ನಮಸ್ಕಾರ ಪ್ರೀಯ ರೈತ ಭಾಂಧವರೇ, ಸರ್ಕಾರವು ರೈತರ ಏಳಿಗೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಕೃಷಿ ಈಗಿನ ಕಾಲದಲ್ಲಿಯೂ ಸಹ ಭಾರತದ ಆರ್ಥಿಕತೆಯಲ್ಲಿ ಒಂದು ಪ್ರಮುಖ ಪಾತ್ರವಾಗಿ ಕಾರ್ಯನಿರ್ವಹಿಸುತ್ತಿದೆ.ರೈತರು ತಮ್ಮ ದಿನನಿತ್ಯ ಜೀವನದಲ್ಲಿ ತಿಳಿದುಕೊಳ್ಳಲೇಬೇಕಾದ ಮುಖ್ಯ ವಿಷಯಗಳಲ್ಲಿ ಜಮೀನಿನ ಪೊಡಿ ಅಥವಾ ಪಹಣಿಯ ಬಗೆಗಿನ ಮಾಹಿತಿಯು ಸಹ ಒಂದು.
ಇಂದು ನಾವು ಒರಿಜಿನಲ್ ಪಹಣಿ ಅಂದರೆ RTC ಯನ್ನು ಆನ್ಲೈನ್ ನಲ್ಲಿ ಪಡೆಯುವುದು ಹೇಗೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.
* ರೈತರು ಅಥವಾ ಸಾಮಾನ್ಯ ಜನರು ಅಂದರೆ ಯಾರು ಒರಿಜಿನಲ್ ಪಹಣಿಯನ್ನು ವೆಬ್ ಸೈಟ್ ನಿಂದ ಪಡೆಯಲು ಬಯಸುತ್ತಾರೋ ಅವರು ಮೊದಲು ಭೂಮಿ ಅಪ್ಲಿಕೇಶನ್ ಅನ್ನು ತೆರೆಬೇಕಾಗುತ್ತದೆ.
* ಅಲ್ಲಿ ಭೂಮಿ ಆನ್ಲೈನ್ ಎಂಬುದಾಗಿ ನಮೂದಿಸಿರುತ್ತದೆ. ರೈತರು ಅದರ ಮೇಲೆ ಕ್ಲಿಕ್ ಮಾಡಿ ಮುಖಪುಟವನ್ನು ತೆರೆಯಬೇಕಾಗುತ್ತದೆ.
* ಅಲ್ಲಿ ನಿಮಗೆ ಭೂಮಿ ಪೋರ್ಟಲ್ ಓಪನ್ ಆಗುತ್ತದೆ. ಅಲ್ಲಿ ಐ ವ್ಯಾಲೆಟ್ ಸರ್ವಿಸ್(I wallet service) ಎಂಬುದಾಗಿ ನಮೂದಿಸಿರುತ್ತದೆ.
* ಮೊದಲನೆಯದಾಗಿ, ಒರಿಜಿನಲ್ ಪಹಣಿ ಅಥವಾ RTC ಯನ್ನು ಪಡೆಯಲು ಬಯಸುವ ರೈತರು ವೆಬ್ಸೈಟ್ ನಲ್ಲಿ ಅಕೌಂಟನ್ನು ಕ್ರಿಯೇಟ್ ಮಾಡಬೇಕಾಗುತ್ತದೆ.
* ನೀವು ಅಕೌಂಟನ್ನು ಕ್ರಿಯೇಟ್ ಮಾಡಲು ಸೈನ್ ಅಪ್ ಎಂಬ ಮುಖಪುಟ ತೆರೆಯಬೇಕಾಗುತ್ತದೆ.
* ಅಲ್ಲಿ ನಿಮಗೆ ನಿಮ್ಮ ಮೊದಲ ಹೆಸರು ಮತ್ತು ಕೊನೆಯ ಹೆಸರನ್ನು ನಮೂದಿಸಲು ಹೇಳಿರುತ್ತಾರೆ. ಹಾಗೆಯೇ ನಿಮ್ಮ ಯೂಸರ್ ಐಡಿ, ನಿಮ್ಮ ಇ-ಮೇಲ್ ಮತ್ತು ಪಾಸ್ವರ್ಡ್ ಅನ್ನು ನೀಡಬೇಕಾಗುತ್ತದೆ. ಇಂತಹ ಅನೇಕ ಮಾಹಿತಿಗಳನ್ನು ಕೇಳಲಾಗುತ್ತದೆ.
* ಹಾಗೆಯೇ ಅದರಲ್ಲಿ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಇರುವಂತೆ ನಿಮ್ಮ ಹೆಸರನ್ನು ನಮೂದಿಸಬೇಕಾಗುತ್ತದೆ.
* ಇದಾದ ನಂತರ ಅದರ ಕೆಳಗೆ ನಿಮ್ಮ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನೀವು ನೀಡಿದ ಮಾಹಿತಿಯನ್ನು ಪರಿಶೀಲಿಸಲು ನೀಡಬೇಕಾಗುತ್ತದೆ.
* ನಂತರ ನಿಮ್ಮ ಮೊಬೈಲ್ ಗೆ ಬಂದಿರುವ ಒನ್ ಟೈಮ್ ಪಾಸ್ವರ್ಡ್ ಅನ್ನು ಕೇಳಿರುವ ಜಾಗದಲ್ಲಿ ನಮೂದಿಸಿ ಸೈನ್ ಅಪ್ ಆಗಬೇಕಾಗಿರುತ್ತದೆ.
* ಇದಾದ ನಂತರ ನೀವು ಅದರಲ್ಲಿ ಲಾಗಿನ್ ಆದ ಮೇಲೆ ಒಂದು ಮುಖಪುಟ ತೆರೆದುಕೊಳ್ಳುತ್ತದೆ.
* ಅಲ್ಲಿ ನಿಮಗೆ ಪಹಣಿ ಮತ್ತು ಉತಾರಿಗೆ ಅಥವಾ RTC ಗೆ ಸಂಬಂಧಿಸಿದ ಅನೇಕ ಆಯ್ಕೆಗಳನ್ನು ನೀಡಲಾಗಿರುತ್ತದೆ.
ಮತ್ತು ಯಾವುದೇ ಬೆಳೆಗೆ ಸಂಬಂಧಪಟ್ಟ ಮಾಹಿತಿಯ ಆಯ್ಕೆಗಳನ್ನು ಸಹ ನೀಡಲಾಗುತ್ತದೆ.
ಈಗ ನಾವು ಒರಿಜಿನಲ್ ಪಹಣಿಯನ್ನು ಪಡೆಯುವುದು ಹೇಗೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.
* ರೈತರು ಮೊದಲಿಗೆ ಅಲ್ಲಿ ಕಾಣುತ್ತಿರುವ I-RTC ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ಅದನ್ನು ತೆರೆಯಬೇಕಾಗುತ್ತದೆ.
* ಅಲ್ಲಿ ನಿಮಗೆ ನಿಮ್ಮ ಜಿಲ್ಲೆಯ ಆಯ್ಕೆಯನ್ನು ಕೇಳಿರುತ್ತಾರೆ. ಹಾಗೆಯೇ ನಿಮ್ಮ ತಾಲೂಕಿನ ಆಯ್ಕೆ ಮತ್ತು ನಿಮ್ಮ ಹೋಬಳಿಯ ಆಯ್ಕೆಯನ್ನು ಮಾಡಲು ಸೂಚಿಸಲಾಗುತ್ತದೆ.
* ಇದಾದ ನಂತರ ಅಲ್ಲಿ ನೀವು ನಿಮ್ಮ ಹಳ್ಳಿಯನ ಆಯ್ಕೆಯನ್ನು ಮಾಡಬೇಕಾಗುತ್ತದೆ.
* ನೀವು ಅಲ್ಲಿ ನಿಮ್ಮ ಸ್ವಂತ ಹೊಲದ ಅಥವಾ ನೀವು ಯಾವ ಹೊಲದ ಪಹಣಿ ಅಥವಾ RTC ಯನ್ನು ಆನ್ಲೈನ್ ನಲ್ಲಿ ಪಡೆದುಕೊಳ್ಳಬೇಕೆಂದಿದ್ದಿರೋ ಆ ಹೊಲದ ಸರ್ವೆ ನಂಬರನ್ನು ಅಲ್ಲಿ ಕೇಳಲಾದ ಜಾಗದಲ್ಲಿ ಸರಿಯಾಗಿ ನಮೂದಿಸಬೇಕಾಗುತ್ತದೆ.
* ಇದರ ನಂತರ ನಿಮಗೆ ಯಾವ ಸರ್ವೇ ನಂಬರ್ ನ ಅಥವಾ ಯಾವ ಹೊಲದ RTC ಅಥವಾ ಪಹಣಿ ಪಡೆಯಬೇಕೋ ಆ ಹೊಲದ ಸರ್ವೆ ನಂಬರ್ ನ ಹಿಸ್ಸಾ ಸಂಖ್ಯೆಯನ್ನು ನೀಡಬೇಕಾಗುತ್ತದೆ.
* ಅಲ್ಲಿ ನಿಮಗೆ ಮಾಹಿತಿಯನ್ನು ಹುಡುಕಿ ಅಥವಾ fetch details ಎಂಬುದಾಗಿ ನಮೂದಿಸಿರುತ್ತದೆ.
. * ರೈತರು ಅಥವಾ ಯಾರು ಪಹಣಿಯನ್ನು ಪಡೆಯಬೇಕೆಂದಿದ್ದಿರೋ ಅದರ ಮೇಲೆ ಕ್ಲಿಕ್ ಮಾಡಿದ ನಂತರ
ನೀವು ನೀಡಿದ ಸರ್ವೆ ನಂಬರ್ ನ ಮತ್ತು ಹಿಸ್ಸಾ ನಂಬರಿಗೆ ಹೊಂದುವಂತೆ ಅದಕ್ಕೆ ಸಂಬಂಧಿಸಿದ ಆ ಹೊಲದ ಮಾಹಿತಿಯನ್ನು ತೋರಿಸುತ್ತದೆ. ಮತ್ತು ಆ ಹೊಲದ ಮಾಲೀಕರ ಮಾಹಿತಿಯನ್ನು ಸಹ ನೀಡಲಾಗುತ್ತದೆ.
* ಇದಾದ ನಂತರ ಅಲ್ಲಿ ನಿಮಗೆ ಆ ಹೊಲದ ಮಾಲೀಕನ ಹೆಸರು, ಹಾಗೂ ಹಿಸ್ಸಾ ಸಂಖ್ಯೆ, ಖಾತಾ ಸಂಖ್ಯೆ ಮತ್ತು ಈ ಮಾಹಿತಿಯು ಎಲ್ಲಿಯವರೆಗೆ ಚಾಲ್ತಿಯಲ್ಲಿರುತ್ತದೆ ಎಂಬುದನ್ನು ನಮೂದಿಸಿರುತ್ತದೆ .
* ನಂತರ ಅಲ್ಲಿ ನಿಮಗೆ ಅದರ ಕೆಳಗಡೆ RTC ಅಥವಾ ಪಹಣಿಯನ್ನು ತೋರಿಸು ಎಂಬುದಾಗಿ ನಮೂದಿಸುರುತ್ತದೆ.
* ನೀವು ಅಲ್ಲಿ ಸೂಚಿಸಿರುವ ಪಹಣಿಯನ್ನು ತೋರಿಸಿ ಅಥವಾ fetch details ಎಂಬುದರ ಮೇಲೆ ಕ್ಲಿಕ್ ಮಾಡಿದ ನಂತರ ಒಂದು ಎಲ್ಲಾ ಮಾಹಿತಿಯನ್ನು ಒಳಗೊಂಡನಂತರ , ನೀವು ನೀಡಿದ ಮಾಹಿತಿಯನ್ನು ಆಧಾರಿಸಿ ನಿಮ್ಮ ಪಹಣಿಯನ್ನು ಅಥವಾ RTC ಯನ್ನು ತೆರೆಯಲಾಗುತ್ತದೆ.
* ನೀವು ನೀಡಿದ ಮಾಹಿತಿಯು ಸರಿಯಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನೀವು RTC ಅಥವಾ ಪಹಣಿಯನ್ನು ನೋಡಬಹುದು. ಇಲ್ಲವಾದರೆ ನೀವು ಡೈರೆಕ್ಟಾಗಿ ಪಹಣಿಯನ್ನು ನಿಗದಿ ಪಡಿಸಿದ ಹಣವನ್ನು ಪಾವತಿಸಿ ನಿಮ್ಮ ಹೊಲದ ಪಹಣಿಯ ಪ್ರಿಂಟ್ ಪಡೆಯಬಹುದು.
* ನೀವು ನಿಗದಿ ಪಡಿಸಿದ ಹಣವನ್ನು ಪಾವತಿ ಮಾಡದೆ ವೀಕ್ಷಣೆ ಮಾಡಿದ ಪಹಣಿಯ ಪ್ರಿಂಟ್ ಪಡೆದರೆ ಅದರ ಉಪಯೋಗ ಬರುವುದಿಲ್ಲ. ಏಕೆಂದರೆ ಅಂತಹ ಪಹಣಿಯಲ್ಲಿ ಅಥವಾ RTC ಯಲ್ಲಿ ವೀಕ್ಷಣೆಗಾಗಿ ಮಾತ್ರ ಎಂಬುದಾಗಿ ನಮೂದಿಸುವುದರಿಂದ ಅಂತಹ ಪಹಣಿಯು ಯಾವುದೇ ಕೆಲಸಕ್ಕೂ ಉಪಯೋಗ ಬರುವುದಿಲ್ಲ.
* ನೀವು ನಿಗದಿ ಪಡಿಸಿದ ಹಣವನ್ನು ಪಾವತಿ ಮಾಡದೆ ಪಡೆದ ಪಹಣಿಯನ್ನು ಅಥವಾ RTC ಯನ್ನು, ನೀವು ಸರ್ಕಾರದಿಂದ ಯಾವುದೇ ಸಹಾಯಧನವನ್ನು ಅಥವಾ ಸಾಲ ಸೌಲಭ್ಯಗಳನ್ನು ಪಡೆಯಲು ಈ ಉತಾರಿ ಅಥವಾ ಪಹಣಿಯನ್ನು ಸಲ್ಲಿಸಲು ಬರುವುದಿಲ್ಲ.
ನಾವು ಈಗ ನೀವು ಪಡೆಯಬೇಕಾದ ಹೊಲದ ಪಹಣಿಯನ್ನು ಯಾವ ರೀತಿ ನಿಗದಿ ಪಡಿಸಿದ ಹಣವನ್ನು ಪಾವತಿ ಮಾಡಿ ಪಹಣಿಯನ್ನು ಪಡೆಯಬೇಕು?
ಅದಕ್ಕೆ ಬೇಕಾಗುವ ಮಾಹಿತಿ ದಾಖಲೆಗಳೇನು?
ಮತ್ತು ಈ ಕ್ರಿಯೆಯ ಬಗ್ಗೆ ಸಂಪೂರ್ಣವಾಗಿ ಇಂದು ತಿಳಿದುಕೊಳ್ಳೋಣ.
* ಆ ಮುಖಪುಟದಲ್ಲಿ ನಿಮಗೆ ಕಾಣುತ್ತಿರುವ ಪೇ ಅಂಡ್ ಪ್ರಿಂಟ್ ಅಂದರೆ ಹಣವನ್ನು ಪಾವತಿಸಿ ಮತ್ತು ನಂತರ ನಿಮ್ಮ ಪಹಣಿಯ ಪ್ರಿಂಟ್ ಪಡೆದುಕೊಳ್ಳಿ ಎಂಬುದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
* ನೀವು ಒಂದು ಪಹಣಿಯ ಪ್ರಿಂಟ್ ಪಡೆಯಬೇಕೆಂದರೆ ನಿಮಗೆ ಆಗುವ ಖರ್ಚು ಕೇವಲ 5 ರೂಪಾಯಿ ಮಾತ್ರ. ಅಂದರೆ ಒಂದು ಪ್ರಿಂಟ್ ಗೆ ಬರಿ ಕೇವಲ 5 ರೂಪಾಯಿ ಮಾತ್ರ.
* ಈ ಪ್ರಿಂಟ್ ಪಡೆಯಲು ಬೇಕಾಗುವ ಮೊತ್ತವು ನಿಮ್ಮ ವ್ಯಾಲೆಟ್ ನಿಂದ ಕಟ್ಟಾಗುತ್ತದೆ ಅಂದರೆ ಕಡಿತಗೊಳ್ಳುತ್ತದೆ. ಅದಕ್ಕಾಗಿ ನಿಮ್ಮ ವ್ಯಾಲೆಟ್ ಗೆ ಹಣ ಸೇರಿಸುವುದು ಅವಶ್ಯಕವಾಗಿದೆ.
* ನಿಮ್ಮ ವ್ಯಾಲೆಟ್ ನಲ್ಲಿ ಸಮರ್ಪಕವಾದ ಬ್ಯಾಲೆನ್ಸ್ ಹೊಂದಿಲ್ಲದಿದ್ದರೆ ನಿಮ್ಮ ವ್ಯಾಲೆಟನ್ನು ರಿಚಾರ್ಜ್ ಮಾಡಬೇಕಾಗುತ್ತದೆ ಅಂದರೆ ನಿಮ್ಮ ವ್ಯಾಲೆಟ್ಗೆ ಹಣವನ್ನು ಸೇರಿಸಬೇಕಾಗುತ್ತದೆ.
* ನಿಮ್ಮ ವ್ಯಾಲೆಟ್ ಗೆ ಹಣವನ್ನು ತುಂಬಿಸಬೇಕಾದರೆ ಮೊದಲು
ನೀವು ಈ ವೆಬ್ ಸೈಟಿಗೆ ಲಾಗಿನ್ ಮಾಡಿದಾಗ ಅಲ್ಲಿ ನಿಮಗೆ ರಿಚಾರ್ಜ್ ವಾಲೆಟ್ (recharge wallet) ಎಂಬುದಾಗಿ ನಮೂದಿಸಿರುತ್ತದೆ. ನೀವು ಅದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
* ನಂತರ ಅಲ್ಲಿ ನೀವು ಸೇರಿಸಬಹುದಾದ ಹಣದ ಮೊತ್ತವನ್ನು ನಮೂದಿಸಬೇಕಾಗುತ್ತದೆ.
* ನೀವು ಹಣವನ್ನು ಸೇರಿಸಬಹುದಾದ ಕನಿಷ್ಠ/ ಸ್ವಲ್ಪ ಮೊತ್ತವು 500 ರೂಪಾಯಿ ಆಗಿರುತ್ತದೆ. ಆದರೆ ಕೆಲವೊಂದು ಸಲ ಹೆಚ್ಚು ಆಗಬಹುದು ಅಥವಾ ಕಡಿಮೆಯು ಸಹ ಆಗಬಹುದು.
* ನಂತರ ನೀವು ಯಾವುದರ ಮುಖಾಂತರವು ಸಹ ಹಣವನ್ನು ಸೇರಿಸಬಹುದು. ಹಣವನ್ನು ಸೇರಿಸುವ ಆಯ್ಕೆಗಳೆಂದರೆ UPI, debit card, etc.
* ಇದರಿಂದ ನಿಮ್ಮ ವ್ಯಾಲೆಟ್ ರಿಚಾರ್ಜ್ ಮಾಡಬಹುದು. ಅಂದರೆ ನಿಮ್ಮ ವ್ಯಾಲೆಟ್ ಗೆ ಹಣವನ್ನು ಸೇರಿಸಬಹುದು.
* ನಿಮ್ಮ ವ್ಯಾಲೆಟ್ ನಲ್ಲಿ ಸಮರ್ಪಕವಾದ ಬ್ಯಾಲೆನ್ಸ್ ಹೊಂದಿದ್ದರೆ ನಿಮ್ಮ ಒರಿಜಿನಲ್ ಪಹಣಿಯನ್ನು ಅಥವಾ RTC ಯನ್ನು ಪಡೆಯಲು ಹಿಂದೆ ಹೇಳಿರುವಂತೆ ಪೇ ಅಂಡ್ ಪ್ರಿಂಟ್ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗುತ್ತದೆ.
* ಇದಾದ ನಂತರ ನೀವು ಆ ಆಯ್ಕೆಯನ್ನು ಕ್ಲಿಕ್ ಮಾಡಿದ ತಕ್ಷಣ ನಿಮ್ಮ ವ್ಯಾಲೆಟ್ ನಿಂದ 5 ರೂ. ಕಡಿತವಾಗುತ್ತದೆ.
* ನಂತರ ಅಲ್ಲಿ ಪೇ ಅಂಡ್ ಪ್ರಿಂಟ್ ಐ ಆರ್ಟಿಸಿ (pay and print I-RTC) ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
* ನೀವು ಗೂಗಲ್ ಸೆಟ್ಟಿಂಗ್ ನಲ್ಲಿ pop-up ಗೆ ಅನುಮತಿಯನ್ನು ನೀಡಬೇಕಾಗುತ್ತದೆ.
* ನೀವು ಏನಾದರೂ Pop-up ಗೆ ಅನುಮತಿಯನ್ನು ನೀಡದಿದ್ದರ ನಿಮ್ಮ ಹೊಲದ ಪಹಣಿಯನ್ನು ಅಥವಾ ಒರಿಜಿನಲ್ I-RTC ಯನ್ನು ಪಡೆಯಲು ಬರುವುದಿಲ್ಲ.
ಈಗ ನಾವು ಎಂ ಆರ್(MR) ಪಡೆಯುವುದು ಹೇಗೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.
* ನೀವು ಮೊದಲಿಗೆ ಭೂಮಿ ಆನ್ಲೈನ್ ಮುಖಪುಟವನ್ನು ತೆರೆದ ನಂತರ ಅದರಲ್ಲಿ ಹಲವಾರು ಆಯ್ಕೆಗಳು ಕಾಣುತ್ತವೆ.
* ಇದರಲ್ಲಿ ಇಂದಿನ ವರ್ಷ ಪಹಣಿಯ ಮಾಹಿತಿ, ಹಳೆಯ ವರ್ಷದ ಪಹಣಿಯ ಮಾಹಿತಿ, ಎಂ ಆರ್(MR), ಖಾತಾ ಮಾಹಿತಿ ಎಂಬ ಆಯ್ಕೆಗಳನ್ನು ತೋರಿಸುತ್ತದೆ.
* ಅದರಲ್ಲಿ ನೀವು ಎಂ ಆರ್(MR)ಎಂಬುದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
* ನಂತರ ಅದಕ್ಕೆ ಬೇರೆಯಾದ ಒಂದು ಮುಖಪುಟ ತೆಗೆದುಕೊಳ್ಳುತ್ತದೆ.
* ಅಲ್ಲಿ ನೀವು ನಿಮ್ಮ ಜಿಲ್ಲೆಯ ಆಯ್ಕೆ ಅಥವಾ ನಿಮ್ಮ ತಾಲೂಕಿನ ಆಯ್ಕೆ, ಹಾಗೆಯೇ ನಿಮ್ಮ ಹೋಬಳಿಯ ಆಯ್ಕೆ ಮತ್ತು ನಿಮ್ಮ ಹಳ್ಳಿಯ ಆಯ್ಕೆಯನ್ನು ಕೇಳಲಾಗುತ್ತದೆ.( ಯಾವ ಜಿಲ್ಲೆಗೆ ಸೇರುತ್ತೀರಿ ನಿಮ್ಮ ತಾಲೂಕು ಯಾವುದು ಹಾಗೂ ನಿಮ್ಮ ಹೋಬಳಿಯನ್ನು ಅಲ್ಲಿ ಕಾಣಿಸುವಂತೆ ಆಯ್ಕೆ ಮಾಡಬೇಕು )
* ನೀವು ಯಾವ ಹೊಲದ ಎಂ ಆರ್(MR) ಪಡೆಯಬೇಕೋ ಆ ಹೊಲದ ಸರ್ವೆ ನಂಬರ್ ಅನ್ನು ನೀಡಬೇಕಾಗುತ್ತದೆ.
* ಇದಾದ ನಂತರ ಅಲ್ಲಿ ಮಾಹಿತಿಯನ್ನು ತೋರಿಸು(fetch details) ಎಂಬುದರ ಮೇಲೆ click ಮಾಡಬೇಕಾಗುತ್ತದೆ.
* ಆ ಪಹಣಿಯ ಸರ್ವೇ ನಂಬರ್ ಗೆ ಸಂಬಂಧಪಟ್ಟ ಎಲ್ಲಾ ಹಿಸ್ಸಾ ನಂಬರ್ ಗಳ (MR) ನ್ನು ತೋರಿಸುತ್ತದೆ.
* ನಿಮಗೆ ಯಾವ ಹಿಸ್ಸಾ ನಂಬರ್ ನ ಎಂ ಆರ್(MR) ಪಡೆಯಬೇಕೋ ಅದನ್ನು ನೀವು ಇಲ್ಲಿ ಪಡೆಯಬಹುದು. * ನಿಮಗೆ ಯಾವ ಹಿಸ್ಸಾ ನಂಬರ್ ನ ಎಂ ಆರ್(MR) ಬೇಕಾಗಿರುತ್ತದೆಯೋ ಅದರ ಮೇಲೆ ಕ್ಲಿಕ್ ಮಾಡಿದ ನಂತರ ಅದರ ಸಪರೇಟ್ ಮಾಹಿತಿ ಪಕ್ಕದಲ್ಲಿ ನೀಡಲಾಗುತ್ತದೆ.( ನನ್ನ ಸರಿಯಾಗಿ ಓದಿ ಅರ್ಥೈಸಿಕೊಳ್ಳಿ)
ಇದರ ಸದುಪಯೋಗ ಪಡಿಸಿಕೊಂಡು ರೈತರು ಅಭಿವೃದ್ಧಿ ಹೊಂದಬೇಕು ಎನ್ನುವ ದೃಷ್ಟಿಯಿಂದ ಸರ್ಕಾರವು ಮಹತ್ವದ ಕಾರ್ಯ ಮಾಡುತ್ತಿದೆ. ಹಾಗೂ ರೈತರು ಸ್ವಾವಲಂಬಿ ಜೀವನ ನಡೆಸಲು ಇದು ಪ್ರಮುಖ ಪಾತ್ರ ವಹಿಸುತ್ತದೆ.
ಹಾಗೂ ಸುಸ್ಥಿರ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿ, ರೈತರು ಅಭಿವೃದ್ಧಿಯಲ್ಲಿ ಸಾಗಬೇಕು ಎಂಬ ಗುರಿಯನ್ನು ಇಟ್ಟುಕೊಂಡು ಕಾರ್ಯಗಳನ್ನು ಸರ್ಕಾರ ಮಾಡುತ್ತಿದೆ.
ರೈತರು ಮುಖ್ಯ ಕೃಷಿ ಚಟುವಟಿಕೆಗಳ ಜೊತೆಗೆ ಕೃಷಿಯೇತರ ಚಟುವಟಿಕೆಗಳಿಗೆ ಆಸಕ್ತಿ ತೋರಿಸಿ, ವರ್ಷವಿಡೀ ಆದಾಯ ಪಡೆಯಬಹುದು. ಹಾಗೂ ರೈತರು ಸ್ವಯಂ ಪ್ರೇರಿತವಾಗಿ ಕೃಷಿಯಲ್ಲಿ ತೊಡಗಿರುವ ಹಾಗೂ ಸ್ವಂತ ಉದ್ಯೋಗ ಅವಕಾಶ ಮಾಡಿ ಕೊಟ್ಟಂತಾಗುತ್ತದೆ.
ಈ ರೀತಿಯಾಗಿ ರೈತರು ಒರಿಜಿನಲ್ RTC ಅಥವಾ ಪಹಣಿಯನ್ನು ಪಡೆಯಬಹುದಾಗಿದೆ.ರೈತರು ಇದರ ಸದುಪಯೋಗವನ್ನು ಪಡೆದುಕೊಂಡು ತಮ್ಮ ಕೆಲಸಗಳನ್ನು ಇನ್ನೂ ಸುಲಭವಾಗಿ ಮತ್ತು ಸರಳ ರೀತಿಯಲ್ಲಿ ಮುಗಿಸಿಕೊಳ್ಳಲು ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ.
ಇದರಿಂದ ರೈತರು ಅಂತಹ ಹೊಸ ಹೊಸ ಯೋಜನೆಗಳ ಉಪಯೋಗವನ್ನು ಪಡೆದುಕೊಂಡು, ರೈತರು ಅದರಿಂದ ಅಭಿವೃದ್ಧಿಯನ್ನು ಹೊಂದಲು ಸರ್ಕಾರವು ಶ್ರಮಿಸುತ್ತಿದೆ.
ಹೆಚ್ಚಿನ ಮಾಹಿತಿಗಾಗಿ
ಕೃಷಿ ವೆಬ್ಸೈಟ್🌱
ಸಂಪರ್ಕದಲ್ಲಿರಿ.