ನಮಸ್ಕಾರ ರೈತ ಬಾಂಧವರೇ ಇಂದು ನಾವು ಶುಂಠಿ ಬೆಳೆಯನ್ನು ಹೇಗೆ ಬೆಳೆಯುವುದು, ಅದರಲ್ಲಿ ಬರುವ ರೋಗಗಳು ಮತ್ತು ಇನ್ನಿತರ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳೋಣ ಹಾಗೂ ಅಧಿಕೃತ ಇಳುವರಿಯನ್ನು ಹೇಗೆ ಪಡೆಯುವುದು ಎಂಬುದನ್ನು ನೋಡೋಣ…

 ಮೊದಲನೆಯದಾಗಿ ಶುಂಠಿ ಒಂದು ಪ್ರಮುಖ ಬೆಳೆಯಾಗಿದೆ. ಶುಂಠಿಯನ್ನು ಮೂಲತಃ ಹಾವೇರಿ ಶಿವಮೊಗ್ಗ ಶಿಕಾರಿಪುರ ಹಾಸನ ಬೀದರ್ ಭಾಗದಲ್ಲಿ ಹೆಚ್ಚು ಬೆಳೆಯುತ್ತಾರೆ. ಶುಂಠಿ ರೈತರ ಆದಾಯ ಹೆಚ್ಚಿಸಲು ಪ್ರಮುಖ ಪಾತ್ರ ವಹಿಸುತ್ತದೆ. ಶುಂಠಿ ಒಂದು ಬೆಳೆಯು ಆದಾಯ ತರುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಜಮೀನನ್ನು ಹೇಗೆ ಆಯ್ಕೆ ಮಾಡುವುದು??

• ನೀರು ಬಸಿದು ಹೋಗುವಂತಹ ಕೆಂಪು ಮಣ್ಣು ಅಥವಾ ಮರಳು ಮಿಶ್ರಿತ ಗೋಡು ಮಣ್ಣು ಸೂಕ್ತ.

• ಕಪ್ಪು ಜಮೀನು ಮತ್ತು ತಗ್ಗು ಪ್ರದೇಶದಲ್ಲಿ ಬೆಳೆಯಬಾರದು.

• ಟೊಮ್ಯಾಟೋ ಆಲೂಗಡ್ಡೆ ಮೆಣಸಿಕಾಯಿ ಬದನೆ ಕ್ಯಾಪ್ಸಿಕಂ ಬಾಳೆ ಅರಿಶಿಣ ಶೇಂಗಾ ಬೆಳೆದ ಜಮೀನಿನಲ್ಲಿ ಹಾಕುವುದು ಬೇಡ.

• ಮಣ್ಣಿನ ರಸ ಸಾರ ಅಂದರೆ-(soil ph) 6- 6.5 ಸೂಕ್ತ

ಸುಣ್ಣ ಮತ್ತು ಜಿಪ್ಸಮನ್ನು(gypsum) ಬಳಸಿ ಮೊದಲು ನೆಲವನ್ನು ಹದಗೊಳಿಸಬೇಕು.

• ಶುಂಠಿಯನ್ನು ತೆಂಗಿನ ತೋಟ ಹಾಗೂ ಅಡಿಕೆ ತೋಟದಲ್ಲಿ ಬೆಳೆಯಬಹುದು.

• ಇದರಲ್ಲಿ ಅಂತರ ಬೆಳೆಯಾಗಿ ತೊಗರಿಯನ್ನು ಹಾಕಬಹುದು.

 

ಬೀಜದ ಆಯ್ಕೆ ಮತ್ತು ಬಿತ್ತನೆ..?

• ರೋಗ ಮುಕ್ತ ಬೀಜ 

ಕೆಂಪು ಕೊಳೆ

ಹಸಿರು ಕೊಳೆ

ಬಾಡು ಕೊಳೆ ಮುಕ್ತ ಬೀಜವನ್ನು ಆರಿಸಬೇಕು

• ಹುಳ ಮುಕ್ತ ಬೀಜವನ್ನು ಆರಿಸಬೇಕು.

ಗಡ್ಡೆ ಕೊರೆಯುವ ಹುಳು ವಯರ್ ಹುಳು ಜಂತುಹುಳು ಮುಕ್ತ ಬೀಜ ಅರಿಸಬೇಕು.

ಬಿತ್ತನೆ ಸಮಯ : ಫೆಬ್ರರಿಂದ – ಮೇ ತಿಂಗಳು

•ತಳಿ – ಹಿಮಾಚಲ( ಹೆಚ್ಚು ಇಳುವರಿ ಪಡೆಯಬಹುದು ಹಾಗೂ ಕೊಳೆ ರೋಗಕ್ಕೆ ತಡೆದುಕೊಳ್ಳುವ ಶಕ್ತಿ ಹೆಚ್ಚಾಗಿರುತ್ತದೆ ).

, ರೋಗಾಡಿ, ಮಹಿಮಾ.

• ಇಳುವರಿ – 25 ರಿಂದ 35 ಟನ್.

 ಈ ಬೆಳೆಯಲ್ಲಿ ಅನುಸರಿಸಬೇಕಾದ ಮುಖ್ಯ ಕ್ರಮಗಳು!!

• ಹಸಿರೆಲೆ ಗೊಬ್ಬರವಾಗಿ – ಸೆಣಬು ಡಯಾಂಚ ಹಾಗೂ ಇನ್ನಿತರ ದ್ವಿದಳ ಧಾನ್ಯಗಳನ್ನು ಬಳಸಬೇಕು.

•3 ಅಡಿ ಅಗಲ 1.5 ಅಡಿ ಎತ್ತರ ಮಡಿಯನ್ನು ಮಾಡುವುದು. ಮದುವೆ ಉದ್ದ 20 ಅಡಿ ಎರಡು ಮಡಿಗಳ ನಡುವಿನ ಅಂತರ 1.5 ಅಡಿ ಇರಬೇಕು.

• ಬೀಜ ; 850-1000 ಕಿ. ಗ್ರಾಂ

• ಬೀಜೋಪಚಾರ ; 4gram mancozeb + ಬ್ರೋನೋಪಾಲ್ 1 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಕಲಸಿ ಸುಮಾರು ಒಂದು ತಾಸು ನೆರಳಿನಲ್ಲಿ ಆರಿಸಿ ಬಿತ್ತನೆ ಮಾಡಬೇಕು. ಅವಶ್ಯಕತೆ ಇದ್ದರೆ ಕೀಟನಾಶಕವಾಗಿ ಕ್ವಿನಾಲಫೋಸ್ 2ಮಿಲಿ ಲಿಟರನ್ನು ಸೇರಿಸಬೇಕು.

• ನಾಲ್ಕರಿಂದ ಐದು ಟನ್ ಪ್ರತಿ ಎಕರೆಗೆ ಸಾವಯವ ಹೊದಿಕೆಯನ್ನು ಹಾಕಬೇಕು.

> ಉದಾಹರಣೆಗೆ ಬತ್ತ, ರಾಗಿ,ಕಬ್ಬಿಣದ, ರವದಿ ಬಳಸಿ

• ಕಳೆನಾಶಕ ; ಶುಂಠಿಯಲ್ಲಿ ಹುಲ್ಲಿನ ಕಸ ಬಹಳ ಇರುತ್ತದೆ ಕಳೆನಾಶಕದ ಕೆಲಸ ಬಹಳ ಪ್ರಾಮುಖ್ಯತೆ ವಹಿಸುತ್ತದೆ.

* Oxyflorofen (Galigon, oxygold )250ml/ಎಕರೆಗೆ ಅಥವಾ ಪೆಂಡಿಮಿತಾಲಿನ್ (stamp, pendigon ).

* ಕಳೆ ಹುಟ್ಟಿದ ನಂತರ : ಪಾರಾಕ್ವಾಟ್(gramoxon,paranex) ಸಿಂಪರಣೆ ಮಾಡಬೇಕು.

# ಶುಂಠಿ ಬೆಳೆಯಲ್ಲಿ ರಾಸಾಯನಿಕ ಗೊಬ್ಬರಗಳ ನಿರ್ವಹಣೆ:

• ಬಿತ್ತನೆಯ ದಿನ : 25ಕಿಲೋ ಗ್ರಾಂ ಡಿ ಎ ಪಿ + ಹ್ಯೂಮಿಕ್ ಆಸಿಡ್ 1-2ಕಿಲೋ ಗ್ರಾಂ

• 30ನೇ ದಿನ : ಮೈಕ್ರೋ ನ್ಯೂಟ್ರಿಯೆಂಟ್ಸ್ -5ಕಿಲೋ ಗ್ರಾಂ + ಮೆಗ್ನೀಷಿಯಂ ಸಲ್ಫೇಟ್ 10ಕಿಲೋ ಗ್ರಾಂ + ಗಂಧಕ -5ಕಿಲೋ ಗ್ರಾಂ

•45 ನೇ ದಿನ : 40ಕಿಲೋ ಗ್ರಾಂ ಊರಿಯಾ + 50 ಕಿಲೋ ಗ್ರಾಂ – ಪೊಟ್ಯಾಷ್

•75ನೇ ದಿನ : ಮೈಕ್ರೋ ನ್ಯೂಟ್ರಿಯೆಂಟ್ಸ್ -5ಕಿಲೋ ಗ್ರಾಂ + ಮೆಗ್ನೀಷಿಯಂ ಸಲ್ಫೇಟ್ 10ಕಿಲೋ ಗ್ರಾಂ + ಗಂಧಕ -5ಕಿಲೋ ಗ್ರಾಂ

•95ನೇ ದಿನ : ಡಿ ಎ ಪಿ -30 ಕಿಲೋ ಗ್ರಾಂ +ಊರಿಯಾ -40ಕಿಲೋ ಗ್ರಾಂ + ಪೊಟ್ಯಾಷ್ 50ಕಿಲೋ ಗ್ರಾಂ.

•105ನೇ ದಿನ : 5 ಕಿಲೋ ಗ್ರಾಂ ಲಘು ಪೋಷಕಾಂಶ + 10 ಕಿಲೋ ಗ್ರಾಂ ಮೆಗ್ನೀಷಿಯಂ ಸಲ್ಫೇಟ್.

•120ನೇ ದಿನ : 40 ಕಿಲೋ ಗ್ರಾಂ ಯೂರಿಯಾ + 50 ಕಿಲೋ ಗ್ರಾಂ ಪೊಟ್ಯಾಷ್..

•150ನೇ ದಿನ : 50 ಕಿಲೋ ಗ್ರಾಂ ಪೊಟ್ಯಾಷ್ + 5kg ಪೊಟ್ಯಾಶಿಯಂ ಸೋನೆಟ್..

 ಶುಂಠಿ ಬೆಳೆಯಲ್ಲಿ ನೆಲವನ್ನು ಅತಿ ಹೆಚ್ಚು ಹದಗೊಳಿಸಲು ಹಾಗೂ ಅದನ್ನು ಹಗುರುಗೊಳಿಸಲು ಜಿಪ್ಸಂ ಅಥವಾ ಸುಣ್ಣವನ್ನು ಹಾಕಬೇಕು.

 

 ಶುಂಠಿಯಲ್ಲಿ ಬರುವ ಲಘು ಪೋಷಕಾಂಶಗಳು ಅಂದರೆ ಮೈಕ್ರೋ ನ್ಯೂಟ್ರಿಯೆಂಟ್ ಡಿಫಿಷಿಯನ್ಸಿ (micronutrients deficiency )ಅದರ ಬಗ್ಗೆ ತಿಳಿಯೋಣ.

1) ಪೊಟ್ಯಾಷ್- ಪೋಷಕಾಂಶದ ಕೊರತೆ

ಲಕ್ಷಣಗಳು:

• ಶುಂಠಿಯಲ್ಲಿ ಹಳೆಯ ಎಲೆಗಳ ಭಾಗದ ತುದಿಯು ಒಣಗಲು ಆರಂಭವಾಗುತ್ತದೆ.

•ಹಾಗೂ ಬೆಳೆ ಕುಂಠಿತಗೊಳ್ಳುತ್ತದೆ.

• ಶುಂಠಿಯ ಗಾತ್ರ ಬಹಳ ಚಿಕ್ಕದಾಗುತ್ತದೆ ಆಗ ಶಿಫಾರಸು ಮಾಡಿದ ಪೊಟ್ಯಾಶ್ ಅಂಶವನ್ನು ಹಾಕಬೇಕು

 ನಿರ್ವಹಣೆ:

• ರಕಮೆನ್ದೆಡ್ ಡೋಸ್ ಅನ್ನು ಹಾಕಬೇಕು

• ಕೊರತೆಯ ಲಕ್ಷಣಗಳು ಕಂಡ ಮೇಲೆ

ಸಿಂಪರಣೆ ಮಾಡಬೇಕು – 0:0:50 /13:0:45 / ಲಗು ಪೋಷಕಾಂಶಗಳು 5ಗ್ರಾಂ ಸಿಂಪಡಿಸುವುದು.

2) ಕಾಪರ್ – ಪೋಷಕಾಂಶದ ಕೊರತೆ

 ಲಕ್ಷಣಗಳು:

• ಹೊಸದಾಗಿ ಬೆಳೆದ ಎಲೆಗಳು ಕೋಲಿನ ರೀತಿಯಲ್ಲಿ ಬೆಳೆದಿದ್ದು ಹಳೆಯ ಎಲೆಗಳಿಗೆ ಸಿಕ್ಕಿಹಾಕಿಕೊಂಡಿರುವ ಸ್ಥಿತಿಯನ್ನು ತೋರಿಸುತ್ತವೆ.

• ಎಲೆಯ ಗಾತ್ರ ಕಡಿಮೆಯಾಗಿ ದ್ಯುತಿ ಸಂಶ್ಲೇಷಣ ಕ್ರಿಯೆಗೆ ಅಡ್ಡಿ ಮಾಡುತ್ತದೆ.

 ನಿರ್ವಹಣೆ:

• ಕಾಪರ್ ಸಲ್ಫೇಟ್ ಒಂದರಿಂದ ಎರಡು ಕಿಲೋ ಗ್ರಾಂ ಪತಿ ಎಕರೆಗೆ ಹಾಕಿ.

• ಕೊರತೆಯ ಲಕ್ಷಣಗಳು ಕಾಣಿಸಿದ ತಕ್ಷಣ.

-1-2ಗ್ರಾಂ ಕಾಪರ್ ಸಲ್ಫೇಟ್ಹ/ಇಡಿಟಿಎ ಕಾಪರ್ ಪ್ರತಿ ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು

ಶುಂಠಿಯಲ್ಲಿ ಕಾಣಿಸಿಕೊಳ್ಳುವ ರೋಗಗಳು :

1) ಕೆಂಪು ಕೊಳೆ 

 ಲಕ್ಷಣಗಳು:

• ಮೊದಲು ಶುಂಠಿಯ ಕೆಳಭಾಗದ ಎಲೆಗಳ ತುದಿಯು ಕೆಂಪು ನಿಶ್ವಿತ ಹಳದಿ ಬಣ್ಣಕ್ಕೆ ತಿರುಗುತ್ತದೆ.

• ಶುಂಠಿಯ ಕೆಳಭಾಗದಲ್ಲಿ ತೇವಾಂಶದಿಂದ ಕೂಡಿದ್ದು ಅದು ಕೊಳೆಯಲು ಪ್ರಾರಂಭವಾಗುತ್ತದೆ.

• ಶುಂಠಿ ಗಡ್ಡೆಯ ಕೊಳೆತು ವಾಸನೆ ಬರುತ್ತದೆ.

• ರೋಗವಿರುವ ಎಲೆ ಕಾಂಡ ಸಂಪೂರ್ಣವಾಗಿ ಒಣಗಿ ಕೆಳಗಡೆ ಬೀಳುತ್ತದೆ.

ನಿರ್ವಹಣೆ:

• ಮೊದಲು ಭೂಮಿಗೆ ಶಕ್ತಿಯುತವಾದ ಟ್ರೈಪಾಡರ್ಮ ಮತ್ತು ಬೇವಿನ ಹಿಂಡಿ ಅಥವಾ ಸಗಣಿ ಗೊಬ್ಬರದ ಬಳಕೆಯನ್ನು ಮಾಡಬೇಕು.

• ಸಿಂಪರಣೆಯನ್ನು ಮಾಡಿ ತೋಯಿಸಬೇಕು.

– metalaxyl 8%+mancozeb 64% 3ಗ್ರಾಂ /ಲೀಟರ್ + pottassium phosphate 3ಗ್ರಾಂ /ಲೀಟರ್.

– ಕಾಪರ್ ಆಕ್ಸಿ ಕ್ಲೋರೈಡ್ coc 3ಗ್ರಾಂ / ಲೀಟರ್.

• ಮಡಿ ತೋಯಿಸುವುದು

– ಹತ್ತು ಗ್ರಾಂ ಪ್ರತಿ ಲೀಟರ್ ಗೆ ಬ್ಲೀಚಿಂಗ್ ಪೌಡರ್ ಅನ್ನು ಸೇರಿಸುವುದು. ಹಾಗೂ ಅದನ್ನು ಕೊಳೆ ಬಂದ ಪ್ರದೇಶಕ್ಕೆ ಅಥವಾ ಅದೇ ಜಾಗಕ್ಕೆ ಹಾಕುವುದು.

2) ಬಾಡು ಕೊಳೆ

 ಲಕ್ಷಣಗಳು :

• ಮೊದಲು ಗಿಡದ ಕೆಳಭಾಗದ ಎಲೆಗಳು ಹಳದಿಯಾಗುತ್ತವೆ.

• ಎಳೆಯ ಎಲೆಗಳು ಬಲಿಯುವ ಮೊದಲೇ ಹಳದಿಯಾಗಿ ಬಾಡಿ ಕೆಳಗೆ ಮುಖ ಮಾಡಿ ಒಣಗುತ್ತವೆ.

• ಹಾಗೂ ಗಡ್ಡೆಯ ಒಳಭಾಗದ ಭಾಗವು ಹಳದಿ ಬಣ್ಣಕ್ಕೆ ತಿರುಗಿರುತ್ತದೆ.

• ರೋಗ ಜಾಸ್ತಿಯಾದಲ್ಲಿ ಗಡ್ಡೆಗಳಲ್ಲಿ ಕೇವಲ ನಾರಿನ ಅಂಶ ಮಾತ್ರ ಉಳಿಯುತ್ತದೆ.

ನಿರ್ವಹಣೆ;

• ಟ್ರೈಕೋಡ್ರಮ ಅಥವಾ ಬೇವಿನ ಹಿಂಡಿಯನ್ನು ಹಾಕುವುದು. ಸಗಣಿ ಗೊಬ್ಬರದ ಬಳಕೆಯು ಬಹಳ ಸೂಕ್ತ.

• ಸಿಂಪರಣೆ ಮಾಡುವುದು ಹಾಗೂ ಮಡಿ ತೋರಿಸುವುದು.

-Propiconozol(tilt)1ml litre / ನೀರಿಗೆ ಸೇರಿಸುವುದು.

-Carboxin+Thiram (Vitavax power ) 2ಗ್ರಾಂ / ಲೀಟರ್ ನೀರಿಗೆ ಹಾಕುವುದು.

-Carbendezium + Mancozeb 3ಗ್ರಾಂ / ಲೀಟರ್ ನೀರಿಗೆ.

– ಕೊನೆಯದಾಗಿ 1% Bordo ದ್ರವಣ ಹಾಕಬೇಕು.

 

3) ಹಸಿರು ಕೊಳೆ : ಹಸಿರು ಕೊಳೆ ರೋಗವು ಮೊದಲೇ ಕೇಳಿದ ಹಾಗೆ ಇದು ಬಹಳ ಅಪಾಯಕಾರಿ ಕೊಳೆಯಾಗಿ ಶುಂಠಿಯಲ್ಲಿ ಕಾಣಿಸಿಕೊಳ್ಳುತ್ತದೆ.

ಬಹಳಷ್ಟು ರೈತರು ಈ ಕೊಳೆಯಿಂದಾಗಿ ಬಹಳ ಇಳುವರಿಯನ್ನು ಕಳೆದುಕೊಳ್ಳುತ್ತಾರೆ. ನಷ್ಟವನ್ನು ಕೂಡ ಅನುಭವಿಸಿದ್ದಾರೆ.

ಏನಿರಬಹುದು ಈ ಹಸಿರು ಕೊಳೆ ಎಂದರೆ?

ಹೇಗೆ ನಿರ್ವಹಣೆ ಮಾಡಬೇಕು?

ಏನು ಈ ರೋಗದ ಲಕ್ಷಣಗಳನ್ನು ತಿಳಿದುಕೊಳ್ಳೋಣ.

 ಲಕ್ಷಣಗಳು:

• ಇದೊಂದು ವಿಶೇಷ ಕೊಳೆಯಾಗಿದೆ..

• ಈ ರೋಗ ಬಂದಾಗ ಗಿಡಗಳು ಬಾಡುತ್ತಿರುವಾಗಲೇ ಕೂಡ ಹಸಿರು ಬಣ್ಣವನ್ನು ತೋರಿಸುತ್ತವೆ.

• ಎಲೆಗಳ ತುದಿಯು ಒಳಮುಖವಾಗಿ ಮುದುಡಿರುತ್ತವೆ.

• ಗಡ್ಡೆಗಳಲ್ಲಿ ಅಂಟು ಸಹಿತ ಕೊಳೆಯು ಇರುತ್ತದೆ.

• ರೋಗ ಹೆಚ್ಚಾದಲ್ಲಿ ಬಹಳ ದುರ್ವಾಸನೆ ಬರುತ್ತದೆ.

 ನಿರ್ವಹಣೆ;

-ಟ್ರೈಕೋಡ್ರಮ ಅಥವಾ ಬೇವಿನ ಹಿಂಡಿಯನ್ನು ಹಾಕುವುದು. ಸಗಣಿ ಗೊಬ್ಬರದ ಬಳಕೆಯು ಬಹಳ ಸೂಕ್ತ.

– ಸಿಂಪರಣೆ ಮತ್ತು ಮಡಿ ತೊಯಿಸುವುದು

– COC 3ಗ್ರಾಂ + Streptocyclin 0.5ಗ್ರಾಂ / ಪ್ರತಿ ಲೀಟರ್ ಗೆ ಹಾಕುವುದು.

-ಕೊನೆಯದಾಗಿ 1% Bordo ದ್ರವಣ ಹಾಕಬೇಕು.

 

4) ಎಲೆ ಚುಕ್ಕೆ ರೋಗಗಳು

 ನಿರ್ವಹಣೆ:

– ಶೇಕಡ ಒಂದರಷ್ಟು Bordo mixture ದ್ರಾವಣ.

– ಕಾಪರ್ ಆಕ್ಸಿ ಕ್ಲೋರೈಡ್ ಮೂರು ಗ್ರಾಂ ಪ್ರತಿ ಲೀಟರ್ ನೀರಿಗೆ ಹಾಕುವುದು.

– ಕ್ಯಾಪ್ಟನ್ + ಹೆಕ್ಸಾಕಾನೋಜೋಲ್ 2 ಗ್ರಾಂ ಪ್ರತಿ ಲೀಟರ್ ನೀರಿಗೆ ಹಾಕಿ ಸಂಕರಣೆ ಮಾಡುವುದರಿಂದ ಎಲೆ ಚುಕ್ಕೆ ರೋಗಗಳನ್ನು ತಡೆಗಟ್ಟಬಹುದು.

5) ನೇಮಟೋಡ್ ಹಾಗೂ ಜಂತು ಹುಳುಗಳ ನಿರ್ವಹಣೆಯನ್ನು ಹೇಗೆ ಮಾಡುವುದು.

– ಮೊದಲನೆಯದಾಗಿ ಟ್ರೈಕೊಡರ್ಮ ಅಥವಾ ಸಗಣಿ ಅಥವಾ ಶಕ್ತಿಯುತಗೊಳಿಸಿದ ಬೇವಿನ ಹಿಂಡಿಯನ್ನು ಬಳಸುವುದು ಬಹಳ ಉತ್ತಮವಾಗಿದೆ.

– ಇದನ್ನು ಬಳಸುವುದರಿಂದ ನಾವು ಶುಂಠಿ ಬೆಳೆಯಲ್ಲಿ ಅತಿ ಸುಲಭವಾಗಿ ಜಂತುಹುಳುಗಳ ನಿರ್ವಹಣೆ ಮಾಡಬಹುದು.

 

 ಶುಂಠಿ ಬೆಳೆಯಲ್ಲಿ ಬರುವ ಹುಳಗಳನ್ನು ತಿಳಿದುಕೊಳ್ಳೋಣ?? ಶುಂಠಿಯಲ್ಲಿ ಅನೇಕ ಹುಳುಗಳ ಬಾದೆಯು ಕಂಡುಬರುತ್ತದೆ. ಎಲೆಗಳನ್ನು ತಿನ್ನುವುದು. ಕಾಂಡವನ್ನು ಕೊರೆಯುವುದು. ಇಂತಹ ಹುಳು ಬಹಳ ಹೆಚ್ಚಾಗಿದೆ.

 

1) ಕಾಂಡ ಕೊರಕ ಮತ್ತು ಎಲೆ ತಿನ್ನುವ ಹುಳು

• ನಿರ್ವಹಣೆ;

– ಮೊದಲನೆಯದಾಗಿ ಎಲೆ ತಿನ್ನುವ ಹುಳು ಎಲೆ ನಷ್ಟ ತುಂಬಾ ಕಡಿಮೆ ಇರುತ್ತದೆ ರಸಾಯನಿಕಗಳನ್ನು ಬಳಕೆ ಮಾಡುವುದು ಅವಶ್ಯಕತೆ ಇಲ್ಲ.

– ಕಾಂಡಕೊರಕಕ್ಕೆ – ಹಾನಿಗೆ ಒಳಗಾದ ಶುಂಠಿ ಭಾಗವನ್ನು ಕತ್ತರಿಸಿ ನಾಶಪಡಿಸಬೇಕು.

ಸಿಂಪರಣೆಯಾಗಿ – Emamectin benzoate 0.5 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡುವುದು.ಇನ್ನು ಹತೋಟಿಗೆ ಸಿಗದ ಕಾಲದಲ್ಲಿ coragen drenching ಮಾಡಬೇಕು.

 

2) ಗೊಣ್ಣೆ ಹುಳು ಅಥವಾ ಬೇರೆ ಹುಳು ಹೇಗೆ ನಿಯಂತ್ರಣ ಮಾಡುವುದು.

– ಮೊದಲನೆಯದಾಗಿ ಶುಂಠಿಯಲ್ಲಿ ಗೊಣ್ಣೆ ಹುಳು ಕಾಣುವುದು ಬಹಳ ಕಡಿಮೆ. ಏಕೆಂದರೆ ಗೊಣ್ಣೆ ಹುಳು ಮೂಲತಹ ಕಬ್ಬಿನಲ್ಲಿ ಬರುವ ಒಂದು ಹುಳುವಾಗಿದೆ.

ಶುಂಠಿಯ ಹೊಲದ ಅಕ್ಕಪಕ್ಕದಲ್ಲಿ ಕಬ್ಬು ಬೆಳೆ ಇದ್ದದ್ದೇ ಆದರೆ ಗೊಣ್ಣೆ ಹುಳುವಿನ ಬಾಧೆಯು ಶುಂಠಿಗೆ ಬರುವುದು.

– ಗೊಣ್ಣೆ ಹುಳು ಇದರ ನಿಯಂತ್ರಣಕ್ಕಾಗಿ ಪ್ರತಿ ಎಕರೆಗೆ (ಮೆಟರಹೀಝಿಯಂ ) ನಾಲ್ಕು ಕಿಲೋ ಗ್ರಾಂ ಮತ್ತು ಬೇವಿನ ಹಿಂಡಿ ನೂರು ಕಿಲೋ ಗ್ರಾಂ ಬೆರೆಸಿ ಬಿತ್ತನೆಯ ನಂತರ ಬೆಡ್ಗಳ ಹಾಕಬೇಕು.

– ನಂತರ ಗೊಣ್ಣೆ ಹುಳುವಿನ ಗಾದೆ ಇನ್ನೂ ಹೆಚ್ಚು ಕಂಡು ಬಂದಲ್ಲಿ ಅನಿವಾರ್ಯವಾಗಿ ಕೀಟನಾಶಕಗಳನ್ನು ಡ್ರೆಚಿಂಗ್ ಮಾಡಬೇಕು.

ಉದಾಹರಣೆಯಾಗಿ : Chloripyriphos 20ec /2.5litre ನಿರಿಗೆ ಹಾಕಿ ಬೆಡ್ ಅನ್ನು ತೋಯಿಸಬೇಕು. ಇದರಿಂದ ಗೊಣ್ಣೆ ಹುಳುಗಳ ನಿಯಂತ್ರವನ್ನು ಮಾಡಬಹುದು.

 

 ರೈತರು ಮುಖ್ಯವಾಗಿ ಅಧಿಕ ಇಳುವರಿ ಕಡೆ ಗಮನಹರಿಸುತ್ತ ಅನೇಕ ಕೀಟ ಹಾಗೂ ರೋಗಗಳನ್ನು ತಡೆದರೆ. ಹೆಚ್ಚು ಇಳುವರಿಯನ್ನು ಶುಂಠಿಯಲ್ಲಿ ತೆಗೆಯಬಹುದು. ಹಾಗೂ ಶುಂಠಿಯ ಅತಿ ಪ್ರಮುಖ ಬೆಳೆಯಾಗಿದೆ. ಹಾಕಿದ ಮೊದಲನೆಯ ವರ್ಷ ಬಹಳಷ್ಟು ಅಂದರೆ ಒಂದರಿಂದ ಎರಡು ಲಕ್ಷದವರೆಗೆ ಖರ್ಚು ಬರುತ್ತದೆ. ನಂತರ ಮುಂದಿನ ವರ್ಷ ಹಾಕುವುದಾಗಿ ಇದ್ದರೆ ಖರ್ಚು ಕಡಿಮೆಯಾಗುತ್ತದೆ. ಈಗ ಬಹಳಷ್ಟು ಜನ ರೈತರು ಶುಂಠಿ,ಅಡಿಕೆ,ತೆಂಗು,ಬೆಳೆಗಳಿಗೆ ಬಹಳ ಪ್ರಾಮುಖ್ಯತೆಯನ್ನು ಕೊಡುತ್ತಿದ್ದಾರೆ. ಅದರಲ್ಲಿ ಶುಂಠಿಯೂ ಬಹಳ ಮುಖ್ಯವಾದದ್ದು ಮತ್ತು ಬಹಳ ಉಪಯೋಗಕಾರಿ ಬೆಳೆಯಾಗಿದೆ.

 

ಇನ್ನೂ ಹೆಚ್ಚಿನ ಮಾಹಿತಿಗಾಗಿ

🌱ಕೃಷಿ ವಾಹಿನಿ 

ವೆಬ್ಸೈಟ್ನ ಸಂಪರ್ಕದಲ್ಲಿರಿ…

 

 

 

 

Leave a Reply

Your email address will not be published. Required fields are marked *