರದಿಂದ ರೈತರ ಸಲುವಾಗಿ ತೆರಯಲ್ಪಟ್ಟ ವೆಬ್ ಸೈಟ್ ಆಗಿದೆ. ಇದು ಯಾವುದೇ ಖಾಸಗಿಯವರ ಅಧೀನದಲ್ಲಿ ಇರುವುದಿಲ್ಲ.

* ಅಲ್ಲಿ ಕೆಳಗಡೆ ಮತ್ತಷ್ಟು ಓದಿ ಎಂಬುದಾಗಿ ನಮೂದಿಸಿರುತ್ತದೆ. ಅದರಲ್ಲಿ ಸೇವೆಗಳು ಮತ್ತು ಯೋಜನೆಗಳು ಎಂಬುದಾಗಿ ನಮೂದಿಸಿರುತ್ತದೆ. ಅಂದರೆ ರಾಜ್ಯ ಸರ್ಕಾರದಿಂದ ನೀಡುವ ಯೋಜನೆಗಳ ಬಗ್ಗೆ ಮಾಹಿತಿಯನ್ನು ಆ ಜಾಗದಲ್ಲಿ ನೀಡಲಾಗುತ್ತದೆ. ಮತ್ತು ಈ ಮೇಲೆ ಹೇಳಿರುವ ಸಬ್ಸಿಡಿ ಅಥವಾ ಸಹಾಯಧನವನ್ನು ಪಡೆಯುವ ಮಾಹಿತಿಯನ್ನು ಸಹ ಅಲ್ಲಿ ನೀಡಲಾಗುತ್ತದೆ.

* ಈ ವೆಬ್ ಸೈಟ್ ನಲ್ಲಿ ಕೃಷಿ ಇಲಾಖೆಯಿಂದ ಅಥವಾ ರಾಜ್ಯ ಸರ್ಕಾರದಿಂದ ರೈತರಿಗೆ ಹೊರಡಿಸಿದ ಆದೇಶಗಳ ಮಾಹಿತಿಯನ್ನು ಸಹ ಇಲ್ಲಿ ನೀಡಲಾಗುತ್ತದೆ.

* ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ರೈತರು ತಮಗೆ ಸಂಬಂಧಪಟ್ಟ ಅಥವಾ ತಮಗೆ ಹತ್ತಿರವಿರುವ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ.

 

ಸರ್ಕಾರವು ರೈತರ ಏಳಿಗೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಕೃಷಿ ಈಗಿನ ಕಾಲದಲ್ಲಿಯೂ ಸಹ ಭಾರತದ ಆರ್ಥಿಕತೆಯಲ್ಲಿ ಒಂದು ಪ್ರಮುಖ ಪಾತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ರೈತರು, ಸರ್ಕಾರ ಜಾರಿತರುವ ಇಂತಹ ಯೋಜನೆಗಳ ಲಾಭವನ್ನು ಪಡೆದುಕೊಂಡು ಕೃಷಿಯಲ್ಲಿ ಅಭಿವೃದ್ಧಿಯನ್ನು ಕಾಣಬೇಕು.

ಈ ಮೇಲೆ ತಿಳಿಸಿದಂತೆ ಎಲ್ಲಾ ರೈತರು ಕೃಷಿಗೆ ಸಂಬಂದಿಸಿದ ಸಬ್ಸಿಡಿಗಳನ್ನು ಪಡೆಯಬಹುದು.

 

ಹೆಚ್ಚಿನ ಮಾಹಿತಿಗಾಗಿ

ಕೃಷಿ ವಾಹಿನಿ🌱

ವೆಬ್ಸೈಟ್ ನ ಸಂಪರ್ಕದಲ್ಲಿರಿ..

Leave a Reply

Your email address will not be published. Required fields are marked *