ಪ್ರೀಯ ರೈತರೇ, ನಾವು ಇಂದು ಕಬ್ಬಿನಲ್ಲಿ ಬರುವ ರೋಗಗಳು ಮತ್ತು ಅವುಗಳ ಸಮಗ್ರ ನಿರ್ವಹಣೆಯನ್ನು ಯಾವ ರೀತಿಯಾಗಿ ಮಾಡಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

              ಕಬ್ಬು ಒಂದು ಆರ್ಥಿಕ ಬೆಳೆ, ಪ್ರಾಚೀನ ಕಾಲದಿಂದಲೂ ಈ ಬೆಳೆ ಬಗ್ಗೆ ಸಾಕಷ್ಟು ಮಾಹಿತಿ ಇದೆ. ಆರ್ಥಿಕ ದೃಷ್ಟಿಯಿಂದ ಕಬ್ಬು ಇತ್ತೀಚಿಗೆ ಬಹಳ ಮಹತ್ವ ಪಡೆದಿದೆ . ಭಾರತವೇ ಕಬ್ಬಿನ ಉಗಮ ಸ್ಥಾನವೆಂದು ನಂಬಲಾಗಿದೆ. ಜಗತ್ತಿನ ಸಕ್ಕರೆ ಉತ್ಪಾದನೆಯಲ್ಲಿ ಸುಮಾರು ಶೇಕಡಾ 61 ರಷ್ಟು ಕಬ್ಬಿನಿಂದಲೂ ಮತ್ತು ಬೀಟರೂಟ್ ಗಡ್ಡೆಯಿಂದಲೂ ಆಗುತ್ತದೆ. ಹೀಗಾಗಿ ಸಕ್ಕರೆಯ ಉತ್ಪನ್ನಕ್ಕೆ ಕಬ್ಬು ಮೂಲಾಧಾರ ಆಗಿರುವುದರಿಂದ ಕಬ್ಬನ್ನು ಶುಭಸೂಚಕವೆಂದು ವಿವರಿಸಲಾಗಿದೆ. ಪ್ರಪಂಚದಲ್ಲಿ ಏಷ್ಯಾ ಖಂಡದಲ್ಲಿ ಅತಿ ಹೆಚ್ಚಾಗಿ ಕಬ್ಬನ್ನು ಭಾರತದಲ್ಲಿ ಬೆಳೆಯುತ್ತಾರೆ. ತದನಂತರ ದಕ್ಷಿಣ ಆಮೆರಿಕಾ, ಉತ್ತರ ಮತ್ತು ಮಧ್ಯ ಅಮೆರಿಕಾ, ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಖಂಡದಲ್ಲಿಯು ಸಹ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಅತಿ ಹೆಚ್ಚಾಗಿ ಕಬ್ಬನ್ನು ಬೆಳೆಯುವ ಪ್ರಮುಖ್ಯ ದೇಶಗಳೆಂದರೆ ಬ್ರೇಜಿಲ್, ಭಾರತ, ಕ್ಯೂಬಾ, ಪಾಕಿಸ್ತಾನ, ಮೆಕ್ಸಿಕೊ, ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಮತ್ತು ದಕ್ಷಿಣ ಆಫ್ರಿಕಾ ಹೆಚ್ಚಿನ ಕಬ್ಬಿನ ಬೆಳೆಯ ವಿಸ್ತೀರ್ಣವನ್ನು ಹೊಂದಿವೆ. ಭಾರತದಲ್ಲೇ ಸುಮಾರು 40.7 ಲಕ್ಷ ಹೆಕ್ಟೇರ ಪ್ರದೇಶಗಳಲ್ಲಿ ಕಬ್ಬನ್ನು ಬೆಳೆಯುತ್ತಾರೆ.

ಇದರಿಂದ ಪಡೆದ ಉತ್ಪನ್ನವು ಸರಿಸುಮಾರು 2,957.2 ಲಕ್ಷ ಟನ್ ದಷ್ಟು ಇಳುವರಿಯನ್ನು ಪಡೆಯಬಹುದಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿನ ಬೆಳೆಯಿಂದ ಸಕ್ಕರೆ ಉತ್ಪಾದಿಸುವ ರಾಷ್ಟ್ರಗಳೆಂದರೆ ಭಾರತ, ಬ್ರೆಜಿಲ್ ಮತ್ತು ಕ್ಯೂಬಾ. ಭಾರತದಲ್ಲಿ ಪ್ರದೇಶದ ಒಟ್ಟು ವಿಸ್ತೀರ್ಣದಲ್ಲಿ ಭಾರತದ ಒಟ್ಟು ರಾಜ್ಯಗಳಲ್ಲಿ ಉತ್ತರ ಪ್ರದೇಶವು ವಿಸ್ತೀರ್ಣದಲ್ಲಿ ಮೊದಲನೆಯ ಸ್ಥಾನ ಪಡೆದಿದೆ. ಆದರೆ ಇಳುವರಿಯಲ್ಲಿ ಬಹಳ ಹಿಂದೆ ಇದೆ. ಮಹಾರಾಷ್ಟ್ರ , ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ಕಬ್ಬಿನ ಇಳುವರಿಯಲ್ಲಿ ಮತ್ತು ಸರಾಸರಿ ಸಕ್ಕರೆ ಇಳುವರಿಯಲ್ಲಿ ಮುಂಚೂಣಿಯಲ್ಲಿವೆ.

ಕರ್ನಾಟಕದಲ್ಲಿ ಇದರ ಕ್ಷೇತ್ರವು ಸುಮಾರು 4.56 ಲಕ್ಷ ಹೆಕ್ಟರಗಳಷ್ಟಿದ್ದು ಮತ್ತು ಅದರ ಉತ್ಪನ್ನವು ಸುಮಾರು 330.92 ಲಕ್ಷ ಟನ್ ದಷ್ಟು ಇರುತ್ತದೆ. ಕರ್ನಾಟಕವು ಭಾರತದ ಒಟ್ಟು ಕ್ಷೇತ್ರದಲ್ಲಿ ಶೇಕಡಾ 8 ರಿಂದ 9 ರಷ್ಟು ಇದ್ದರೂ ಉತ್ಪಾದನೆಯಲ್ಲಿ ಶೇಕಡಾ 13.5 ರಷ್ಟು ಇದೆ. ಇದನ್ನು ಒಂಬತ್ತು ಅಥವಾ ಹದಿನಾಲ್ಕು ತಿಂಗಳುಗಳಲ್ಲಿ ಬೆಳೆಯುವ ಬೆಳೆಯಾಗಿದ್ದು ಹೆಚ್ಚಾಗಿ ಇದನ್ನು ನೀರಾವರಿಯಲ್ಲಿ ಬೆಳೆಯಲಾಗುತ್ತದೆ. ಇದನ್ನು ಹೆಚ್ಚಾಗಿ ಕಾವೇರಿ (ಮಂಡ್ಯ), ತುಂಗಭದ್ರಾ ನೀರಾವರಿ ಪ್ರದೇಶಗಳಲ್ಲಿ (ರಾಯಚೂರ ಮತ್ತು ಬಳ್ಳಾರಿ) ಬೆಳೆಯಲಾಗುತ್ತಿದೆ. ಬೆಳಗಾವಿ, ಹಾವೇರಿ, ಶಿವಮೊಗ್ಗ ಮತ್ತು ಬೀದರ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದೆ. ಬೆಳಗಾವಿ, ಮಂಡ್ಯ, ಬೀದರ ಮತ್ತು ರಾಯಚೂರ ಜಿಲ್ಲೆಗಳು ಮೊದಲಿನ ನಾಲ್ಕು ಸ್ಥಾನಗಳನ್ನು ಹೊಂದಿವೆ. ಪ್ರಪಂಚದ ವಿವಿಧ ಭಾಗಗಳಲ್ಲಿ ಕಬ್ಬಿನ ಬೆಳೆಗೆ ಬರುವ ರೋಗಗಳನ್ನು ಪಟ್ಟಿ ಮಾಡಲಾಗಿದೆ. ಅವುಗಳಲ್ಲಿ ಹೆಚ್ಚ್ಚಿನ ರೋಗಗಳು ಭಾರತ ದೇಶದಿಂದ ವರದಿಯಾಗಿವೆ. ಇವುಗಳಲ್ಲಿ ಮುಖ್ಯವಾದವುಗಳೆಂದರೆ,

 

ಶಿಲೀಂಧ ರೋಗಗಳಾದ

      *ಕೆಂಪುಕೊಳೆ ರೋಗ

*ಕಾಡಿಗೆ ರೋಗ

*ಬಾಯಿ ರೋಗ

*ಫೈನಾಪಲ್ ರೋಗ

         •ವೈರಸ್ ರೋಗವಾದ

*ಮಚ್ಚೆ ರೋಗ

         •ಬ್ಯಾಕ್ಟಿರಿಯಾ ರೋಗವಾದ

* ಕೂಳಿಕುಟ್ಟ ರೋಗ

ಮತ್ತು ಇನ್ನಿತರ ಹಲವು ರೋಗಗಳನ್ನು ಗುರುತಿಸಲಾಗಿದೆ. ಇವುಗಳಿಂದ ಸುಮಾರು ಶೇಕಡಾ 15 ರಿಂದ 20 ರಷ್ಟು ಹಾನಿಯು ಸಂಭವಿಸಬಹುದು.

 

ಈಗ ನಾವು ಕಬ್ಬಿನ ಬೆಳೆಗೆ ಬರುವಂತಹ ರೋಗಗಳು ಮತ್ತು ಅವುಗಳ ನಿರ್ವಹಣೆಯ ಬಗ್ಗೆ ತಿಳಿದುಕೊಳ್ಳೋಣ.

 

   1)ಕಾಡಿಗೆ ರೋಗ (ಕಪ್ಪು ಚಾವಟಿ ರೋಗ):

         ಸಾಮಾನ್ಯವಾಗಿ ಈ ರೋಗವು ಜಗತ್ತಿನಾದ್ಯಂತ ಕಬ್ಬು ಬೆಳೆಯುವ ಎಲ್ಲಾ ದೇಶಗಳಲ್ಲಿ ಕಂಡು ಬರುತ್ತದೆ. ಈ ರೋಗದಿಂದ ಭಾರತದಲ್ಲಿ 1942-43 ರಲ್ಲಿ ಸುಮಾರು ಶೇಕಡಾ 66 ರಷ್ಟು ಹಾನಿ ಉಂಟಾಯಿತು. ನಮ್ಮ ದೇಶದಲ್ಲಿ ಜನಪ್ರಿಯ ತಳಿಗಳಾದ co-419 ಮತ್ತು co -740 ತಳಿಗಳಲ್ಲಿ ಈ ರೋಗದ ಬಾಧೆ ಬಹಳ ಕಂಡುಬರುತ್ತದೆ.

   •ಲಕ್ಷಣಗಳು:

      *ರೋಗದ ಲಕ್ಷಣಗಳು ಕಬ್ಬನ್ನು ನಾಟಿ ಮಾಡಿದ 3 ರಿಂದ 5 ತಿಂಗಳ ನಂತರ ಕಾಣಿಸಿಕೊಳ್ಳುತ್ತದೆ.

       *ಕಬ್ಬಿನ ಬೆಳೆಯಲ್ಲಿ ಬೆಳೆಯುತ್ತಿರುವ ತುದಿಯಿಂದ ಕಪ್ಪಗಿನ ಚಾವಟಿಯು ಕಾಣಿಸಿಕೊಳ್ಳುತ್ತದೆ. ಮೊದಲು ಬಿಳಿಯ ಪೇಪರಿನಂತಹ ತೆಳುವಾದ ಚಾವಟಿ ಕಾಣಿಸಿಕೊಳ್ಳುತ್ತದೆ.

* ಇದು ಬಹಳ ಉದ್ದವಾಗಿದ್ದು ನಡುವೆ ಬಾಗಿರುತ್ತದೆ ಮತ್ತು ಈ ಚಾವಟಿಯು ಪದರಿನಿಂದ ಮುಚ್ಚಿರುತ್ತದೆ.

 * ನಂತರ ಈ ಪದರು ಹರಿದು ಕಪ್ಪಗಿನ ಹುಡಿಯು ಹೊರಬೀಳುತ್ತದೆ. ರೋಗ ತಗುಲಿದ ಇಂಥ ಗಿಡಗಳು ಆಕಾರದಲ್ಲಿ ಚಿಕ್ಕದಾಗಿರುತ್ತವೆ. ಬಹಳ ಬೇಗ ಕಾಣಿಸಿಕೊಳ್ಳುವುದಲ್ಲದೇ, ಪ್ರತಿ ವರ್ಷ ಹೆಚ್ಚುತ್ತಾ ಹೋಗುತ್ತದೆ.

* ಗಿಡಗಳ ಬೆಳವಣಿಗೆ ಕುಗ್ಗಿರುವುದರಿಂದ ಕೂಳೆ ಬೆಳೆಗಳಲ್ಲಿಯು ಸಹ ಈ ರೋಗ ಬಹಳ ಬೇಗ ಕಾಣಿಸಿಕೊಳ್ಳುತದೆ.

         * ರೋಗಕಾರಕ ಶೀಲಿಂದ್ರವು ಚಾವಟಿಯ ತುಂಬಾ ಕಪ್ಪಾಗಿನ ಸಣ್ಣ ಬೀಜಕಣಗಳನ್ನು ಅಧಿಕ ಸಂಖ್ಯೆಯಲ್ಲಿ ಉತ್ಪಾದಿಸುತ್ತದೆ. ಪ್ರತಿ ಚಾವಟಿಯಲ್ಲೂ 500 ಕೋಟಿ ಬೀಜಕಣಗಳಿರಬಹುದೆಂದು ಅಂದಾಜು ಮಾಡಲಾಗಿದೆ.

                *ಗಾಳಿಯಲ್ಲಿ ಈ ಬೀಜಜಕಣಗಳು ಹರಡುವುದರಿಂದ ರೋಗವು ಬಹುದೂರದವರೆಗೂ ವಿಸ್ತರಿಸಬಹುದಾಗಿದೆ.

         *ರೋಗದ ಮೊದಲ ಸೋಂಕು, ರೋಗ ತಗುಲಿದ ಕಬ್ಬಿನ ತುಂಡುಗಳನ್ನು ನಾಟಿ ಮಾಡಲು ಉಪಯೋಗಿಸುವುದರಿಂದ ಬರುತ್ತದೆ. ತುಂಡುಗಳ ಮೇಲಿರುವ ಗೆಣ್ಣು (ಮೊಗ್ಗು)ಗಳಲ್ಲಿ ಶಿಲೀಂಧ್ರದ ಕವಕ ಜಾಲವು ಸುಪ್ತಾವಸ್ಥೆಯಲ್ಲಿ ಇರುತ್ತದೆ. ಇದಲ್ಲದೇ ಭೂಮಿಯಲ್ಲಿರುವ ಶಿಲೀಂದ್ರದ ಬೀಜಾಣುಗಳಿಂದಲೂ ಸಹ ರೋಗ ತಗಲುತ್ತದೆ.

                * ಬೀಜಾಣುಗಳು 3 ವರ್ಷಗಳಿಗಿಂತಲೂ ಅಧಿಕ ಸಮಯ ಭೂಮಿಯಲ್ಲಿ ಜೀವಂತವಾಗಿ ಇದ್ದುಕೊಂಡು ರೋಗವನ್ನುಂಟು ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತವೆ 

           *ಭೂಮಿಯಲ್ಲಿ ಉಷ್ಟ ತಾಪಮಾನ 25°-30° ಸೆಂ.ಗಳಷ್ಟಿದ್ದರೆ ಈ ರೋಗವು ಹೆಚ್ಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ.

            •ನಿರ್ವಹಣೆ:

      * ಕಬ್ಬಿನ ತುಂಡುಗಳನ್ನು ನಾಟಿ ಮಾಡಲು ರೋಗ ರಹಿತ ಹೊಲಗಳಿಂದ ತರಬೇಕು. ರೋಗ ಕಂಡ ಹೊಲಗಳಲ್ಲಿ ಕುಳೆ ಬೆಳೆ ತೆಗೆಯಬಾರದು.

        *ರೋಗ ಕಂಡ ಗಿಡಗಳನ್ನು ಚಾವಟಿ ಸಹಿತ ತೆಗೆದು ಸುಡಬೇಕು.

          *ರೋಗಕ್ಕೆ ತುತ್ತಗುವ ತಳಿಗಳನ್ನು ಬೆಳೆಸಬಾರದು.

          *ಕಬ್ಬಿನ ಬಿತ್ತನೆಗೆ ಉಪಯೋಗಿಸುವ ತುಂಡುಗಳನ್ನು ಉಪಚಾರ ಮಾಡಿ ಉಪಯೋಗಿಸಬೇಕು. ಪಾದರಸಯುಕ್ತ ಶೀಲಿಂದ್ರ ನಾಶಕಗಳನ್ನು ಉಪಯೋಗಿಸಬೇಕು. ಶೇಕಡಾ 0.1%ರಿಂದ 0.5% ದ್ರವಣ ತಯಾರಿಸಿ ತುಂಡುಗಳನ್ನು 10 ರಿಂದ 15 ನಿಮಿಷಗಳವರೆಗೆ ನೆನೆಸಿ ನಾಟಿ ಮಾಡಬೇಕು.

              *ಬೀಜ ನಾಟಿ ಮಾಡುವ ಪೂರ್ವದಲ್ಲಿ ಶಿಲೀಂದ್ರನಾಶಕಗಳಾದ ಕಾರ್ಬನ್‌ಡೈಜಿಮ್ 50 ಡಬ್ಲೂಪಿ ಅಥವಾ ಬೆನೋವಿನಿಲ್ 50 ಡಬ್ಲೂಪಿ ಶೇಕಡಾ 0.1ರ ಪ್ರಮಾಣದಲ್ಲಿ ಉಪಚರಿಸಬೇಕು. ಸಾಮಾನ್ಯವಾಗಿ 10 ರಿಂದ 15 ನಿಮಿಷಗಳವರೆಗೆ ನೆನಸಿ ಇಡಲಾಗುತ್ತದೆ.

             *ನಾಟಿ ಮಾಡುವ ಬೀಜದ ತುಂಡುಗಳಿಗೆ ಬಿಸಿ ನೀರಿನ ಉಪಚಾರವನ್ನೂ ಸಹ ಮಾಡಬಹುದು. ತುಂಡುಗಳನ್ನು 52 ° ಸೆಂ. ನೀರಿನಲ್ಲಿ ಅರ್ಧ ತಾಸು ಇಟ್ಟು ತೆಗೆಯಬೇಕು. 

           *ಬೆಳೆ ಪರಿವರ್ತನೆ ಪಾಲಿಸುತ್ತಿರಬೇಕು .

    ಈ ಮೇಲೆ ಹೇಳಿರುವಂತಹ ನಿರ್ವಹಣೆಯನ್ನು ಪಾಲಿಸಿದರೆ ರೈತರು ತಮ್ಮ ಕಬ್ಬಿನ ಬೆಳೆಯಲ್ಲಿ ಕಾಡಿಗೆ ರೋಗವನ್ನು ನಿರ್ವಹಣೆ ಮಾಡಬಹುದು.

 

          2) ಕೆಂಪು ಕೊಳೆ ರೋಗ:

               ಈ ರೋಗವು ಉತ್ತರ ಭಾರತದಲ್ಲಿ ಮುಖ್ಯವಾಗಿ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ಬಹಳ ವರ್ಷಗಳಿಂದಲೂ ಕಾಡುತ್ತಿರುವ ಸಮಸ್ಯೆಯಾಗಿದೆ. 1939 ರಿಂದ ಈ ರೋಗದಿಂದ ತೀವ್ರವಾಗಿ ಬಹಳಷ್ಟು ಹಾನಿಯಾಗಿದೆ. ಇತ್ತೀಚೆಗೆ ದಕ್ಷಿಣ ಭಾರತದಲ್ಲಿಯೂ ಸಹ ಈ ರೋಗ ಕಾಣಿಸಿಕೊಂಡಿದೆ. ಈ ರೋಗದಿಂದ ಶೇಕಡಾ 40 ರಷ್ಟು ಇಳುವರಿಯು ಕಡಿಮೆ ಆಗುತ್ತದೆ. ಇದಲ್ಲದೇ ಕಬ್ಬಿನ ತುಂಡುಗಳ ಮೊಳಕೆ ಒಡೆಯುವ ಪ್ರಮಾಣ ಮತ್ತು ಸಕ್ಕರೆ ಪ್ರಮಾಣವೂ ಕಡಿಮೆ ಆಗುವುದು. 

       #ಲಕ್ಷಣಗಳು:

    * ರೋಗ ತಗುಲಿದ ತುಂಡುಗಳನ್ನು ಉಪಯೋಗಿಸಿದ ಹೊಲಗಳಲ್ಲಿ ಮೊಳಕೆಯೊಡೆಯುವ ಪ್ರಮಾಣ ಕಡಿಮೆಯಾಗುತ್ತದೆ.

     * ಇದರಿಂದ ಬೆಳೆಯು ಅಗಲವಾಗಿ ಗರಿಯ ತುದಿ ಒಣಗುವುದು ಕಂಡು ಬರುತ್ತದೆ. ಈ ಲಕ್ಷಣವು 10 ರಿಂದ 12 ದಿವಸಗಳಲ್ಲಿ ಗೋಚರಿಸುತ್ತದೆ. ಬೆಳೆಯುವ ಸಸಿಯಲ್ಲಿ ಪೂರ್ತಿ ಸಸಿ ಒಣಗುವುದು ಕಂಡುಬರುತ್ತದೆ.

   *ಬೆಳೆದ ಕಬ್ಬುಗಳನ್ನು ಸೀಳಿ ನೋಡಿದರೆ ಗಣ್ಣುಗಳ ನಡುವಿನ ಭಾಗವು ಕೆಂಪಾಗಿರುತ್ತದೆ.   ಅಲ್ಲಲ್ಲಿ ಬಿಳಿಯ ಪಟ್ಟಿಗಳು ಕಂಡು ಬರುತ್ತವೆ.

          *ರೋಗ ಹೆಚ್ಚಾದಂತೆ ಕಬ್ಬಿನಿಂದ ಕೆಟ್ಟ ವಾಸನಹೊರಡುತ್ತದೆ. ಎಲೆಗಳ ಮುಖ್ಯ ನರದ ಮೇಲೆ ಕೆಂಪು ಚುಕ್ಕೆಗಳು ಕಂಡು ಬರುತ್ತವೆ. ದಿನಕಳೆದಂತೆ ಈ ಚುಕ್ಕೆಗಳು ದೊಡ್ಡದಾಗುತ್ತ ಪೂರ್ತಿ ನರವನ್ನು ವ್ಯಾಪಿಸಬಹುದು. ಈ ಕೆಂಪು ಚುಕ್ಕೆಗಳು ನಂತರ ತಿಳಿ ಕಟ್ಟಿಗೆ ಬಣ್ಣಕ್ಕೆ ತಿರುಗುತ್ತವೆ. ಕೆಲವು ತಳಿಗಳಲ್ಲಿ ಎಲೆಯ ಮೇಲೆಲ್ಲಾ ಸಣ್ಣ ಕೆಂಪು ಚುಕ್ಕೆಗಳು ಕಂಡು ಬರಬಹುದು. ಆದರೆ ಇದು ಸಾಮಾನ್ಯವಾಗಿ ಕಂಡು ಬರುವುದಿಲ್ಲ.

           •ನಿರ್ವಹಣೆ:

       * ಕುಳೆ ಮತ್ತು ಒಣಗಿದ ಎಲೆ ಮುಂತಾದವುಗಳನ್ನು ಹೊಲದಲ್ಲಿ ಸುಡಬೇಕು.     

       * ರೋಗ ತಗುಲಿದ ಗಿಡಗಳನ್ನು ಬುಡಸಮೇತ ಕಿತ್ತು ನಾಶಮಾಡಬೇಕು.

          *ಹೊಲವನ್ನು ಸ್ವಚ್ಛವಾಗಿಡಬೇಕು. ಬಸಿಕಾಲುವೆಗಳನ್ನು ತೆಗೆದು ಹೊಲದಲ್ಲಿ ನೀರು ನಿಲ್ಲದಂತೆ ವ್ಯವಸ್ಥೆ ಮಾಡಿರಬೇಕು.

            * ರೋಗರಹಿತ ಕಬ್ಬಿನ ತುಂಡುಗಳನ್ನು ನಾಟಿಗೆ ಉಪಯೋಗಿಸಬೇಕು. 

          *ರೋಗ ಕಂಡು ಬಂದ ಹೊಲದಲ್ಲಿ ಕುಳೆ ಬೆಳೆ ತೆಗೆಯಬಾರದು. ಭತ್ತ ಹಾಗೂ ಹಸಿರೆಲೆ ಗೊಬ್ಬರಗಳಿಂದ ಬೆಳೆ ಪರಿವರ್ತನೆ ಪಾಲಿಸುತ್ತಿರಬೇಕು.

        * ಆಂತರಿಕ ನಿರ್ಭಂದನೆಗಳಿಂದಲೂ ರೋಗ ಹತೋಟಿಗೆ ತರಬಹುದು. ಅಂದರೆ ಕೆಂಪು ಕೊಳೆ ರೋಗಪೀಡಿತ ಪ್ರದೇಶದಿಂದ ಬೀಜ ಮತ್ತು ಬೀಜ ಸಾಮಗ್ರಿಗಳನ್ನು ತರಬಾರದು.

 

ಈ ಮೇಲೆ ಹೇಳಿರುವಂತಹ ನಿರ್ವಹಣೆಯನ್ನು ಪಾಲಿಸಿದರೆ ರೈತರು ತಮ್ಮ ಕಬ್ಬಿನ ಬೆಳೆಯಲ್ಲಿ ಕೆಂಪು ಕೊಳೆ ರೋಗವನ್ನು ನಿರ್ವಹಣೆ ಮಾಡಬಹುದು.

 

3) ಅನಾನಸ್ ರೋಗ (ತುಂಡು ಕೊಳೆ ರೋಗ):

          • ನಿರ್ವಹಣೆ:

 

     * ಬೇಗ ಮೊಳಕೆಯೊಡೆಯುವ ತಳಿಗಳನ್ನು ಉಪಯೋಗಿಸಬೇಕು.

     * ಕಬ್ಬಿನ ಬೆಳೆಯ ಬಿತ್ತನೆಗೆ 3 ರಿಂದ 4 ಗಣ್ಣುಗಳಿರುವ ತುಂಡುಗಳನ್ನು ಉಪಯೋಗಿಸಬೇಕು. ಇದರಿಂದ ಒಂದು ವೇಳೆ ತುಂಡಿನ ಎರಡು ಕಡೆಯಿಂದ ರೋಗ ಸೋಂಕಿದರೂ ನಡುವಿನ ಗಣ್ಣುಗಳಿಂದ ಸಸಿಗಳು ಆರೋಗ್ಯವಾಗಿ ಬರುತ್ತವೆ.

        * ನಾಟಿ ಮಾಡುವ ಜಮೀನನ್ನು ಆಳವಾಗಿ ಉಳುಮೆ ಮಾಡಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು.

           * ಬೀಜದ ತುಂಡುಗಳನ್ನು ಟ್ರೈಕೋಡರ್ಮಾ ಹಾರ್ಜಿಯಾನಮ್ 10 ಗ್ರಾಂ.ನ್ನು ಒಂದು ಲೀ. ನೀರಿನಲ್ಲಿ ಕರಗಿಸಿ ತಯಾರಿಸಿದ ದ್ರಾವಣದಲ್ಲಿ 50 ನಿಮಿಷ ಅದ್ದಿ ಬಿತ್ತಬೇಕು. ಈ ವಿಧಾನವು ಬೆರೆ ಮಣ್ಣಿನಿಂದ ಬರುವ ರೋಗಗಳನ್ನು ಹತೋಟಿ ಮಾಡುತ್ತದೆ.

 

            ಈ ಮೇಲೆ ಹೇಳಿರುವಂತಹ ನಿರ್ವಹಣೆಯನ್ನು ಪಾಲಿಸಿದರೆ ರೈತರು ತಮ್ಮ ಕಬ್ಬಿನ ಬೆಳೆಯಲ್ಲಿ ಅನಾನಸ್ ರೋಗವನ್ನು ನಿರ್ವಹಣೆ ಮಾಡಬಹುದು.

 

          4) ತುಕ್ಕು ರೋಗ (ಭಂಡಾರ ರೋಗ)

            • ಲಕ್ಷಣಗಳು 

       * ಹಳದಿ ಕೆಂಪು ಗುಳ್ಳೆ ಅಥವಾ ಚುಕ್ಕಿಗಳು ಎಲೆಯ ಎರಡು ಮೈಮೇಲೆ ಕಾಣಿಸಿಕೊಳ್ಳುವವು. ದಿನಕಳದಂತೆ ಈ ಗುಳ್ಳೆಗಳು ಕಂದು ಬಣ್ಣಕ್ಕೆ ತಿರುಗಿ ಈ ಗುಳ್ಳೆಗಳು ಒಡೆದಾಗ ಕೆಂಪು ಬಣ್ಣದ ಹುಡಿ ಹೊರ ಬೀಳುವುದು.

            • ನಿರ್ವಹಣೆ:

       *ರೋಗದ ಚಿಹ್ನೆಗಳು ಕಂಡ ತಕ್ಷಣ mancozeb ಶೇಕಡಾ 0.2ದಷ್ಟು ಸಿಂಪರಣೆ ಮಾಡಬೇಕು.

 

5) ಗಿಡ್ಡ ಕೊಳೆ ರೋಗ:

               • ನಿರ್ವಹಣೆ:

            * ರೋಗ ತಗುಲಿದ ಕಬ್ಬಿನ ಹೊಲದಿಂದ ಬಿತ್ತನೆ ಸಲುವಾಗಿ ತುಂಡುಗಳನ್ನು ಉಪಯೋಗಿಸಬಾರದು.

            * ಬಿಸಿ ನೀರು ಅಥವಾ ಉಗಿಯ ಉಪಚಾರ ಮಾಡಿದ ತುಂಡುಗಳನ್ನು ಬಿತ್ತನೆಗೆ ಉಪಯೋಗಿಸಬೇಕು.

ತುಂಡುಗಳನ್ನು 50 °ಸೆಂ. ನೀರಿನಲ್ಲಿ 2 ತಾಸು, ಅಥವಾ 52 ° ಸೆಂ. ನೀರಿನಲ್ಲಿ ಅರ್ಧ ತಾಸು ಇಡಬೇಕು. ಇಲ್ಲವಾದರೆ ಉಗಿ ಮತ್ತು ಹವೆಯ ಮಿಶ್ರಣದಲ್ಲಿ 50 ° ಸೆಂ.ನಲ್ಲಿ ಒಂದು ತಾಸು ಉಪಚರಿಸಬೇಕು.

 

           6) ಹುಲ್ಲಿನ ಪೊದೆ ರೋಗ:

              ಭಾರತದ ಎಲ್ಲ ರಾಜ್ಯಗಳಲ್ಲೂ ಈ ರೋಗ ಕಂಡು ಬಂದಿದೆ. ಅದರಲ್ಲೂ ಮಹಾರಾಷ್ಟ್ರ ರಾಜ್ಯದಲ್ಲಿ ಹೆಚ್ಚಾಗಿ ಕಂಡು ಬಂದಿದೆ.

          •ನಿರ್ವಹಣೆ:

      * ರೋಗ ಪೀಡಿತ ಪೊದೆಗಳನ್ನು ಕಿತ್ತು ನಾಶಪಡಿಸಬೇಕು.

      * ಬಿತ್ತನೆಗೆ ಉಪಯೋಗಿಸುವ ಕಬ್ಬಿನ ತುಂಡುಗಳಿಗೆ ಬಿಸಿ ನೀರಿನ ಅಥವಾ ಬಿಸಿ ಹವೆಯ ಉಪಚಾರವನ್ನು ಈ ಕೆಳಗಿನಂತೆ ಮಾಡುವುದರಿಂದ ರೋಗದ ಹತೋಟಿಯನ್ನು ಮಾಡಬಹುದು.

*ಬಿಸಿ ನೀರಿನಲ್ಲಿ 50°ಸೆಂ. 2 ತಾಸುಗಳವರೆಗೆ. *ಅಥವಾ ಬಿಸಿ ಹವೆಯಲ್ಲಿ 54 °ಸೆಂ. 8 ತಾಸುಗಳವರೆಗೆ.

* ಅಥವಾ ಅರ್ಧ ಬಿಸಿ ಹವೆ 54 ° ಸೆಂ. 4 ತಾಸುಗಳವರೆಗೆ.

* ಅಥವಾ ಉಗಿ ಮತ್ತು ಹವೆ ಮಿಶ್ರಣ 50 ° ಸೆಂ. 1 ತಾಸಿನವರೆಗೆ.

                  ಇವುಗಳಲ್ಲಿ ಯಾವುದಾದರೊಂದು ಪದ್ಧತಿಯಿಂದ ಉಪಚರಿಸಿ ತುಂಡುಗಳನ್ನು ನಾಟಿಗೆ ಉಪಯೋಗಿಸಬೇಕು. ಈ ಪದ್ಧತಿಯಿಂದ ತುಂಡುಗಳ ಮೊಳಕೆಯೊಡೆಯುವ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ಪದ್ಧತಿಯಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಮೊಳಕೆಯೊಡೆದ ಪ್ರಮಾಣ ಕಡಿಮೆ ಆಗುವ ಭಯ ಇರುತ್ತದೆ. ಈ ಪದ್ಧತಿಯಲ್ಲಿ ಕೊನೆಯ ಪದ್ಧತಿಯಾದ ಉಗಿ ಮತ್ತು ಸವೆ ಮಿಶ್ರಣದ ಪದ್ಧತಿ ಉತ್ತಮವೆಂದು ಹೇಳಬಹುದು.

ಹೆಚ್ಚಿನ ಮಾಹಿತಿಗಾಗಿ

ಕೃಷಿ ವಾಹಿನಿ🌱

ವೆಬ್ಸೈಟ್ನ ಸಂಪರ್ಕದಲ್ಲಿ  ಇರಿ..

 

Leave a Reply

Your email address will not be published. Required fields are marked *