ನಮಸ್ಕಾರ ಪ್ರೀಯ ರೈತ ಭಾಂದವರೇ, ಇಂದು ನಾವು FRUITS(ಫ್ರೂಟ್ಸ್) ಐ.ಡಿ. ಎಂದರೆ ಏನು? ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಬಹಳಷ್ಟು ಜನ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ರೈತ ಮಕ್ಕಳಿಗೆ ನೀಡುವ ಈ ರೈತ ವಿದ್ಯಾನಿಧಿ ಸಹಾಯಧನವನ್ನು ಪಡೆಯಲು ವಿದ್ಯಾರ್ಥಿಗಳಿಗೆ ಈ ಫ್ರೂಟ್ಸ್ ಐ.ಡಿ ಯನ್ನು ಕೇಳುತ್ತಾರೆ. ಹಾಗಾದರೆ ಇಂದು ನಾವು ಈ ಫ್ರೂಟ್ಸ್ ಐ.ಡಿ ಎಂದರೆ ಏನು? ಇದರ ವಿಶೇಷತೆಗಳೇನು? ಇದರ ಉಪಯೋಗವೇನು? ಮತ್ತು ಇದನ್ನು ನಾವು ಹೇಗೆ ಪಡೆಯಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಬಹಳಷ್ಟು ಜನ ವಿದ್ಯಾರ್ಥಿಗಳು ಅಂದರೆ ರೈತ ಮಕ್ಕಳಿಗೆ ರಾಜ್ಯ ಸರ್ಕಾರ ನೀಡುವ ರೈತ ವಿದ್ಯಾನಿಧಿ ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಈ ಫ್ರೂಟ್ಸ್ ಐ.ಡಿ ಯು ಮುಖ್ಯವಾಗಿ ಬೇಕಾಗಿರುತ್ತದೆ.

 

FRUITS (ಫ್ರೂಟ್ಸ್) ಎಂದರೆ ( farmer registration and unified beneficiary information system). ಹಾಗಾದರೆ ಇಂದು ನಾವು ಈ ಫ್ರೂಟ್ಸ್ ಐ.ಡಿ ಯ ಬಗ್ಗೆ ತಿಳಿದುಕೊಳ್ಳೋಣ. ಹಾಗೆಯೇ ಈ ಫ್ರೂಟ್ಸ್ ಐ.ಡಿ ಯನ್ನು ಯಾವ ರೀತಿ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

 

                     ರೈತರು ಸಾಮಾನ್ಯವಾಗಿ ಸರ್ಕಾರದಿಂದ ಯಾವುದೇ ರೀತಿಯ ಸಹಾಯಧನ ಅಥವಾ ಯೋಜನೆಗಳ ಲಾಭವನ್ನು ಪಡೆದುಕೊಳ್ಳಲು ಈ ಫ್ರೂಟ್ಸ್ ಐ.ಡಿ ಯ ಅವಶ್ಯಕತೆ ತುಂಬಾ ಇರುತ್ತದೆ. ಸರ್ಕಾರದವರು ಇದನ್ನು ರೈತ ನೊಂದಣಿ ಅಥವಾ ಫಲಾನುಭವಿಯ ಏಕೀಕೃತ ವ್ಯವಸ್ಥೆ ಎಂದು ಕರೆಯಲಾಗುತ್ತದೆ. ನೀವು ರೈತರಾಗಿದ್ದರೆ ಅಥವಾ ರೈತ ಕುಟುಂಬವನ್ನು ಹೊಂದಿದ್ದರೆ, ಸರ್ಕಾರದಿಂದ ಯಾವುದೇ ರೀತಿಯ ಸವಲತ್ತು ಅಥವಾ ಸೌಲಭ್ಯವನ್ನು ಪಡೆಯಬೇಕೆಂದರೆ ಈ ಫ್ರೂಟ್ಸ್ ಐ.ಡಿ ಯನ್ನು ಹೊಂದುವುದು ಬಹು ಮುಖ್ಯವಾಗಿರುತ್ತದೆ. ಫಲಾನುಭವಿಗಳು ಅಥವಾ ರಾಜ್ಯ ಸರ್ಕಾರದಿಂದ ಹಲವಾರು ಯೋಜನೆಗಳ ಸೌಲಭ್ಯ ಅಥವಾ ಸವಲತ್ತಗಳನ್ನು ಪಡೆಯುತ್ತಿದ್ದಾರೆ ಅವುಗಳನ್ನು ಈ ಫ್ರೂಟ್ಸ್ ನಲ್ಲಿ ದಾಖಲಿಸುತ್ತಾರೆ. ನಂತರ ರೈತರು ತಮ್ಮ ಸ್ವಂತ ಜಮೀನನ್ನು ಅಥವಾ ತಮ್ಮದೇ ಆದಂತಹ ಭೂಮಿಯನ್ನು ಹೊಂದಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಇದಾದ ನಂತರ ಏಕಿಕೃತವಾಗಿ ಇದಕ್ಕೆ ಸಂಬಂಧಪಟ್ಟ ಎಲ್ಲಾ ದತ್ತಾಂಶಗಳನ್ನು ಈ ಫ್ರೂಟ್ಸ್ ವೆಬ್ ಸೈಟನಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. ರೈತರು ಈ ಫ್ರೂಟ್ಸ್ ಐ.ಡಿ ಯನ್ನು ಹೊಂದಿರದಿದ್ದರೆ ಅಂತಹ ರೈತರು ರಾಜ್ಯ ಸರ್ಕಾರದ ಯಾವುದೇ ತರಹದ ಯೋಜನೆಗಳ ಫಲಾನುಭವಿ ಆಗಲು ಬರುವುದಿಲ್ಲ.

           ಈ ಫ್ರೂಟ್ಸ್ ಐ.ಡಿ ಯನ್ನು ಪಡೆಯಬೇಕೆಂದು ಕೊಳ್ಳುವ ಯಾವುದೇ ರೈತ ವ್ಯಕ್ತಿಯು ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕು ತೋಟಗಾರಿಕೆ ಇಲಾಖೆ ಕಚೇರಿಗೆ ಭೇಟಿ ನೀಡಿಬೇಕಾಗುತ್ತದೆ. ಹಾಗೆಯೇ ಈ ಫ್ರೂಟ್ಸ್ ಐ.ಡಿ ಯನ್ನು ಪಡೆಯಲು ಬೇಕಾಗುವ ಅವಶ್ಯ ದಾಖಲೆಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಒಪ್ಪಿಸಿ, ನೋಂದಣಿಯನ್ನು ಮಾಡಿಸಿಕೊಳ್ಳಬೇಕು. ಇನ್ನೊಂದು ರೀತಿಯಾಗಿ ಅಂದರೆ ಈ ಐ.ಡಿ ನಂಬರನ್ನು ಪಡೆಯಬೇಕೆಂದು ಕೊಳ್ಳುವವರು ಡೈರೆಕ್ಟಾಗಿ ಈ ಫ್ರೂಟ್ಸ್ ವೆಬ್ ಸೈಟ್ ಗೆ ಭೇಟಿ ನೀಡಿ ಮತ್ತು ಅದರ ಮುಖಾಂತರವು ಸಹ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿದಾರರು ಸಿಟಿಜನ್ ಲಾಗಿನ್ ಅಂದರೆ ನಾಗರಿಕ ಪ್ರವೇಶ ಇದರ ಮುಖಾಂತರ ಸ್ವಯಂ ಆಗಿ ನೊಂದಣಿಯನ್ನು ಮಾಡಿಕೊಳ್ಳಬಹುದು.

 

             ರೈತರು ತಾವೇ ಸ್ವಂತವಾಗಿ ಈ ಫ್ರೂಟ್ಸ್ ನಲ್ಲಿ ನೊಂದಣಿಯನ್ನು ಮಾಡಿಕೊಳ್ಳಬೇಕೆಂದರೆ, ಅದಕ್ಕೆ ಬೇಕಾಗುವ ಅಗತ್ಯ ದಾಖಲೆಗಳ ವಿವರಗಳನ್ನು ಇಲ್ಲಿ ತಿಳಿಸಲಾಗಿದೆ.

 

* ರೈತರು ಅಂದರೆ ಈ ಫ್ರೂಟ್ಸ್ ಐ. ಡಿ ಯನ್ನು ಪಡೆದುಕೊಳ್ಳಲು ಬಯಸುವ ರೈತರು ತಮ್ಮ ಸ್ವಂತ ಜಮೀನನ್ನು ಹೊಂದಿರಬೇಕು.

* ನಿಮ್ಮ ಹೊಲದ ಸ್ವಂತ RTC ಯನ್ನು ಸಹ ಹೊಂದಿರಬೇಕಾಗುತ್ತದೆ.

* ಒಂದು ವೇಳೆ ಯಾರಾದರೂ ನಿರ್ದಿಷ್ಟ ವರ್ಗದವರು ನೊಂದಣಿ ಮಾಡುತ್ತಿದ್ದರೆ ಅಂದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ನೊಂದಣಿಯನ್ನು ಮಾಡುತ್ತಿದ್ದರೆ ಅಂತಹ ಅರ್ಜಿದಾರರು ಜಾತಿ ಮತ್ತು ಆದಾಯದ ಪ್ರಮಾಣ ಪತ್ರ ಸಲ್ಲಿಸಬೇಕಾಗಿರುವುದು ಕಡ್ಡಾಯವಾಗಿರುತ್ತದೆ.

 

              ರೈತರು ಈ ಫ್ರೂಟ್ಸ್ ಐ.ಡಿ ಯನ್ನು ಪಡೆಯಲು ಯಾವ ರೀತಿ ರಿಜಿಸ್ಟರ್ ಮಾಡಬೇಕು ಮತ್ತು ಅದಕ್ಕೆ ಬೇಕಾಗುವ ದಾಖಲೆಗಳ ಬಗ್ಗೆ ಈಗ ತಿಳಿದುಕೊಳ್ಳೋಣ.

    

• ಫ್ರೂಟ್ಸ್ ಐ.ಡಿ ಯನ್ನು ಪಡೆಯಲು ರೈತರು ಅಥವಾ ಅರ್ಜಿದಾರರು ಈ fruits.karnataka.gov.in ಎಂಬ ವೆಬ್ ಸೈಟ್ ಗೆ ಭೇಟಿ ನೀಡುವುದರ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

   • ಎಲ್ಲಾ ವಿದ್ಯಾರ್ಥಿಗಳು ನಿಮ್ಮ ತಂದೆ ಅಥವಾ ತಾಯಿಯು ತಮ್ಮ ಸ್ವಂತ ಜಮೀನನ್ನು ಹೊಂದಿದ್ದರೆ, ನಿಮಗೆ ರೈತ ಮಕ್ಕಳ ಸ್ಕಾಲರ್ಶಿಪ್ ಅಂದರೆ ರೈತ ವಿದ್ಯಾ ನಿಧಿ ಸಹಾಯಧನವನ್ನು ಪಡೆಯಬೇಕೆಂದರೆ ಕಡ್ಡಾಯವಾಗಿ ಈ ಫ್ರೂಟ್ಸ್ ಐ.ಡಿ ಯನ್ನು ನೀಡಬೇಕಾಗುತ್ತದೆ.

 

              ನಾವು ಈಗ ಈ ವೆಬ್ ಸೈಟ್ ಗೆ ಯಾವ ರೀತಿ ಲಾಗಿನ್ ಆಗಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

            ರೈತ ಮಕ್ಕಳ ಹಾಗೂ ಉನ್ನತ ಶಿಕ್ಷಣ ಪ್ರೊತ್ಸಾಹಕ್ಕೆ ರಾಜ್ಯ ಸರ್ಕಾರವು ಈ ಹೊಸ ರೈತ ವಿದ್ಯಾನಿಧಿ ಸಹಾಯಧನವನ್ನು ಬಿಡುಗಡೆ ಮಾಡಿದೆ. ಈ ಯೋಜನೆಯ ಲಾಭವನ್ನು ಪಡೆಯಬೇಕೆಂದು ಕೊಳ್ಳುವ ಅರ್ಜಿದಾರರು ಕೃಷಿ ತೋಟಗಾರಿಕೆ ಪಶುಸಂಗೋಪನೆ ಇಲಾಖೆಯಲ್ಲಿ ಫ್ರೂಟ್ಸ್ ಮುಖಾಂತರ ಗುರುತಿನ ಸಂಖ್ಯೆಯನ್ನು ಅಂದರೆ FID(farmer identification number) ಯನ್ನು ಹೊಂದಲು ರೈತರು ಅಥವಾ ಅರ್ಜಿದಾರರು ಸಲ್ಲಿಸಬೇಕಾದ ದಾಖಲಾತಿಯ ವಿವರಗಳನ್ನು ಇಲ್ಲಿ ನೀಡಲಾಗಿದೆ.

 

     _•ರೈತರು ತಮ್ಮ ಸ್ವಂತ ಹೊಲದ ಅಥವಾ ಜಮೀನಿನ ಎಲ್ಲಾ RTCಪ್ರಮಾಣಪತ್ರಗಳನ್ನು ನೀಡಬೇಕಾಗುತ್ತದೆ.

     1)ರೈತರ ಆಧಾರ್ ಕಾರ್ಡ್

      2)ರೈತರ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ

      3)ರೈತರ ಪಾಸ್ ಪೊರ್ಟ್ ಸೈಜ್ ಫೋಟೋಗಳು 

      4)ರೈತರ ಕುಟುಂಬದ ರೇಷನ್ ಕಾರ್ಡ್

      5)ವಿದ್ಯಾರ್ಥಿಯ ಕಾಲೇಜ್ ಐ.ಡಿ ಕಾರ್ಡ್ ಪ್ರತಿ

      6)ವಿದ್ಯಾರ್ಥಿಯ ಆಧಾರ್ ಕಾರ್ಡ್

      7)ವಿದ್ಯಾರ್ಥಿಯ ಮೊಬೈಲ್ ಸಂಖ್ಯೆ ಹಾಗೂ ಕಾಲೇಜಿನ ಹೆಸರು ಮತ್ತು ವಿಳಾಸ ಮತ್ತು ವ್ಯಾಸಂಗ ಮಾಡುತ್ತಿರುವ ತರಗತಿಯ ಮಾಹಿತಿಯನ್ನು ನೀಡಬೇಕಾಗುತ್ತದೆ.

 

                  ಮೇಲೆ ಹೇಳಿರುವ ಎಲ್ಲಾ ದಾಖಲಾತಿಗಳನ್ನು ಹೊಂದಿದ್ದರೆ ನೀವು ಫ್ರೂಟ್ಸ್ ಐ.ಡಿ ತಂತ್ರಾಂಶದಲ್ಲಿ ಈ ಮೇಲೆ ಹೇಳಲಾದ ದಾಖಲಾತಿಗಳನ್ನು ಸರಿಯಾದ ಜಾಗದಲ್ಲಿ ಅಪ್ಲೋಡ್ ಮಾಡಿ, ರೈತರು ತಮ್ಮ ಫ್ರೂಟ್ಸ್ ಐ.ಡಿ ಯನ್ನು ಪಡೆಯಬಹುದು.

 

               ಈ ಫ್ರೂಟ್ಸ್ ಐ.ಡಿ ಯಿಂದ ಡೈರೆಕ್ಟಾಗಿ ರೈತರನ್ನು ಗುರುತಿಸಬಹುದು. ಇದರಿಂದ ರಾಜ್ಯ ಸರ್ಕಾರ ರೈತ ಮಕ್ಕಳಿಗೆ ನೀಡುವ ರೈತ ವಿದ್ಯಾನಿಧಿ ಸಹಾಯಧನವು ನಿಮ್ಮ ಅಕೌಂಟ್ಗೆ ಡೈರೆಕ್ಟಾಗಿ ಬರಲು ಸಹಾಯವಾಗುತ್ತದೆ.

 

            ನಾವು ಈಗ ಫ್ರೂಟ್ಸ್ ಐ.ಡಿ ಯನ್ನು ಯಾವ ರೀತಿ ಜನರೇಟ್ ಮಾಡಬೇಕು ಅಥವಾ ಈ ರೈತರ ಗುರುತಿನ ಸಂಖ್ಯೆಯನ್ನು ಯಾವ ರೀತಿ ಪಡೆದುಕೊಳ್ಳಬೇಕು ಎಂಬುದನ್ನು ತಿಳಿಯೋಣ.

  • ಮೊದಲಿಗೆ ವೆಬ್ ಸೈಟ್ ನ ಮುಖಪುಟದಲ್ಲಿ ಕಾಣುವ ಸಿಟಿಜನ್ ಲಾಗಿನ್ ಅಂದರೆ ನಾಗರಿಕ ಪ್ರವೇಶದ ಮೇಲೆ ಕ್ಲಿಕ್ ಮಾಡಿ ಅದನ್ನು ತೆರೆಯಬೇಕಾಗುತ್ತದೆ.

 

• ಇದಾದ ನಂತರ ಅದರಲ್ಲಿ ನಾಗರಿಕರು ಪ್ರವೇಶಮಾಡಿ ಎಂಬುದಾಗಿ ನಮೂದಿಸಿರುತ್ತದೆ. ನೀವು ಮೊದಲು ಅಲ್ಲಿ ನಾಗರಿಕರ ನೊಂದಣಿಯನ್ನು ಮಾಡಬೇಕಾಗಿರುತ್ತದೆ.

 

•ಆದರೆ ನೀವು ಈಗಾಗಲೇ ನೊಂದಣಿಯನ್ನು ಮಾಡಿಕೊಂಡಿದ್ದರೆ, ಅಂತಹ ರೈತರು ಡೈರೆಕ್ಟಾಗಿ ಅವರ ಮೊಬೈಲ್ ಸಂಖ್ಯೆ ಮತ್ತು ಪಾಸ್ವರ್ಡ್ ಅನ್ನು ಹಾಕಿ ಲಾಗಿನ್ ಆಗಬಹುದು.

 

ನಂತರ ಅಲ್ಲಿ ಐಡೆಂಟಿಟಿ ವ್ಯಾಲಿಡೇಷನ್ ಸರ್ವಿಸ್ ಎಂದು ನಮುದಿಸಿರುತ್ತದೆ. ಇದರಲ್ಲಿ

•ಡಿಪಾರ್ಟ್ಮೆಂಟ್

•ಅಪ್ಲಿಕೇಶನ್

•ಪರ್ಪಸ್

ಎಂದು ನಮೂದಿಸಿರುತ್ತದೆ.

 

• ಇದರ ನಂತರ ಅರ್ಜಿದಾರರು ತಮ್ಮ ಆಧಾರ್ ಕಾರ್ಡ್ ನಲ್ಲಿ ಇರುವಂತೆ ನಿಮ್ಮ ಹೆಸರನ್ನು ಅಲ್ಲಿ ಕೊಟ್ಟಿರುವ ಜಾಗದಲ್ಲಿ ತುಂಬಬೇಕಾಗುತ್ತದೆ. ಅದರ ಕೆಳಗೆ ಅವರ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.

 

• ಇದರಲ್ಲಿ ಜಮೀನು ಯಾರ ಹೆಸರಲ್ಲಿ ಇರುತ್ತದೆಯೋ ಅವರ ಹೆಸರು ಮತ್ತು ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.

 

• ಇದಾದ ನಂತರ ಜಮೀನು ಹೊಂದಿರುವ ರೈತರು ಅಥವಾ ಅರ್ಜಿದಾರರು ತಮ್ಮ ಹೆಸರು ಮತ್ತು ಅವರ ಆಧಾರ್ ಕಾರ್ಡ್ ಸಂಖ್ಯೆಯನ್ನು ತುಂಬಿದ ನಂತರ ಅಲ್ಲಿ ಸಬ್ಮಿಟ್ ಮಾಡಬೇಕಾಗುತ್ತದೆ.

 

      • ನಂತರ ನೀವು ಕೊಟ್ಟ ಮಾಹಿತಿ ಅಪ್ಡೇಟ್ ಆಗುತ್ತದೆ. ಆದರೆ ಕೆಲವೊಂದು ಸಲ ನೀವು ಕೊಟ್ಟ ಮಾಹಿತಿ ಅಪ್ಡೇಟ್ ಆಗುವುದಿಲ್ಲ. ಅಂತಹ ಸಮಯದಲ್ಲಿ ಅಲ್ಲಿರುವ ಓಕೆ ಬಟನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.

 

             • ಅದರ ನಂತರ ಕ್ರಿಯೇಟ್ ಅಕೌಂಟ್ ಮತ್ತು ಟೇಕ್ ಮೀ ಟು ದ ಲಾಗಿನ್ ಅಕೌಂಟ್ ಎಂಬುದಾಗಿ ತೋರಿಸುತ್ತದೆ. ರೈತರು ಅಲ್ಲಿ ಕಾಣುತ್ತಿರುವ ಟೇಕ್ ಮೀ ಟು ದ ಲಾಗಿನ್ ಅಕೌಂಟ ಎಂಬುದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಇಲ್ಲಿ ಯಾವ ರೀತಿ ನೀವು ಸುಲಭವಾಗಿ ಅಕೌಂಟನ್ನು ತೆರೆಯಬೇಕು ಎಂಬುದನ್ನು ತಿಳಿಯೋಣ.

 

           • ರೈತರು ಅದರ ಮೇಲೆ ಕ್ಲಿಕ್ ಮಾಡಿದ ನಂತರ ಮೊದಲು ಬಂದ ಹಾಗೆ ನಾಗರಿಕರು ಪ್ರವೇಶಮಾಡಿ ಎಂಬುದನ್ನು ತೋರಿಸುತ್ತದೆ.

ಅಲ್ಲಿ ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ನಂತರ ಅದರ ಕೆಳಗೆ ನಿಮ್ಮ ಪಾಸ್ವರ್ಡ್ ಅನ್ನು ಹಾಕಬೇಕಾಗುತ್ತದೆ. ಆದರೆ ನೀವು ಪಾಸ್ವರ್ಡ್ ಅನ್ನು ಹೊಂದಿಲ್ಲದ ಕಾರಣ ನೀವು ಪಾಸ್ವರ್ಡ್ ಅನ್ನು ರಿಸೆಟ್ ಮಾಡಬೇಕಾಗುತ್ತದೆ.

 

• ನಂತರ ನೀವು ಕೊಟ್ಟ ಮೊಬೈಲ್ ನಂಬರ್ ಗೆ ಒಂದು ಪಾಸ್ವರ್ಡ್ ಬರುತ್ತದೆ. ಆ ಪಾಸ್ವರ್ಡ್ ಅನ್ನು ನೀವು ಈ ಜಾಗದಲ್ಲಿ ತುಂಬಿ, ಹೊಸ ಪಾಸ್ವರ್ಡ್ ಅನ್ನು ಕ್ರಿಯೇಟ್ ಮಾಡಿ ಲಾಗಿನ್ ಆಗಬೇಕಾಗಿರುತ್ತದೆ.

 

• ನಂತರ ಈ ಫ್ರೂಟ್ಸ್ ವೆಬ್ ಸೈಟ್ ನ ಮುಖಪುಟ ತೆಗೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಹೆಸರು ತೋರಿಸುತ್ತದೆ ಅಂದರೆ ಯಾರ ಆಧಾರ್ ಕಾರ್ಡ್ ಲಿಂಕ್ ಆಗಿರುತ್ತದೆಯೋ ಅವರ ಹೆಸರನ್ನು ತೋರಿಸುತ್ತದೆ. ಮತ್ತು ಅದರಲ್ಲಿ ಅನೇಕ ಆಯ್ಕೆಗಳನ್ನು ಸಹ ತೋರಿಸುತ್ತದೆ.

 

• ನೀವು ಅದರಲ್ಲಿ ಸಲ್ಲಿಸಿದ ದಾಖಲಾತಿಗಳನ್ನು ತಿದ್ದುಪಡಿ ಮಾಡಲು ಸಹ ಅವಕಾಶ ಕಲ್ಪಿಸಲಾಗಿದೆ. ಮತ್ತು ಇದರಲ್ಲಿ ನಿಮ್ಮ ಪಾಸ್ವರ್ಡ್ ಅನ್ನು ಸಹ ತಿದ್ದುಪಡಿ ಮಾಡಲು ಇದರಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ನೀವು ನಿಮ್ಮ ಕ್ಷೇತ್ರದ ಹವಮಾನದ ವರದಿಯನ್ನು ಸಹ ಪಡೆಯಬಹುದು.

 

• ನೀವು ಫ್ರೂಟ್ಸ್ ಐ.ಡಿಯನ್ನು ಪಡೆದುಕೊಳ್ಳಲು ರಿಜಿಸ್ಟ್ರೇಷನ್ ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗುತ್ತದೆ.

 

•ಇದರ ನಂತರ ನಿಮಗೆ ರೈತರ ಪುಟ ಅಂದರೆ ಫಾರ್ಮರ್ಸ್ ಪೇಜ್ ತೆರೆದುಕೊಳ್ಳುತ್ತದೆ. ಇದರ ಜೊತೆಗೆ ನಿಮಗೆ ಇದರ ಬಗ್ಗೆ ಏನಾದರೂ ತೊಂದರೆಗಳಿದ್ದರೆ ಅಥವಾ ಗೊಂದಲಗಳಿದ್ದರೆ ನೀವು ಇಲ್ಲಿ ಪ್ರಶ್ನೆಯನ್ನು ಕೇಳಿ ತಮ್ಮ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು.

 

• ಈ ರೈತರ ಪುಟದಲ್ಲಿ ಅಂದರೆ ಫಾರ್ಮರ್ಸ್ ಪೇಜ್ ನಲ್ಲಿ ಹೊಸ ರೈತರ ರಿಜಿಸ್ಟ್ರೇಷನ್ ಮಾಡಬೇಕಾಗಿರುತ್ತದೆ.

 

•ಅಲ್ಲಿ ನಿಮಗೆ ಕೇಳಲಾದ ಮಾಹಿತಿಯನ್ನು ಸರಿಯಾದ ಜಾಗದಲ್ಲಿ ತುಂಬಬೇಕಾಗುತ್ತದೆ. ಹಾಗೆಯೇ ನಿಮ್ಮನ್ನು ಸಂಪರ್ಕಿಸಬಹುದಾದ ಮಾಹಿತಿಯನ್ನು ನಿಗದಿಪಡಿಸಿದ ಜಾಗದಲ್ಲಿ ತುಂಬಬೇಕಾಗುತ್ತದೆ.

 

              •ಅಲ್ಲಿ ನಿಮಗೆ ಕೇಳಲಾದ ಜಾತಿಗಳ ಮತ್ತು ಆದಾಯದ ವಿವರಗಳನ್ನು ನಮೂದಿಸಬೇಕಾಗುತ್ತದೆ.   ಮತ್ತು ಅಲ್ಲಿ ಹೊಲದ ಮಾಲೀಕನ ಮಾಹಿತಿಯನ್ನು ಸಲ್ಲಿಸಬೇಕುತ್ತದೆ. ಹಾಗೆಯೇ ಅರ್ಜಿದಾರರ ಬ್ಯಾಂಕ್ ಮಾಹಿತಿಯನ್ನು ಸಹ ನೀಡಬೇಕಾಗುತ್ತದೆ.

 

              •ಕೊನೆಯದಾಗಿ ಎಲ್ಲವನ್ನು ತುಂಬಿದ ನಂತರ ಪೂರ್ತಿಯಾಗಿ ಪರಿಶೀಲಿಸಿ, ಎಲ್ಲವು ಸರಿಯಾಗಿದೆ ಎಂಬುದನ್ನು ಅರಿತ ನಂತರ ಸೇವ್ ಅಂಡ್ ಫಾರ್ವರ್ಡ್ ಕೊಡಬೇಕಾಗುತ್ತದೆ.

 

            • ಇದಾದ ನಂತರ ಕೊನೆಯಲ್ಲಿ ಫ್ರೂಟ್ಸ್ ಐ.ಡಿ ಜನರೇಟ್ ಆಗುತ್ತದೆ. ವಿದ್ಯಾರ್ಥಿಗಳು ಅಂದರೆ ರೈತ ಮಕ್ಕಳು ರಾಜ್ಯ ಸರ್ಕಾರ ನೀಡುವ ಈ ರೈತ ವಿದ್ಯಾನಿಧಿ ಸಹಾಯಧನಯನ್ನು ಪಡೆಯಲು ಈ ಫ್ರೂಟ್ಸ್ ಐ.ಡಿ ಯನ್ನು ನೀಡಬಹದು.

 

             ಆಸಕ್ತ ರೈತರು ಹಾಗೂ ಅರ್ಜಿದಾರರು ರಾಜ್ಯ ಸರ್ಕಾರ ಜಾರಿಗೊಳಿಸುವ ಯಾವುದೇ ಯೋಜನೆಯ ಲಾಭವನ್ನು ಪಡೆಯಲು ಅಥವಾ ಆ ಯೋಜನೆಯ ಫಲಾನುಭವಿ ಆಗಲು ಈ ಫ್ರೂಟ್ಸ್ ಐ.ಡಿ ಯನ್ನು ಹೊಂದುವುದು ಖಡ್ಡಾಯವಾಗಿದೆ.

 

           ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ರೈತರಿಗೆ ಹೊರೆಯನ್ನುಂಟು ಮಾಡದಂತೆ, ಅವರ ಆರ್ಥಿಕ ಸ್ಥಿತಿಯನ್ನು ಕಾಪಾಡಲು, ಇಂತಹ ಅನೇಕ ಸಹಾಯಧನಗಳನ್ನು ನೀಡುತ್ತಿದೆ. ರೈತರು ಇಂತಹ ಯೋಜನೆಗಳ ಉಪಯೋವನ್ನು ಪಡೆದುಕೊಂಡು ಕೃಷಿಯಲ್ಲಿ ಅಭಿವೃದ್ಧಿ ಹೊಂದಬೇಕೆಂದು ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ.

 

ಇನ್ನೂ ಹೆಚ್ಚಿನ ಮಾಹಿತಿಗಾಗಿ

ಕೃಷಿ ವಾಹಿನಿ🌱

ವೆಬ್ಸೈಟ್ನ ಸಂಪರ್ಕದಲ್ಲಿರಿ

Leave a Reply

Your email address will not be published. Required fields are marked *